Homeಮುಖಪುಟನಿಮ್ಮ ಕಣ್ಣಿಗೆ ಚೆನ್ನಮ್ಮ, ಓಬವ್ವ ಇಂದಿರಾರವರ ಸಾಧನೆ ಕಾಣುವುದಿಲ್ಲವೇ? ಶೋಭಾಗೆ ಸಿದ್ದು ಗುದ್ದು

ನಿಮ್ಮ ಕಣ್ಣಿಗೆ ಚೆನ್ನಮ್ಮ, ಓಬವ್ವ ಇಂದಿರಾರವರ ಸಾಧನೆ ಕಾಣುವುದಿಲ್ಲವೇ? ಶೋಭಾಗೆ ಸಿದ್ದು ಗುದ್ದು

ಶೋಭಾ ಕರಂದ್ಲಾಜೆ ಮಹಿಳಾ ವಿರೋಧಿ ಹೇಳಿಕೆಗೆ ಟ್ವಟ್ಟರ್ ನಲ್ಲಿ ಸಿದ್ದರಾಮಯ್ಯ ತಿರುಗೇಟು

- Advertisement -
- Advertisement -

ಸಿದ್ದರಾಮಯ್ಯನವರೇ, ಕೆಲಸ ಮಾಡಲು ಆಗದಿದ್ದರೆ ಕೈಗೆ ಬಳೆ ತೊಟ್ಟುಕೊಳ್ಳಿ ಎಂದು ಹೇಳಿದ ಶೋಭಾ ಕರಂದ್ಲಾಜೆರವರಿಗೆ ಓರ್ವ ಹೆಣ್ಣಾಗಿ ಮಹಿಳಾ ವಿರೋಧಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯನವರು ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿರುವ ಶೋಭಾ ಕರಂದ್ಲಾಜೆಯವರು ‘ಸಿದ್ದರಾಮಯ್ಯನವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ, ಅವರು ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಆಗಲ್ಲ, ಕೆಲಸ ಮಾಡಲು ಆಗಲ್ಲ ಎಂದರೆ ಕೈಗೆ ಬಳೆ ತೊಟ್ಟುಕೊಳ್ಳಲಿ ಎಂದು ಹೇಳಿಕೆ ನೀಡಿದ್ದರು.

ಅದಕ್ಕೆ ಟ್ವಟ್ಟರ್‍ನಲ್ಲಿ ಪ್ರತಿಕ್ರಿಯಿಸಿದರುವ ಸಿದ್ದರಾಮನ್ಯನವರು “ಕುಮಾರಿ ಶೋಭಾ ಬಿಜೆಪಿ ಅವರೇ, ಓರ್ವ ಹೆಣ್ಣಾಗಿ ತಾವು ಮಹಿಳಾ ಸಂಕುಲವೇ ಅಸಮರ್ಥರು ಎಂಬಂತೆ ಕೀಳು ಹೇಳಿಕೆ ನೀಡಿರುವುದು ಸರಿಯಲ್ಲ. ಸಂಸದರಾಗಿ ತಾವೊಬ್ಬರು ಸರಿಯಾಗಿ ಕೆಲಸ ಮಾಡಿಲ್ಲ ಎಂಬ ಮಾತ್ರಕ್ಕೆ ಬಳೆ ತೊಟ್ಟವರೆಲ್ಲ ಕೆಲಸ ಮಾಡಲಾಗದವರು ಎಂದಲ್ಲ. ನೆನಪಿರಲಿ, ಚೆನ್ನಮ್ಮ, ಓಬವ್ವ, ಇಂದಿರಾಗಾಂಧಿ ಇವರೆಲ್ಲ ಬಳೆ ತೊಟ್ಟು ಸಾಧನೆಯ ಉತ್ತುಂಗಕ್ಕೇರಿದವರು” ಎಂದು ಟ್ವೀಟ್ ಮಾಡುವ ಮೂಲಕ ಮಹಿಳಾ ವಿರೋಧಿ ಹೇಳಿಕೆಯ ವಿರುದ್ಧ ಕಿಡಿಕಾರಿದ್ದಾರೆ. ಆ ಮೂಲಕ ಸಿದ್ದರಾಮಯ್ಯನವರು ಸೂಕ್ಷ್ಮತೆ ಮೆರೆದಿದ್ದಾರೆ

ಹಾಗೆ ನೋಡಿದರೆ ಬಳೆ ತೊಟ್ಟಿಕೊಳ್ಳಿ ಎಂದು ಟೀಕೆ ಮಾಡುವುದು ಅತ್ಯಂತ ಕೆಳಮಟ್ಟದ್ದು. ಏಕೆಂದರೆ ಬಳೆ ತೊಟ್ಟುಕೊಳ್ಳುವ ಮಹಿಳೆಯರಿಲ್ಲದೇ ಈ ಪ್ರಪಂಚ ಉಳಿಯಲು ಸಾಧ್ಯವಿಲ್ಲ. ಈ ಜಗತ್ತಿನಲ್ಲಿ ಪುರುಷನಿಗೆ ಸರಿಸಮವಾಗಿ ಮಹಿಳೆಯರು ದುಡಿಯುತ್ತಿರುವುದು ಸಾರ್ವಕಾಲಿಕ ಸತ್ಯವೇ ಸರಿ. ಹಾಗಿದ್ದರೂ ಗಾದೆಮಾತಿನಂತೆ ರೂಢಿಗತವಾಗಿ ಬಂದಿರುವ ಆ ಬಳೆ ತೊಟ್ಟಿಕೊಳ್ಳಿ ಎಂಬ ಕೆಟ್ಟ ಮಾತನ್ನು ಒಬ್ಬ ಹೆಣ್ಣು ಮಗಳಾಗಿ ಶೋಭಾ ಕರಂದ್ಲಾಜೆಯವರು ಬಳಸಿರುವು ಅಕ್ಷಮ್ಯ.

ಈ ಪ್ರತಿಕ್ರಿಯೆಯಿಂದ ತನ್ನ ತಪ್ಪನ್ನು ತಿದ್ದಿಕೊಳ್ಳದ ಅಥವಾ ಸುಮ್ಮನಾಗದ ಶೋಭಾ ಕರಂದ್ಲಾಜೆಯವರು “ಸಿದ್ದರಾಮಯ್ಯನವರೆ, ಇಂದಿರಾಗಾಂಧಿಯವರ ಹೆಜ್ಜೆಗುರುತುಗಳನ್ನು ಅನುಸರಿಸಿ ಅಥವಾ ನಿರ್ಮಲ ಸೀತಾರಾಮನ್ ಮತ್ತು ಸುಷ್ಮಾ ಸ್ವರಾಜ್‍ರವರಿಂದ ಸ್ಫೂರ್ತಿ ಪಡೆದುಕೊಳ್ಳಿ” ಎಂದು, ಲೋಕಸಭೆಯ ಫಲಿತಾಂಶವು ನಾನು ಮಾಡಿರುವ ಅಭಿವೃದ್ದಿ ಕೆಲಸದ ಪ್ರತಿಫಲವಾಗಿರುತ್ತದೆ, ಅದು ನಾನು ಮತ್ತೊಮ್ಮೆ ಎಂಪಿಯನ್ನಾಗಿ ಮಾಡುತ್ತದೆ, ನೀವು ಯಾಕೆ ಚಾಮುಂಡೇಶ್ವರಿಯಲ್ಲಿ ಸೋತಿರಿ ಎಂಬುದನ್ನು ನೆನಪಿಸಿಕೊಳ್ಳಿ” ಎಂದು ಮತ್ತೆರೆಡು ಟ್ವೀಟ್ ಮಾಡಿದ್ದಾರೆ. ಈ ಮೂಲಕ ವಿಷಯಾಂತರ ಮಾಡಲು ಪ್ರಯತ್ನಿಸಿದ್ದಾರೆ.

ಒಟ್ಟಾರೆಯಾಗಿ ಶೋಭಾರವರ ಟ್ವೀಟ್‍ಗಳಿಗೆ ಜನ ನೆಗೆಟಿವ್ ಪ್ರತಿಕ್ರಿಯೆಗಳನ್ನು ನೀಡಿದರೆ, ಸಿದ್ದರಾಮಯ್ಯನವರ ಟ್ವೀಟ್‍ಗೆ ಪ್ರಶಂಸೆಯ ಸುರಿಮಳೆ ಸುರಿಸಿದ್ದಾರೆ. ಆ ಟ್ವೀಟ್ ಅನ್ನು ಸಾಕಷ್ಟು ಜನರು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನು ಓದಿ: ರಾಜೀವ್ ಚಂದ್ರಶೇಖರ್‍ರವರಿಗೆ ಕೊಟ್ಟ ಟ್ವಿಟ್ಟರ್ ಏಟು

ಟ್ವಿಟ್ಟರ್‍ನಲ್ಲಿ ಸಿದ್ದರಾಮಯ್ಯನವರು ಯಾವಾಗಲೂ ಮುಂದಿದ್ದಾರೆ. ಹಿಂದಿ ಹೇರಿಕೆಯ ವಿಚಾರ, ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಳ್ಳಲು, ಮೊನ್ನೆ ತಾನೇ ರಾಜೀವ್ ಚಂದ್ರಶೇಖರ್‍ರವರಿಗೆ ಕೊಟ್ಟ ಟ್ವಿಟ್ಟರ್ ಏಟು ಇದಕ್ಕೆ ಸಾಕ್ಷಿಯಾಗಿದೆ. ಇದು ಸಿದ್ದರಾಮಯ್ಯನವರೊಂದಿಗೆ ಅವರ ಟ್ವಿಟ್ಟರ್ ಹ್ಯಾಂಡಲ್ ನಿರ್ವಹಿಸುವವರು ಚುರುಕುತನ ಉಳ್ಳವರು ಮಾತ್ರವಲ್ಲದೇ ಸಂವೇದನಾಶೀಲರು ಎಂಬುದನ್ನು ತೋರಿಸುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...