Homeರಂಜನೆಕ್ರೀಡೆ'ಪಾಕ್-ಭಾರತ ಕ್ರಿಕೆಟ್ ಪುನರಾರಂಭದ ಬಗ್ಗೆ ಮೋದಿಜಿ ಅವರನ್ನು ಕೇಳಿ' ಎಂದ ಗಂಗೂಲಿ..

‘ಪಾಕ್-ಭಾರತ ಕ್ರಿಕೆಟ್ ಪುನರಾರಂಭದ ಬಗ್ಗೆ ಮೋದಿಜಿ ಅವರನ್ನು ಕೇಳಿ’ ಎಂದ ಗಂಗೂಲಿ..

- Advertisement -
- Advertisement -

ಕ್ರಿಕೆಟ್ ದಾದಾ, ಭಾರತ ತಂಡದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಅಕ್ಟೋಬರ್ 23ರಂದು ಬಿಸಿಸಿಐ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ. ಈಗ ಪಾಕಿಸ್ತಾನ ಮತ್ತು ಭಾರತ ಕ್ರಿಕೆಟ್ ಸಂಬಂಧ ಹದಗೆಟ್ಟಿದ್ದು, ಉಭಯ ರಾಷ್ಟ್ರಗಳ ನಡುವಿನ ಕ್ರಿಕೆಟ್ ಪಂದ್ಯಗಳ ಮೇಲೆ ನಿರ್ಬಂಧವಿದೆ. ದ್ವಿಪಕ್ಷೀಯ ಕ್ರಿಕೆಟ್ ಸಂಬಂಧವನ್ನು ಪುನರಾರಂಭಿಸುವ ಬಗ್ಗೆ ಸೌರವ್ ಗಂಗೂಲಿ ಅವರಿಗೆ ಕೇಳಲಾದ ಪ್ರಶ್ನೆಗೆ ಮೋದಿಜಿ ಅವರನ್ನು ಕೇಳಿ ಎಂದು ಸೌರವ್‌ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಪುನರಾರಂಭ, ಭಾರತ ಸರ್ಕಾರದ ಅನುಮತಿ ನಂತರ ನಡೆಯಲಿದೆ. ಉಭಯ ರಾಷ್ಟ್ರಗಳ ಪ್ರಧಾನಮಂತ್ರಿಗಳಾದ ಮೋದಿ ಮತ್ತು ಇಮ್ರಾನ್ ಖಾನ್ ನಿರ್ಧಾರ ತೆಗೆದುಕೊಳ್ಳಬಹುದು. ಇಮ್ರಾನ್ ಖಾನ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿದ್ದಾರೆ. ಈ ಪ್ರಶ್ನೆಯನ್ನು ನೀವು ಮೋದಿಜಿ ಮತ್ತು ಇಮ್ರಾನ್ ಖಾನ್ ಗೆ ಕೇಳಿ ಎಂದು ಗಂಗೂಲಿ ಹೇಳಿದ್ದಾರೆ.

ಕೋಲ್ಕತ್ತಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ಕೇಳಲಾದ ಪ್ರಶ್ನೆಗೆ ‘ನಾವು ಅನುಮತಿ ತೆಗೆದುಕೊಳ್ಳಬೇಕಾಗುತ್ತದೆ. ಯಾಕಂದ್ರೆ ಇದು ಅಂತಾರಾಷ್ಟ್ರೀಯ ಮಟ್ಟದ ವಿಚಾರ. ಎಲ್ಲವೂ ಸರ್ಕಾರದ ಮಟ್ಟದಲ್ಲೇ ಆಗಬೇಕು. ಆದ್ದರಿಂದ ಈ ಪ್ರಶ್ನೆಗೆ ನಮ್ಮ ಬಳಿ ಉತ್ತರವಿಲ್ಲ’ ಎಂದು ಗಂಗೂಲಿ ಹೇಳಿದ್ದಾರೆ.

ಅಂದಹಾಗೆ ಭಾರತ ಮತ್ತು ಪಾಕಿಸ್ತಾನ 2012ರ ಕೊನೆಯಲ್ಲಿ ನಡೆದ ದ್ವಿಪಕ್ಷೀಯ ಸರಣಿಯಲ್ಲಿ ಆಡಿದ್ದವು. ನಂತರ ಸೀಮಿತ ಓವರ್ ಗಳ ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಿತ್ತು. ಈ ವಿಶ್ವಕಪ್ ಗೂ ಮೊದಲು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಿಂದಾಗಿ ಯೋಧರು ಮೃತಪಟ್ಟಿದ್ದರು. ಹೀಗಾಗಿ ಬಿಸಿಸಿಐ, ಐಸಿಸಿಗೆ ಪತ್ರ ಬರೆದು, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದು, ಭಯೋತ್ಪಾದನೆ ಕೃತ್ಯ ನಡೆಸುವಂತಹ ಪಾಕಿಸ್ತಾನದೊಂದಿಗೆ ಸಂಬಂಧ ಕಡಿದುಕೊಳ್ಳುವಂತೆ ಕೇಳಿಕೊಂಡಿತ್ತು. ಆ ಪತ್ರವನ್ನು ನಿರ್ವಾಹಕರ ಸಮಿತಿಗೆ ಕಳುಹಿಸಲಾಗಿದೆ. ವಿಶ್ವಕಪ್‌ನಲ್ಲಿ ನಡೆದ ಪಂದ್ಯದಲ್ಲಿ ಪಾಕ್‌ ವಿರುದ್ಧ ಭಾರತ ಜಯಿಸಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ನನ್ನ ಬಂಧನ ಸಂಘಟಿತ ಪಿತೂರಿಯ ಭಾಗ..’; ರಾಂಚಿ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ...

0
ಜಾರ್ಖಂಡ್‌ನ ಮಾಜಿ ಸಿಎಂ ಹೇಮಂತ್ ಸೊರೇನ್ ಮಂಗಳವಾರ ರಾಂಚಿಯ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದು, 'ನನ್ನ ಬಂಧನವು ರಾಜಕೀಯ ಪ್ರೇರಿತವಾಗಿದೆ; ಬಿಜೆಪಿಗೆ ಸೇರುವಂತೆ ಒತ್ತಾಯಿಸುವ ಸುಸಂಘಟಿತ ಪಿತೂರಿಯ ಭಾಗವಾಗಿದೆ' ಎಂದು ಆರೋಪಿಸಿದರು. ಇದಕ್ಕೆ...