Homeಮುಖಪುಟರಾಜಕೀಯ ತಿರುವು ಪಡೆದ ಪಶ್ಚಿಮ ಬಂಗಾಳದಲ್ಲಿನ ಮೂವರ ಬರ್ಬರ ಹತ್ಯೆ ಪ್ರಕರಣ..!

ರಾಜಕೀಯ ತಿರುವು ಪಡೆದ ಪಶ್ಚಿಮ ಬಂಗಾಳದಲ್ಲಿನ ಮೂವರ ಬರ್ಬರ ಹತ್ಯೆ ಪ್ರಕರಣ..!

- Advertisement -
- Advertisement -

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನ ಮನೆಯೊಂದರಲ್ಲಿ ನಡೆದ ಮೂವರ ಭೀಕರ ಹತ್ಯೆ ಇಡೀ ನಗರವನ್ನೇ ಬೆಚ್ಚಿ ಬೀಳಿಸಿದೆ. ದುಷ್ಕರ್ಮಿಗಳು 8 ವರ್ಷದ ಮಗುವನ್ನು ಮನೆಯಲ್ಲೇ ನೇಣು ಹಾಕಿದ್ದು ಇನ್ನಿಬ್ಬರ ದೇಹಗಳು ರಕ್ತಸಿಕ್ತ ಸ್ಥಿತಿಯಲ್ಲಿ ಮನೆಯಲ್ಲಿ ಬಿದ್ದದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ.

35 ವರ್ಷದ ಶಿಕ್ಷಕ ಬಂಧು ಪ್ರಕಾಶ್ ಪಾಲ್ ಮತ್ತು ಪತ್ನಿ ಬ್ಯೂಟಿ, ಎಂಟು ತಿಂಗಳ ಗರ್ಭಿಣಿ, ಮಗ ಆರ್ಯನನ್ನು ದುಷ್ಕರ್ಮಿಗಳು, ಜಿಯಾಗಂಜ್‌ನ ಮನೆಯಲ್ಲೇ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಎಸ್‌ಎಸ್ ಮತ್ತು ಬಿಜೆಪಿ , ಪ್ರಕಾಶ್ ಪಾಲ್ ಆರ್‌ಎಸ್‌ಎಸ್‌ನ ಸ್ವಯಂಸೇವಕರಾಗಿದ್ದರು ಎಂದು ಹೇಳಿದೆ. ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಟ್ವಿಟ್ಟರ್ ನಲ್ಲಿ ಕೊಲೆಗಡುಕರ ವಿರುದ್ಧ ಕಿಡಿಕಾರಿದ್ದಾರೆ.

ಸಂಬೀತ್ ಪಾತ್ರಾ ಕೊಲೆಗೈದಿರುವ ಭೀಕರ ವಿಡಿಯೋವನ್ನು ಟ್ವೀಟ್ ಮಾಡಿ ಖಂಡಿಸಿದ್ದಾರೆ. ಅಲ್ಲದೇ ಕೃತ್ಯವೆಸಗಿದವರನ್ನು ಸುಮ್ಮನೇ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧವೂ ಹರಿಹಾಯ್ದಿದ್ದಾರೆ. ಇದು ಉದಾರವಾದಿ ಪದವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯೋಜಿಸಿ ಮಾಡಿ ಕೊಲೆ ಮಾಡಲಾಗಿದೆ ಎಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ತ್ರಿಣಮೂಲ ಕಾಂಗ್ರೆಸ್ ಹಿಂಸಾತ್ಮಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಆರ್‌ಎಸ್‌ಎಸ್‌ ಕಾರ್ಯದರ್ಶಿ ಜಿಶ್ನು ಬಸು ಆರೋಪಿಸಿದ್ದಾರೆ.

ವಿಜಯದಶಮಿ ಪೂಜೆಯ ದಿನ ಪ್ರಕಾಶ್ ಪಾಲ್ ಕುಟುಂಬ ಹೊರಗೆ ಬಾರದೇ ಇರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ನೋಡಲು ಮನೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಆರು ವರ್ಷಗಳಿಂದ ಕುಟುಂಬ ಜಿಯಾಗಂಜ್ ನಲ್ಲಿ ವಾಸಿಸುತ್ತಿತ್ತು ಎಂದು ಹೇಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಇದು ಮಹಾತಪ್ಪು.
    ಆ ಸಣ್ಣ ಮಗು ಯಾವುದೇ ತಪ್ಪು ಮಾಡದೇ ಯಾಕೆ ಶಿಕ್ಷೆ.
    ಮಹಿಳೆಯರು ಸುರಕ್ಷಿತರಲ್ಲ ಇವಾಗ ಇಲ್ಲಿ.

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...