Homeಅಂತರಾಷ್ಟ್ರೀಯಪ್ರಜ್ವಲ ಕ್ರಾಂತಿಕಾರಿ ಚೇ ಗೆವಾರ ಹುತಾತ್ಮನಾಗುವ ಮುನ್ನ ಹೇಳಿದ ಮಾತುಗಳೇನು ಗೊತ್ತೆ?

ಪ್ರಜ್ವಲ ಕ್ರಾಂತಿಕಾರಿ ಚೇ ಗೆವಾರ ಹುತಾತ್ಮನಾಗುವ ಮುನ್ನ ಹೇಳಿದ ಮಾತುಗಳೇನು ಗೊತ್ತೆ?

ಪ್ರಪಂಚದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ, ಕ್ರಾಂತಿಗೆ ಮತ್ತೊಂದು ಹೆಸರಾದ ಬಡಜನರ ಸ್ನೇಹಿತ ಚೇ ಗೆವಾರನಿಗೆ ಇಂದು 91ನೇ ಜನ್ಮದಿನದ ಸಂಭ್ರಮ

- Advertisement -
| ನಾನುಗೌರಿ ಡೆಸ್ಕ್ |

ನಡುಬಗ್ಗಿಸಿ ಬದುಕುವುದಕ್ಕಿಂತ ನೇರ ನಿಂತು ಸಾಯುವುದು ಮೇಲು
—————————
ಕ್ಯಾಸ್ಟ್ರೊ ಕುರಿತು ಚೇ ಹೇಳಿದ್ದು.
ಫಿಡೆಲ್ ಒಬ್ಬ ಅಸಾಮಾನ್ಯ ವ್ಯಕ್ತಿಯಾಗಿ ನನ್ನ ಮೆಚ್ಚುಗೆ ಗಳಿಸಿದ. ಅವನು ಅಸಾದ್ಯ ಕೆಲಸಗಳನ್ನು ಕೈಗೆತ್ತಿಕೊಂಡು ಮಾಡಿಯೇ ಬಿಡುತ್ತಿದ್ದ. ಕ್ಯೂಬಾಕ್ಕೆ ಹೊರಟು ನಿಂತ ಮೇಲೆ ಅಲ್ಲಿ ತಲುಪಿಯೇ ತಲುಪುತ್ತೇನೆ,ಅಲ್ಲಿ ತಲುಪಿದ ಮೇಲೆ ಹೋರಾಟ ಮಾಡಿಯೇ ಮಾಡುತ್ತೇನೆ.,ಹೋರಾಟದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ಅದಮ್ಯ ವಿಶ್ವಾಸ ಹೊಂದಿದ್ದ. ನನಗೂ ಆತನ ಆಶಾವಾದ ಅಂಟಿಕೊಂಡಿತು.
—————————
ಕೊನೆಯ ಮಾತು
- Advertisement -

“ನನ್ನ ಹೆಂಡತಿಗೆ ಹೇಳಿ
ಅವಳು ಮತ್ತೊಂದು ಮದುವೆಯಾಗಲಿ
ನನ್ನ ಮಕ್ಕಳಿಗೆ ಹೇಳಿ
ಅವರು ನನ್ನ ಹೋರಾಟವನ್ನು ಮುಂದುವರೆಸಲಿ

ಮತ್ತು ಕೊನೆಯದಾಗಿ
ಅಲ್ಲಿ ನಿಂತು ನನ್ನದೆಗೆ ಗುರಿಯಿಟ್ಟಿರುವ
ನಿಮ್ಮ ಸೈನಿಕನಿಗೆ ಹೇಳಿ
ಅವನ ಗುರಿ ತಪ್ಪದಿರಲಿ”


ಚುನಾವಣೆಗಳನ್ನು ಶ್ರೀಮಂತರು ಮತ್ತು ವೃತ್ತಿಪರ ರಾಜಕಾರಣಿಗಳು ನಿರ್ವಹಿಸುವ ಕಾರಣದಿಂದ , ಚುನಾವಣೆ ಒಂದರಿಂದಲೇ ಪ್ರಜಾಪ್ರಭುತ್ವವನ್ನು ಉಳಿಸುತ್ತೇವೆ ಎಂಬುದು ಸುಳ್ಳು.

—————————

ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಸರಿ. ಅನ್ಯಾಯ ಅಸಮಾನತೆಯ ವಿರುದ್ಧ ಹೋರಾಡುವುದಾದರೆ ಆಗ ನೀನು ನನ್ನ ಸಂಗಾತಿ.


ಸಾಹಿತ್ಯವನ್ನು ಯಾವ ರೀತಿ ಓದಬೇಕು ಮತ್ತು ಬರೆಯಬೇಕು ಎಂದು ಗೊತ್ತಿಲ್ಲದ‌ ದೇಶವನ್ನು ಸುಳ್ಳಿನಿಂದ ದಾರಿ ತಪ್ಪಿಸುವುದು ಬಹಳ ಸುಲಭ.


ನಾನೇನು ವಿಮೋಚಕನೇನಲ್ಲ. ಆ ರೀತಿಯ ವಿಮೋಚಕರು ಸಹ ಇರುವುದಿಲ್ಲ. ಜನ ತಮ್ಮನ್ನು ತಾವೇ ವಿಮೋಚನೆಗೊಳಿಸಿಕೊಳ್ಳುತ್ತಾರೆ.


ಆರ್ಥಿಕ ಸರ್ವಾಧಿಕಾರದ ಎದರು ಹೋರಾಟ ಮಾಡಲು ಪ್ರಜಾಪ್ರಭುತ್ವ  ಮಾದರಿಗೆ ಶಕ್ತಿ ಸಾಲದು

—————————

ಪ್ರಪಂಚದ ದೊಡ್ಡ ಶ್ರೀಮಂತನ ಒಟ್ಟು ಆಸ್ತಿಗಿಂತ ಮಿಲಿಯಂತರ ಪಟ್ಟು ಹೆಚ್ಚು ಒಬ್ಬ ಸಾಮಾನ್ಯನ ಪ್ರಾಣಕ್ಕೆ ಬೆಲೆ ಇರುತ್ತದೆ.

—————————

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. Your comments are hard hitting and so truthful. Pl continue your efforts. Pl give me your bank account number preferably if in sbi. Or else details such as: name of bank,a/c no, name of a/c holder and etc. Also your postal address to send u a token amount cheque. Good luck .

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...