Homeಎಕಾನಮಿನಗರ ಭಾಗದಲ್ಲಿ ಮಾರ್ಚ್ ತ್ರೈಮಾಸಿಕದಲ್ಲಿ ನಿರುದ್ಯೋಗ ಪ್ರಮಾಣ ತುಸು ಇಳಿಕೆ...

ನಗರ ಭಾಗದಲ್ಲಿ ಮಾರ್ಚ್ ತ್ರೈಮಾಸಿಕದಲ್ಲಿ ನಿರುದ್ಯೋಗ ಪ್ರಮಾಣ ತುಸು ಇಳಿಕೆ…

- Advertisement -
- Advertisement -

ಭಾರತದಲ್ಲಿ ನಗರ ನಿರುದ್ಯೋಗ ದರ ಈ ವರ್ಷದ ಜನವರಿ ಮತ್ತು ಮಾರ್ಚ್ ನಲ್ಲಿ ಶೇ. 9.3ಕ್ಕೆ ಇಳಿದಿದೆ. ಕಳೆದ ನಾಲ್ಕು ತ್ರೈಮಾಸಿಕದಲ್ಲಿ ಇದು ಅತ್ಯಂತ ಕನಿಷ್ಠ ಮಟ್ಟದ್ದಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ರಾಯಿಟರ್ಸ್ ಪರಿಶೀಲಿಸಿದ ಅಪ್ರಕಟಿತ ಸರ್ಕಾರದ ವರದಿಯ ಅಂಕಿ-ಅಂಶಗಳ ಪ್ರಕಾರ, ಸಚಿವಾಲಯದ ತ್ರೈಮಾಸಿಕ ಉದ್ಯೋಗ ವರದಿಯಲ್ಲಿ ದಾಖಲಾಗಿರುವ ಸಂಖ್ಯೆಗಳು ಪ್ರಧಾನಿ ಮೋದಿಗೆ ಸ್ವಲ್ಪ ನಿರಾಳತೆ ತಂದುಕೊಟ್ಟಿವೆ. ಏಕೆಂದರೆ ಆರ್ಥಿಕ ಸಂಕಷ್ಟದ ಕಾರಣಕ್ಕಾಗಿ ಉದ್ಯೋಗ ಸೃಷ್ಟಿಸುತ್ತಿಲ್ಲ ಎಂಬ ಬಹುದೊಡ್ಡ ಆರೋಪ ಮೋದಿಯವರ ಮೇಲಿದೆ.

ನಗರ ನಿರುದ್ಯೋಗ ದರವು ಹಿಂದಿನ ತ್ರೈಮಾಸಿಕದಲ್ಲಿ ಶೇ. 9.9 ರಷ್ಟಿತ್ತು. ಇದಕ್ಕೆ ಹೋಲಿಸಿದರೆ ಜನವರಿ-ಮಾರ್ಚ್ ತ್ರೈಮಾಸಿಕದ ದರ ಕಡಿಮೆಯಾಗಿದ್ದು 9.3ಗೆ ಇಳಿದಿದೆ. ಇನ್ನು 2018ರ ಏಪ್ರೀಲ್-ಜೂನ್ ಸಮೀಕ್ಷೆಯ ಮೊದಲ ತ್ರೈಮಾಸಿಕ ಅವಧಿಯ ಡೇಟಾ ಇನ್ನು ಲಭ್ಯವಿಲ್ಲ.

ಇದನ್ನೂ ಓದಿ: ಭಾರತದಲ್ಲಿ ಶೇ.63 ರಷ್ಟು ಗರ್ಭಿಣಿಯರು ಹೆರಿಗೆಯಾಗುವ ಕೊನೆಯ ಸಮಯದವರೆಗೂ ಕೆಲಸ ಮಾಡುತ್ತಾರೆ: ಜಚ್ಚಾ-ಬಚ್ಚಾ ಸಮೀಕ್ಷೆ

ಇದರಲ್ಲಿ ಗ್ರಾಮೀಣ ನಿರುದ್ಯೋಗವನ್ನು ಅಂದಾಜು ಮಾಡಿಲ್ಲ. ಈ ಕುರಿತ ವರದಿಯನ್ನು ಸೇರಿಸಿಲ್ಲ. ಸದ್ಯದಲ್ಲೇ ಗ್ರಾಮೀಣ ನಿರುದ್ಯೋಗ ಪ್ರಕಟಗೊಳ್ಳುವ ಸಾಧ್ಯತೆಯಿದೆ. ಇನ್ನು ಸಮೀಕ್ಷೆಯ ಅವಧಿಗೆ ಮೊದಲ ಏಳು ದಿನಗಳ ಅಲ್ಪಾವಧಿಯಲ್ಲಿ ನಿರುದ್ಯೋಗದ ಸರಾಸರಿ ಚಿತ್ರಣವನ್ನು ನೀಡುವ ಪ್ರಸ್ತುತ ಸಾಪ್ತಾಹಿಕ ಸ್ಥಿತಿ ವಿಧಾನ ಬಳಸಿಕೊಂಡು ಅಂದಾಜು ಮಾಡಲಾಗಿದೆ. ಒಬ್ಬ ವ್ಯಕ್ತಿಯು ವಾರದಲ್ಲಿ 1 ಗಂಟೆಯೂ ಸಹ ಕೆಲಸ ಮಾಡದಿದ್ದರೆ ಆತನನ್ನು ನಿರುದ್ಯೋಗಿ ಎಂದು ಪರಿಗಣಿಸಲಾಗುತ್ತದೆ ಎಂದು ವರದಿ ತಿಳಿಸಿದೆ.

ನಿರುದ್ಯೋಗ ಯುವ ಜನತೆ ಅಂದರೆ 15-29 ವರ್ಷ ವಯಸ್ಸಿನವರು ಭಾರತದ 1.3 ಬಿಲಿಯನ್ ಜನರಲ್ಲಿ ಸರಿಸುಮಾರು ಮೂರನೇ ಒಂದು ಭಾಗದಷ್ಟು ಇದ್ದಾರೆ ಎನ್ನಲಾಗುತ್ತಿದೆ. ಹಿಂದಿನ ತ್ರೈಮಾಸಿಕದಲ್ಲಿ ಶೇ. 23.7ರಷ್ಟು ನಿರುದ್ಯೋಗ ಪ್ರಮಾಣವಿದ್ದರೆ, ಮಾರ್ಚ್ 2019 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇ. 22.5 ರಷ್ಟಕ್ಕೆ ಇಳಿದಿದೆ.

ಆದರೂ ಉದ್ಯೋಗಕ್ಕೆ ಸಂಬಂಧಿಸಿದ ಸಮರ್ಪಕ ಡೇಟಾವನ್ನು ನಿಯಮಿತವಾಗಿ ಬಿಡುಗಡೆ ಮಾಡದಿರುವ ಕಾರಣಕ್ಕೆ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಫೆಬ್ರವರಿಯಲ್ಲಿ ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ಜುಲೈ 2017-ಜೂನ್ 2018 ರ ಮೊದಲ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ 45 ವರ್ಷಗಳಲ್ಲಿ ನಿರುದ್ಯೋಗ ದರ ಅತಿಹೆಚ್ಚು ಎಂದು ವರದಿ ಹೇಳಿತ್ತು. ಇದು ವ್ಯಾಪಕ ಚರ್ಚೆಗೀಡಾಗಿತ್ತು. ಇದಾದ ನಂತರ ಮೋದಿ ಸರ್ಕಾರ ಮೇ ತಿಂಗಳಲ್ಲಿ ಅಧಿಕೃತ ವರದಿ ಬಿಡುಗಡೆ ಮಾಡಿತು.

ಈಗ ರಾಯಿಟರ್ಸ್ ಪರಿಶೀಲಿಸಿದ ಇತ್ತೀಚಿನ ವರದಿಯಲ್ಲಿ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಆಗಿರುವ ಉದ್ಯೋಗಗಳ ಮೌಲ್ಯಮಾಪನವೂ ಇದೆ. ಸಾಪ್ತಾಹಿಕ ಸ್ಥಿತಿ ಆಧರಿಸಿ ನಿರುದ್ಯೋಗ ದರ ಕುಸಿತ ಸಾಮಾನ್ಯ ವೇತನ ನೌಕರರಲ್ಲಿ ಉದ್ಯೋಗ ಮತ್ತು ಸ್ವಯಂ ಉದ್ಯೋಗಿಗಳ ಒಂದು ಭಾಗವು ಇದೇ ಅವಧಿಯಲ್ಲಿ ಹೆಚ್ಚಿದೆ ಎಂಬುದನ್ನು ವರದಿ ಬಹಿರಂಗಪಡಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...