Homeಮುಖಪುಟತುಮಕೂರು ಸ್ಮಾರ್ಟ್‌ ಸಿಟಿ: ಅಗೆದದ್ದು ಆಯ್ತು, ಈಗ ತೇಪೆ ಕೆಲಸ. ಅದು ನೆಪಮಾತ್ರಕ್ಕೆ...

ತುಮಕೂರು ಸ್ಮಾರ್ಟ್‌ ಸಿಟಿ: ಅಗೆದದ್ದು ಆಯ್ತು, ಈಗ ತೇಪೆ ಕೆಲಸ. ಅದು ನೆಪಮಾತ್ರಕ್ಕೆ…

ರಸ್ತೆ ಅಗೆದಿರುವ ಜಾಗದಲ್ಲಿ ಜಲ್ಲಿಪುಡಿ ಹಾಕಿ ಅದರ ಮೇಲೆ ಟಾರ್ ಮುಚ್ಚುವುದಿಂದ ಹೆಚ್ಚು ದಿನ ಬಾಳಿಕೆ ಬರುವುದಿಲ್ಲ. ಅದರಿಂದ ಮತ್ತೆ ರಿಪೇರಿಗೆ ಬಿಲ್ ಮಾಡಿಕೊಳ್ಳಬಹುದು

- Advertisement -
- Advertisement -

ಅಗೆದದ್ದು ಆಯ್ತು ಈಗ ತೇಪೆ ಕೆಲಸ : ನೆಪಮಾತ್ರಕ್ಕೆ ಜಲ್ಲಿಪುಡಿಯಿಂದ ಮುಚ್ಚುತ್ತಿರುವ ಗುತ್ತಿಗೆದಾರರು

ತುಮಕೂರು ನಗರದಲ್ಲಿ ಕುಡಿಯುವ ನೀರು, ನೈಸರ್ಗಿಕ ಅನಿಲ ಹಾಗು ಜಿಯೋ ಕೇಬಲ್ ಗಾಗಿ ಆಗೆದಿದ್ದ ಜಾಗದಲ್ಲಿ ನೆಪಮಾತ್ರಕ್ಕೆ ಜಲ್ಲಿಕಲ್ಲು ಇರುವ ಪುಡಿಯಿಂದ ತೇಪೆಹಾಕುವ ಕೆಲಸ ನಡೆಯುತ್ತಿದೆ. ಅದರ ಮೇಲೆ ಡಾಂಬರೀಕರಣ ಮಾಡಿದರೆ ಅದು ಒಂದೆರಡು ದಿನದಲ್ಲಿ ಕಿತ್ತುಹೋದರೂ ಪರವಾಗಿಲ್ಲ. ಕೇಳುವವರು ಹೇಳುವವರು ಇಲ್ಲವೆಂಬಂತಾಗಿದೆ.

ಸಬ್ ರೋಡ್ ಗಳಲ್ಲಿ ಹಾಕಿದ ಟಾರ್ ಕಿತ್ತು ಬಂದಿದೆ. ಕಳಪೆ ಕಾಮಗಾರಿ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಬಗೆದ ನೆಲದಲ್ಲಿ ಒಂದಿಂಚು ಕೂಡ ಅಗೆಯದೆ ಜಲ್ಲಿಪುಡಿ ಹಾಕಿ ಟಾರ್ ನಿಂದ ಮುಚ್ಚುವ ಕೆಲಸ ನಡೆಯುತ್ತಿದೆ. ಅಧಿಕಾರಿಗಳು ಮತ್ತು ಇಂಜಿನಿಯರ್ ಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡುತ್ತಿಲ್ಲ ಎಂದು ಸ್ಥಳೀಯ ನಾಗರಿಕರು ಆರೋಪಿಸುತ್ತಿದ್ದಾರೆ.

ನೋಡಿ ಸರ್ ಚರಂಡಿ ತೋಡಿರುವ ಜಾಗದಲ್ಲಿ ಕನಿಷ್ಟ ಮೂರು ಇಂಚು ಮಣ್ಣುತೆಗೆದು ಜಲ್ಲಿಯನ್ನು ತುಂಬಿ ಅದನ್ನು ರೋಲರ್ ನಿಂದ ಸಮತಟ್ಟು ಮಾಡಿದ ಮೇಲೆ ಡಾಂಬರೀಕರಣ ಮಾಡಬೇಕು. ಆದರೆ ಇವರು ನೆಪಮಾತ್ರಕ್ಕೆ ಜಲ್ಲಿಪುಡಿಯಿಂದ ಮುಚ್ಚುತ್ತಿದ್ದಾರೆ. ಮಳೆ ಬಂದರೆ ಕೊಚ್ಚಿ ಹೋಗುವುದು ಗ್ಯಾರೆಂಟಿ. ಏನು ಕಳಪೆ ಕಾಮಗಾರಿ ನಡೆಯುತ್ತಿದ್ದರೂ ಯಾರೂ ಕಿವಿಗೆ ಹಾಕಿಕೊಳ್ಳಲ್ಲ. ಗುತ್ತಿಗೆದಾರರು ಸ್ಥಳದಲ್ಲಿ ಇಲ್ಲ. ಕಾರ್ಮಿಕರು ಇನ್ನೇನು ಮಾಡಿಯಾರು ಹೇಳಿ ಎಂದು ರುದ್ರೇಶ್ ಪ್ರಶ್ನಿಸುತ್ತಾರೆ.

ಕುಡಿಯುವ ನೀರು, ಜಿಯೋ ಕೇಬಲ್ ಮತ್ತು ಗ್ಯಾಸ್ ಲೈನ್ ಗಾಗಿ ಅಗೆದು ರಸ್ತೆಗಳು ಗಬ್ಬೆದ್ದು ಹೋಗಿವೆ. ನಿತ್ಯವೂ ರಸ್ತೆಯಲ್ಲಿ ಓಡಾಡುವರು ದೂಳು ಸ್ನಾನ ಮಾಡುವುದು ಸಾಮಾನ್ಯವಾಗಿದೆ. ರಸ್ತೆ ಮಧ್ಯೆ ಎರಡೂ ಕಡೆ ನೀರು ಮತ್ತು ಗ್ಯಾಸ್ ಪೈಪ್ ಲೈನ್ ಸಂಪರ್ಕ ಕೂಡಿರುವ ಜಾಗದಲ್ಲಿ ಸರಿಯಾಗಿ ಜಲ್ಲಿಕಲ್ಲಿನಿಂದ ಮುಚ್ಚಿಲ್ಲ. ಹೀಗಾಗಿ ವಾಹನಗಳಲ್ಲಿ ಹೋದರೆ ಬೆನ್ನುನೋವು ಬರುವುದು ಗ್ಯಾರೆಂಟಿ. ನಾಲ್ಕುಚಕ್ರದ ವಾಹನಗಳು ದಡಕ್ ದಡಕ್ ಎಂದು ಸದ್ದು ಮಾಡುತ್ತವೆ. ಇದು ಗುತ್ತಿಗೆದಾರರು ಮಾಡುತ್ತಿರುವ ಕೆಲಸವಾಗಿದೆ.

ಈಗ ಮೂರು ಲೈನ್ ಗಳನ್ನು ಮಾತ್ರ ಅಳವಡಿಸಲಾಗಿದೆ. ಗ್ಯಾಸ್ ಪೈಪ್ ಲೈನ್ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅದಕ್ಕಾಗಿ ಮತ್ತೆ ರಸ್ತೆ ಅಗೆಯಬೇಕಾಗುತ್ತದೆ. ಇನ್ನೂ ವಿದ್ಯುತ್ ಲೈನ್ ಭೂಗತವಾಗಿ ಹೋಗಿಲ್ಲ. ಅದಕ್ಕಾಗಿಯೂ ರಸ್ತೆಯನ್ನು ಕಟಿಂಗ್ ಮಾಡಲೇ ಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಒಮ್ಮೆ ಅಗೆಯುವುದು ಮತ್ತೊಮ್ಮೆ ಮುಚ್ಚುವುದು ಮಾಡುತ್ತಲೇ ಬರುತ್ತಿದ್ದಾರೆ.

ಅಂದರೆ ರಸ್ತೆ ಅಗೆದಿರುವ ಜಾಗದಲ್ಲಿ ಜಲ್ಲಿಪುಡಿ ಹಾಕಿ ಅದರ ಮೇಲೆ ಟಾರ್ ಮುಚ್ಚುವುದಿಂದ ಹೆಚ್ಚು ದಿನ ಬಾಳಿಕೆ ಬರುವುದಿಲ್ಲ. ಅದರಿಂದ ಮತ್ತೆ ರಿಪೇರಿಗೆ ಬಿಲ್ ಮಾಡಿಕೊಳ್ಳಬಹುದು. ಇಂತಹ ಉದ್ದೇಶದಿಂದಲೇ ಗುತ್ತಿಗೆದಾರರು ಕಳಪೆ ಕಾಮಗಾರಿಯನ್ನು ಮಾಡುತ್ತಾರೆ. ಅಧಿಕಾರಿಗಳು ಮತ್ತು ಸ್ಮಾರ್ಟ್‌ ಇಂಜಿನಿಯರ್ ಗಳು ಸ್ಥಳ ಪರಿಶೀಲನೆ ಮಾಡಿ ಸರಿಯಾಗಿದೆಯೇ ಇಲ್ಲವೋ ಪರಿಶೀಲಿಸಿ ಮತ್ತೆ ಕಾಮಗಾರಿ ಸಮರ್ಪಕವಾಗಿ ಮಾಡಲು ಗುತ್ತಿಗೆದಾರರಿಗೆ ಸೂಚಿಸಬೇಕು. ಮಾತುಕೇಳದ ಗುತ್ತಿಗೆದಾರರ ಗುತ್ತಿಗೆಯನ್ನು ರದ್ದುಮಾಡಿ ಕಪ್ಪುಪಟ್ಟಿಗೆ ಸೇರಿಸುವ ಕೆಲಸ ಮಾಡಬೇಕು. ಆಗ ಕಾಮಗಾರಿ ಗುಣಮಟ್ಟದಿಂದ ಕೂಡಿರುವಂತೆ ಗುತ್ತಿಗೆದಾರರು ನಿಗಾ ವಹಿಸಲು ಸಾಧ್ಯವಿದೆ ಎನ್ನುತ್ತಾರೆ ದಯಾನಂದ್

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು ಅರ್ಧಂಬರ್ಧ ಆಗಿರುವ ಬಗ್ಗೆ ವ್ಯಾಪಕ ದೂರುಗಳು ಬಂದಿವೆ. ಕಳಪೆಗಾರಿ ಮಾಡಿ ಬಿಲ್ ಪಡೆದಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಕುಂಭಕರ್ಣನ ನಿದ್ದೆಯಿಂದ ಎದ್ದ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕರು ಕಾಮಗಾರಿಯಲ್ಲಿ ಅವ್ಯಹಾರ ನಡೆದಿಲ್ಲ ಎಂದು ಸಮಜಾಯಿಸಿ ನೀಡಿದ್ದಾರೆ.

ಇದನ್ನೂ ಓದಿ: ತುಮಕೂರಿನ ಸ್ಮಾರ್ಟ್ ಸಿಟಿ ಅವ್ಯವಹಾರ: ಸಂಸದ ಬಸವರಾಜ್‌, ಸೊಗಡು ನಡುವೆ ಭಿನ್ನಾಭಿಪ್ರಾಯ..

ಆದರೆ ಜನರು ಆರೋಪಿಸುವುದೇನೆಂದರೆ ನಗರದಲ್ಲಿ ನಡೆಯುತ್ತಿರುವ ಒಂದು ಕಾಮಗಾರಿಯೂ ಸರಿಯಾಗಿ ವೈಜ್ಞಾನಿಕವಾಗಿ ನೆಯುತ್ತಿಲ್ಲ. ರಸ್ತೆಗಳ ಬದಿಯಲ್ಲಿ ನೆಪಮಾತ್ರಕ್ಕೆ ಬರೀ ಜಲ್ಲಿಪುಡಿ ಮುಚ್ಚಿ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿಯಲ್ಲಿ ‘ಅಬ್ ಕಿ ಬಾರ್ ರಾಬರ್ಟ್ ವಾದ್ರಾ’ ಪೋಸ್ಟರ್; ಪ್ರಿಯಾಂಕಾ ಪತಿ ಸ್ಪರ್ಧೆಗೆ ಹೆಚ್ಚಿದ...

0
2019ರ ಲೋಕಸಭಾ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ತಮ್ಮ ಕ್ಷೇತ್ರವನ್ನು ಅಮೇಥಿಯಿಂದ ಕೇರಳದ ವಯನಾಡಿಗೆ ಸ್ಥಳಾಂತರಿಸಿದ್ದಾರೆ. ಆದರೆ, ಬಿಜೆಪಿ ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಯಾರು...