Homeಮುಖಪುಟಸಿನಿಮಾಕ್ಕೆ ದಂಗಲ್ ಹುಡುಗಿಯ ವಿದಾಯ... ಧರ್ಮ, ಕಲೆ, ಧಮಾಂಧತೆಗಳ ಸುತ್ತ...

ಸಿನಿಮಾಕ್ಕೆ ದಂಗಲ್ ಹುಡುಗಿಯ ವಿದಾಯ… ಧರ್ಮ, ಕಲೆ, ಧಮಾಂಧತೆಗಳ ಸುತ್ತ…

- Advertisement -
- Advertisement -

ಚೆಲುವು ಮತ್ತು ಪ್ರತಿಭೆಗಳ ಕಣಜದಂತಿರುವ 18 ವರ್ಷದ ಪುಟ್ಟ ನಟಿ ಝೈರಾ ವಾಸೀಮ್ ಸಿನಿಮಾ ಪ್ರಪಂಚಕ್ಕೆ ವಿದಾಯ ಹೇಳಿದಳು. 16 ರ ವಯಸ್ಸಿನಲ್ಲಿ ‘ದಂಗಲ್’ ಸಿನಿಮಾದಲ್ಲಿ ಕುಸ್ತಿಪಟುವಿನ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿ ಬಾಲಿವುಡ್‍ನಲ್ಲಿ ಹೊಸ ಭರವಸೆ ನೀಡಿದ್ದ ಝೈರಾ ವಾಸೀಮ್ ಬಾಲಿವುಡ್‍ಗೆ, ಸಿನಿಮಾ ಪ್ರಪಂಚಕ್ಕೆ ವಿದಾಯ ಹೇಳಿದ್ದಾಳೆ. ತನ್ನ ನಂಬಿಕೆ ಮತ್ತು ಅಲ್ಲಾಹುವಿನ ಎಡೆಗಿನ ತನ್ನ ವಿಶ್ವಾಸಕ್ಕೆ ಈ ವೃತ್ತಿ ಹೊಂದುತ್ತಿಲ್ಲ ಎಂದು ಈ ಯುವತಿ ಕಾರಣ ನೀಡಿದ್ದಾಳೆ.

ಅದು ಆಕೆಯ ವೈಕ್ತಿಕ ನಿರ್ಧಾರವಿರಬಹುದು. ಆದರೆ, ಆಕೆ ಇಲ್ಲಿ ಧಾರ್ಮಿಕ ನಂಬಿಕೆಯ ವಿಷಯವನ್ನು ಮುನ್ನೆಲೆಗೆ ತಂದ ಕಾರಣದ ಹಿಂದೆ ಹಲವು ಸೂಕ್ಷ್ಮಗಳಿವೆ, ಹಲವು ತಪ್ಪು ಕಲ್ಪನೆಗಳಿವೆ.. ಇದೆ ಕೇವಲ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ವಿಷಯವಲ್ಲ, ಹಿಂದೂ ಧರ್ಮಕ್ಕೂ ಸಂಬಂಧಿಸಿದ್ದು. ಧರ್ಮದ ಹೆಸರಲ್ಲಿ ಪುತೃಪ್ರಧಾನ ವ್ಯವಸ್ಥೆ ಈಗಲೂ ಅನುಸರಿಸಿಕೊಂಡಿರುವ ಲಿಂಗ ಅಸಹಿಷ್ಣತೆಯೂ ಇಲ್ಲಿದೆ.

ಕಲೆ, ಧರ್ಮ ಮತ್ತು ಹೆಣ್ಣು
ಯಾವ ಧರ್ಮವೂ ವಿಧಿಸದ ಕಟ್ಟುಪಾಡುಗಳನ್ನು ಆಯಾ ಧರ್ಮದ ಪಿತೃ ವ್ಯವಸ್ಥೆ ಸ್ತ್ರೀಯರ ಮೇಲೆ ವಿಧಿಸುತ್ತಲೇ ಬಂದಿದೆ. ಅದು ಕಾಲಕ್ರಮೇಣ ಕಡಿಮೆಯಾಗುತ್ತ ಬಂದರೂ ಈ ಆಧುನಿಕ ಜಗತ್ತಲ್ಲೂ ಅದು ಹೊಸ ರೂಪಗಳಲ್ಲಿ ವನಿತಾ ಸಮೂಹವನ್ನು ಕಾಡುತ್ತಲೇ ಇದೆ.
ಸದ್ಯ ಝೈರಾ ವಿಷಯದಲ್ಲಿ ಇಲ್ಲಿ ನಿರ್ದಿಷ್ಠ ಕಾರಣಗಳು ಉಲ್ಲೀಖಿಸಲ್ಪಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಮತ್ತೆ ಚರ್ಚೆಗೆ ಬರುವ ಇಸ್ಲಾಂ ಮೂಲಭೂತವಾದದ ವಾದಕ್ಕೆ ಸಂಬಂಧಿಸಿದಂತೆ ಕೆಲವು ಅಪರಿಚಿತ ಸತ್ಯಗಳನ್ನು ನಾವು ಮರೆಯುತ್ತಿದ್ದೇವೆ.

ಇಸ್ಲಾಂ ಎಂದೂ ಕಲೆ ವಿರುದ್ಧವಾಗಿಲ್ಲ, ಅದರಲ್ಲೂ ಮೂಲಭೂತವಾದಿಗಳೂ ಹಬ್ಬಿಸಿದಂತೆ ಅದು ಸಂಗೀತದ ನಿರಾಕರಣೆಯನ್ನೂ ಎಂದೂ ಮಾಡಿಲ್ಲ. ಈ ದೇಶದ ಇತಿಹಾಸದತ್ತ ಇತಿಹಾಸದತ್ತ ಗಮನ ಹರಿಸದರೆ ಈ ನೆಲಕ್ಕೆ ಇಸ್ಲಾಂ ನೀಡಿರುವ ಸಾಂಸ್ಕೃತಿಕ ಕೊಡುಗೆ ಅನನ್ಯವಾದುದು. ಸೃಷ್ಟಿತ ಕಟ್ಟುಪಾಡುಗಳನ್ನು ಮುರಿದು ಇಸ್ಲಾಂ ಕಲಾವಿದರು ತಮ್ಮ ಪ್ರತಿಭೆಯನ್ನು ಧಾರೆ ಎರಯುತ್ತಲೇ ಬಂದಿದ್ದಾರೆ. ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದಲ್ಲೂ ಅವರ ಕೊಡುಗೆ ಅಪಾರ.

ಬಾಲಿವುಡ್ ಖಾನ್‍ಗಳ ಪ್ರತಿಭೆಯನ್ನು ಮೆಚ್ಚುವ ಈ ದೇಶದಲ್ಲಿ ಝೈರಾಳಂತಹ ಹೊಸ ಹುಡುಗಿ ನಂಬುಗೆ ಕಾರಣಕ್ಕೆ ತನ್ನ ಮನದಾಳದ ಕಲೆಯನ್ನು ತೊರೆದಿರುವುದು ನೋವಿನ ಸಂಗತಿಯಷ್ಟೇ. ಕೋಮುವಾದ ಮತ್ತು ಮೂಲಭೂತವಾದಿ ಮನಸ್ಸುಗಳ ಆಳದಲ್ಲಿರುವ ಲಿಂಗ ಅಸಹಿಷ್ಣುತೆ ಈಗ ವಿಭಿನ್ನ ರೂಪದಲ್ಲಿ ಆಕ್ರಮಣ ಮಾಡುತ್ತಿರುವ ಹೊತ್ತಿನಲ್ಲಿ ಎಲ್ಲ ಧರ್ಮಗಳ ಪ್ರಾಮಾಣಿಕರು, ಸಮಾನತಾವಾದಿಗಳು ವಾಸ್ತವದ ಅರಿವು ಮೂಡಿಸುವುದು ಈಗಿನ ಅಗತ್ಯವಾಗಿದೆ. ನಮ್ಮ ಶಿಕ್ಷಣದ ಪಠ್ಯಗಳಲ್ಲೇ ಇಂತಹ ಚಿಂತನೆಗಳನ್ನು ಸೇರಿಸಬೇಕಾದ ಜರೈರತ್ತು ಇಂದು ಎಂದಿಗಿಂತ ಹೆಚ್ಚಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಂದುವರಿದ ಬಿಜೆಪಿ ನಾಯಕರ ದ್ವೇಷ ಭಾಷಣ; ‘ಕಾಂಗ್ರೆಸ್ ದೇಶದಲ್ಲಿ ಷರಿಯಾ ಕಾನೂನು ಜಾರಿಗೆ ತರಲಿದೆ’...

0
ಸಂಪತ್ತು ಮಹಿ ಹಂಚಿಕೆ ಕುರಿತು ದ್ವೇಷ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ನಂತರ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಮಂಗಳವಾರ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 'ಕಾಂಗ್ರೆಸ್ ಪಕ್ಷವು...