HomeಮುಖಪುಟNRC ಬೇಡ, NRU ಬೇಕು: ನಿರುದ್ಯೋಗ ನೊಂದಣಿ ಅಭಿಯಾನಕ್ಕೆ ಕಾಂಗ್ರೆಸ್‌ ಚಾಲನೆ

NRC ಬೇಡ, NRU ಬೇಕು: ನಿರುದ್ಯೋಗ ನೊಂದಣಿ ಅಭಿಯಾನಕ್ಕೆ ಕಾಂಗ್ರೆಸ್‌ ಚಾಲನೆ

- Advertisement -
- Advertisement -

NRC ಬೇಡ, NRU (ನ್ಯಾಷನಲ್‌ ರಿಜಿಸ್ಟ್ರೆಷನ್‌ ಆಫ್‌ ಅನ್‌ಎಂಪ್ಲ್ಯಾಮೆಂಟ್‌? ಬೇಕು ಎಂದು ಒತ್ತಾಯಿಸಿ ನಿರುದ್ಯೋಗ ನೊಂದಣಿ ಅಭಿಯಾನಕ್ಕೆ ದೇಶಾದ್ಯಂತ ಇಂದು ಕಾಂಗ್ರೆಸ್‌ ಚಾಲನೆ ನೀಡಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ. ಪ್ರಧಾನಿ ನರೇಂದ್ರ ಮೋದಿಯವರ ಅನರ್ಥ ಆರ್ಥಿಕತೆ ಮತ್ತು ದೂರದೃಷ್ಟಿಯಿಲ್ಲದ ಆಡಳಿತಾತ್ಮಕ ಕ್ರಮಗಳಿಂದ ದೇಶದ ಯುವಕರು ಕಂಗಾಲಾಗಿದ್ದು, ಅಭದ್ರತೆಯನ್ನು ಎದುರಿಸುತ್ತಿದ್ದಾರೆ. ಬನ್ನಿ ಬಿಜೆಪಿ ಪಕ್ಷದ ಸುಳ್ಳುಗಳ ವಿರುದ್ಧ ದನಿಯೆತ್ತೋಣ ಎಂದು ಮನವಿ ಮಾಡಿದ್ದಾರೆ.

8151994411 ಸಂಖ್ಯೆಗೆ ಮಿಸ್ ಕಾಲ್ ನೀಡುವ ಮೂಲಕ ನಿರುದ್ಯೋಗ ನೊಂದಣಿ ಅಭಿಯಾನದಲ್ಲಿ ಪಾಲ್ಗೊಳ್ಳೋಣ ಎಂದು ಕರೆ ನೀಡಿದ್ದಾರೆ.

ಮೋದಿ ಆರ್ಥಿಕತೆಯ ನಾಶದ ಜೊತೆಗೆ ಲಕ್ಷಾಂತರ ಉದ್ಯೋಗಗಳನ್ನು ನಾಶಪಡಿಸಿದ್ದಾರೆ ಮತ್ತು ನಿರುದ್ಯೋಗವನ್ನು 45 ವರ್ಷಗಳಲ್ಲಿ ಅತಿ ಹೆಚ್ಚು ಮಾಡಿದ್ದಾರೆ. ಅವರು ಉದ್ಯೋಗ ಸೃಷ್ಟಿಯ ಬಗ್ಗೆ ಏನನ್ನೂ ಮಾತನಾಡಲಾರರು. ಏಕೆಂದರೆ ಅವರಿಗೆ ಅದರ ಕುರಿತು ಯಾವುದೇ ಯೋಜನೆ ಇಲ್ಲ ಮತ್ತು ಟ್ರ್ಯಾಕ್ ರೆಕಾರ್ಡ್ ಇಲ್ಲ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಅನಕ್ಷರಸ್ಥರಿಗಿಂತ ಅಕ್ಷರಸ್ಥರೆ ಇಂದು ಹೆಚ್ಚಿನ ನಿರುದ್ಯೋಗಿಗಳಾಗಿದ್ದಾರೆ. ನಿರುದ್ಯೋಗ ವೇಗವಾಗಿ ಬೆಳೆಯುತ್ತಿದೆ. ಪದವೀಧರ, ಸ್ನಾತಕೋತ್ತರ / ತಾಂತ್ರಿಕ ಪದವಿಗಳನ್ನು ಹೊಂದಿರುವ 10 ಮಿಲಿಯನ್ ಭಾರತೀಯರು ಕೆಲಸ ಹುಡುಕುತ್ತಿದ್ದಾರೆ, ಅಂದರೆ ಉನ್ನತ ಶಿಕ್ಷಣ ಹೊಂದಿರುವ ಎಲ್ಲಾ ಭಾರತೀಯರಲ್ಲಿ 15% ರಷ್ಟು ಜನ ಕೆಲಸ ಅರಸುತ್ತಿದ್ದಾರೆ. ಮೋದಿ ಸರ್ಕಾರ ಏನನ್ನು ಮಾಡುತ್ತಿಲ್ಲ ಎಂದು ಮಹಿಳಾ ಕಾಂಗ್ರೆಸ್‌ನ ಜಯಶ್ರಿಯವರು ಟೀಕಿಸಿದ್ದಾರೆ. ಇಂದು ಟ್ವಿಟ್ಟರ್‌ನಲ್ಲಿ ನೌಕರಿಕೀಬಾತ್‌ ಹ್ಯಾಸ್‌ಟ್ಯಾಗ್‌ ಟ್ರೆಂಡಿಂಗ್‌ ಆಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...