Homeಪುಸ್ತಕ ವಿಮರ್ಶೆಹದಿನೆಂಟರ ಮನೋಸ್ಥಿತಿಯ ದಟ್ಟ ಚಿತ್ರಣ: ಈ ಪುಸ್ತಕ ಏನನ್ನು ಹೇಳುತ್ತದೆ?

ಹದಿನೆಂಟರ ಮನೋಸ್ಥಿತಿಯ ದಟ್ಟ ಚಿತ್ರಣ: ಈ ಪುಸ್ತಕ ಏನನ್ನು ಹೇಳುತ್ತದೆ?

- Advertisement -
- Advertisement -

| ಕೇಶವ ಶರ್ಮ |
ಪ್ರಾಧ್ಯಾಪಕ, ಕುವೆಂಪು ವಿಶ್ವವಿದ್ಯಾಲಯ

ಅತ್ಯಂತ ಮುಖ್ಯವಾದ ಸಮಸ್ಯೆಯನ್ನು ಕುರಿತು ಈ ಕೃತಿಯು ಹೇಳುತ್ತದೆ. ಈ ಪುಸ್ತಕವನ್ನು ನಾವು ಓದಲೇಬೇಕು: ಯಾಕೆಂದರೆ ನಮ್ಮ ನಡುವೆ ಹದಿನಂಟು ವಯಸ್ಸಿನ ಅನೇಕರು ಇದ್ದಾರೆ. ಅವರನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈ ದೃಷ್ಟಿಯಲ್ಲಿ ಈ ಕೃತಿಯು ಅತ್ಯಂತ ಮಹತ್ವದ್ದು.

ಇದು ಡಾ. ಪಿ.ವಿ.ಭಂಡಾರಿ ಮತ್ತು ಹರೀಶ್ ಬಂಡ್ಸಾಲೆಯವರ ಕೃತಿ. ಇದು ಹದಿಹರಯದವರ ಮನೋಸ್ಥಿತಿಯನ್ನು ಹೇಳುತ್ತದೆ. ಮನಸ್ಸು ಮತ್ತು ಅದರ ವ್ಯಾಪಾರವನ್ನು ಹೇಳುತ್ತದೆ. ಲೇಖಕರು ವೃತ್ತಿಯಲ್ಲಿ ವೈದ್ಯರು ಎನ್ನುವುದು ವಿಶೇಷ. ಹದಿನಂಟು ಮನಸ್ಸನ್ನು ಕೇಂದ್ರ ಮಾಡಿದೆ. ಹಾಗೆ ನೋಡಿದರೆ ಹದಿಹರಯ ಎನ್ನುವುದೇ ಮನುಷ್ಯನ ಜೀವನದಲ್ಲಿ ಹೊಸದಾದ ಕನಸು ಮತ್ತು ಆಸೆಗಳನ್ನು ಹುಟ್ಟಿಸುವ ವಯಸ್ಸು. ಆದರೆ ಇದರ ಜೊತೆಗೆ ಈ ಕಾಲವು ನಮಗೆ ಸರಿ ಮತ್ತು ತಪ್ಪುಗಳು ಹೊಯ್ದಾಟದ ಕಾಲವೂ ಹೌದು. ಇದನ್ನು ಈ ಕೃತಿಯಲ್ಲಿ ಲೇಖಕರು ಹೇಳುತ್ತಾರೆ. ಅವರ ವೃತ್ತಿ ಜೀವನದಲ್ಲಿ ಏನು ಕಂಡಿದ್ದಾರೆಯೋ ಅದನ್ನು ಇಲ್ಲಿ ಹೇಳಿದ್ದಾರೆ ಎಂದು ಕಾಣುತ್ತದೆ. ಅದ್ದರಿಂದ ಇದು ಸತ್ಯ. ಅಷ್ಟೇ ಅಲ್ಲ, ಒಬ್ಬ ತಜ್ಞ ವೈದ್ಯ ಮತ್ತು ಒಬ್ಬ ತತ್ವಜ್ಞಾನಿ ಜೀವನವನ್ನು ನೋಡುವ ಕ್ರಮಗಳು ಬೇರೆ. ಅದರಲ್ಲಿ ಸಂಶಯವು ಇಲ್ಲ. ವೈದ್ಯನಿಗೆ ತನ್ನ ಹತ್ತಿರ ಬರುವ ರೋಗಿಯ ಮನೋಸ್ಥಿತಿಯು ರೋಗದ ಒಂದು ಲಕ್ಷಣವಾಗಿ ಕಾಣುತ್ತದೆ. ಭಂಡಾರಿಯವರಿಗೆ ಮತ್ತು ಹರೀಶ್ ಅವರಿಗೆ ಬರೀ ಮನಸ್ಸು ಮಾತ್ರವೇ ಮುಖ್ಯವಲ್ಲ. ಅದರ ಹಿಂದೆ ಇರುವ ಮನೋರೋಗವೂ ಅತ್ಯಂತ ಮುಖ್ಯ. ನಮ್ಮಲ್ಲಿ ಮನೋರೋಗದ ಬಗ್ಗೆ ಅನೇಕ ಅಪಕಲ್ಪನೆಗಳು ಇವೆ. ತುಂಬಾ ಜನರು ಮನೋವೈದ್ಯರ ಹತ್ತಿರ ಹೋಗಲು ಹಿಂಜರಿಯುತ್ತಾರೆ. ಅದರ ಜೊತೆಗೆ ಅತ್ಯಂತ ತೀರಾ ಸಾಮಾನ್ಯರು ಮನೋರೋಗವನ್ನು ನೋಡುವ ಕ್ರಮಗಳೇ ಬೇರೆ. ಜನರು ಮೂಢನಂಬಿಕೆಯಿಂದ ಸ್ವಲ್ಪ ವ್ಯತಿರಿಕ್ತವಾಗಿ ನಡೆಯುವವರನ್ನು , ಭ್ರಾಂತಿಯಲ್ಲಿ ಇರುವವರನ್ನು ಭೂತ ಮತ್ತು ದೆವ್ವ ಬಿಡಿಸುವವರ ಹತ್ತಿರ ಕರೆದುಕೊಂಡು ಹೋಗುವುದು ಹೆಚ್ಚು. ಅದನ್ನು ಹೋಗಲಾಡಿಸಲು ಈ ತರಹದ ಕೃತಿಗಳು ಬರಬೇಕಾಗುತ್ತದೆ. ಮನೋವಿಜ್ಞಾನಕ್ಕೆ ಸಂಬಂಧಪಟ್ಟು ಹೆಚ್ಚು ಕೃತಿಗಳು ಬಂದಿಲ್ಲ. ಬರುವುದು ತೀರಾ ಅಪರೂಪ. ಆದ್ದರಿಂದ ಈ ಕೃತಿಯು ನಮಗೆ ಅತ್ಯಂತ ಮುಖ್ಯವಾಗಿದೆ. ಇಲ್ಲಿ ಲೇಖಕರು ಎರಡು ಪ್ರಧಾನವಾದ ಸಂಗತಿಗಳನ್ನು ಪ್ರಸ್ತಾವಿಸುತ್ತಾರೆ: ಒಂದು ಹದಿಹರಯದವರ ಮನೋಸ್ಥಿತಿ. ಎರಡು ನಾವು ಅವರನ್ನು ನೋಡಬೇಕಾದ ಕ್ರಮ. ನಾವೆಲ್ಲರೂ ಗಮನಿಸಬೇಕಾದ ಅಗತ್ಯಗಳಿವು. ಭಯ ಮತ್ತು ದುಃಖ ಮನುಷ್ಯರನ್ನು ಹತಾಶರನ್ನಾಗಿ ಮಾಡುತ್ತದೆ. ದುಃಖಿತ ಮನುಷ್ಯರು ಖಿನ್ನತೆಯಿಂದ ಬಳಲುತ್ತಾರೆ. ಖಿನ್ನತೆ ಎಂದರೆ ಅದು ಒಣ ಕೆಮ್ಮು ಅಥವಾ ಶೀತದಂತೆ ಅಲ್ಲ ಎನ್ನುವುದು ಈ ಕೃತಿಯ ಅತ್ಯಂತ ಮಹತ್ವದ ತತ್ವ. ಮನಸ್ಸಿನ ಆಂತರಿಕ ಸಂಘರ್ಷಕ್ಕೂ ಒಂದು ಸಂಬಂಧವಿದೆ ಎನ್ನುವುದನ್ನು ಇಲ್ಲಿ ಲೇಖಕರು ಹೇಳುತ್ತಾರೆ. ಉದಾಹರಣೆಗೆ ”ಇವರಿಗೂ ಇತ್ತು ಸಮಸ್ಯೆಗಳು” ಲೇಖನವು ನಮಗೆ ಅನೇಕ ವಿಚಾರಗಳನ್ನು ಹೇಳುತ್ತದೆ.

ನಮ್ಮಲ್ಲಿರುವ ವಿಷಾದವು ಭಯ ಮತ್ತು ಬೇಸರದಿಂದ ಹುಟ್ಟುತ್ತದೆ. ಉದ್ವಿಗ್ನತೆಗೂ ಮನಸ್ಸಿನಲ್ಲಿ ಉಂಟಾಗುವ ಕಿರಿಕಿರಿಗೂ ಸಂಬಂಧವಿದೆ. ಅದು ಮಾನಸಿಕ ಒಂದು ಸ್ಥಿತಿಯು ಮಾತ್ರ. ಅದನ್ನು ಸರಳವಾದ ಮಾತಿನಲ್ಲಿ ವಿವರಿಸಲು ಬರುವುದಿಲ್ಲ ಈ ಕೃತಿಯ ಈ ಲೇಖನವು ಇದಕ್ಕೆ ಒಂದು ಉದಾಹರಣೆ ಈ ಸಂಕಲನದ ‘ಪ್ರೇಮ ಕಾವ ಲಿಂಗದ ಹಂಗು” ಲೇಖನವು ಅತ್ಯಂತ ಮುಖ್ಯವಾದ ವಿಚಾರವನ್ನು ನಮ್ಮ ಮುಂದೆ ಇಡುತ್ತದೆ.

ಖಿನ್ನನಾದವನು ಮತ್ತೆಮತ್ತೆ ದುಃಖ ಮತ್ತು ಬೇಸರವನ್ನು ಮತ್ತೆ ಮತ್ತೆ ಹೇಳುತ್ತಿರುತ್ತಿರುತ್ತಾನೆ. ಖಿನ್ನನಾದವನ ಮನೋಸ್ಥಿತಿಯು ಬೇಸರವನ್ನೂ ಭಯವನ್ನು ಸೂಚಿಸುತ್ತಿರುವುದರಿಂದ ಅವನು ಸುತ್ತಲಿನ ಜಗತ್ತನ್ನು ಕಾಣುವ ಸ್ಥಿತಿಯೂ ಬೇರೆ. ಅವನು ಸ್ನೇಹಿತರಿಂದ ದೂರವಿರುತ್ತಾನೆ. ಅವನು ಒಂಟಿಯಾಗಿ ಇರಲು ಇಷ್ಟ ಪಡುತ್ತಾನೆ, ಎಷ್ಟೋ ಸರ್ತಿ ಅವನು ಸುಮ್ಮನೆ ಅಲೆದಾಡುತ್ತಾನೆ. ಅವನ ಬಾಯಿಯು ಒಣಗುತ್ತದೆ. ಅವನ ಅಲೋಚನೆಗಳು ಅಸಹಜತೆಯನ್ನು ಪ್ರಕಟಿಸುತ್ತವೆ. ಇದನ್ನು ಲೇಖಕರು ಹೇಳುತ್ತಾರೆ ಈ ಸಂಕಲನ ಮತ್ತೊಂದು ಮಹತ್ವದ ಲೇಖನ “ಏಕೆ ಕಾಡುವಿರಿ ಹೀಗೆ’? ಮನಸ್ಸು ಮತ್ತು ಅದರ ಸಂಕಟವನ್ನು ಇದು ಹೇಳುತ್ತದೆ.

ಮನಸ್ಸು ಮತ್ತು ಅದರ ವ್ಯಗ್ರತೆಯು ಬೇರೆ ಬೇರೆ ಕಾರಣದಿಂದ ಬರುತ್ತದೆ. ವ್ಯಗ್ರತೆಯಿಂದ ಇರುವವನು ವಾಸ್ತವತೆಯನ್ನು ಸರಿಯಾಗಿ ನೋಡಲಾರ..”ನಮ್ಮ ವೃತ್ತಿ ನಮ್ಮ ಆಯ್ಕೆ” ಎನ್ನುವ ಲೇಖನವು ಇದನ್ನು ಸವಿವರವಾಗಿ ಮಂಡಿಸುತ್ತದೆ.

ಹದಿನೇಳನೆಯ ಶತಮಾನ ಮತ್ತು ಹದಿನೆಂಟನೆಯ ಶತಮಾನದಲ್ಲಿ ಇದು ವಿನಾ ಕಾರಣವೆಂದು ಭಾವಿಸಲಾಗಿತ್ತು. ಇದಕ್ಕೆ ಪೂರಕವಾಗಿ ಮತ್ತೆ ಕೆಲವು ಅಂಶಗಳನ್ನು ನೋಡಬಹುದು-ನರ ಸಂಬಂಧಿ ಕಾಯಿಲೆಗಳಲ್ಲಿ ಮೂರ್ಛೆ ರೋಗವೂ ಒಂದು. ಕ್ಲಾಸಿಕಲ್ ಪರಂಪರೆಯ ಅನೇಕ ವೈದ್ಯರಿಗೆ ಇದನ್ನು ವಿವರಿಸಲು ಸಾಧ್ಯವಾಗಲಿಲ್ಲ. ಆದರೆ ಮೂರ್ಛೆ ರೋಗುವು ನಿಸರ್ಗ ದತ್ತವಾದುದಲ್ಲ. ಅದು ವಾಸ್ತವವಾಗಿ ಕೇವಲ ಮನುಷ್ಯನ ಸ್ಥಿತಿಯನ್ನು ಮಾತ್ರವೇ ವಿವರಿಸುತ್ತದೆ. ಮೂರ್ಛೆ ಎಂದರೆ ತನ್ನ ಸ್ಥಿತಿಯನ್ನು ಮರೆಯವುದು. ಇದರಲ್ಲಿ ನೈತಿಕ ಮತ್ತು ಅನೈತಿಕವೆನ್ನುವ ಅಂಶಗಳೇ ಇಲ್ಲ. ಮತ್ತು ಹಿಸ್ಟಿರಿಕ್ ಆದವನ ಅಭಿವ್ಯಕ್ತಿಯೂ ಬೇರೆ. ಆಗಿನ ಕಾಲದಲ್ಲಿ ಹಿಸ್ಟಿರಿಕ್ ಮತ್ತು ನೈತಿಕ ಹಾಗೂ ಅನೈತಿಕ ಎನ್ನುವುದರ ವಿವರಣೆಯು ಭಿನ್ನವಾಗಿತ್ತು. ಹದಿನೆಂಟನೆಯ ಶತಮಾನದ ಮೊದಲ ಭಾಗದಲ್ಲಿ ಹಿಸ್ಟಿರಿಕ್ ಮತ್ತು ವ್ಯಕ್ತತೆಗೆ ಇದ್ದ ಸಂಬಂಧವು ಕುರಿತು ಹೇಳುವಾಗ ವೈದ್ಯಕೀಯ ಲೋಕವು ಅದಕ್ಕೂ ಕರುಣೆಯ ಅಗತ್ಯವಿದೆ ಎಂದು ವಿವರಿಸಿತ್ತು. ಆಗ ವೈದ್ಯರು ನರ ಸಂಬಂಧಿ ಕಾಯಿಲೆಯನ್ನು ವಿವರಿಸಿದ ಕ್ರಮವೆಂದರೆ ಮನುಷ್ಯನ ಸಂವೇದನೆ, ನರವ್ಯೂಹ, ಖಿನ್ನತೆ, ಅದನ್ನು ಮನುಷ್ಯನು ವ್ಯಕ್ತ ಪಡಿಸುವ ವಿಧಾನ ಎಲ್ಲವೂ ಮುಖ್ಯವೆಂದು ಹೇಳಿದರು. ವಾಸ್ತವಾಗಿ ಖಿನ್ನತೆಯು ಮನಸ್ಸಿನ ಯಾತನೆಯೂ ಹೌದು, ದೇಹದ ಯಾತನೆಯೂ ಹೌದು. ಅದರ ಅನುಭವವು ಸ್ವಲ್ಪ ಮಟ್ಟಿಗೆ ಕಟುವಾದದು. ಖಿನ್ನತೆಯನ್ನು ನಾವು ಹೇಗೆ ವಿವರಿಸುತ್ತೇವೆ ಎನ್ನುವುದೂ ಅಷ್ಟೇ ಮುಖ್ಯ. ಯಾರು ಹೆಚ್ಚು ಸಂವೇದನಾ ಶೀಲರಾಗಿರುತ್ತಾರೋ ಅವರಿಗೆ ಖಿನ್ನತೆಯು ಕಾಡುತ್ತದೆ. ಬಳಲಿಕೆ, ಖಿನ್ನತೆ ಮತ್ತು ಆತಂಕಗಳು ಜೊತೆಗೆ ಇರುತ್ತದೆ. ಸೋಪು ಮತ್ತು ಸೋಪಿನ ಉತ್ಪನ್ನಗಳು ಅವರನ್ನು ಶುದ್ಧಿ ಮಾಡಲಾರದು. ಖಿನ್ನತೆಯಿಂದ ಬಳಲುವವರ ಸಮಸ್ಯೆಯು ಈ ದೃಷಿಯಿಂದ ವಿಶಿಷ್ಟವಾಗಿದೆ. ಆಧುನಿಕ ಸಂದರ್ಭದಲ್ಲಿ ವ್ಯಕ್ತಿಯ ಅನುಭವವು ಕೇವಲ ಶುದ್ಧೀಕರಣಕ್ಕೆ ಸಂಬಂಧಪಟ್ಟಿದ್ದು ಅಲ್ಲ. ಹಾಗೆ ನೋಡುವುದಿದ್ದರೆ ಯಾವುದನ್ನು ಸಹಜ ಮತ್ತು ಅಸಹಜ ಎನ್ನುವುದನ್ನು ಗುರುತಿಸುವುದು ಸಾಮಾಜಿಕ ಸನ್ನಿವೇಶದ ಆಧಾರದ ಮೇಲೆ. ಯಾವುದನ್ನು ಸಾಮಾಜಿಕತೆ ಒಪ್ಪಿದೆಯೆಂದರೆ ನೀತಿಯನ್ನು ಮಾತ್ರ. ಈ ಚೌಕಟ್ಟಿನಿಂದ ಹೊರತಾದ ಸಂಗತಿಗಳನ್ನು ಅಸಹಜವೆಂದು ಹೇಳಿದೆ. ನೀತಿಗೂ ಜೀವನದ ಕ್ರಮಕ್ಕೂ ರಾಜಕಾರಣಕ್ಕೂ ಒಂದು ಸಂಬಂಧವಿದೆ. ಮೊದಲ ಮಹಾಯದ್ಧ ಮತ್ತು ಅದರ ಪರಿಣಾಮವನ್ನು ನೋಡಿದರೆ ಮತ್ತೆ ಒಂದು ಅಂಶವು ನಮ್ಮ ಗಮನಕ್ಕೆ ಬರುತ್ತದೆ. ಆಗ ನಾಜಿಗಳನ್ನು ನೋಡಿದ ಕ್ರಮಗಳು ಬೇರೆಯಾಗಿದ್ದವು. ಮತ್ತು ಅದರ ಪರಿಣಾಮವೂ ಬಹಳ ಬಿಕ್ಕಟ್ಟಿನದು ಎಂದು ಹೇಳಲಾಯಿತು. ಆದರೆ ಅವರ ಮನೋಸ್ಥಿತಿಯು ಸಾಮಾನ್ಯವಾದ್ದು ಆಗಿರಲಿಲ್ಲ ಭಂಡಾರಿಯವರ ಮುಖ್ಯವಾದ ಗಮನವಿರುವುದು ಒಂದು ವಯಸ್ಸಿನ ಮನೋಸ್ಥಿಯ ಮೇಲೆ. ಹಾಗೆ ನೋಡಿದರೆ ಈ ಕೃತಿಯನ್ನು ಒಬ್ಬರು ವೈದ್ಯರು ಹೇಗೆ ಬರೆಯಬಹುದೋ ಆ ರೀತಿಯಲ್ಲಿ ಅವರು ಬರೆದಿದ್ದಾರೆ. ನಿತ್ಯ ನಾವು ನೋಡುವ ಹದಿಹರಯದವರನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು ಎನ್ನುವುದನ್ನು ಈ ಕೃತಿಯು ಹೇಳುತ್ತದೆ. ಪಾಲಕರು, ಶಿಕ್ಷಕರು, ಸಮಾಜ, ಸಂಸ್ಕೃತಿ ತಜ್ಞರು, ಹದಿಹರಯದವರು ಈ ಕೃತಿಯನ್ನು ಓದಬೇಕು. ಇದು ನಮಗೆ ಅನೇಕ ಮಾರ್ಗ ಸೂಚನೆಯನ್ನು ಕೊಡುತ್ತದೆ. ಮನೋವ್ಯಾಪಾರ ಎನ್ನುವುದು ಅತ್ಯಂತ ಸರಳವಲ್ಲ ಎನ್ನುವುದು ಇದನ್ನು ಓದುವಾಗ ನಮ್ಮ ಅರಿವಿಗೆ ಬರುತ್ತದೆ. ಇದು ಈ ಕೃತಿಯ ಮುಖ್ಯವಾದ ಅಂಶ. ಹಾಗೆಂದು ಈ ಕೃತಿಯಲ್ಲಿ ಮಿತಿಯೇ ಇಲ್ಲವೆಂದು ಅರ್ಥವಲ್ಲ. ಈವತ್ತು ಕೂಡಾ ಹದಿಹರಯದವರ ಮನೋಸ್ಥಿತಿಯ ಅಧ್ಯಯನ ಎಂದರೆ ಅದು ಅತ್ಯಂತ ವಿಶಾಲವಾದ ಅರ್ಥದಲ್ಲಿ ಒಂದು ಸಮಾಜದ ಸ್ಥಿತಿಯ ಅಧ್ಯಯನವೂ ಹೌದು. ತುಂಬಾ ಮಹತ್ವದ ಮನೋವಿಜ್ಞಾನಿಗಳು (ಫುಕೋ, ಲಕಾನ್, ಫ್ರಾಯ್ಡ್ ಮುಂತಾದವರು) ಮನೋಸ್ಥಿತಿ ಮತ್ತು ಸಮಾಜದ ನಡುವೆ ಇರುವ ಅಂತರ್ ಸಂಬಂಧವನ್ನು ಹೇಳಿದ್ದಾರೆ. ಪರಿಸ್ಥಿತಿಯು ಹೇಗೆ ಇದೆ ಎಂದು ಅವರು ಹೇಳುತ್ತಾರೆ. ಈ ಕೃತಿಯನ್ನು ಓದುವಾಗ ನಮಗೆ ಅವರ ನೆನಪು ಸಹಜವಾಗಿ ಆಗುತ್ತದೆ. ಇಲ್ಲಿಯೂ ಲೇಖಕರು ನಮಗೆ ಅನೇಕ ಮಾರ್ಗದರ್ಶನವನ್ನು ಸೂಚಿಸುತ್ತಾರೆ. ನಿರೂಪಣೆಯ ತಂತ್ರವು ಚೆನ್ನಾಗಿದೆ. ಕೊನೆಯ ಲೇಖನದಲ್ಲಿ ಕೆಲವು ಪ್ರಶ್ನೆ ಮತ್ತು ಉತ್ತರದ ಮಾದರಿಗಳು ಇವೆ. ಇದು ಮುಖ್ಯವಾಗಿದೆ. ಹಾಗೆಂದು ಇದರಲ್ಲಿ ಯಾವುದೇ ಲೋಪವು ಇಲ್ಲ ಎಂದು ಹೇಳಲು ಬರುವುದಿಲ್ಲ. ಕಳೆದ ಹದಿನೈದು ಇಪ್ಪತ್ತು ವರ್ಷಗಳಲ್ಲಿ ಇಡೀ ಸಮಾಜದಲ್ಲಿ ಅತ್ಯಂತ ವ್ಯಾಪಕವಾದ ಒಂದು ಬದಲಾವಣೆಯನ್ನು ಕಾಣುತ್ತೇವೆ. ಅದು ಸಮಾಜ ಮತ್ತು ನಮ್ಮ ಆರ್ಥಿಕ ಹಾಗೂ ಮಾಧ್ಯಮದ ನೀತಿಗೂ ಸಂಬಂಧವನ್ನು ಇರಿಸಿಕೊಂಡಿದೆ. ಮಧ್ಯಮವರ್ಗದ ಅನೇಕ ಯುವಜನರು ಮತ್ತು ಅವರ ಮನೋಸ್ಥಿತಿಯು ಹೇಗೆ ಬದಲಾಗುತ್ತದೆ ಎನ್ನುವುದನ್ನು ತಾತ್ವಿವಾಗಿಯೂ ನೋಡಬೇಕಾಗುತ್ತದೆ

ಹೀಗಿದ್ದರೂ ಅತ್ಯಂತ ಮುಖ್ಯವಾದ ಸಮಸ್ಯೆಯನ್ನು ಕುರಿತು ಈ ಕೃತಿಯು ಹೇಳುತ್ತದೆ. ಈ ಪುಸ್ತಕವನ್ನು ನಾವು ಓದಲೇಬೇಕು: ಯಾಕೆಂದರೆ ನಮ್ಮ ನಡುವೆ ಹದಿನಂಟು ವಯಸ್ಸಿನ ಅನೇಕರು ಇದ್ದಾರೆ. ಅವರನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈ ದೃಷ್ಟಿಯಲ್ಲಿ ಈ ಕೃತಿಯು ಅತ್ಯಂತ ಮಹತ್ವದ್ದು. ವೈದ್ಯ ವೃತ್ತಿಯಲ್ಲಿ ಇದ್ದು ಬರೆಯುವುದು ಅತ್ಯಂತ ಕಷ್ಟ. ಅದನ್ನು ಡಾ. ಭಂಡಾರಿಯವರು ಮತ್ತು ಭಂಡ್ಸಾಲೆಯವರು ದಾಟಿ ನಮಗೆ ಮೌಲಿಕವಾದ್ದನ್ನು ಕೊಟ್ಟಿದ್ದಾರೆ.

ಕೃತಿ      : ಹದಿನೆಂಟು ಏನಿಲ್ಲ… ಏನುಂಟು…!?
ಲೇಖಕರು : ಡಾ||ಪಿ.ವಿ.ಭಂಡಾರಿ ಮತ್ತು ಹರೀಶ್ ಶೆಟ್ಟಿ ಬಂಡ್ಸಾಲೆ
ಪ್ರಕಟಣೆ   : 2018
ರೂ       : 180/-

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...