Homeಮುಖಪುಟಹೆಸರಿಗಷ್ಟೇ ಆಯ್ತು ಮೋದಿಯ ‘ಉಜ್ವಲಾ’, ನಿಲ್ಲಲೇ ಇಲ್ಲ ಒಲೆ ಮುಂದೆ ಝಳ ಝಳ!

ಹೆಸರಿಗಷ್ಟೇ ಆಯ್ತು ಮೋದಿಯ ‘ಉಜ್ವಲಾ’, ನಿಲ್ಲಲೇ ಇಲ್ಲ ಒಲೆ ಮುಂದೆ ಝಳ ಝಳ!

- Advertisement -
ಈ ಚಿತ್ರ ಉಜ್ವಾಲ ಯೋಜನೆಯ ಬಗ್ಗೆ ಏನು ಹೇಳುತ್ತದೆ
- Advertisement -

ಚುನಾವಣಾ ಪ್ರಚಾರದಲ್ಲಿ ಹಾಲಿ ಬಿಜೆಪಿಯ ಎಂಪಿಗಳು ‘ಉಜ್ವಲಾ’ ಯೋಜನೆ ಬಗ್ಗೆ ವಿಪರೀತವಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ಸುಮ್ಮನೆ ಹೆಸರಿಗಷ್ಟೇ ಎಂಬಂತೆ ಆಗಿರುವ ಈ ಯೋಜನೆ ಬಡವರನ್ನು ಒಂದು ರೀತಿಯಲ್ಲಿ ಅವಮಾನಿಸುತ್ತಲೂ ಇದೆ. ಫಲಾನುಭವಿಗಳ ಪೈಕಿ ಶೇ. 85ರಷ್ಟು ಕುಟುಂಬಗಳು ಈಗಲೂ ಸೌದೆ ಒಲೆ, ಸೀಮೆಎಣ್ಣೆ ಸ್ಟವ್‍ಗಳನ್ನೇ ಆಶ್ರಯಿಸಿವೆ. ಬಡವರ ಆದಾಯ ಹೆಚ್ಚಿಸುವ ಯಾವ ದೊಡ್ಡ ಯೋಜನೆಯನ್ನು ಜಾರಿಗೆ ತರದ ಸರ್ಕಾರ, ಬಡ ಕುಟುಂಬಗಳು 800-1000 ತೆತ್ತು ಗ್ಯಾಸ್ ರಿಫಿಲ್ ಮಾಡಬೇಕೆಂದು ಬಯಸುತ್ತಿದೆ. ಮೋದಿ ಸರ್ಕಾರದ ಮೂರ್ಖತನದ ಯೋಜನೆಗಳಿಗೆ ಈ ‘ಉಜ್ವಲಾ’ ಸ್ಕೀಮ್ ಕೂಡ ಒಂದು ಸಾಕ್ಷಿ.

ಆಗಾಗ, ಹಲವಾರು ಸಂಘಸಂಸ್ಥೆಗಳು ಇದರ ವೈಫಲ್ಯದ ಬಗ್ಗೆ ಧ್ವನಿ ಎತ್ತುತ್ತಲೇ ಬಂದಿವೆ. ಈಗ ‘ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಕಂಪಾಸಿನೇಟ್ ಎಕಾನಮಿ’ ( RICE ) ನಾಲ್ಕು ರಾಜ್ಯಗಳಲ್ಲಿ ಅಧ್ಯಯನ ಮಾಡಿದ್ದು, ‘ಉಜ್ವಲಾ’ ಫಲಾನುಭವಿಗಳ ಪೈಕಿ ಶೇ. 85ರಷ್ಟು ಕುಟುಂಬಗಳು ಈಗಲೂ ಸೌದೆ ಒಲೆಯನ್ನೇ ಉಪಯೋಗಿಸುತ್ತಿವೆ. ಗ್ಯಾಸ್ ಸ್ಟವ್ ಕೊಟ್ಟು ಕೈ ತೊಳೆದುಕೊಂಡ ಮೋದಿ ಸರ್ಕಾರ, ಗ್ಯಾಸ್ ರಿಫಿಲ್ ಬಗ್ಗೆ ಎಂದೂ, ಇಂದಿಗೂ ಯೋಚಿಸಲೇ ಇಲ್ಲ. ಜೊತೆಗೆ ಸಿಲಿಂಡರ್ ದರದಲ್ಲೂ ಏರಿಕೆ ಮಾಡುತ್ತಲೇ ಬಂದಿತು.

ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ ಮತ್ತು ಬಿಹಾರ್‍ಗಳಲ್ಲಿ ಈ ಅಧ್ಯಯನ ಮಾಡಲಾಗಿದ್ದು, ಬಹಳಷ್ಟು ಕುಟುಂಬಗಳು ಗ್ಯಾಸ್ ರಿಫಿಲ್ ಮಾಡಿಸಿಕೊಳ್ಳುವ ಆರ್ಥಿಕ ಸಾಮಥ್ರ್ಯ ಹೊಂದಿಲ್ಲ ಎಂಬುದು ಪತ್ತೆಯಾಗಿದೆ. ದೇಶದ ಇತರ ಭಾಗಗಳಲ್ಲೂ ಇಂಥದೇ ಪರಿಸ್ಥಿತಿಯಿದೆ. ಇದರಿಂದಾಗಿ, ಒಲೆ ಮುಂದೆ ಊದುತ್ತ, ಕೆಮ್ಮುತ್ತ ಬೆಂಕಿಯ ಝಳದ ಎದುರು ಮಹಿಳೆಯರು ಹೈರಾಣಾಗುತ್ತಿದ್ದಾರೆ. ಸೌದೆ ಒಲೆ ಬಳಕೆಯಿಂದ ಸಹಜವಾಗಿ ಮನೆಯೊಳಗೆ ವಾಯುಮಾಲಿನ್ಯ ಸಂಭವಿಸುತ್ತಿದೆ. ಇದಕ್ಕೆ ನವಜಾತ ಶಿಶುಗಳು ಪ್ರಾಣವನ್ನೂ ತೆರುತ್ತಿವೆ.

2016ರಲ್ಲಿ ಮೋದಿ ಸರ್ಕಾರ ಭಾರಿ ಸದ್ದಿನೊಂದಿಗೆ ‘ಉಜ್ವಲಾ’ ಯೋಜನೆಯನ್ನು ಆರಂಭಿಸಿತು. ಒಂದು ಗ್ಯಾಸ್ ಸಿಲಿಂಡರ್, ರೆಗುಲೇಟರ್ ಮತ್ತು ಪೈಪ್‍ಗಳನ್ನು ಈ ಯೋಜನೆಯ ಫಲಾನುಭವಿಗಳಿಗೆ ಉಚಿತವಾಗಿ ನೀಡಲಾಗುತ್ತದೆ. ಅಲ್ಲಿಗೆ ಮುಗಿಯಿತು. ಸ್ಟವ್ ಖರೀದಿಸಬೇಕು, ಮೊದಲ ಸಿಲಿಂಡರ್ ಮುಗಿದ ನಂತರ ರಿಫಿಲ್ ಮಾಡಿಸುವ ತಾಪತ್ರಯ ಶುರು. ಅಧ್ಯಯನ ಮಾಡಿದ 4 ರಾಜ್ಯಗಳಲ್ಲಿ ಎಲ್‍ಪಿಜಿ ಹೊಂದಿರುವವರ ಸಂಖ್ಯೆ ಗಣನೀಯವಾಗಿ ಏರಿದೆ ನಿಜ. ಆದರೆ ಉಜ್ವಲಾ ಯೋಜನೆಯಲ್ಲಿ ಎಲ್‍ಪಿಜಿ ಸಂಪರ್ಕ ಪಡೆದ ಶೇ. 85ರಷ್ಟು ಜನರು ಈಗಲೂ ಸೌದೆ ಒಲೆ, ಸೀಮೆ ಎಣ್ಣೆ ಸ್ಟವ್‍ಗಳನ್ನೇ ಬಳಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್

ಆನತೆಯ ಆದಾಯ ಹೆಚ್ಚಿಸುವುದು ಇರಲಿ, ನೋಟ್‍ಬ್ಯಾನ್‍ನಂತಹ ಕ್ರಮಗಳಿಂದ ಬಡವರ ಆದಾಯವನ್ನು ತಗ್ಗಿಸಿದ ಈ ಮೂರ್ಖ ಸರ್ಕಾರ ಜನ ಗ್ಯಾಸ್ ರಿಫಿಲ್ ಮಾಡಿಸಿಕೊಳ್ಳಬೇಕು ಎನ್ನುತ್ತದೆ. ಇದು ಕ್ರೂರ ಮತ್ತು ಅಮಾನವೀಯ ಅಲ್ಲವೇ ಮೋದೀಜಿ?

ಆಧಾರ: ದಿ ಹಿಂದೂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...