Homeಮುಖಪುಟನಾವು ಸಂವಿಧಾನವನ್ನು ನಂಬುತ್ತೇವೆ. ಅದರ ಹೊರತಾಗಿ ನಮಗೆ ಯಾವುದೇ ಶಕ್ತಿ ಕೇಂದ್ರ ಬೇಡ: ಮೋಹನ್ ಭಾಗವತ್

ನಾವು ಸಂವಿಧಾನವನ್ನು ನಂಬುತ್ತೇವೆ. ಅದರ ಹೊರತಾಗಿ ನಮಗೆ ಯಾವುದೇ ಶಕ್ತಿ ಕೇಂದ್ರ ಬೇಡ: ಮೋಹನ್ ಭಾಗವತ್

- Advertisement -
- Advertisement -

ಈ ದೇಶವು ಹಿಂದೂಗಳಿಗೆ ಸೇರಿದೆ ಮತ್ತು 130 ಕೋಟಿ ಜನರು ಹಿಂದೂಗಳೆಂದು ಆರ್‌ಎಸ್‌ಎಸ್ ಕಾರ್ಯಕರ್ತರು ಹೇಳಿದಾಗ, ನಾವು ಯಾರ ಧರ್ಮ, ಭಾಷೆ ಅಥವಾ ಜಾತಿಯನ್ನು ಬದಲಾಯಿಸಲು ಬಯಸುತ್ತೇವೆ ಎಂದು ಅರ್ಥವಲ್ಲ … ನಾವು ಸಂವಿಧಾನವನ್ನು ನಂಬುತ್ತೇವೆ. ಅದರ ಹೊರತಾಗಿ ನಮಗೆ ಯಾವುದೇ ಶಕ್ತಿ ಕೇಂದ್ರ ಬೇಡ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಇಂದು ಬರೇಲಿ ರುಹೆಲ್‌ಖಂಡ್ ವಿಶ್ವವಿದ್ಯಾಲಯದಲ್ಲಿ ‘ಭಾರತದ ಭವಿಷ್ಯ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದೃಷ್ಟಿ’ ಕುರಿತು ಉಪನ್ಯಾಸ ನೀಡಿದ ಅವರು ನಾವು ಭವಿಷ್ಯದಲ್ಲಿ ಎಲ್ಲರನ್ನು ಹಿಂದೂಗಳೆಂದು ಕರೆಯುತ್ತೇವೆ ಅಷ್ಟೇ ಎಂದು ಹೇಳಿದ್ದಾರೆ.

ನಾವು ಭಾವನಾತ್ಮಕ ಏಕೀಕರಣವನ್ನು ತರಲು ಪ್ರಯತ್ನಿಸಬೇಕು ಎಂದು ಸಂವಿಧಾನ ಹೇಳಿದೆ. ‌ಅದರೆ ಭಾವನೆ ಏನು? ಆ ಭಾವನೆ- ಈ ದೇಶವು ನಮಗೆ ಸೇರಿದೆ, ನಾವು ನಮ್ಮ ಮಹಾನ್ ಪೂರ್ವಜರ ವಂಶಸ್ಥರು ಮತ್ತು ನಮ್ಮ ವೈವಿಧ್ಯತೆಯ ಹೊರತಾಗಿಯೂ ನಾವು ಒಟ್ಟಿಗೆ ಬದುಕಬೇಕು. ಇದನ್ನೇ ನಾವು ಹಿಂದುತ್ವ ಎಂದು ಕರೆಯುತ್ತೇವೆ ಎಂದು ಅವರು ಹೇಳಿದ್ದಾರೆ. ಆ ಮೂಲಕ ಹಿಂದುತ್ವಕ್ಕೆ ಹೊಸ ವ್ಯಾಖ್ಯಾನ ನೀಡಲು ಮುಂದಾಗಿದ್ದಾರೆ.

ನಿನ್ನೆಯಷ್ಟೇ ಅವರು ಆರ್‌ಎಸ್‌ಎಸ್‌ಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ, ಚುನಾವಣೆ ನಮಗೆ ಏನೇನೂ ಅಲ್ಲ, ನಾವು ರಾಷ್ಟ್ರದ ಮೌಲ್ಯಗಳನ್ನು ಕಾಪಾಡಲು ಕಳೆದ 60 ವರ್ಷಗಳಿಂದ ದುಡಿಯುತ್ತಿದ್ದೇವೆ ಎಂದು ಹೇಳಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್ ನಿಧನ

0
ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ಮಾಪಕ ದ್ವಾರಕೀಶ್ ಅವರು ಮಂಗಳವಾರ ನಿಧನರಾಗಿದ್ದಾರೆ. 81 ವರ್ಷ ಪ್ರಾಯದ ದ್ವಾರಕೀಶ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಹೃದಯಾಘಾತದಿಂದ ಇಂದು ನಿಧರಾಗಿದ್ದಾರೆ. ಹುಣಸೂರಿನಲ್ಲಿ ಆಗಸ್ಟ್ 19,1942ರಂದು ದ್ವಾರಕೀಶ್ ಜನಿಸಿದ್ದಾರೆ....