Homeಮುಖಪುಟಅನರ್ಹ ಶಾಸಕರನ್ನು ತಿರಸ್ಕರಿಸಿ #RejectDisqualifiedMLAs : ಟ್ವಿಟ್ಟರ್‌ನಲ್ಲಿ ಭಾರೀ ಸದ್ದು..

ಅನರ್ಹ ಶಾಸಕರನ್ನು ತಿರಸ್ಕರಿಸಿ #RejectDisqualifiedMLAs : ಟ್ವಿಟ್ಟರ್‌ನಲ್ಲಿ ಭಾರೀ ಸದ್ದು..

- Advertisement -
- Advertisement -

ಹಣ ಅಧಿಕಾರಕ್ಕಾ ಮಾನ ಮರ್ಯಾದೆ ಬಿಟ್ಟು ರಾಜೀನಾಮೆ ಕೊಟ್ಟು ಅನರ್ಹರಾಗಿರುವ 15 ಜನ ಅನರ್ಹ ಶಾಸಕರನ್ನು ತಿರಸ್ಕರಿಸಿ ಎಂದು ಪ್ರಚಾರಾಂದೋಲನ ಟ್ವಿಟ್ಟರ್‌ನಲ್ಲಿ ಜೋರಾಗಿ ನಡೆಯುತ್ತಿದ್ದು ಟ್ರೆಂಡಿಂಗ್‌ ಆಗಿದೆ.

ಹಲವು ಸಾಮಾಜಿಕ ಕಾರ್ಯಕರ್ತರು ಕರೆಕೊಟಿದ್ದ ಅನರ್ಹ ಶಾಸಕರನ್ನು ತಿರಸ್ಕರಿಸಿ #RejectDisqualifiedMLAs ಎಂಬ ಟ್ವಿಟ್ಟರ್‌ ಅಭಿಯಾನಕ್ಕೆ ಭಾರೀ ಸ್ಪಂದೆನ ಸಿಕ್ಕಿದೆ. ಕೆಲವೇ ಕ್ಷಣಗಳಲ್ಲಿ ಸಾವಿರಾರು ಟ್ವೀಟ್‌ಗಳು ದಾಖಲಾಗಿ ಅನರ್ಹ ಶಾಸಕರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕೆಲವು ಸ್ಯಾಂಪಲ್‌ಗಳು ಇಲ್ಲಿವೆ.

ಮುಂದೆಂದೂ ಶಾಸಕರು ತಮ್ಮನ್ನು ತಾವು ಮಾರಿಕೊಳ್ಳಬಾರದು

ಅನರ್ಹತೆ ಎಂಬ ಕಳಂಕ ಕರ್ನಾಟಕದಲ್ಲಿ ಸುಳಿಯಬಾರದು

ಜನತೆಗೆ ನಂಬಿಕೆದ್ರೋಹ ಮಾಡುವವರು ತಲೆ ಎತ್ತಬಾರದು

ಪ್ರಜಾತಂತ್ರ & ಸಂವಿಧಾನ ಗೌರವಿಸಲ್ಪಡಬೇಕು… ಎಂಬ ಟ್ವೀಟ್‌ ವೈರಲ್‌ ಆಗಿದೆ.

ಒಂದು ಗಂಟೆಗೆ ಮೂರು ಸಾವಿರದಷ್ಟು ಟ್ವೀಟ್‌ಗಳು ದಾಖಲಾಗಿದ್ದು ಬೆಂಗಳೂರು ಟ್ರೆಂಡ್‌ನಲ್ಲಿದೆ ಮೊದಲ ಸ್ಥಾನದಲ್ಲಿದ್ದು ಭಾರತದಲ್ಲಿ ಎಂಟನೇ ಸ್ಥಾನದಲ್ಲಿದೆ.

ಇನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರು ಸಹ ಅದೇ ಹ್ಯಾಸ್‌ಟ್ಯಾಗ್‌ ಬಳಸಿ ಟ್ವೀಟ್‌ ಮಾಡಿದ್ದಾರೆ.

ಈ ಕುರಿತು ಹಲವಾರು ಮೀಮ್‌ಗಳು, ಟ್ರೋಲ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...