Homeಚಳವಳಿಮದ್ಯ ನಿಷೇಧ ಆಂದೋಲನದಲ್ಲಿ ಮಡಿದ ರೇಣುಕಮ್ಮ ನೆನಪಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭ..

ಮದ್ಯ ನಿಷೇಧ ಆಂದೋಲನದಲ್ಲಿ ಮಡಿದ ರೇಣುಕಮ್ಮ ನೆನಪಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭ..

ಮಹಿಳೆಯರ ಸ್ವಾಭಿಮಾನ ಮತ್ತು ಕುಟುಂಬಗಳ ರಕ್ಷಣೆಗಾಗಿ ಅನಿರ್ದಿಷ್ಟ ಉಪವಾಸ ಮಾಡುತ್ತಿದ್ದೇವೆ ಎಂದು ಘೋಷಿಸಿದ್ದಾರೆ. ಬೀರ್ ಬೇಡ, ನೀರು ಬೇಕು. ಸರಾಯಿ ಬೇಡ, ಶಿಕ್ಷಣ ಬೇಕು ಎಂಬ ಘೋಷಣೆಗಳನ್ನು ಮೊಳಗಿಸಿದ್ದಾರೆ

- Advertisement -
- Advertisement -

ಕಳೆದ ವರ್ಷ ಇದೇ ತಿಂಗಳಲ್ಲಿ ಮದ್ಯ ನಿಷೇಧಕ್ಕೆ ಒತ್ತಾಯಿಸಿ ಚಿತ್ರದುರ್ಗದಿಂದ ಬೆಂಗಳೂರುವರೆಗೆ ನಡೆದ ಪಾದ ಯಾತ್ರೆ ಸಮಯದಲ್ಲಿ ಅಪಘಾತದಿಂದ ಮಡಿದ ರೇಣುಕಮ್ಮ ನೆನಪಿನಲ್ಲಿ ಇಂದು ಕೂಡಲಸಂಗಮದಲ್ಲಿ ಉಪವಾಸ ಸತ್ಯಾಗ್ರಹ ಆರಂಭವಾಗಿದೆ.

ಭಾಗಲಕೋಟೆಯ ಕೂಡಲಸಂಗಮದಲ್ಲಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ನೂರಾರು ಮಹಿಳೆಯರು ಹೋರಾಟ ಆರಂಭಿಸಿದ್ದು ಸಾಂಕೇತಿವಾಗಿ ಶಂಕರಮ್ಮ, ರಾಮಜಾನಬಿ, ರೇಣುಕಾ, ಕೊಟ್ರಮ್ಮ ಮತ್ತು ಅಭಯ್‌ ಸೇರಿದಂತೆ ಹಲವರು ಉಪವಾಸ ಕೈಗೊಂಡಿದ್ದಾರೆ.

ನವೆಂಬರ್ 2019ರ ನವೆಂಬರ್‌ 07ರಂದು ಬೆಂಗಳೂರಿನ ರೈಲ್ವೇ ನಿಲ್ದಾಣದ ಮುಂಭಾಗ ಮದ್ಯ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರು ಹೋರಾಟ ನಡೆಸಿದಾಗ ಉಪ ಮುಖ್ಯ ಮಂತ್ರಿಗಳಾದ ಅಶ್ವತ್ ನಾರಾಯಣ ಅವರು ಆಗಮಿಸಿ, ಎರಡು ವಾರದೊಳಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿ ಸಭೆ ನಡೆಸುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಮೂರು ತಿಂಗಳಾಗುತ್ತಾ ಬಂದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಮಹಿಳೆಯರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ನಾವು ಮಹಿಳೆಯರು ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇಂದಿನಿಂದ ಉಪವಾಸ ಸತ್ಯಾಗ್ರಹದ ಜೊತೆಗೆ ನಾಳೆ ಜಲ ಸತ್ಯಾಗ್ರಹವನ್ನು ನಡೆಸುತ್ತೇವೆ. ಗಾಂಧಿ ಹುತಾತ್ಮರಾದ ಜನೆವರಿ ಜನವರಿ 30, 2020ರವರೆಗೆ ಹೋರಾಟ ಮುಂದುವರೆಸುತ್ತೇವೆ. ಸರ್ಕಾರ ಸ್ಪಂದಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವ ಕುರಿತು ನಿರ್ಣಯ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಹಿಳೆಯರ ರಕ್ಷಣೆಗೆ, ಮಕ್ಕಳ ಭವಷ್ಯಕ್ಕಾಗಿ, ಆರೋಗ್ಯಕರ ಸಮಾಜಕ್ಕಾಗಿ ಮದ್ಯ ನಿಷೇಧ ಆಗಬೇಕು. ಮಹಿಳೆಯರ ಸ್ವಾಭಿಮಾನ ಮತ್ತು ಕುಟುಂಬಗಳ ರಕ್ಷಣೆಗಾಗಿ ಅನಿರ್ದಿಷ್ಟ ಉಪವಾಸ ಮಾಡುತ್ತಿದ್ದೇವೆ ಎಂದು ಘೋಷಿಸಿದ್ದಾರೆ. ಬೀರ್ ಬೇಡ, ನೀರು ಬೇಕು. ಸರಾಯಿ ಬೇಡ, ಶಿಕ್ಷಣ ಬೇಕು ಎಂಬ ಘೋಷಣೆಗಳನ್ನು ಮೊಳಗಿಸಿದ್ದಾರೆ.

ಹಕ್ಕೊತ್ತಾಯಗಳು
ಸಂವಿಧಾನದ 73ನೇ ತಿದ್ದುಪಡಿಯ ಆಶಯದಂತೆ ಅನುಷ್ಠಾನಗೊಳಿಸುವುದು (ಗ್ರಾಮಗಳ ಭವಿಷ್ಯವನ್ನು ನಿರ್ಧರಿಸುವ ಅಧಿಕಾರವನ್ನ ಗ್ರಾಮ ಸಭೆಗೆ ನೀಡುವುದು) ಉದಾ: ಗ್ರಾಮ ಪಂಚಾಯತಿಗಳು ಗ್ರಾಮ ಸಭೆಯ ಮೂಲಕ ಪಂಚಾಯತಿ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಗಳು ಇರಬಾರದೆಂದು ನಿರ್ಧಾರ ತೆಗೆದುಕೊಳ್ಳಬಹುದು. (ಕಾನೂನು ಬಾಹಿರ, ಖಾಸಗಿ ಅಥವಾ ಸರಕಾರಿ ಮಳಿಗೆಗಳಾಗಿರಬಹುದು) ಈಗಾಗಲೇ ಗ್ರಾಮಸಭೆಗಳಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಗ್ರಾಮ ಪಂಚಾಯತಿಗಳಲ್ಲಿ ತಕ್ಷಣ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಬೇಕು.

ರಾಜ್ಯಗಳಲ್ಲಿ ಮದ್ಯ ಸೇವನೆ ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತದ ಸಂವಿಧಾನದ ಅನುಚ್ಛೇದ 47ರಲ್ಲಿ ರಾಜ್ಯಗಳಿಗೆ ನೀಡಲಾದ ನಿರ್ದೇಶನದಂತೆ “ಮದ್ಯ ಮುಕ್ತ ಕರ್ನಾಟಕ ನೀತಿಯತ್ತ” ಸಾಗುವ ಸಲುವಾಗಿ ಮೂರು ತಿಂಗಳೊಳಗೆ ಸಮಿತಿ ರಚಿಸಿ ಸರಕಾರದ ನೀತಿಯನ್ನು ಜಾರಿಗೊಳಿಸಬೇಕು.

ಈ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳು ಮದ್ಯ ನಿಷೇಧ ಆಂದೋಲನದ ಸಂಘಟಕರೊಂದಿಗೆ ಕೂಡಲೇ ಸಭೆ ಕರೆಯಬೇಕು.

ಈ ಹಕ್ಕೊತ್ತಾಯಗಳನ್ನು ಮದ್ಯ ನಿಷೇಧ ಆಂದೋಲನವು ಮುಂದಿಟ್ಟು ಹೋರಾಟವನ್ನು ರೂಪಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿ ಮಾಡುತ್ತೇವೆ: ರಾಹುಲ್‌ ಗಾಂಧಿ

0
ಜಾತಿ ಗಣತಿ ನನ್ನ ಜೀವನದ ಪ್ರಮುಖ ಗುರಿಯಾಗಿದೆ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿಯನ್ನು ಮಾಡುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಸಂಪತ್ತು ಮರುಹಂಚಿಕೆ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ...