Homeಮನರಂಜನೆಅತ್ಯುತ್ತಮ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಶೃತಿ ಹರಿಹರನ್: ಕನ್ನಡಕ್ಕೆ ದಾಖಲೆಯ 11 ರಾಷ್ಟ್ರಪ್ರಶಸ್ತಿಗಳು

ಅತ್ಯುತ್ತಮ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಶೃತಿ ಹರಿಹರನ್: ಕನ್ನಡಕ್ಕೆ ದಾಖಲೆಯ 11 ರಾಷ್ಟ್ರಪ್ರಶಸ್ತಿಗಳು

- Advertisement -
- Advertisement -

66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟ ಪ್ರಕಟವಾಗಿದ್ದು ಕನ್ನಡಕ್ಕೆ ಗರಿಷ್ಟ 11 ರಾಷ್ಟ್ರಪ್ರಶಸ್ತಿಗಳು ಲಭಿಸಿವೆ. ಅತ್ಯುತ್ತಮ ಅಭಿನಯಕ್ಕಾಗಿ ವಿಶೇಷ ರಾಷ್ಟ್ರ ಪ್ರಶಸ್ತಿ ಪಡೆದ ಶೃತಿ ಹರಿಹರನ್ ಅಭಿನಯದ ನಾತಿಚರಾಮಿ ಸಿನೆಮಾವೊಂದೇ 5 ಪ್ರಶಸ್ತಿಗಳನ್ನು ಗಳಿಸಿದ್ದು ಕೆ.ಜಿ.ಎಫ್ ಎರಡು ಪ್ರಶಸ್ತಿ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಸದ್ದು ಮಾಡಿದೆ.

ನವದೆಹಲಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಆಯುಷ್ಮಾನ್ ಖುರಾನ ( ಅಂಧಾದುನ್)

ಆಯುಷ್ಮಾನ್ ಖುರಾನ ಅಭಿನಯದ ಅಂಧಾದುನ್, ಬದಾಯಿ ಹೋ ಮತ್ತು ತೆಲುಗಿನ ಕೀರ್ತಿ ಸುರೇಶ್ ಅಭಿನಯದ ಮಹಾನಟಿ ಸಿನೆಮಾಗಳು ಅತಿ ಹೆಚ್ಚು ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿವೆ. ಉರಿ ಸಿನೆಮಾದ ನಿರ್ದೇಶಕ ಆದಿತ್ಯ ಧರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಜಯಿಸಿದ್ದಾರೆ.

ಮಹಾನಟಿ ಸಿನೆಮಾದಲ್ಲಿ ಕೀರ್ತಿ ಸುರೇಶ್

 

ಕನ್ನಡದಲ್ಲಿ ನಾತಿಚರಾಮೀ ಸಿನಿಮಾವೊಂದೇ ಅತ್ಯುತ್ತುಮ ಪ್ರಾದೇಶಿಕ ಚಿತ್ರ, ಅತ್ಯುತ್ತಮ ಮಹಿಳಾ ಗಾಯಕಿ (ಮಾಯಾವಿ ಮನವೆ ಹಾಡು-ಗಾಯಕಿ ಬಿಂದು ಮಾಲಿನಿ), ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ, ಅತ್ಯುತ್ತಮ ಸಂಕಲನ ಮತ್ತು ಅತ್ಯುತ್ತಮ ಅಭಿನಯಕ್ಕಾಗಿ ಶೃತಿ ಹರಿಹರನ್ ಗೆ ವಿಶೇಷ ಪ್ರಶಸ್ತಿ ಲಭಿಸಿದೆ.

ಇನ್ನು ಕೆ.ಜಿ.ಎಫ್ ಅತ್ಯುತ್ತಮ ಸಾಹಸ ಚಿತ್ರ ಮತ್ತು ಅತ್ಯುತ್ತಮ ವಿ.ಎಫ್.ಎಕ್ಸ್ ಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಅದೇ ರೀತಿ ಅತ್ಯುತ್ತಮ ರಾಷ್ಟ್ರೀಯ ಏಕತಾ ಚಿತ್ರ ಮತ್ತು ಅತ್ಯುತ್ತಮ ಬಾಲ ಕಲಾವಿದ ವಿಭಾಗದಲ್ಲಿ ಕನ್ನಡದ ‘ಒಂದಲ್ಲ ಎರಡಲ್ಲ’ ಚಿತ್ರ ಪ್ರಶಸ್ತಿ ಜಯಿಸಿದೆ. ‘ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು’ ಅತ್ಯುತ್ತಮ್ ಮಕ್ಕಳ ಚಿತ್ರ ವಿಭಾಗದಲ್ಲಿ ಹಾಗೆಯೇ ಅತ್ಯುತ್ತಮ ರಾಷ್ಟ್ರೀಯ ಆಕ್ಸ್ರೂಸ್ ಚಿತ್ರ ವಿಭಾಗದಲ್ಲಿ ‘ ಮೂಕಜ್ಜಿಯ ಕನಸುಗಳು’ ಚಿತ್ರ ಪ್ರಶಸ್ತಿ ಜಯಿಸಿವೆ.

ಇದೇ ಮೊದಲ ಬಾರಿಗೆ ಒಂದೇ ವರ್ಷದಲ್ಲಿ ಇಷ್ಟೊಂದು ಪ್ರಶಸ್ತಿಗಳು ಕನ್ನಡಕ್ಕೆ ಲಭಿಸಿವೆ. ಮುಖ್ಯವಾಗಿ ನಾತಿಚರಾಮಿ ಸಿನೆಮಾ 5 ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ, ಉಳಿದ ಸಿನೆಮಾಗಳು ಸಹ ಪ್ರಶಸ್ತಿ ಜಯಿಸುವ ಮೂಲಕ ಕನ್ನಡಕ್ಕೆ ಗೌರವ ತಂದುಕೊಟ್ಟಿದೆ. ಎಲ್ಲರಿಗೂ ಅಭಿನಂದನೆಗಳು..

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...