Homeಅಂಕಣಗಳುಕಾಂಗ್ರೆಸ್ ಪ್ರಣಾಳಿಕೆ ಹಿನ್ನೆಲೆಯಲ್ಲಿ ಬೇಸಿಕ್ ಇನ್ಕಮ್ ಸುತ್ತ ಒಂದು ಚರ್ಚೆ

ಕಾಂಗ್ರೆಸ್ ಪ್ರಣಾಳಿಕೆ ಹಿನ್ನೆಲೆಯಲ್ಲಿ ಬೇಸಿಕ್ ಇನ್ಕಮ್ ಸುತ್ತ ಒಂದು ಚರ್ಚೆ

- Advertisement -
ಮೂಲ: ಶರತ್ ದವಲ
ಕನ್ನಡಕ್ಕೆ: ಎನ್.ಶಂಕರ ಕೆಂಚನೂರು
ಎನ್. ಶಂಕರ ಕೆಂಚನೂರು
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೊರತಂದಿರುವ ಕನಿಷ್ಠ ಆದಾಯ ಖಾತರಿ ಯೋಜನೆಗೆ ಒಂದು ಹಿನ್ನೆಲೆಯಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಇದ್ದಕ್ಕಿದ್ದಂತೆ ಹೊಳೆದದ್ದಲ್ಲ. ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಭಿನ್ನ ಮಾದರಿಗಳ ಪ್ರಯೋಗವೂ ಈಗಾಗಲೇ ಆಗಿದೆ. ಭಾರತದ ಮಟ್ಟಿಗೆ ಇಂತಹ ಬೃಹತ್ ಪ್ರಮಾಣದಲ್ಲಿ ಜಾರಿ ಮಾಡುವ ಪ್ರಸ್ತಾಪ ರಾಜಕೀಯ ಪಕ್ಷವೊಂದರಿಂದ ಇದೇ ಮೊದಲು.
ಕನ್ನಡದ ಹೊಸ ಪೀಳಿಗೆಯ ಬರಹಗಾರರಲ್ಲೊಬ್ಬರಾದ ಎನ್.ಶಂಕರ ಕೆಂಚನೂರು ಅವರು ಕನ್ನಡದಲ್ಲಿ ಇದರ ಬಗ್ಗೆ ಬರೆಯಲು ಯೋಚನೆ ಮಾಡಿ, ಬೇಸಿಕ್ ಇನ್‍ಕಮ್ ಅರ್ಥ್ ನೆಟ್‍ವರ್ಕ್‍ನ ಉಪನಿರ್ದೇಶಕರಾದ ಶರತ್ ದವಲರವರ ಬರಹವನ್ನು ಅನುವಾದ ಮಾಡಿದ್ದಾರೆ. ಓದಿ, ಪ್ರತಿಕ್ರಿಯಿಸಿ.
- Advertisement -

ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯು ಮೂಲದಲ್ಲಿ ಆರು ಅಮೂಲ್ಯ ವಿಶೇಷತೆಗಳನ್ನು ಹೊಂದಿದೆ. ಇದು ಸಾರ್ವತ್ರಿಕ, ವೈಯಕ್ತಿಕ, ನಗದು, ಮಾಸಿಕ, ಅನಿಬಂಧಿತ ಮತ್ತು ಕೊನೆಯದಾಗಿ ಇದು ಹಿಂಪಡೆಯಲುಸಾಧ್ಯವಿಲ್ಲದ್ದು. ಇದನ್ನು ಪೂರ್ಣಪ್ರಮಾಣದಲ್ಲಿ ಒಂದು ಸಾಮಾಜಿಕ ಯೋಜನೆಯಾಗಿ ಪ್ರಪಂಚದ ಎಲ್ಲಿಯೂ ಆಳವಡಿಸಿಲ್ಲವಾದರೂ, ಕಳೆದ ಒಂದು ದಶಕದಿಂದ ಇದರ ಕುರಿತು ಚರ್ಚೆ ವಿವಿಗಳು, ಮುಖ್ಯವಾಹಿನಿಮಾಧ್ಯಮಗಳಲ್ಲಿ, ಯೋಜನೆಗಳನ್ನು ನಿರೂಪಿಸುವವರ ನಡುವೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದ್ದಕ್ಕಿದ್ದ ಹಾಗೆ ಈ ಪರಿಕಲ್ಪನೆ ಕುರಿತು ಆಸಕ್ತಿ ಎಲ್ಲೆಡೆ ಗರಿಗೆದರಿದೆ. ರಾಜಕೀಯ ಚಿಂತಕ ‘ಕಾರ್ಲ್ ವೈಡರ್‍ಕ್ವಿಸ್ಟ್’ ಪ್ರಕಾರಈ ವಿಷಯದ ಇಂತಹದ್ದೊಂದು ಆಸಕ್ತಿಯ ಅಲೆ ಎದ್ದಿರುವುದು ಇದು ಮೂರನೇ ಬಾರಿ. 1910ರಿಂದ 1940ರ ತನಕ ಮೊದಲನೇ ಸಲ ಈ ವಿಷಯವು ಚರ್ಚೆಗೆ ಒಳಗಾಗಿತ್ತು. ನಂತರ 1960 ಮತ್ತು 1970ರ ದಶಕದಲ್ಲಿ ಈವಿಷಯ ಎರಡನೇ ಬಾರಿ ಮುನ್ನೆಲೆಗೆ ಬಂದು ಚರ್ಚೆಗೆ ಒಳಗಾಗಿತ್ತು. ಇವರು ಗಮನಿಸಿದಂತೆ ಹಿಂದಿನ ಚರ್ಚೆಗಳು ಬಹಳ ಪೇಲವವಾಗಿ ವಿರಳವಾಗಿತ್ತು ಆದರೆ ಈಗ ನಡೆಯುತ್ತಿರುವ ಚರ್ಚೆಯು ದೀರ್ಘಕಾಲೀನವಾಗಿದ್ದು.ಉತ್ಸಾಹ ಮತ್ತು ಕ್ರಿಯಾಶೀಲತೆಯಿಂದ ಕೂಡಿದೆ.

ಶರತ್ ದವಲ

ಸಾರ್ವತ್ರಿಕ (ಯೂನಿವರ್ಸಲ್) ಯೂನಿವರ್ಸಲ್ ಎಂದರೆ ಪ್ರತಿಯೊಬ್ಬರ ಒಳಗೊಳ್ಳುವಿಕೆ. ಒಂದು ದೇಶದ ಒಂದು ಗಡಿಯ ಒಳಗಿನ ಪ್ರತಿಯೊಬ್ಬರೂ ಇದರ ವ್ಯಾಪ್ತಿಯಲ್ಲಿ ಬರುತ್ತಾರೆ. ಇದು ಸಾರ್ವತ್ರಿಕವಾಗಿರುವುದರಿಂದಎರಡು ಮುಖ್ಯ ಪ್ರಯೋಜನಗಳಿವೆ. ಒಂದು: ಆಡಳಿತ ದಕ್ಷತೆ. ಎರಡು: ಎಲ್ಲಾ ಮಿತಿಗಳನ್ನು ಮೀರಿ ಎಲ್ಲರನ್ನೂ ತಲುಪುತ್ತದೆ. ವಿಶೇಷವಾಗಿ ಭಾರತದಲ್ಲಿ ಯೋಜನೆಗಳ ಫಲಾನುಭವಿಗಳನ್ನು ಗುರುತಿಸುವಲ್ಲಿಯೇಸೋಲುತ್ತಿದ್ದೇವೆ. ನಮ್ಮ ಎಲ್ಲಾ ಕಲ್ಯಾಣ ಯೋಜನೆಗಳು ಯಾರನ್ನು ಒಳಗೊಳ್ಳಬೇಕು ಯಾರನ್ನು ಒಳಗೊಳ್ಳಬಾರದು ಎನ್ನುವ ವಿಷಯದಲ್ಲಿ ಎಂದಿನಿಂದಲೂ ಸೋಲುತ್ತಾ ಬಂದಿದೆ. ಎರಡನೆಯದು ಐಕಮತ್ಯ. ಎಲ್ಲರನ್ನೂಒಳಗೊಳ್ಳುವ ಮೂಲಕ ಈ ಪರಿಕಲ್ಪನೆಯು ಇದುವರೆಗಿನ ಎಲ್ಲಾ ಸಾಮಾಜಿಕ ಯೋಜನಗಳ ಮೇಲೆ ಇದ್ದ ಕಳಂಕವನ್ನು ಇದು ಹೋಗಲಾಡಿಸುತ್ತದೆ. ಇದು ಯಾವುದೇ ತಾರತಮ್ಯವಿಲ್ಲದೆ ಎಲ್ಲರನ್ನೂ ಒಳಗೊಳ್ಳುವ ಸಾಮಾಜಿಕಯೋಜನೆಯಾಗಿದೆ. ವಾಸ್ತವದಲ್ಲಿ ಎಲ್ಲರನ್ನೂ ಒಳಗೊಳ್ಳುವ ಈ ಯೋಜನೆಯನ್ನು ಭರಿಸಲು ಸಾಧ್ಯವೆ? ಎನ್ನುವ ಪ್ರಶ್ನೆ ಹುಟ್ಟುತ್ತದೆಯಾದರೂ ಅದನ್ನು ಮುಂದೆ ಗಮನಿಸೋಣ.

ವೈಯಕ್ತಿಕ ಎಂದರೆ ಹಿರಿಯ-ಕಿರಿಯ ಎನ್ನುವ ಬೇಧವಿಲ್ಲದೆ ಪ್ರತಿಯೊಬ್ಬರೂ ಈ ಯೋಜನೆಯ ವ್ಯಾಪ್ತಿಯಲ್ಲಿ ಬರುತ್ತಾರೆ.  ಸಾರ್ವತ್ರಿಕ ಮೂಲ ಆದಾಯದ ಹಣವನ್ನು ಕುಟುಂಬದ ಆಧಾರದಲ್ಲಿ ಹಂಚುವುದನ್ನು ಈ ಪರಿಕಲ್ಪನೆಯುವಿರೋಧಿಸುತ್ತದೆ. ಸಾರ್ವತ್ರಿಕ ಮೂಲ ಆದಾಯದ ಮೂಲ ಉದ್ದೇಶವು ಪ್ರತಿಯೊಬ್ಬ ವ್ಯಕ್ತಿಯ ಸಬಲೀಕರಣವಾಗಿದೆ. ಹೀಗಾಗಿ ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯು ವೈಯುಕ್ತಿಕ ಹಣ ಸಂದಾಯವನ್ನು ಶಿಫಾರಸ್ಸುಮಾಡುತ್ತದೆ. ಇದರಿಂದ ಪ್ರತಿಯೊಬ್ಬ ಪ್ರಜೆಯ ವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡಲು ಸಾಧ್ಯವಾಗುತ್ತದೆ. ಹಣವನ್ನು ಕುಟುಂಬದ ಖಾತೆಗೆ ನೀಡುವುದರಿಂದ ಒಬ್ಬ ಗೃಹಿಣಿಯು ಸಾಂಸಾರಿಕ ಹಿಂಸೆಗೆ ಒಳಗಾಗುತ್ತಿದ್ದರೂ ಹಣದಸಲುವಾಗಿ ಆಕೆ ಆ ಹಿಂಸೆಯನ್ನು ಸಹಿಸಿಕೊಂಡು ಹೋಗುವ ಅನಿವಾರ್ಯತೆ ಇರುತ್ತದೆ. ಆದರೆ ವೈಯಕ್ತಿಕ ಖಾತೆಗೆ ಹಣ ಬರುವುದರಿಂದ ಇಂತಹ ಸಾಧ್ಯತೆಗಳು ಕಡಿಮೆ.

ಈ ಯೋಜನೆಯಲ್ಲಿ ಹಣವನ್ನು ನೇರ ಫಲಾನುಭವಿಯ ಖಾತೆಗೆ ಯಾವುದೇ ಸೋರಿಕೆಗಳಿಲ್ಲದೆ ಮಧ್ಯವರ್ತಿಗಳಿಲ್ಲದೆ ವರ್ಗಾಯಿಸಲಾಗುತ್ತದೆ. ಇಂದಿನ ತಂತ್ರಜ್ಞಾನಗಳ ಲಭ್ಯತೆಯಿಂದಾಗಿ ಇದು ಸುಲಭಸಾಧ್ಯ. ನಗದು ನೇರಖಾತೆಗೆ ತಲುಪಿಸುವುದರಿಂದ ಯೋಜನೆಯ ಸಫಲತೆಯನ್ನು ಸಂಪೂರ್ಣ ಸಾಧಿಸಬಹುದು.

ಸಾರ್ವತ್ರಿಕ ಮೂಲ ಆದಾಯದ ಹಣವನ್ನು ಪ್ರತಿ ತಿಂಗಳು ಹಂಚುವುದರಿಂದ ಪ್ರತಿಯೊಬ್ಬರಿಗೂ ವಿಶ್ವಾಸರ್ಹವಾದ, ನಿಶ್ಚಿತವಾದ ಮತ್ತು ಖಾತರಿಯಾದ ಆದಾಯ ದೊರೆಯುತ್ತದೆ. ಇದು ಬಡವರ ಬದುಕಿನ ಮೇಲೆಉತ್ತಮವಾದ ಪರಿಣಾಮವನ್ನು ಬೀರುತ್ತದೆ. ಇಂದು ಬಡವರು ದುಡಿದಿದ್ದನ್ನು ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಬಳಸಿಕೊಳ್ಳುವುದರಿಂದ ಅವರು ಭವಿಷ್ಯದ ಹೂಡಿಕೆಯ ಕುರಿಯು ಯೋಚಿಸುವುದೂಸಾಧ್ಯವಿಲ್ಲ. ಅವರಿಗೆ ಇಂತಹ ಒಂದು ನಿಶ್ಚಿತವಾದ ಮಾಸಿಕ ಆದಾಯವಿದ್ದಾಗ ತಮ್ಮ ತಮ್ಮ ಭವಿಷ್ಯದ ಕುರಿತು ಯೋಜನೆಗಳನ್ನು ನಿರೂಪಿಸಲು ಸಹಾಯವಾಗುತ್ತದೆ. ಇದರಿಂದಾಗಿ ಅವರ ಭವಿಷ್ಯ ಮತ್ತು ವರ್ತಮಾನದನಡುವೆ ಒಂದು ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯವಾಗುತ್ತದೆ.

ಸಾರ್ವತ್ರಿಕ ಮೂಲ ಆದಾಯವು ಬೇಷರತ್ ಆಗಿರಬೇಕು. ವಯಸ್ಸು, ಲಿಂಗ, ಆದಾಯ ಮಿತಿ ಇಂತಹ ಅರ್ಹತೆಯನ್ನು ಕೇಳುವ ಶರತ್ತುಗಳು ಇರುವಂತಿಲ್ಲ. ಮತ್ತು ಶಾಲಾ ಹಾಜಾರಾತಿ, ಲಸಿಕೆ ಕಾರ್ಯಕ್ರಮದಲ್ಲಿನಭಾಗವಹಿಸುವಿಕೆ, ಸಾಲದ ಬಾಕಿಯಂತಹ ಯಾವುದೆ ನೆಪಗಳನ್ನು ಹೇಳಿ ಅನರ್ಹಗೊಳಿಸುವಂತಿಲ್ಲ. ಭಾರತದ ಬಹುತೇಕ ಕಲ್ಯಾಣ ಯೋಜನೆಗಳು ಇಂತಹ ನಿಬಂಧನೆಗಳನ್ನು ಹೊಂದಿವೆ ಮತ್ತು ಅವುಗಳುಅಧಿಕಾರಶಾಹಿಯಿಂದ ನಿಯಂತ್ರಿಸಲ್ಪಡುತ್ತವೆ ಮತ್ತು ನಿರ್ವಹಿಸಲ್ಪಡುತ್ತದೆ. ಈ ಯೋಜನೆಗಳ ನಿಬಂಧನೆಗಳು ಅಮಾನವೀಯ ಮತ್ತು ಅಪಮಾನಕಾರಿಯಾಗಿರುತ್ತದೆ. ಮತ್ತು ಅವುಗಳನ್ನು ಪೂರೈಸುವಲ್ಲಿ ಫಲಾನುಭವಿಯುಸೋಲುವಂತೆ ಮಾಡುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಮತ್ತು ತಾನು ಈ ಯೋಜನೆಗೆ ಅರ್ಹ ಎಂದು ಸಾಧಿಸಲು ಸಾಧ್ಯವಿಲ್ಲದಂತೆ ಮಾಡುತ್ತದೆ.

ಸಾರ್ವತ್ರಿಕ ಮೂಲ ಆದಾಯವೆನ್ನುವ ಹಕ್ಕು. ಸಾರ್ವತ್ರಿಕ ಮೂಲ ಆದಾಯವನ್ನು ಪ್ರತಿ ಪ್ರಜೆಯ ಹಕ್ಕಿನ ವಿಷಯವಾಗಿಸುವುದರ ಮೂಲಕ ಇದನ್ನೊಂದು ಬಡತನ ನಿರ್ಮೂಲನದ ತಾತ್ಕಾಲಿಕ ಯೋಜನೆಯಾಗಿಜಾರಿಗೊಳಿಸದೆ ಇದನ್ನು ವೈಯುಕ್ತಿಕ ಹಕ್ಕನ್ನಾಗಿ ಪರಿಗಣಿಸಬೇಕು.

ಸೈದ್ಧಾಂತಿಕವಾಗಿ ಸಾರ್ವತ್ರಿಕ ಮೂಲ ಆದಾಯವು ಮೇಲಿನ ಎಲ್ಲಾ ವಿಶಿಷ್ಟತೆಯನ್ನು ಪರಿಣಾಮಕಾರಿಯಾಗಿ ಹೊಂದಿರುತ್ತದೆ. ಈ ಎಲ್ಲಾ ವೈಶಿಷ್ಟ್ಯಗಳೊಂದಿಗೆ ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯು ಈಪರಿಪೂರ್ಣತೆಯನ್ನು ಹೊಂದಬಲ್ಲದು.

  • ಪ್ರತಿಯೊಬ್ಬರಲ್ಲೂ ವೈಯುಕ್ತಿಕವಾಗಿ ಮತ್ತು ಕೌಟುಂಬಿಕವಾಗಿ ಭದ್ರತಾ ಭಾವನೆಯನ್ನು ಮೂಡಿಸುವುದು.
  • ಸಮಾಜದ ಪ್ರತಿಯೊಬ್ಬರಿಗೂ ಒಂದು ನೆಲೆ ನಿರ್ಮಿಸಿ, ಎಲ್ಲರ ಬದುಕಿನಲ್ಲೂ ಮಾರುಕಟ್ಟೆಯ ಅಸ್ಥಿರತೆಯನ್ನು ಮೀರಿ ಭದ್ರ ಭವಿಷ್ಯವನ್ನು ನಿರ್ಮಿಸುವುದು.
  • ಪ್ರತಿಯೊಬ್ಬರಿಗೂ ತಮ್ಮ ಬದುಕಿನಲ್ಲಿ ಕೆಲವನ್ನು ನಿರಾಕರಿಸಲು ಮತ್ತು ಕೆಲವನ್ನು ಸ್ವೀಕರಿಸಲು ಬೇಕಾದ ಶಕ್ತಿಯನ್ನು ತುಂಬುವುದು.

ಇವು ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯ ಮುಖ್ಯ ಗುರಿಯಾಗಿವೆ.

ಭಾರತದಲ್ಲಿ ಸಾರ್ವತ್ರಿಕ ಮೂಲ ಆದಾಯದ ಪ್ರಯೋಗಗಳು:

ಭಾರತದಲ್ಲಿ 2011-2013ರ ನಡುವೆ ಮಧ್ಯಪ್ರದೇಶದ ಎರಡು ಕಡೆ ಪ್ರಾಯೋಗಿಕವಾಗಿ ಸಾರ್ವತ್ರಿಕ ಮೂಲ ಆದಾಯ ಯೋಜನೆಯನ್ನು ಸೆಲ್ಫ್ ಎಂಪ್ಲಾಯಡ್ ವುಮೆನ್ಸ್ ಅಸೋಸಿಯೇಷನ್ (ಸೇವಾ) ಇದರ ಆಶ್ರಯದಲ್ಲಿ ಜಾರಿಗೆ ತರಲಾಗಿತ್ತು. ಈ ಪ್ರಯೋಗವನ್ನು ಮೊದಲು ಮಧ್ಯಪ್ರದೇಶದ ಎಂಟು ಸಾಮಾನ್ಯ ಹಳ್ಳಿಗಳು ಮತ್ತು ನಂತರ ಗಿರಿಜನರ ಹಳ್ಳಿಯಲ್ಲಿ ಕೈಗೊಳ್ಳಲಾಗಿತ್ತು. ಈ ಪ್ರಯೋಗವು ಮೇಲೆ ಹೇಳಿದ ಎಲ್ಲಾ ವೈಶಿಷ್ಟ್ಯತೆಯನ್ನುಕಡ್ಡಾಯವಾಗಿ ಆಳವಡಿಸಿಕೊಳ್ಳಲಾಗಿತ್ತು.

  • ಸಾರ್ವತ್ರಿಕಎಂದರೆ ಬಡವ ಶ್ರೀಮಂತ ಬೇಧವಿಲ್ಲದೆ ಹಳ್ಳಿಯ ಎಲ್ಲರಿಗೂ ಮೂಲ ಆದಾಯವನ್ನು ನೀಡಲಾಗಿತ್ತು
  • ವ್ಯಕ್ತಿಗತ ಹಂಚುವಿಕೆ
  • ‘ಹಣವನ್ನು’ ನೇರ ಬ್ಯಾಂಕ್ ಅಕೌಂಟುಗಳಿಗೆ ಟ್ರಾನ್ಸಫರ್ ಮಾಡಲಾಗಿತ್ತು. ಗಿರಿಜನರಿಗೆ ನಗದು ರೂಪದಲ್ಲಿ ನೀಡಲಾಗಿತ್ತು.
  • ಪ್ರತಿ ತಿಂಗಳು ತಲುಪಿಸಲಾಗುತ್ತಿತ್ತು.
  • ಯಾವುದೇ ಷರತ್ತುಗಳು ಇರಲಿಲ್ಲ
  • ಸಾರ್ವತಿಕ ಮೂಲ ಆದಾಯವನ್ನು ಹಕ್ಕು ಎಂದು ಪರಿಗಣಿಸಲಾಗಿತ್ತು. ಹೀಗಾಗಿ ಪ್ರಯೋಗದ ಉದ್ದಕ್ಕೂ ಈ ಯೋಜನೆ ಎಲ್ಲರನ್ನೂ ಒಳಗೊಂಡಿತ್ತು. ಹೊಸದಾಗಿ ಹುಟ್ಟಿದ ಮಗುವೂ, ಆ ಕೂಡಲೇ ಯೋಜನೆಯ ವ್ಯಾಪ್ತಿಗೆಬರುವಂತೆ ನೋಡಿಕೊಳ್ಳಲಾಗಿತ್ತು.

ಸಾಮಾನ್ಯ ಹಳ್ಳಿಗಳಲ್ಲಿ ಮೊದಲ ಹನ್ನೆರಡು ತಿಂಗಳು 200 ರೂಪಾಯಿಯಂತೆ ಮೊದಲ ಹನ್ನೆರಡು ತಿಂಗಳು ನಂತರದ ಐದು ತಿಂಗಳ ಯೋಜನೆಯ ವಿಸ್ತರಣೆಯಲ್ಲಿ 300 ರೂಪಾಯಿಗಳನ್ನು ವಯಸ್ಕರಿಗೆ ನೀಡಲಾಗಿತ್ತು.ಗಿರಿನರ ಹಾಡಿಗಳಲ್ಲಿ ವಯಸ್ಕರಿಗೆ ಮುನ್ನೂರು ಮತ್ತು ಮಕ್ಕಳಿಗೆ ಅದರ ಅರ್ಧದಷ್ಟು ಹಣವನ್ನು ಅವರ ತಾಯಿಯ ಖಾತೆಗೆ ವರ್ಗಾಯಿಸಲಾಗಿತ್ತು.

ಪ್ರಯೋಗದ ಫಲಿತಾಂಶವು ಅತ್ಯಂತ ಸಕಾರಾತ್ಮಕವಾಗಿತ್ತು. ಆಹಾರದ ಲಭ್ಯತೆ ಮೊದಲಿಗಿಂತ ಸುಧಾರಿಸಿತ್ತು. ಹೆಚ್ಚಿನ ಸಣ್ಣ ಮತ್ತು ಅತಿಸಣ್ಣ ರೈತರು ತಮ್ಮ ದಿನದ ಹೆಚ್ಚಿನ ಹೊತ್ತನ್ನು ಹೊಲದಲ್ಲಿ ಕಳೆಯುತ್ತಿದ್ದರು.ಇದರಿಂದಾಗಿ ಕೃಷಿಯ ಪ್ರಮಾಣ ಹೆಚ್ಚಿತ್ತು. ಜಾನುವಾರುಗಳು ಹೆಚ್ಚು ಕಡಿಮೆ ದ್ವಿಗುಣಗೊಂಡಿದ್ದವು. ಸಣ್ಣ-ಪುಟ್ಟ ಹಣಕಾಸಿನ ಅಗತ್ಯಗಳಿಗೆ ಬಡ್ಡಿಸಾಲದವರನ್ನು ಆಶ್ರಯಿಸುತ್ತಿದ್ದವರು ತಮ್ಮ ಸಂಬಂಧಿಕರು ಮತ್ತು ನೆರೆಯವರಬಳಿ ಪಡೆಯಲು ಪ್ರಾರಂಭಿಸಿದರು. ಹೆಚ್ಚು ಅಪಾಯಕಾರಿ ಕೆಲಸಗಳಿಗೆ ಹೋಗುತ್ತಿದ್ದವರು ಹೆಚ್ಚು ಅಪಾಯಕಾರಿಯಲ್ಲದ ಕೆಲಸಗಳಿಗೆ ಸೇರಿಕೊಂಡರು. ಈ ಪ್ರಯೋಗದ ಉದ್ದಕ್ಕೂ ಹಣದ ಹರಿವಿನಿಂದಾಗಿ ಅವರಿಗೆ ಹೆಚ್ಚಿನಆಯ್ಕೆಗಳು ದೊರಕಿದವು ಮತ್ತು ಅವರನ್ನು ಸಾಕಷ್ಟು ಸಂಕಷ್ಟಗಳಿಂದ ಈ ಯೋಜನೆಯು ವಿಮೋಚನೆಗೊಳಿಸಿತು.

ಈ ಸಕಾರತ್ಮಾಕ ಫಲಿತಾಂಶಗಳನ್ನು ನೋಡುವಾಗ ನನಗೆ ಎನ್ನಿಸುವುದೇನೆಂದರೆ ಕೌಟುಂಬಿಕ ಘಟಕಗಳಿಗೆ ಹಣವನ್ನು ಹರಿಸುವದಕ್ಕಿಂತ ಪ್ರತಿ ವ್ಯಕ್ತಿಗೂ ನಿರ್ದಿಷ್ಟ ಆದಾಯವನ್ನು ಖಾತರಿಗೊಳಿಸುವ ಸಾರ್ವತ್ರಿಕ ಮೂಲಆದಾಯವು ಹೆಚ್ಚು ಪರಿಣಾಮಕಾರಿಯಾಗಿದೆ. ಒಟ್ಟಾರೆ ಸಾರ್ವತ್ರಿಕ ಮೂಲ ಆದಾಯದ ಪರಿಣಾಮವು ಸಾಮಾಜಿಕ ಪರಿವರ್ತನೆಯನ್ನು ಸಾಧಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ವಿವಿಧ  ಈ ಯೋಜನೆಯಿಂದಾಗಿ ಹಣದಮೌಲ್ಯವನ್ನೂ ಮೀರಿ ಸಾಮಾಜಿಕ ವಿಮೋಚನೆ ಸಾಧ್ಯವಾಗುತ್ತದೆ. ಇದು ಭವಿಷ್ಯದ ಮೇಲೆಯೂ ಸಕಾರಾತ್ಮಕವಾದ ಪರಿಣಾಮವನ್ನು ಬೀರಬಲ್ಲದು.

ಭಾಗ -2 ಕ್ಕಾಗಿ ಇಲ್ಲಿ ನೋಡಿ

ಕನಿಷ್ಟ ಮೂಲ ಆದಾಯ ಖಾತರಿ: ಕಾಂಗ್ರೆಸ್ ಭರವಸೆಯ ಕುರಿತು ಚರ್ಚೆ ಭಾಗ- 2

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...