Homeಅಂಕಣಗಳು2019ರ ಅಖಾಡ ಮೋದಿ v/s ಮೋದಿ ಸಾಧನೆಗಳು

2019ರ ಅಖಾಡ ಮೋದಿ v/s ಮೋದಿ ಸಾಧನೆಗಳು

- Advertisement -
- Advertisement -

2014ರ ಚುನಾವಣೆಯಲ್ಲಿ ಬಹಳ ಪರಿಣಾಮ ಬೀರಿದ ತಂತ್ರಗಾರಿಕೆ ಎಂದರೆ ನರೇಂದ್ರ ಮೋದಿಯನ್ನು ಪರಮ ದೇಶಭಕ್ತನೆಂತಲೂ, ಎಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸಬಲ್ಲ ಸಂತನೆಂಬಂತೆಯೂ ವೈಭವೀಕರಿಸಿ ಆತನಿಗೆ ಸರಿಸಾಟಿಯಾಗಬಲ್ಲ ಸಮರ್ಥ, ದಕ್ಷ, ಪ್ರಾಮಾಣಿಕ ನಾಯಕ ಇಡೀ ದೇಶದಲ್ಲಿ ಯಾರೂ ಇಲ್ಲ ಎಂಬಂತೆ ಬಿಂಬಿಸಿದ್ದು. ನಾಲ್ಕೂವರೆ ವರ್ಷಗಳ ನಂತರ ಮೋದಿಯ ಈ ಗ್ರಾಫ್ ಇಳಿಮುಖಗೊಂಡಿರುವುದು ನಿಜವಾದರೂ ಮೋದಿ ಮೇನಿಯಾ ಸಂಪೂರ್ಣ ಮಾಯವಾಗಿಲ್ಲ. ಕಾರಣ ಮೋದಿಯ ದುರಾಡಳಿತ ಹಾಗೂ ವೈಫಲ್ಯಗಳನ್ನು ಮರೆಮಾಚಿ, ಮೋದಿಯ ವೈಭವೀಕರಣಕ್ಕೆ ಬಹುತೇಕ ಮಾಧ್ಯಮಗಳು ಕಟಿಬದ್ಧವಾಗಿವೆ. ಯಾಕೆಂದರೆ ಕೋಬ್ರಾಪೋಸ್ಟ್ ಬಹಿರಂಗ ಪಡಿಸಿದ ಪ್ರಕಾರ ಬಹುತೇಕ ಮಾಧ್ಯಮಗಳು ಆರೆಸ್ಸೆಸ್-ಬಿಜೆಪಿ ಪರವಾಗಿ ಸುಪಾರಿ ಪಡೆದುಕೊಂಡಿವೆ.
ನಮ್ಮ ಸಂವಿಧಾನದಲ್ಲಿ ನಿರ್ದೇಶಿತವಾಗಿರುವ ಮಾದರಿಗೆ ಭಿನ್ನವಾಗಿ ಅಧ್ಯಕ್ಷಿÃಯ ಚುನಾವಣೆಯ ಮಾದರಿಯನ್ನು ಪ್ರಚಾರದಲ್ಲಿ ಬಳಸುತ್ತಿರುವ ಬಿಜೆಪಿ ಮತ್ತವರ ‘ಗೋದಿ ಮೀಡಿಯಾ’ ಮೋದಿ ವರ್ಸಸ್ ರಾಹುಲ್ ಎಂಬ ಪ್ರಚಾರವನ್ನೆ ಹೆಚ್ಚಾಗಿ ಮುಂದೆ ತರುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಈ ವಿಷಯದಲ್ಲಿ ಬಿಜೆಪಿ ಐಟಿ ಸೆಲ್ ಕೃಪಾಪೋಷಿತ ಸೋಷಿಯಲ್ ಮೀಡಿಯಾ ಸ್ಟಾçಟಜಿಯೂ ಪರಿಣಾಮಕಾರಿಯಾ ಕೆಲಸ ಮಾಡುತ್ತಿದೆ. ಹೀಗಾಗಿ ‘ಮೋದಿ ಬಿಟ್ಟರೆ ಮತ್ಯಾರಿದ್ದಾರೆ?’ ಎಂಬ ಪ್ರಶ್ನೆಗಳು ಸಹಜ ಎನ್ನುವಂತಾಗಿ ಬಿಟ್ಟಿವೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಈ ರೀತಿಯ ಪ್ರಚಾರ ಮೋದಿ-ಶಾ ಕೂಟಕ್ಕೆ ಅತ್ಯಂತ ಹೆಚ್ಚು ಲಾಭದಾಯಕ. ವಿರೋಧ ಪಕ್ಷಗಳು ಈ ‘ಮೋದಿ ವರ್ಸಸ್— ?’ ಪ್ರಚಾರದ ತಂತ್ರಕ್ಕೆ ಬಿದ್ದರೆ ನಷ್ಟ ಕಟ್ಟಿಟ್ಟ ಬುತ್ತಿ.
ಬಿಜೆಪಿಗೆ ತನ್ನ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಮುಖವೂ ಇಲ್ಲದಂತಾಗಿದೆ. ಒಂದಾದ ಮೇಲೊಂದರಂತೆ ಅವರ ‘ಸಾಧನೆಯ ಪಟ್ಟಿ’ ಪೊಳ್ಳು ಎಂಬುದು ಜಗಜ್ಜಾಹೀರಾಗುತ್ತಿದೆ. ಆದ್ದರಿಂದಲೇ ತಮ್ಮ ಸಾಧನೆಗಳನ್ನು ಹೇಳಿಕೊಳ್ಳುವ ಬದಲಿಗೆ ವಿರೋಧಿಗಳನ್ನು ಮಣಿಸುವ, ಮಟ್ಟ ಹಾಕುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಇಡಿ, ಐಟಿ, ಸಿವಿಸಿ ಗಳನ್ನು ಬಳಸಿ ದಾಳಿ ನಡೆಸುವುದು ಮತ್ತು ಇದೇ ಕೇಸುಗಳನ್ನು ಬಳಸಿಕೊಂಡು ವಿರೋಧಿಗಳ ಬಗ್ಗೆ ಅಪಪ್ರಚಾರ ಮಾಡುವುದು. ಈ ತಂತ್ರದಿಂದಲೇ ಕರ್ನಾಟಕದಲ್ಲಿ ಎಸ್ಸೆಮ್ ಕೃಷ್ಣರನ್ನು ಸೆಳೆದುಕೊಂಡರು. ರಾಜಕೀಯವಾಗಿ ಮೂರು ಕಾಸಿನ ಲಾಭವಾಗಲಿಲ್ಲ. ಡಿಕೇಶಿಯನ್ನು ಮಣಿಸಿ ಕಬ್ಜಾ ತೆಗೆದುಕೊಳ್ಳಲು ಪ್ರಯತ್ನಿಸಿ ವಿಫಲವಾದರು. ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಬಲಿಷ್ಠವಾಗಿರುವ ರೆಡ್ಡಿ ಜಾತಿ ಬೆಂಬಲ ಮತ್ತು ಜನಪ್ರಿಯತೆ ಇರುವ ವೈಎಸ್ಸಾರ್ ಪಕ್ಷದ ಜಗನ್‌ಮೋಹನ್‌ರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹೀಗಾಗಿ ಮತ್ತೊಮ್ಮೆ ಶ್ರಿÃರಾಮಚಂದ್ರನನ್ನು ಮತ ಸೆಳೆಯುವ ವಿಷಯವನ್ನಾಗಿಸುವ ಧರ್ಮದ್ರೊÃಹದ ಕಾರ್ಯಕ್ಕೆ ಬಿಜೆಪಿ ಮುಂದಾಗಿದೆ. ಆದರೆ 30 ವರ್ಷಗಳ ಕಾಲ ಬಿಜೆಪಿ ನಡೆಸಿದ ರಾಜಕೀಯದಾಟವನ್ನು ಕಣ್ಣಾರೆ ಕಂಡಿರುವ ನೈಜ ರಾಮಭಕ್ತರು ಜಾಗೃತರಾಗಿದ್ದಾರೆ. ಸದ್ಯ ಮೋದಿ ಭಕ್ತರು ಮಾತ್ರ ಮೈಮೇಲೆ ದೆವ್ವ ಬಂದವರಂತೆ ಒದರುತ್ತಿರುವುದು, ಮಂದಿರ ಉನ್ಮಾದ ಕೆರಳಿಸಲು ಕಸರತ್ತು ನಡೆಸಿರುವುದು ಕಂಡುಬರುತ್ತಿದೆ. ಆದ್ದರಿಂದ ‘ಮಂದಿರ್ ವಹೀಂ ಬನಾಯೇಂಗೇ’ ಘೋಷಣೆ 90ರ ದಶಕದಲ್ಲಿ ನೀಡಿದ ಫಲಿತಾಂಶ 2019ರಲ್ಲಿ ಪುನರಾವರ್ತನೆಯಾಗುವ ಲಕ್ಷಣಗಳಿಲ್ಲ. ಬಿಜೆಪಿ ಕೂಟದ ರಾಜಕೀಯ ದಾಳಗಳಿಗೆ ಅನುವಾಗುವ ಟೈಮ್‌ಟೇಬಲ್‌ಗೆ ತಕ್ಕಂತೆ ಮಂದಿರ-ಮಸೀದಿ ವಿವಾದವನ್ನು ವಿಚಾರಣೆ ನಡೆಸಲು ಸುಪ್ರಿÃಂ ಕೋರ್ಟ್ ನಿರಾಕರಿಸಿರುವುದೂ ಕೂಡ ಇವರಿಗೆ ಒಂದಷ್ಟು ಹಿನ್ನಡೆಯನ್ನುಂಟು ಮಾಡಿದೆ. ಬಾಬ್ರಿ ಮಸೀದಿ ಧ್ವಂಸದ ನಂತರ ಬಿಜೆಪಿ ಒಂದು ರಾಷ್ಟಿçÃಯ ಪಕ್ಷವಾಗಿ ಬೆಳೆದಿದ್ದು ಎಷ್ಟು ಸತ್ಯವೋ, ಮಾರನೇ ವರ್ಷ 1993ರಲ್ಲಿ ನಡೆದ ಚುನಾವಣೆಯಲ್ಲಿ ಅದೇ ಉತ್ತರಪ್ರದೇಶದ ಚುನಾವಣೆಯಲ್ಲಿ ನೆಲಕಚ್ಚಿದ್ದೂ ಕೂಡ ಅಷ್ಟೆà ಸತ್ಯ.
ಈ ಸತ್ಯವನ್ನು ಅರಿತಿದ್ದ ಮೋದಿ ಕೂಟ 2014ರ ಚುನಾವಣೆಯಲ್ಲಿ ಮಂದಿರ-ಮಸೀದಿ ವಿಷಯವನ್ನು ಗೌಣಗೊಳಿಸಿ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಘೋಷಣೆಯನ್ನು ಮುಂದುಮಾಡಿತ್ತು. ಯಾಕೆಂದರೆ ಭಾರತದ ಚುನಾವಣಾ ರಾಜಕೀಯದ ವಿಚಿತ್ರ ವಾಸ್ತವವೆಂದರೆ, ಇಲ್ಲಿ ಸೋಲು ಗೆಲುವುಗಳು ನಿರ್ಧಾರವಾಗುವುದು ಆಯಾ ಪಕ್ಷಗಳ ಪಾರಂಪರಿಕ ಓಟುಗಳಿಂದಲ್ಲ; ಬದಲಿಗೆ ತೂಗುಯ್ಯಾಲೆಯಲ್ಲಿರುವ ಮತಗಳನ್ನು ಸೆಳೆಯುವುದರಿಂದ. ಹಾಗಾಗಿ ಮಂದಿರ ಘೋಷಣೆ ಅವರ ಪಾರಂಪರಿಕ ಮತಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಹಾಯಕವಾಗಬಹುದೆ ಹೊರತು ಹೊಸಹೊಸ ವಲಯಗಳಿಗೆ ವಿಸ್ತರಿಸಲು ಅಷ್ಟೆÃನೂ ಉಪಯುಕ್ತವಲ್ಲ.
2019ರ ಲೋಕಸಭಾ ಚುನಾವಣೆ ‘ರಾಜಕೀಯದಲ್ಲಿ ಶಾಶ್ವತ ಶತೃಗಳೂ ಇಲ್ಲ, ಮಿತ್ರರೂ ಇಲ್ಲ’ ಎಂಬ ನಾಣ್ಣುಡಿಯನ್ನು ಮತ್ತೊಮ್ಮೆ ನಿಜವಾಗಿಸಿದೆ. ದೆಹಲಿ ಗದ್ದುಗೆಯ ನಂಬರ್ ಗೇಮ್‌ನಲ್ಲಿ ನಿರ್ಣಾಯಕ ಸ್ಥಾನಗಳನ್ನು (80) ಹೊಂದಿರುವ ಉತ್ತರಪ್ರದೇಶದಲ್ಲಿ ಬದ್ಧ ವೈರಿಗಳಾಗಿದ್ದ ಸಮಾಜವಾದಿ ಪಕ್ಷ ಮತ್ತು ಬಿಎಸ್‌ಪಿಗಳ ಮೈತ್ರಿ ಭದ್ರವಾಗಿದೆ. ಇದು ಬಿಜೆಪಿಗೆ ನುಂಗಲಾರದ ತುತ್ತು. ಹಾಗೆಯೇ ಅನಾದಿ ಕಾಲದಿಂದಲೂ ಕಾಂಗ್ರೆಸ್ ಪಕ್ಷದ ಕಡು ವಿರೋಧಿಯಾಗಿದ್ದ ತೆಲುಗುದೇಶಂ ಪಕ್ಷದ ಚಂದ್ರಬಾಬು ನಾಯ್ಡು ಇದೀಗ ಕಾಂಗ್ರೆಸ್ ಪಕ್ಷದ ಪರವಾಗಿ ಬ್ಯಾಟಿಂಗ್ ಶುರುಮಾಡಿದ್ದಾರೆ. ಅಖಿಲ ಭಾರತ ಮಟ್ಟದ ಮಹಾಮೈತ್ರಿಯನ್ನು ರಚಿಸಲು ಪುರುಸೊತ್ತಿಲ್ಲದೆ ದೇಶಾದ್ಯಂತ ಸುತ್ತಾಡುತ್ತಿದ್ದಾರೆ. ಮೇಲುನೋಟಕ್ಕೆ ಚಂದ್ರಬಾಬು ಫ್ಯಾಕ್ಟರ್ ಒಂದಷ್ಟು ಕೆಲಸ ಮಾಡಿದಂತೆ ಕಾಣುತ್ತಿದೆ. ಹಿಂದಿನ ಚುನಾವಣೆಯ ಸಂದರ್ಭದಲ್ಲಿ ‘ತನ್ನ ಮಗನನ್ನು ಪ್ರಧಾನಿ ಮಾಡಲಿಕ್ಕಾಗಿ ಸೋನಿಯಾ ಗಾಂಧಿ ಆಂಧ್ರಪ್ರದೇಶವನ್ನು ವಿಭಜನೆ ಮಾಡಿದ್ದಾರೆ’ ಎಂದು ಅಲವತ್ತುಕೊಂಡಿದ್ದ ಚಂದ್ರಬಾಬು ಈ ಬಾರಿ ಅದೇ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯೆಂದು ಅಪ್ಪಿಕೊಂಡು ಫೋಟೋಶೂಟ್ ನಡೆಸುತ್ತಿರುವುದು ಕಾಲದ ವ್ಯಂಗ್ಯ.
ಆಂಧ್ರದಲ್ಲಿ ಹೆಚ್ಚುತ್ತಿರುವ ಜಗನ್‌ಮೋಹನ್ ಜನಪ್ರಿಯತೆ ಹಾಗೂ ಆಡಳಿತ ವಿರೋಧಿ ಅಲೆಗಳಿಂದ ತತ್ತರಿಸುತ್ತಿರುವ ಚಂದ್ರಬಾಬುಗೆ ಕಾಂಗ್ರೆಸ್‌ನ ಮೈತ್ರಿ ಕಾಲದ ಅನಿವಾರ್ಯತೆಯಾಗಿತ್ತು. ಅದೆಲ್ಲಾ ಏನೇ ಇರಲಿ, ‘ಮಹಾಮೈತ್ರಿ’ ಕೂಟದ ಪಕ್ಷಗಳನ್ನು ಒಂದಾಗಿ ಹೆಣೆಯುವ ಬಾಬು ತಂತ್ರ ಮೋದಿಯ ವಿರೋಧಿ ಕೂಟವನ್ನು ಒಟ್ಟಿಗೂಡಿಸುವ ಮೊದಲ ಹೆಜ್ಜೆಯಲ್ಲಿ ಯಶಸ್ವಿಯಾಗಿದೆ ಎನ್ನಬಹುದು.
ದೇಶವನ್ನು ಕಾಡುತ್ತಿರುವ ಬಹುಮುಖ್ಯ ಸಮಸ್ಯೆಗಳಾದ ರೈತರ ಸಮಸ್ಯೆ, ಬೆಲೆಯೇರಿಕೆ ಮತ್ತು ನಿರುದ್ಯೊÃಗದಂತ ಸಮಸ್ಯೆಗಳು ಚುನಾವಣಾ ವಿಷಯವಾಗುವ ವಿಫುಲ ಅವಕಾಶವಿದೆ.
ಸ್ವಾಮಿನಾಥನ್ ವರದಿ ಜಾರಿಗೆ ತರುತ್ತೆÃವೆಂದು ರೈತರಿಗೆ ಚುನಾವಣಾ ಆಶ್ವಾಸನೆ ನೀಡಿದ್ದ ಮೋದಿ ಸರ್ಕಾರ ಸುಪ್ರಿÃಕೋರ್ಟ್ನಲ್ಲಿ ‘ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರಲಾಗುವುದಿಲ್ಲ’ವೆಂದು ಅಫಿಡೇವಿಟ್ ಸಲ್ಲಿಸಿದೆ. ಬಹಿರಂಗವಾಗಿ ರೈತರಿಗೆ ಬಗೆದ ದ್ರೊÃಹ. ಎಲ್ಲೆಡೆ ರೈತರ ಆಕ್ರೊÃಶ ಪ್ರತಿಭಟನೆಗಳ ರೂಪ ತಳೆಯುತ್ತಿದ್ದಂತೆ ಡ್ಯಾಮೇಜ್ ಕಂಟ್ರೊÃಲ್‌ಗೆ ಇಳಿದು ಕನಿಷ್ಟ ಬೆಂಬಲ ಬೆಲೆ ಕೊಡುವ ನಾಟಕವಾಡಿದ್ದೂ ಕೂಡ ಇದೀಗ ಬಯಲಾಗಿದೆ. ಭಾರೀ ಪ್ರಚಾರ ಗಿಟ್ಟಿಸಿದ್ದ ಫಸಲ್ ಭೀಮಾ ಯೋಜನೆಯಲ್ಲಿ ವಾಸ್ತವದಲ್ಲಿ ರೈತರಿಗೆ ಗಿಟ್ಟಿದ್ದು ಏನೂ ಇಲ್ಲ. ಆದರೆ ಈ ಯೋಜನೆಯಿಂದಾಗಿ ಮೋದಿ ಮಿತ್ರಮಂಡಳಿಯ ಅದಾನಿ, ಅಂಬಾನಿ, ಎಸ್ಸಾರ್ ಕಂಪನಿಗಳು ನೂರಾರು ಕೋಟಿಗಳನ್ನು ಬಾಚಿಕೊಂಡಿರುವ ವಿಷಯ ಇದೀಗ ಹೊರಬಿದ್ದಿದೆ. ವಿರೋಧ ಪಕ್ಷಗಳು ಈ ವಿಷಯಗಳನ್ನು ಚುನಾವಣೆಯ ವಿಷಯಗಳನ್ನಾಗಿಸುವ ಪ್ರಯತ್ನದಲ್ಲಿದ್ದಾರೆ. ಒಟ್ಟಾರೆ ಬಗೆಹರಿಯದ ಕೃಷಿ ಬಿಕ್ಕಟ್ಟು ಸರ್ಕಾರದ ವಿರುದ್ಧ ರೈತರ ಸಿಟ್ಟಾಗಿ ಪರಿಣಮಿಸಿದರೆ ಮೋದಿಯನ್ನು ಮೂಲೆಗೆ ಸರಿಸಲು ಇದೊಂದು ಪ್ರಮುಖ ಅಸ್ತçವಾಗಬಲ್ಲುದು.
ನೋಟು ರದ್ದತಿ, ಜಿಎಸ್‌ಟಿ ಮುಂತಾದ ಕ್ರಮಗಳು ದೇಶದಲ್ಲಿ ನಿರುದ್ಯೊÃಗವನ್ನು ಹೆಚ್ಚಿಸಿವೆ ಎಂಬುದು ಇದೀಗ ನಿಚ್ಚಳವಾಗುತ್ತಿದೆ. ಹಾಗೆಯೇ ಪೆಟ್ರೊÃಲಿಯಂ ಅನ್ನು ಒಳಗೊಂಡು ಇತರೆ ದಿನಬಳಕೆಯ ವಸ್ತುಗಳ ಬೆಲೆಯೇರಿಕೆ, ಡಾಲರ್‌ನೆದುರು ರೂಪಾಯಿ ಬೆಲೆ ಕುಸಿತ, ಬ್ಯಾಂಕ್ ಹಣ ಗುಳುಂ ಮಾಡಿ ಪರಾರಿಯಾದವರಿಗೆ ಪರೋಕ್ಷ ಬೆಂಬಲ, ರಫೇಲ್ ಡೀಲ್‌ನಲ್ಲಿ ನಡೆದಿರುವ ಭ್ರಷ್ಟಾಚಾರ ಇತ್ಯಾದಿ ವಿಷಯಗಳು ದಿನೇ ದಿನೇ ರಾಜಕೀಯವನ್ನು ರಂಗೇರಿಸುತ್ತಿದ್ದರೆ, ಮೋದಿ ಮಹಾಶಯರು ಡಿಫೆನ್ಸ್ ಮೋಡ್‌ಗೆ ದೂಡಲ್ಪಟ್ಟಿದ್ದಾರೆ.
ಹೀಗೆ ಬಿಜೆಪಿ ಪಕ್ಷವನ್ನು ಮಣಿಸಲು ಸಾಲು ಸಾಲು ಆಯುಧಗಳು ವಿರೋಧಿಗಳ ಕೈಯಲ್ಲಿವೆ. ಆದರೆ ವಿರೋಧ ಪಕ್ಷಗಳು ‘ಗೋದಿ ಮೀಡಿಯಾ’ದ ಕಾಲಘಟ್ಟದಲ್ಲಿ ಈ ಸಮಸ್ಯೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಲು ಎಷ್ಟು ಯಶಸ್ವಿಯಾಗುತ್ತಾರೆ? ಪ್ರಾದೇಶಿಕ ಪಕ್ಷಗಳನ್ನೂ ಒಳಗೊಂಡು ಬಿಜೆಪಿ ವಿರೋಧಿ ಪಕ್ಷಗಳು ತಮ್ಮ ಸಾಮಾನ್ಯ ಹಿತಾಸಕ್ತಿಗಾಗಿ ಮಹತ್ವ ಕೊಟ್ಟು ಎಷ್ಟರಮಟ್ಟಿಗೆ ಪರಸ್ಪರ ಕೈಜೋಡಿಸುತ್ತಾರೆ?
ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಮತ್ತು ಆರೆಸ್ಸೆಸ್ ಕೂಟ ಮತಗಳ ಧೃವೀಕರಣಕ್ಕಾಗಿ ಎಂಥ ಅಪಾಯಕಾರಿ ಆಟಗಳನ್ನು ಆಡಲಿವೆ ಎಂಬುದರ ಮೇಲೆ 2019ರ ಪರಿಣಾಮ ನಿಂತಿದೆ.

– ದೊಡ್ಡಿಪಾಳ್ಯ ನರಸಿಂಹಮೂರ್ತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...