Homeನಿಜವೋ ಸುಳ್ಳೋಬಂಧನಕೇಂದ್ರ, ಎನ್‌ಪಿಆರ್‌ ಮತ್ತು ಎನ್‌ಆರ್‌ಸಿಯ ಕುರಿತು ಮೋದಿ, ಅಮಿತ್‌ ಶಾ ಹೇಳಿದ್ದು ನಿಜವೇ? ಸುಳ್ಳೇ?

ಬಂಧನಕೇಂದ್ರ, ಎನ್‌ಪಿಆರ್‌ ಮತ್ತು ಎನ್‌ಆರ್‌ಸಿಯ ಕುರಿತು ಮೋದಿ, ಅಮಿತ್‌ ಶಾ ಹೇಳಿದ್ದು ನಿಜವೇ? ಸುಳ್ಳೇ?

- Advertisement -
- Advertisement -

ಈ ವಾರದ ಟಾಪ್‌5 ಫೇಕ್‌ ನ್ಯೂಸ್‌ಗಳು

1. ಭಾರತದಲ್ಲಿ ಒಂದೂ ಬಂಧನ ಕೇಂದ್ರಗಳಿಲ್ಲ: ನರೇಂದ್ರ ಮೋದಿ

ಡಿಸೆಂಬರ್ 22ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಪ್ರಧಾನಿ ಮೋದಿಯವರು ಮಾತನಾಡುತ್ತಾ ದೇಶದಲ್ಲಿನ ಮುಸ್ಲಿಮರಿಗೆ ಇದರಿಂದ ಯಾವುದೇ ತೊಂದರೆಯಿಲ್ಲ. ಯಾವ ಮುಸ್ಲಿಮರನ್ನು ಬಂಧನ ಕೇಂದ್ರಗಳಿಗೆ ಕಳಿಸುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ದೇಶದಲ್ಲಿ ಯಾವುದೇ ಬಂಧನ ಕೇಂದ್ರಗಳಿಲ್ಲ ಎಂದು ತಿಳಿಸಿದ್ದಾರೆ.

ಈ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದರೆ ಸುಲಭವಾಗಿ ಮೋದಿಯ ಈ ಎಲ್ಲಾ ಹೇಳಿಕೆಗಳು ಸುಳ್ಳು ಎಂದು ಮೇಲ್ನೋಟಕ್ಕೆ ಗೊತ್ತಾಗಲಿದೆ.

ಅಸ್ಸಾಂನಲ್ಲಿ ಈಗಾಗಲೇ ಬಂಧನಕೇಂದ್ರವಿದ್ದು ಅಲ್ಲಿ 970 ಜನರನ್ನು ಬಂಧನದಲ್ಲಿಡಲಾಗಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಅಲ್ಲದೇ ತಲಾ 50 ಕೋಟಿ ರೂ. ವೆಚ್ಚದಲ್ಲಿ ಇನ್ನು 7 ಬಂಧನ ಕೇಂದ್ರಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಬೆಂಗಳೂರಿನ ನೆಲಮಂಗಲದ ಬಳಿಯೂ ಬಂಧನ ಕೇಂದ್ರ ಸಿದ್ಧಗೊಂಡಿದೆ. ಮಹಾರಾಷ್ಟ್ರದಲ್ಲಿ ಹಿಂದಿನ ಬಿಜೆಪಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬಂಧನ ಕೇಂದ್ರ ಕಟ್ಟಲು ಮೂರು ಎಕರೆ ಜಾಗವನ್ನು ಗುರುತಿಸಿದ್ದರು. ದೇಶದ ಹಲವಾರು ಕಡೆ ಬಂಧನ ಕೇಂದ್ರ ನಿರ್ಮಿಸಲು ಸಿದ್ಧತೆಗಳು ನಡೆದಿವೆ.

ಬೆಂಗಳೂರಿನ ನೆಲಮಂಗಲದ ಬಳಿ ಇರುವ ಬಂಧನ ಕೇಂದ್ರ

ಈ ಅಂಶಗಳನ್ನು ಗಮನಿಸಿದಾಗ ಜನರನ್ನು ದಿಕ್ಕುತಪ್ಪಿಸಲು ಮೋದಿಯವರು ಸುಳ್ಳು ಹೇಳಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಅಸ್ಸಾಂ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಸೇನಾಧಿಕಾರಿ ಸನಾವುಲ್ಲರವರು ದಾಖಲೆಗಳಿಲ್ಲ ಕಾರಣಕ್ಕೆ ಅಕ್ರಮ ವಲಸಿಗರು ಎಂದು ಕರೆಯಲ್ಪಟ್ಟಿದ್ದಾರೆ. ಅವರು “ದೇಶದಲ್ಲಿ ಒಂದೂ ಬಂಧನಕೇಂದ್ರಗಳಿಲ್ಲದಿದ್ದರೆ ನಾನು 11 ಭಯಾನಕ ದಿನಗಳನ್ನು ಕಳೆದ ಸ್ಥಳ ಯಾವುದು” ಎಂದು ಮೋದಿಯವರನ್ನು ಪ್ರಶ್ನಿಸಿದ್ದಾರೆ.

ಅಸ್ಸಾಂನಲ್ಲಿ ಕಟ್ಟಲ್ಪಡುತ್ತಿರುವ ಬೃಹತ್‌ ಬಂಧನಕೇಂದ್ರ

2. ಮಂಗಳೂರಿನಿಂದ ಜಮ್ಮು ರೈಲಿಗೆ ಸಿಆರ್‌ಪಿಎಫ್ ಯೋಧರಿಗೆ ಮೂರು ಎಸಿ ಕೋಚ್ ಕೊಟ್ಟ ಮೋದಿ?

ಕನ್ನಡದ ಸುಳ್ಳು ಹರಡುವ ವೆಬ್‌ಸೈಟ್ ಪೋಸ್ಟ್‌ಕಾರ್ಡ್ ಕನ್ನಡ “ಮಂಗಳೂರಿನಿಂದ ಜಮ್ಮುಗೆ ತೆರಳುವ ನವಯುಗ ರೈಲಿನಲ್ಲಿ ಸಿಆರ್‌ಪಿಎಫ್ ಯೋಧರಿಗೆ ಮೂರು ಎಸಿ ಕೋಚ್ ಮೀಸಲಿಡಲಾಗಿದೆ. ಅದಕ್ಕಾಗಿ ರೈಲ್ವೆ ಇಲಾಖೆ ಮತ್ತು ಮೋದಿಗೆ ಧನ್ಯವಾದ” ಎಂದು ಪ್ರಕಟಿಸಿದ್ದಾರೆ.

ಈ ಸುದ್ದಿ ಅರ್ಧ ನಿಜವಾಗಿದೆ. ಅಂದರೆ 3 ಎಸಿ ಕೋಚ್‌ಗಳು ಯೋಧರಿಗೆ ಮೀಸಲಿರುವುದು ನಿಜ. ಆದರೆ ಈ ಕ್ರಮ ತೆಗೆದುಕೊಂಡವರು ಮೋದಿಯಲ್ಲ ಬದಲಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್. ಹಾಗಾಗಿ ಅದರ ಕ್ರೆಡಿಟ್ ಮೋದಿಗೆ ಕೊಟ್ಟಿರುವುದು ಸುಳ್ಳು ಸುದ್ದಿಯಾಗಿದೆ. ಈ ಯೋಜನೆಯು ಮೇ 19, 2013ರಲ್ಲಿಯೇ ಆರಂಭವಾಗಿದ್ದು ಆಗ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತೆ ಹೊರತು ಮೋದಿಯಲ್ಲ…

3. ನೆಹರು 10 ಲಕ್ಷ ಹಿಂದೂಗಳನ್ನು ಕೊಂದರೆ?

ನೆಹರು ವಿರುದ್ಧ ಸದಾ ಕಿಡಿಕಾರುವ ಕನ್ನಡದ ಸುಳ್ಳು ಹರಡುವ ವೆಬ್‌ಸೈಟ್ ಪೋಸ್ಟ್ಕಾರ್ಡ್ ಕನ್ನಡ ಈ ಸುದ್ದಿ ಹಬ್ಬಿಸಿದೆ. ಅಲ್ಲದೇ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿಯ ವಿರುದ್ಧವೂ ಸುಳ್ಳು ಹರಡಿದೆ.

ಇದು ಸಂಪೂರ್ಣ ಸುಳ್ಳಾಗಿದ್ದು ಇದಕ್ಕೆ ಯಾವುದೇ ದಾಖಲೆಗಳಿಲ್ಲ. ನೆಹರು ವಿರುದ್ಧ ಕೆಟ್ಟ ಅಭಿಪ್ರಾಯ ಮೂಡಿಸಲು ಈ ಸುಳ್ಳು ಸುದ್ದಿ ಹರಡಲಾಗಿದೆ ಅಷ್ಟೇ. ದುರಂತವೆಂದರೆ ಈ ಅಪ್ಪಟ ಸುಳ್ಳನ್ನು 300 ಜನ ನಂಬಿದ್ದಾರೆ. 155 ಜನ ಷೇರ್ ಮಾಡಿದ್ದಾರೆ!

4. ಎನ್‌ಪಿಆರ್‌ಗೂ ಎನ್‌ಆರ್‌ಸಿಗೂ ಸಂಬಂಧವಿಲ್ಲ : ಅಮಿತ್ ಶಾ

ಎನ್‌ಪಿಆರ್‌ಗೂ ಎನ್‌ಆರ್‌ಸಿಗೂ ಸಂಬಂಧವಿಲ್ಲ. ಎನ್‌ಪಿಆರ್ ಡೇಟಾವನ್ನು ಎನ್‌ಆರ್‌ಸಿಗೆ ಬಳಸುವುದಿಲ್ಲ. ಅಲ್ಪಸಂಖ್ಯಾತರರು ವದಂತಿಗಳಿಗೆ ಹೆದರಬಾರದು ಎಂದು ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.

ಆದರೆ ಇದು ಸಂಪೂರ್ಣ ಸುಳ್ಳು ಹೇಳಿಕೆಯಾಗಿದೆ. ಎನ್‌ಪಿಆರ್ ಆಧಾರದಲ್ಲಿಯೇ ಅದರ ಡೇಟಾವನ್ನು ಬಳಸಿಯೇ ಎನ್‌ಆರ್‌ಸಿ ಜಾರಿಗೊಳಿಸಲಾಗುತ್ತದೆ. 1995ರ ಪೌರತ್ವ ಕಾಯ್ದೆಯ 2003ರ ನಿಯಮಗಳು ಇದನ್ನು ಸ್ಪಷ್ಟಪಡಿಸಿವೆ. ಹಾಗಾಗಿ ಎನ್‌ಪಿಆರ್ ಎನ್‌ಆರ್‌ಸಿಯ ಭಾಗವಾಗಿದೆ. ಇಲ್ಲದಿದ್ದಲ್ಲಿ ಎನ್‌ಪಿಆರ್ ಬದಲು ಜನಗಣತಿ ಸಾಕಾಗುತ್ತಿತ್ತು..

ಅಲ್ಲದೇ ಇದೇ ಕೇಂದ್ರ ಸರ್ಕಾರವು ಸುಮಾರು ಒಂಭತ್ತು ಬಾರಿ ಎನ್‌ಪಿಆರ್ ಮತ್ತು ಎನ್‌ಆರ್‌ಸಿಗೆ ಸಂಬಂಧವಿದೆಯೆಂದು ಅದರ ಆಧಾರದಲ್ಲಿಯೇ ಎನ್‌ಆರ್‌ಸಿ ಜಾರಿಗೊಳಿಸುತ್ತೇವೆ ಎಂದು ಪ್ರಕಟಿಸಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ಸಾಕ್ಷಿ ಸಮೇತ ವರದಿ ಮಾಡಿದೆ.

ಕೇಂದ್ರ ಸಚಿವ ಕಿರಣ್ ರಿಜ್ಜುರವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ “ದೇಶದ ಪ್ರತಿಯೊಬ್ಬ ನಿವಾಸಿಗಳ ಪೌರತ್ವವನ್ನು ಪರಿಶೀಲಿಸಲು ಎನ್‌ಪಿಆರ್ ನಡೆಸಲಿದ್ದು ಇದು ಎನ್‌ಆರ್‌ಸಿಯ ಮೊದಲ ಹೆಜ್ಜೆಯಾಗಿದೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

5. ಲಕ್ನೋ ಪೌರತ್ವ ವಿರೋಧಿ ಹೋರಾಟದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ?

ಡಿಸೆಂಬರ್ 28ರಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿಡಿಯೋವೊಂದನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿ ಪೌರತ್ವ ವಿರೋಧಿ ಹೋರಾಟದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿದ್ದಾರೆ.

ಇದು ವಿಡಿಯೋಗಳ ಕಾಲ. ಹಾಗಾಗಿ ಇನ್ನೊಮ್ಮೆ ಅವರು ಪ್ರತಿಭಟನೆ ನಡೆಸುವಾಗ ಭಾರತದ ತ್ರಿವರ್ಣ ಧ್ವಜಗಳನ್ನು ಮತ್ತು ಗಾಂಧೀಜಿಯವರು ಫೋಟೊಗಳನ್ನು ತನ್ನಿ ಎಂದು ಯಾರಾದರೂ ಅವರಿಗೆ ಹೇಳಿ ಎಂದು ಲೇವಡಿ ಮಾಡಿದ್ದಾರೆ.

ಈ ವಿಷಯದ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ ಅದು ಸಂಪೂರ್ಣ ಸುಳ್ಳು ಎಂದು ಸಾಬೀತಾಗಿದೆ. ವಿಡಿಯೋವನ್ನು ಪ್ರೀಮಿಯರ್ ಎಡಿಟಿಂಗ್ ಸಾಫ್ಟ್ವೇರ್‌ನಲ್ಲಿ ನಿಧಾನವಾಗಿ ಕೇಳಿಸಿದಾಗ ಅದು ಹಿಂದೂಸ್ತಾನ್ ಜಿಂದಾಬಾದ್ ಮತ್ತು ಖಾಸಿಫ್ ಸಾಬ್ ಜಿಂದಾಬಾದ್ ಎಂಬ ಘೋಷಣೆಗಳು ಮೊಳಗಿರುವುದು ಕೇಳಿಸುತ್ತದೆ.

ಖಾಸಿಫ್ ಸಾಬ್ ಅಂದು ಲಕ್ನೋದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಐಎಂಐಎಂ ಪಕ್ಷದ ಮುಖಂಡರು ಮತ್ತು ಲಕ್ನೋ ಜಿಲ್ಲಾಧ್ಯಕ್ಷರಾಗಿದ್ದಾರೆ.

ಆದರೆ ಅಮಿತ್ ಮಾಳವೀಯ ಜೊತೆಗೆ ರಿಪಬ್ಲಿಕ್ ಟಿವಿ, ಝೀ ನ್ಯೂಸ್ ಕೂಡ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಅದು ಎಂದು ಸುಳ್ಳು ಸುದ್ದಿ ಹರಡಿವೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...