ವಾವ್, ಮೋದಿ ವಿಶ್ವನಾಯಕ! ಹಾಗಂತ ಹೇಳಿದ ಸಂಸ್ಥೆ ಯಾವುದು ಗೊತ್ತೆ?

| ಮಲ್ಲಿ |

ನಿನ್ನೆಯಿಂದ ವಿಶ್ವದ ಪ್ರಭಾವಿ ವ್ಯಕ್ತಿ ಯಾರು ಎಂಬ ಒಂದು ಮತದಾನ-ಸಮೀಕ್ಷೆಯ ಸುದ್ದಿ ಭಾರತದ ಸಾಮಾಜಿಕ ಜಾಲತಾಣ ಮತ್ತು ಬಿಜೆಪಿಯ ಭಾಗವೇ ಆಗಿರುವ ಕೆಲವು ಮೀಡಿಯಾ ಸಂಸ್ಥೆಗಳಲ್ಲಿ ಹರಿದಾಡುತ್ತಿದೆ. ‘ಅಂತರಾಷ್ಟ್ರೀಯ ಖ್ಯಾತಿಯ ‘ಬ್ರಿಟಿಷ್ ಹೆರಾಲ್ಡ್’ ನಡೆಸಿದ ಓದುಗರ ಅಭಿಪ್ರಾಯ ಸಮೀಕ್ಷೆಯಲ್ಲಿ ಮೋದಿ ಹೆಚ್ಚಿನ ಮತ ಪಡೆದು ವಿಶ್ವದ ಅತಿ ಜನಪ್ರಿಯ ನಾಯಕ ಆಗಿದ್ದಾರೆ’ ಎಂಬುದು ಅದರ ಸಾರಾಂಶ. ಅಂದಂತೆ ಯಾವುದೇ ನಿಯಂತ್ರಣ, ಉತ್ತರದಾಯಿತ್ವ ಇಲ್ಲದ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯ ಹಿರಿಯ ಸಚಿವರು, ನಾಯಕರು ಈ ಸುದ್ದಿ ಹರಡುತ್ತಿದ್ದಾರೆ ಎಂಬುದೇನೂ ಆಶ್ಚರ್ಯದ ವಿಷಯವಲ್ಲ. ಆದರೆ ಸಾರ್ವಜನಿಕರಿಗೆ, ಕನಿಷ್ಠ ತನ್ನ ವೀಕ್ಷಕ/ಗ್ರಾಹಕರಿಗೆ ಬದ್ಧರಾಗಬೇಕಿದ್ದ ರಿಪಬ್ಲಿಕ್ ಟಿವಿ, ಝೀ ನ್ಯೂಸ್ ಮತ್ತು ಆಜ್‍ತಕ್ ಮೀಡಿಯಾಗಳು ಇದು ಸತ್ಯ ಎಂಬಂತೆ ಯಾವ ಲಜ್ಜೆ, ಮಾನಮರ್ಯಾದೆ ಇಲ್ಲದೇ ಪ್ರಚಾರ ಮಾಡುತ್ತಿರುವುದು ನಾಚಿಕೆಗೇಡು.

ಅಲ್ಟ್ ನ್ಯೂಸ್ ಮತ್ತು ಇತರ ವಿಶ್ವಾಸಾರ್ಹ ಸಂಸ್ಥೆಗಳು ನಡೆಸಿದ ಫ್ಯಾಕ್ಟ್‍ ಚೆಕಿಂಗ್‍ನಲ್ಲಿ ಗೊತ್ತಾಗಿದ್ದೇನೆಂದರೆ ಈ ‘ಬ್ರಿಟಿಷ್ ಹೆರಾಲ್ಡ್’ ಎಂಬುದು ಪರಿಗಣನೆಗೆ ಇಲ್ಲದ ಒಂದು ವೈಬ್‍ಸೈಟ್ ಅಷ್ಟೇ. ಈ ಒಂದು ಅಂಶ ಓದಿದರೆ ಅದರ ಮಹತ್ವ ಗೊತ್ತಾಗುತ್ತದೆ: ಈ ಸಂಸ್ಥೆಯ ಟ್ವಿಟ್ಟರ್ ಗೆ ಇರುವ ಫಾಲೋವರ್ಸ್ ಕೇವಲ 400. ಆಲ್ಟ್ ನ್ಯೂಸ್ ಎಂಬ ಸಣ್ಣ ಮಟ್ಟದ ಸಂಸ್ಥೆಯ ಟ್ವಿಟ್ಟರ್ ಫಾಲೋವರ್ಸ್ 1,20,000ಕ್ಕೂ ಹೆಚ್ಚು. ಖ್ಯಾತ ದಿ ಗಾರ್ಡಿಯನ್ ಮತ್ತು ಬಿಬಿಸಿ ಟ್ವೀಟರ್ ಫಾಲೋವರ್ಸ್ ಸಂಖ್ಯೆ ಮಿಲಿಯನ್‍ಗಳ ಲೆಕ್ಕದಲ್ಲಿದೆ. ಅಂದರೆ 400 ಫಾಲೋವರ್ಸ್‍ಗಳಿರುವ ‘ಬ್ರಿಟಿಷ್ ಹೆರಾಲ್ಡ್’ ಎಂತಹ ‘ವಲ್ರ್ಡ್ ಫೇಮಸ್’ ಸಂಸ್ಥೆ ಮತ್ತು ಮ್ಯಾಗಜೀನ್ ಎಂಬುದು ಗೊತ್ತಾಗುತ್ತದೆ.

ಬ್ರಿಟಿಷ್ ‘ಬ್ರಿಟಿಷ್ ಹೆರಾಲ್ಡ್’ ಎಂಬುದೇ ಇಂತಹ ಪೇಯ್ಡ್ ನ್ಯೂಸ್ ಹರಡಲಿರುವ ವೆಬ್ ಸಂಸ್ಥೆ ಅಷ್ಠೇ, ನಮ್ಮಲ್ಲಿ ಪೋಸ್ಟ್ ಕಾರ್ಡ್ ಇದೆಯಲ್ಲ ಹಾಗೆ!

ಈ ಸುಳ್ಳು ಸುದ್ದಿಯನ್ನೇ ಚೆಕ್ ಮಾಡಲು ನಾವು ಹೋದರೆ, ಅದರ ಲಿಂಕ್ ಆ ಹೆಸರಿನ ಸಂಸ್ಥೆಗೆ ಹೋಗುತ್ತದೆ. ಅಲ್ಲಿ ಮೋದಿ ನಂಬರ್ 1 ಎಂಬ ಸುದ್ದಿಯೇ ಎದ್ದು ಕಾಣುತ್ತದೆ. ವೆಬ್ ಬಳಸುವ ಸುಕ್ಷಿತರು ಇದೇ ಸುದ್ದಿಯ ವಿಶ್ವಾಸಾರ್ಹತೆ ಎನ್ನುವಂತೆ ಇದನ್ನೆಲ್ಲ ಪ್ಲಾನು ಮಾಡಲಾಗಿದೆ. ಮೋದಿ-2 ಬಂದ ಮೇಲೆ, ಹಿಂದಿಗಿಂತ ಹೆಚ್ಚಾಗಿ ದೇಶದ ಪ್ರಚಲಿತ ಸಮಸ್ಯೆಗಳನ್ನು ಹಿನ್ನೆಲೆಗೆ ಸರಿಸಿ ಜನರು ಇಂತಹ ವಿಚಾರಗಳ ಚರ್ಚೆಯಲ್ಲಿ ಮುಳುಗುವಂತೆ ಮಾಡಲು ನಡೆಸುತ್ತಿರುವ ಹಲವು ತುಂಬಾ ವ್ಯವಸ್ಥಿತ ಕುತಂತ್ರಗಳಲ್ಲಿ ಇದೂ ಒಂದು.

ಬಿಜೆಪಿನ ತುತ್ತೂರಿಯಾಗಿರುವ ರಿಪಬ್ಲಿಕ್ ಟಿವಿ, ಆಜ್‍ತಕ್ ಮತ್ತು ಝೀ ನ್ಯೂಸ್‍ನಂತಹ ಮೋದಿ ಬಾಲಗಳು ಇದನ್ನು ಸಾಮಾಜಿಕ ಜಾಲತಾಣದ ಲೆವೆಲ್ಲಿನಲ್ಲೇ ಬಿಜೆಪಿ ಐಟಿ ಸೆಲ್ ಮಾಡುವ ನಿರ್ಲಜ್ಜ ಪ್ರಪಗಂಡಾದ ರೀತಿಯಲ್ಲೇ ಪ್ರಸಾರ ಮಾಡಿವೆ. ದೇಶದ ಮುಖ್ಯವಾಹಿನಿಯ ಯಾವ ಮೀಡಿಯಾವೂ ಇಂತಹ ಫೇಕ್‍ನ್ಯೂಸ್‍ಗೆ ಮಣೆ ಹಾಕಿಲ್ಲ ಎಂಬುದನ್ನು ಗಮನಿಸಿ.

ಅಂದಂತೆ ಮುಂದಿನ ಇಶ್ಯೂನಲ್ಲಿ ಡಿಟೇಲ್ಸ್ ಎಂದಿರುವ ‘‘ಬ್ರಿಟಿಷ್ ಹೆರಾಲ್ಡ್’ ಈ ಸಮೀಕ್ಷೆಯ ಸ್ವರೂಪವೇನು, ಅದನ್ನು ಯಾವ ಮಾದರಿಯಲ್ಲಿ ನಡೆಸಲಾಯಿತು ಎಂಬುದರ ಬಗ್ಗೆ ಯಾವ ವಿವರಣೆಯನ್ನು ನೀಡಿಲ್ಲ. ಹಿಂದೆಲ್ಲ ಬಿಜೆಪಿ ಭಕ್ತರು ಬಿಬಿಸಿ ಹೆಸರಲ್ಲಿ ಇಂತಹ ಸುದ್ದಿ ಮಾಡಿದಾಗ ಬಿಬಿಸಿ ಅಂತಹ ಯಾವ ಸರ್ವೆಯನ್ನೂ ನಾವು ಮಾಡುವುದಿಲ್ಲ ಎಂದು ಘೋಷಿಸಿ ಇವರ ಬಣ್ಣ ಬಯಲು ಮಾಡಿದ್ದರು. ಆದರೆ ವಿದೇಶ ಹೆಸರು ಇದ್ದರೆ ಭಾರತದ ಜನ ನಂಬುತ್ತಾರೆ ಎಂಬ ಕಾರಣದಿಂದ ಬ್ರಿಟಿಷ್ ರೀಡರ್ ಹೆಸರಲ್ಲಿ ಈ ದಂಧೆಯನ್ನು ಮಾಡಲಾಗಿದೆ.

ನಮ್ಮ ಪ್ರಧಾನಿಗಳು ವಿಶ್ವಶ್ರೇಷ್ಟರಾದರೆ ನಮಗೆ ಸಂತೋಷವೇ. ಆ ಮೂಲಕ ಭಾರತದ ಕೀರ್ತಿ ಪ್ರಪಂಚದಲ್ಲೆಡೆ ಹಬ್ಬಿ, ಭಾರತದಲ್ಲಿ ಹೂಡಿಕೆ ಹೆಚ್ಚಾಗಿ ಆರ್ಥಿಕ ಬೆಳವಣಿಗೆ, ಉದ್ಯೋಗಗಳ ಸಂಖ್ಯೆ ಹೆಚ್ಚಾದರೆ ನಮಗೂ ಖುಷಿಯೆ. ಆದರೆ ಸುಳ್ಳಿನ ಮೂಲಕ ಆಗಬಾರದು. ಆಗ ನಮ್ಮ ದೇಶದ ಮಾನ ಮರ್ಯಾದೆ ಹಾಳುತ್ತದೆ. ಆದರೆ ದುರಂತ ಎಂದರೆ ಈ ಸುಳ್ಳನ್ನು ಎಷ್ಟು ವ್ಯವಸ್ಥಿತವಾಗಿ ಹರಡುತ್ತಿದ್ದಾರೆಂದರೆ ಅದೀಗ ವ್ಯಾಟ್ಸಾಪ್‍ಗಳಲ್ಲಿ, ಪೇಸ್‍ಬುಕ್ ಪೇಜ್ ಗಳಲ್ಲಿ ಕನ್ನಡ ಸೇರಿದಂತೆ ಎಲ್ಲ ಭಾಷೆಗಳಲ್ಲಿ ಹರಿದಾಡುತ್ತಿದೆ. ಥೂ ಎಂತಹ ನಿರ್ಲಜ್ಜ ದಂಧೆಯಿದು!

(ಕೃಪೆ: ಆಲ್ಟ್ ನ್ಯೂಸ್)

 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

  1. British herlad news get modi is world famous news if it is true or not But Narendra Modi Universal popular figure no doubt Becasuse Every Indian Nown Him .Because he named in the world .But India has nown in the world .in previous Days indian Prime Minister standing in the corner side in all world confernces But now Indidan Prime Minister is center Gravity all World Summits. Some pepole jealously criticiseing Him .But theyare in Gandhi and Neharu family slaves

LEAVE A REPLY

Please enter your comment!
Please enter your name here