Homeಮುಖಪುಟಕೇರಳದ ರಾಹುಲ್ ರ್ಯಾಲಿಯಲ್ಲಿ ಪಾಕ್ ಧ್ವಜ ಹಾರಾಡಿದ್ದು ಸುಳ್ಳು ಸುದ್ದಿ

ಕೇರಳದ ರಾಹುಲ್ ರ್ಯಾಲಿಯಲ್ಲಿ ಪಾಕ್ ಧ್ವಜ ಹಾರಾಡಿದ್ದು ಸುಳ್ಳು ಸುದ್ದಿ

- Advertisement -
- Advertisement -

ಹಸಿರು ಹಾರಿದರೆ ಅದು ಪಾಕ್ ಧ್ವಜ! ಸಂಘಿಗಳ ಬಹುಕಾಲದ ಹುನ್ನಾರ
ಇದು ಇವತ್ತು ನಿನ್ನೆಯದಲ್ಲ, ಸಂಘದ ಅಂಗಸಂಸ್ಥೆಗಳು ಸುಮಾರು ಎರಡು ದಶಕಗಳಿಂದ ನಡೆಸಿಕೊಂಡು ಬಂದಿರುವ ಪ್ರಪಗಂಡಾ. ಯಾವುದಾದರೂ ರ್ಯಾಲಿಯಲ್ಲಿ ಹಸಿರು ಬಾವುಟ ಕಂಡರೆ ಸಾಕು, ಅಲ್ಲಿ ಪಾಕ್ ಧ್ವಜ/ಇಸ್ಲಾಮಿಕ್ ಧ್ವಜ ಹಾರಾಡಿದವು ಎಂದೆಲ್ಲ ಸುದ್ದಿ ಹಬ್ಬಿಸುವುದು. ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದ ಮೇಲೆ ಅಂತಹ ಫೋಟೊ, ವಿಡಿಯೋಗಳ ಮೂಲಕ ರಾಜಕೀಯವಾಗಿ ಮುಗ್ಧರಾದವರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತ ಬರಲಾಗಿದೆ. ಕಾಂಗ್ರೆಸ್ ವಿರುದ್ಧವೇ ಈ ‘ಅಸ್ತ್ರ’ ಜಾಸ್ತಿ ಬಳಕೆಯಾಗಿದೆ, ಜೊತೆಗೆ ಮಮತಾ ಬ್ಯಾನರ್ಜಿಯವರನ್ನೂ ಬಿಟ್ಟಿಲ್ಲ.
ಈಗ ರಾಹುಲ್ ಗಾಂಧಿ ಕೇರಳದ ವಯನಾಡಿನಲ್ಲಿ ನಾಮಪತ್ರ ಸಲ್ಲಿಸುವ ಮುನ್ನ ನಡೆಸಿದ ರ್ಯಾಲಿ ವಿಚಾರದಲ್ಲೂ ಭಕ್ತರಲ್ಲಿ ಮತ್ತೆ ‘ಹಸಿರು ಕಾಮಾಲೆ’ ಕಾಣಿಸಿಕೊಂಡಿದೆ. ಇದು ಮರುಕಳಿಸುತ್ತಲೇ ಹೋಗಬಹುದಾದ್ದರಿಂದ ಪಾಕ್ ಧ್ವಜ, ಐಯುಎಂಎಲ್ ಪಕ್ಷದ ಧ್ವಜ ಮತ್ತು ಇಸ್ಲಾಮಿಕ್ ಬ್ಯಾನರ್‍ಗಳ ಕುರಿತ ಪ್ರಾಥಮಿಕ ತಿಳವಳಿಕೆಯನ್ನು ಇಲ್ಲಿ ನೀಡುತ್ತಿದ್ದೇವೆ.
ಮಿಥ್ಯ: ಏಪ್ರಿಲ್ 4ರಂದು ವಯನಾಡಿನಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸುವ ಮುನ್ನ ನಡೆದ ರ್ಯಾಲಿಯಲ್ಲಿ ಪಾಕ್ ಧ್ವಜಗಳು ಹಾರಾಡಿವೆ. ಇಸ್ಲಾಮಿಕ್ ಧ್ವಜಗಳೂ ಕಂಡಿವೆ. ಭಯೋತ್ಪಾದಕ ಜಿನ್ನಾ ಒಂದು ಕಾಶ್ಮೀರ ಮಾಡಿ ಹೋದ, ರಾಹುಲ್ 500 ಕಾಶ್ಮೀರಗಳನ್ನು ಸೃಷ್ಟಿಸಿ, ದೇಶ ಒಡೆಯಲಿದ್ದಾರೆ…. ಈಗಲಾದರೂ ಜಿಹಾದಿ ಪ್ರಿಯ ಕಾಂಗ್ರೆಸ್ ಅನ್ನು ಅರ್ಥ ಮಾಡಿಕೊಳ್ಳಿ ಎಂದು ಹಲವಾರು ಟ್ವಿಟ್ಟರ್ ಹ್ಯಾಂಡಲ್‍ಗಳಿಂದ ಸುದ್ದಿ ಹುಟ್ಟುತ್ತದೆ. ವಯನಾಡ್ ರ್ಯಾಲಿಯ ಫೋಟೊ, ವಿಡಿಯೋಗಳಲ್ಲಿ ಹಸಿರು ಧ್ವಜಗಳನ್ನು ಉಲ್ಲೇಖಿಸಿ ಈ ‘ಅಪಾದನೆ’ ಮಾಡಲಾಗಿದೆ. ಭಕ್ತರು ಇದನ್ನು ರಿಟ್ವೀಟ್ ಮಾಡುತ್ತಲೇ ಇದ್ದಾರೆ. ಫೇಸ್‍ಬುಕ್, ವ್ಯಾಟ್ಸಾಪ್‍ಗಳಿಗೂ ಇದು ಹರಡಿದೆ.


ಸತ್ಯ: ಇದು ಮೊದಲೇನಲ್ಲ. ಕೇರಳದ ‘ಇಂಡಿಯನ್ ಯುನಿಯನ್ ಮುಸ್ಲಿಂ ಲೀಗ್’ (ಐಯುಎಂಎಲ್) ಪಕ್ಷದ ಧ್ವಜ ಕಂಡಾಗಲೆಲ್ಲ ಇಂತಹ ಸುಳ್ಳು ಅಪಾದನೆ ಮಾಡುತ್ತ ಬರಲಾಗಿದೆ. ಐಯುಎಂಎಲ್ ಕೇರಳದಲ್ಲಿ ಅದು ಗಣನೀಯ ಬೇಸ್ ಹೊಂದಿದೆ. ಮೊನ್ನೆ ರ್ಯಾಲಿಯಲ್ಲಿ ಕಂಡಿದ್ದು ಇದೇ ಪಕ್ಷದ ಧ್ವಜ ಮತ್ತು ಬ್ಯಾನರ್ ಅವು ಖಂಡಿತ ಪಾಕ್ ಧ್ವಜಗಳೂ ಅಲ್ಲ, ಇಸ್ಲಾಮಿಕ್ ಧ್ವಜಗಳೂ ಅಲ್ಲ. ಜೊತೆಗೆ ಕಾಂಗ್ರೆಸ್ ಧ್ವಜಗಳಂತೂ ಅಲ್ಲವೇ ಅಲ್ಲ.
ಪಾಕ್ ಧ್ವಜದಲ್ಲಿ ಅರ್ಧಚಂದ್ರ ಮತ್ತು ನಕ್ಷತ್ರಗಳು ಮಧ್ಯಭಾಗದಲ್ಲಿ ಇದ್ದರೆ, ಅವು ಐಯುಎಂಎಲ್ ಧ್ವಜ/ಬ್ಯಾನರಿನಲ್ಲಿ ಎಡಮೂಲೆ ಟಾಪ್‍ನಲ್ಲಿವೆ. ಪಾಕ್ ಧ್ವಜದಲ್ಲಿ ಎಡಕ್ಕೆ ಬಿಳಿ ಪಟ್ಟೆ ಇರುತ್ತದೆ. ಸಾಮಾನ್ಯವಾಗಿ ಮುಸ್ಲಿಮರು ಧಾರ್ಮಿಕ ಧ್ವಜ ಎಂಬರ್ಥದಲ್ಲಿ ಬಳಸುವ ಬ್ಯಾನರ್‍ನಲ್ಲಿ ಈ ಬಿಳಿ ಪಟ್ಟೆ ಇರುವುದಿಲ್ಲ. ಅಂದು ರ್ಯಾಲಿಯಲ್ಲಿ ಹಾರಾಡಿದ್ದು ಐಯುಎಂಎಲ್ ಪಕ್ಷದ ಧ್ವಜಗಳಷ್ಟೇ.

ಇನ್ನೊಂದು ಕಡೆ ನಟಿ ಕೊಯ್ನ ಮಿತ್ರ ಒಂದು ಟ್ವೀಟ್ ಮಾಡಿದ್ದು, ಅಲ್ಲಿ ಬರೀ ಹಸಿರು ಧ್ವಜಗಳ ಚಿತ್ರವಿದೆ. ಇದು ವಯನಾಡ್ ರ್ಯಾಲಿಗೆ ಸಂಬಂಧವೇ ಇಲ್ಲದ ಚಿತ್ರ. ಐಯುಎಂಎಲ್ ಪಕ್ಷದ ಮಾಜಿ ಸಚಿವ ಕುನಾಲ್‍ಕುಟ್ಟಿ 2016ರಲ್ಲಿ ನಡೆಸಿದ ರ್ಯಾಲಿಯ ಚಿತ್ರವದು. ಅಲ್ಲಿ ಸಹಜವಾಗಿ ಐಯುಎಂಎಲ್ ಧ್ವಜಗಳೇ ಇವೆ.
(ಆಧಾರ: ಅಲ್ಟ್‍ನ್ಯೂಸ್)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...