ಟಿ.ವಿ9 ತೆಲುಗು ಚಾನೆಲ್ ನ ಮಾಜಿ ಸಿಈಓ ರವಿಪ್ರಕಾಶ್ ಹೊರಕ್ಕೆ: ಕಾರಣವೇನು? ಇಲ್ಲಿದೆ ಶಾಕಿಂಗ್ ಸ್ಟೋರಿ

ಹಾರ್ವಡ್ ಬ್ಯುಸಿನೆಸ್ ಸ್ಕೂಲ್‍ನಲ್ಲಿ ಮೀಡಿಯಾ ಸ್ಟಾಟಜಿ ವಿಭಾಗದಲ್ಲಿ ಹಿಡಿತ ಸಾಧಿಸಿಬಂದ ರವಿಪ್ರಕಾಶ್, ತೇಜಾ ಟಿವಿಯಲ್ಲಿ ನ್ಯೂಸ್ ಹೆಡ್ಡ್ ಆಗಿ ಕೆಲಸಕ್ಕೆ ಸೇರಿದ ಸಮಯದಲ್ಲಿ ತನ್ನ ವಿಭಿನ್ನ ಶೈಲಿಯ ಕೆಲಸದಿಂದ ಮಾಧ್ಯಮಲೋಕದ ಮಂದಿಗೆ ಪರಿಚಿತನಾದ

| ಅನಿಲ್ ಕುಮಾರ್ ಚಿಕ್ಕದಾಳವಟ್ಟ |

ಇತ್ತಿಚಿಗೆ ರಾಜಕೀಯ ವಲಯಕ್ಕಿಂತ ಅತಿ ಭ್ರಷ್ಟವಾಗಿರುವುದು ಮಾಧ್ಯಮ ಎಂದು ನೇರವಾದ ಆರೋಪವನ್ನು ಒಬ್ಬ ಹಿರಿಯ ರಾಜಕಾರಣಿ ಮಾಡಿದ್ದರು. ಅದಕ್ಕೆ ಪೂರಕವೆಂಬಂತೆ ನಮ್ಮ ರಾಜ್ಯದಲ್ಲೂ ಹಲವು ಬ್ಲಾಕ್ ಮೈಲ್ ಮಾದ್ಯಮ ಮುಖ್ಯಸ್ಥರು ಜೈಲಿಗೆ ಹೋಗಿ ಬಂದ ನಿರ್ದಶನಗಳು ನಮ್ಮ ಕಣ್ಣ ಮುಂದೆ ಕಾಣಿಸುತ್ತಿವೆ. ದುಡ್ಡಿಗಾಗಿಯೇ ಸುದ್ದಿ ಎನ್ನುಂತಹ ಕಾಲ ಬಂದು ಬಹಳ ವರ್ಷವೇ ಆಗಿ ಹೋಗಿವೆ. 24/7 ಸುಧ್ಧಿವಾಹಿನಿಗಳೂ ಬಂದ ನಂತರವಂತು ನೈಜ ಸುದ್ಧಿಯ ಜಾಗದಲ್ಲಿ ಕೆಲವು ರಾಜಕೀಯ ಪಕ್ಷಗಳ ವಕ್ತಾರರಂತೆ ಪ್ರೊಪಗಂಡ ಹರಡುವ ಸುದ್ಧಿ ಮನೆಗಳಾಗಿ ಬದಲಾಗಿವೆ. ಎಷ್ಟೋ ಸಲ ತನ್ನ ಮಾಲೀಕನ ಹಿತ ಕಾಪಾಡುವ ನಾಯಿಯಂತಿರುವವರನ್ನು ಮಾತ್ರ ಉಳಿಸಿಕೊಂಡು ಉಳಿದವರನ್ನು ಆಚೆ ತಳ್ಳುವ ಸುದ್ದಿ ಮಾಧ್ಯಮಗಳು ಇವೆ. ಅಂತಹ ಒಂದು ಸ್ಟೋರಿ ಓದಿ.

ಇತ್ತಿಚಿಗೆ ಸುದ್ಧಿವಾಹಿನಿಗಳ ಸಾಲಿನಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಟಿ.ವಿ9 ತೆಲುಗು ವಾಹಿನಿಯಲ್ಲಿ ಸಾಕಷ್ಟು ಜಗಳಗಳು ನಡೆದು ಹೋಗಿವೆ. ಬಹಳ ತಿಂಗಳುಗಳಿಂದ ನಡೆಯುತ್ತಿದ್ದ ಜಗಳ ಬಹಳ ವರ್ಷಗಳ ಕಾಲ ಟಿ.ವಿ 9 ಸಿ.ಈ.ಓ ಆಗಿದ್ದ ರವಿಪ್ರಕಾಶ್ ರನ್ನು ಸಂಸ್ಥೆ ದಿಢೀರನೆ ತೆಗೆದು ಹಾಕಿ ಅವರ ಮೇಲೆ ಕೇಸ್ ಹಾಕಿದ್ದು ಈಗ ದೊಡ್ಡ ವಿವಾದವಾಗಿದೆ. ಆದ ನಂತರ ಟಿ.ವಿ9 ಪಾಲುಧಾರಿಕೆ ಮಾರಟದ ವಿವಾದ ಹೊರಬಂದ ನಂತರ ತೆಲುಗು ಮಾಧ್ಯಮ ಕ್ಷೇತ್ರದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ. ದುಡ್ಡಿಗಾಗಿ ಬೀದಿ ಜಗಳ ಮಾಡಿಕೊಳ್ಳುತ್ತಿರುವ ಮಾಧ್ಯಮ ಮಂದಿಯನ್ನು ನೋಡಿ ಜನ ಸಿಟ್ಟಿಗೆದ್ದಿದ್ದಾರೆ.

ಟಿ.ವಿ.9 ಸಂಸ್ಥೆಯ ಆಡಳಿತ ಮಂಡಳಿ ಮತ್ತು ರವಿ ಪ್ರಕಾಶ್ ನಡುವಿನ ವಿವಾದ

ಟಿ.ವಿ.9 ಮುಖ್ಯ ಕಾರ್ಯನಿರ್ವಹಣಧಿಕಾರಿಯಾಗಿದ್ದ ರವಿಪ್ರಕಾಶ್ ರನ್ನು ಮೇ ತೀಂಗಳಲ್ಲಿ ಏಕಾಏಕಿ ಕೆಳಗಿಳಿಸಿತು. ಅಸೋಸಿಯೇಟೆಡ್ ಬ್ರಾಡ್‍ಕಾಸಟಿಂಗ್ ಕಂಪನಿ ಪ್ರೈ.ಲಿಮಿಟೆಡ್ (ಎ.ಬಿ.ಸಿ.ಬಿ.ಪಿ.ಎಲ್ – ಟಿವಿ9) ಸಂಸ್ಥೆಯ ಲೆಕ್ಕಪತ್ರಗಳನ್ನು ತಿರುಚಿದ್ದು ಮತ್ತು ಸಂಸ್ಥೆಯನ್ನು ಮೋಸಗೊಳಿಸಿದ್ದಾರೆಂದು ರವಿಪ್ರಕಾಶ್ ಮೇಲೆ ಹೊಸ ಆಡಳೀತ ಮಂಡಳಿ ‘ಅಳಂದಾ ಮೀಡಿಯಾ ಸಂಸ್ಥೆ’ಯ ಕೌಶಿಕ್ ರಾವ್ ರವರು ಸೈಬಾರ್ ಬಾದ್ ಪೋಲೀಸರಿಗೆ ದೂರನ್ನು ನೀಡಿದ್ದರು. ಟಿ.ವಿ9 ಸಂಸ್ಥೆಯ ತನ್ನ ಆಸ್ತಿ ಒಡೆತನದ, ಪಾಲುಗಳ ಮಾರಟದ ಬಗ್ಗೆ ರವಿಪ್ರಕಾಶ್ ಸುಳ್ಳು ಪತ್ರಗಳನ್ನು ಸೃಷ್ಟಿಮಾಡಿದ್ದಾರೆ ಮತ್ತು ತೆಲುಗು ಸಿನಿಮಾ ನಟ ಶಿವಾಜಿ, ಟಿವಿ9 ಸಂಸ್ಥೆಯ ಒಡೆತನದ ಹಕ್ಕುಗಳು ರವಿಪ್ರಕಾಶ್ ನಿಂದ ಖರೀದಿಮಾಡಿದ ರೀತಿಯ ನಕಲಿಪತ್ರಗಳು ಸೃಷ್ಟಿ ಮಾಡಿದ್ದಾರೆ ಇದಕ್ಕೆ ಅವರಿಬ್ಬರ ನಡುವೆ ನಡೆದ ಈಮೈಲ್ ವ್ಯವಹಾರಗಳೇ ಸಾಕ್ಷಿ ಎಂದು ಆರೋಪಿಸಿದ್ದಾರೆ.

ರವಿ ಪ್ರಕಾಶ್

ದೂರು ನೀಡಿದ ದಿನವೇ ಬಂಜಾರಾ ಹಿಲ್ಸ್ ನಲ್ಲಿರುವ ರವಿಪ್ರಕಾಶ್ ಮನೆ ಮತ್ತು ಟಿವಿ9 ಕಛೇರಿಯಲ್ಲಿದ್ದ ಕೆಲವು ಹಾರ್ಡಗ ಡಿಸ್ಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಕುರಿತು ಪೋಲಿಸರು ಸೆಕ್ಷನ್ 160, 41 ಅಡಿಯಲ್ಲಿ ಎರಡು ಭಾರಿ ಆತ ಮತ್ತು ಆತನ ಜೊತೆಗಾರ ಆರೋಪಿಗಳಿಗೆ ನೋಟಿಸ್ ನೀಡಿದ್ದಾರೆ. ಅದಕ್ಕೆ ಉತ್ತರಿಸದ ಇವರಿಬ್ಬರು ಬಹಳ ದಿನಗಳ ವರೆಗೆ ಅಜ್ಞಾತವಾಸದಲ್ಲಿದ್ದರು. ಹೈಕೋರ್ಟ್‍ಗೆ ಬೇಲ್ ಗಾಗಿ ಹೋದ ರವಿಪ್ರಕಾಶ್ ಗೆ ಬೇಲ್ ಸಿಕ್ಕಿಲ್ಲ ಮತ್ತೆ ಈತ ಸುಪ್ರೀಂಕೋರ್ಟ್‍ನಲ್ಲಿ ಪ್ರಯತ್ನಿಸಿದ್ದಾರೆ. ಆದರೆ ಸುಪ್ರೀಂಕೋರ್ಟ್ ಹೈಕೋರ್ಟ್‍ಗೆ ಹೋಗಿ ಎಂದ ನಂತರ ಹೈಕೋರ್ಟಿನಲ್ಲಿಯೇ ಮಧ್ಯಂತರ ಬೇಲ್ ಸಿಕ್ಕಕಾರಣ ಸೈಬಾರಾಬಾದ್ ಸೈಬರ್ ಪೋಲಿಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಐದು ಘಂಟೆಗಳ ಕಾಲ ಸುಧೀರ್ಘವಾಗಿ ರವಿಪ್ರಕಾಶ್‍ನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ .

ಕೌಶಿಕ್ ರಾವ್

ಈ ವಿಚಾರಣೆಯ ನಂತರ ಮಾಧ್ಯಮಗಳೊಂದಿಗೆ ಮಾತಾನಾಡಿದ ರವಿಪ್ರಕಾಶ್ ಟಿ.ವಿ9ನನ್ನು ಇಬ್ಬರು ದೊಡ್ಡ ಬಂಡವಾಳಿಗರು ಅಕ್ರಮವಾಗಿ ಕೊಂಡುಕೊಂಡಿದ್ದಾರೆ ಮತ್ತು ನನ್ನ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿದ್ದಾರೆ. ನಿಯಮಗಳನ್ನು ಮೀರಿ ಮಂಡಳಿ ಸಭೆ ನಡೆಸಿ ನನ್ನನ್ನು ಹೊರಗೆ ಕಳುಹಿಸಿದ್ದಾರೆ. ಇದು ಮಾಫೀಯಾಗೂ, ಮಾಧ್ಯಮಕ್ಕು ಮಧ್ಯೆ ನಡೆಯುತ್ತಿರುವ ಧರ್ಮಯುಧ್ಧ, ಕೊನೆಗೆ ಪತ್ರಿಕೋಧ್ಯಮವೇ ಗೆಲ್ಲಲಿದೆ ಎಂದಿದ್ದಾರೆ. ನಾನು ಸಂಪೂರ್ಣವಾಗಿ ತನಿಖೆಗೆ ಪೋಲಿಸರಿಗೆ ಸಹಕರಿಸುತ್ತಿದ್ದೇನೆ ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ ಎಂದು ಹೇಳಿದ್ದಾರೆ. ಈಗ ಪ್ರಸ್ತುತ ಟಿ.ವಿ9 ಕನ್ನಡದ ಸಿ.ಈ.ಓ ನೇ ತೆಲುಗು ಟಿ.ವಿ.9 ವಾಹಿನಿಯ ಸಿ.ಈ.ಓ ಆಗಿ ನೇಮಕಗೊಂಡಿದ್ದಾರೆ.

ನಟ ಶಿವಾಜಿ

ಯಾರು ಈ ರವಿಪ್ರಕಾಶ್ ?

ಹಾರ್ವಡ್ ಬ್ಯುಸಿನೆಸ್ ಸ್ಕೂಲ್‍ನಲ್ಲಿ ಮೀಡಿಯಾ ಸ್ಟಾಟಜಿ ವಿಭಾಗದಲ್ಲಿ ಹಿಡಿತ ಸಾಧಿಸಿಬಂದ ರವಿಪ್ರಕಾಶ್, ತೇಜಾ ಟಿವಿಯಲ್ಲಿ ನ್ಯೂಸ್ ಹೆಡ್ಡ್ ಆಗಿ ಕೆಲಸಕ್ಕೆ ಸೇರಿದ ಸಮಯದಲ್ಲಿ ತನ್ನ ವಿಭಿನ್ನ ಶೈಲಿಯ ಕೆಲಸದಿಂದ ಮಾಧ್ಯಮಲೋಕದ ಮಂದಿಗೆ ಪರಿಚಿತನಾದ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಒಂದೋ ಎರಡೋ ಇಪ್ಪತ್ತನಾಲ್ಕು ಗಂಟೆ ಸುದ್ಧಿ ಮಾಧ್ಯಮಗಳಿದ್ದ ಸಮಯಕ್ಕೆ ಮೊದಲನೇ ಭಾರಿಗೆ ತೆಲುಗಿನಲ್ಲಿ ಟಿವಿ9 ಪ್ರಾರಂಭಿಸಿ ಸಂಚಲನ ಮೂಡಿಸಿದ್ದ. ಟಿವಿ9 ಅನ್ನು ನಂಬರ್ 1 ಮಾಡಲು ಸುದ್ಧಿಯಲ್ಲದ ಸುದ್ದಿಗಳನ್ನು ಡಿಬೇಟ್ ನಡೆಸಿದ ಬಗ್ಗೆ ಮತ್ತು TRP ಹುಚ್ಚು ಹತ್ತಿಸಿದವ ಎಂದು ಈತನ ಬಗ್ಗೆ ಆರೋಪವಿದೆ. ಆದರೆ ಅತಿವೇಗವಾಗಿ ಬೆಳೆದ ಈತ ಈಗ ನೆಲಕ್ಕೆ ಬಿದ್ದಿದ್ದು ಮೀಡೀಯಾ ಮಾಫೀಯಾವೇ ಕಾರಣವಾ? ಅಥವಾ ತನ್ನ ಕೆಡುಕುಬುದ್ದಿ ಕಾರಣವಾ ಎಂಬುದನ್ನು ಕೋರ್ಟ್ ತೀರ್ಮಾನಿಸಲಿದೆ.

ಮೀಡಿಯಾ ಹೌಸ್ ಗಳಲ್ಲಿ ನಿಜವಾಗಲೂ ಏನು ನಡೆಯುತ್ತಿದೆ?

ಸುದ್ಧಿಗಾಗಿ ನಿರಂತರ ಇಪ್ಪತ್ತನಾಲ್ಕು ಗಂಟೆ ತೋರಿಸುವ ಚಾನೆಲ್ ಗಳು ಬಂದಾಗಿನಿಂದ ಜನರು ಬಿಸಿ ಬಿಸಿ ಸುದ್ಧಿಗಳನ್ನು ನೋಡಲು ಶುರುಮಾಡಿದ ನಂತರ ಟಿ.ಆರ್.ಪಿ ಮತ್ತು ರಾಜಕೀಯ ಹಿಡತ ಇದನ್ನು ನಿಯಂತ್ರಿಸಲು ಶುರು ಮಾಡಿತ್ತು. ಈ ಮಾಧ್ಯಮಗಳು ಕೇವಲ ರಾಜಕೀಯ ಪಕ್ಷಗಳ ಬಾಲಗಳಾಗಿ ಕೆಲಸ ಮಾಡಿತ್ತಿರುವುದನ್ನು ಕಾಣಬಹುದಾಗಿದೆ. ಇದರ ನಡುವೆ ಸುದ್ದಿಮಾಧ್ಯಮಗಳನ್ನು ಅಡ್ಡ ಇಟ್ಟಕೊಂಡು ದೊಡ್ಡ ವ್ಯಾಪಾರಗಳೇ ನಡೆಯುತ್ತಿವೆ. ಕೆಲವು ಚಾನೆಲ್ ಗಳಂತು ಟಿ.ಆರ್.ಪಿಯನ್ನು ತೋರಿಸಿ ತಮಗೆ ಬೇಕಾದ ಸುದ್ಧಿಗಳನ್ನು ತೋರಿಸಿ ಪ್ರಪೊಗಂಡ ಮಾಡಲು ಪ್ಯಾಕೇಜ್ ತೆಗೆದುಕೊಳ್ಳುತ್ತಿದ್ದಾರೆ. ಈ ಸುದ್ಧಿ ವಾಹಿನಿಗಳ ಒಳಗಡೆ ಇರುವಂತಹ ಮುಖ್ಯಸ್ಥರು ಲಾಭದ ವಿಚಾರದಲ್ಲಿ ದೊಡ್ಡ ಜಗಳಗಳನ್ನೆ ಮಾಡಿಕೊಂಡಿದ್ದಾರೆ. ಆದರೆ ಈ ಗಲಾಟೆ ಮಾತ್ರ ಹೊರಬಂದು ಸಂಚಲನ ಉಂಟುಮಾಡಿದೆ. ಇನ್ನುಳಿದವರು ಯಾವಾಗ ಹೊರಬರುತ್ತವೊ ಗೊತ್ತಿಲ್ಲ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here