ಒಂದು ದೇಶದ ಸಾಮೂಹಿಕ ಅಪರಾಧವನ್ನು ನೆನಪು ಮಾಡುವ ಕಾದಂಬರಿ ‘ದಿ ಟಿನ್ ಡ್ರಮ್’

0

| ತೆಲುಗು ಮೂಲ : ಅಡೇಪು ಲಕ್ಷ್ಮೀಪತಿ
ಕನ್ನಡಕ್ಕೆ : ಕಸ್ತೂರಿ (ಕೃಪೆ: ಆಂಧ್ರಜ್ಯೋತಿ) |

ದಿ ಟಿನ್ ಡ್ರಮ್’ ಜರ್ಮನ್ ಲೇಖಕ ಗುಂಟರ್ ಗ್ರಾಸ್ ಬರೆದ ಕಾದಂಬರಿ. ಎರಡನೇ ಮಹಾಯುದ್ಧ ಮುಕ್ತಾಯವಾಗಿ ಜರ್ಮನಿಯಲ್ಲಿ ನಾಜಿಯಿಜಂ ಕಣ್ಮರೆಯಾದ ಸುಮಾರು 12 ವರ್ಷಗಳ ಬಳಿಕ – ಅಂದರೆ 1959ರಲ್ಲಿ ಪ್ರಕಟಗೊಂಡಿತು. ಜರ್ಮನ್ ಸಾಹಿತ್ಯದಲ್ಲಿ ಅತ್ಯುತ್ತಮ ಸ್ಥಾನ ಪಡೆದಿರುವ ಈ ಕಾದಂಬರಿ ಜಗತ್ತಿನ ಗಮನ ಸೆಳೆದಿದೆ. ಅಂದಿನ ಐತಿಹಾಸಿಕ ಘಟನೆಗಳನ್ನು ಇಲ್ಲಿನ ಪಾತ್ರಗಳ ಮೂಲಕ ಕಾದಂಬರಿಕಾರ ಹೇಳುತ್ತಾ ಹೋಗಿದ್ದಾನೆ . ಈ ಕಾದಂಬರಿ ತನ್ನ ಸೃಜನಶೀಲವಾದ ನಿರೂಪಣೆಯಿಂದ ಒಂದು ಜನಾಂಗದ ಕಣ್ಣು ತೆರೆಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕ್ಲಾಸಿಕ್ ಅಂದರೇನು? ಎಂತಹ ರಚನೆಯನ್ನು ಕ್ಲಾಸಿಕ್ ಅನ್ನಬಹುದು ? ಮತ್ತೆ ಮತ್ತೆ ಓದಬೇಕನ್ನಿಸುವುದು, ವರ್ಷಗಳ ಬಳಿಕ ಓದಿದರೂ ಯಾವುದೋ ಹೊಸತನ – ಭಿನ್ನತೆ ಕಾಣಿಸುವುದು, ಗಾಢವಾದ ಜೀವನ ತಾತ್ವಿಕತೆಯನ್ನು ಸಂಗ್ರಹಿಸಿ ಇಟ್ಟುಕೊಂಡಿರುವುದು, ನಮ್ಮ ಭಾವನಾ ಜಗತ್ತನ್ನು ಅಪಾರವಾಗಿ ಪ್ರಭಾವಿತಗೊಳಿಸಿ ವೈಯಕ್ತಿಕ ಸಾಮೂಹಿಕ ಚೈತನ್ಯದ ಮೇಲೆ ಅಳಿಸದ ಮುದ್ರೆ ಹಾಕುವುದು ‘ಕ್ಲಾಸಿಕ್’ ಎಂದು ಸ್ಥೂಲವಾಗಿ ಹೇಳಬಹುದು ಎಂದು ನಾವು ಸೂತ್ರೀಕರಿಸುತ್ತೇವೆ.

ಆದರೆ ನೊಬೆಲ್ ವಿಜೇತ ಇಟಾಲೋ ಕಾಲ್ವಿನೋ ಒಟ್ಟು 14 ಪ್ರಮಾಣಗಳು (criteria) ಇರುತ್ತವೆ ಎಂದು ಹೇಳುತ್ತಾನೆ. ಇದರೊಳಗಿಂದ ನನ್ನ ದೃಷ್ಟಿಯಲ್ಲಿ ಸೆಳೆದ, ನಮ್ಮನ್ನು ಆಶ್ಚರ್ಯ ಚಕಿತರನ್ನಾಗಿ ಮಾಡುವ ಎರಡು ಅಂಶಗಳನ್ನು ಪ್ರಸ್ತಾಪಿಸಿರುವೆ.
Classic is a work which constantly generates a pulvisecular cloud of critical discourse around it , but which always the paties off  (ತನ್ನ ಸುತ್ತಲೂ ವಿಮರ್ಶೆಗಳಿಂದ ಕೂಡಿದ ಒಂದು ವಿವಾದಾಸ್ಪದ ವಾತಾವರಣವನ್ನು ನಿರಂತರ ಸೃಷ್ಟಿಸಿಕೊಳ್ಳುತ್ತಲೇ, ಆ ವಿಮರ್ಶೆಯನ್ನು ತಳ್ಳಿ ಹಾಕುವ ಶಕ್ತಿಯುಳ್ಳ ರಚನೆ ಕ್ಲಾಸಿಕ್)
Classic is work which persists as a background noise even when a present that is totally in compatable with it holds away. (ತನ್ನೊಂದಿಗೆ ಯಾವುದೇ ರೀತಿ ಹೊಂದಿಕೊಳ್ಳದ ವರ್ತಮಾನ ಆಡಳಿತ ಮಾಡುತ್ತಿದ್ದರೂ ಹಿನ್ನೆಲೆ ಧ್ವನಿಯಂತೆ ತಳ ಊರಿರುವ ರಚನೆ ಕ್ಲಾಸಿಕ್)
ಪೋಸ್ಟ್ ಮಾಡರನ್ ವರ್ಗಕ್ಕೆ ಸೇರಿದ ‘ದಿ ಟನ್ ಡ್ರಮ್’ ಈcriteria ಗಳಿಂದಲೇ ಕ್ಲಾಸಿಕ್ ಆಗಿದೆ. ಜರ್ಮನ್ ಲೇಖಕ ಗುಂಟರ್ ಗ್ರಾಸ್ ಬರೆದ ಈ ಕಾದಂಬರಿ ಎರಡನೇ ಮಹಾಯುದ್ಧ ಮುಕ್ತಾಯವಾಗಿ ಜರ್ಮನಿಯಲ್ಲಿ ನಾಜಿಯಿಸಂ ಕಣ್ಮರೆಯಾದ ಸುಮಾರು 12 ವರ್ಷಗಳ ಬಳಿಕ – ಅಂದರೆ 1959 ರಲ್ಲಿ ಪ್ರಕಟಗೊಂಡಿತು. ಇದಕ್ಕೆ ಸೀಕ್ವೆಲ್ ಆಗಿ ‘cat and mouse(1961) ‘Dog year’  (1963) ಬಂದವು. ಇವನ್ನು ‘ಡಾಂಜಿಗ್ ಟ್ರಯಾಲಜಿ’ ಎನ್ನುತ್ತಾರೆ. ‘ಟಿನ್ ಡ್ರಮ್’ ನಲ್ಲಿ. ಮ್ಯೂಸಿಕಲ್ ರಿಯಾಲಿಸಂನ ಹೋಲುವ ಯಾಂಟಿ – ರಿಯಲಿಸ್ಟ್ ಕಥನ ಕಂಡುಬರುತ್ತದೆ. ಇದು ನಿಜಕ್ಕೂ ಅನ್ಯಾರ್ಥ ಪ್ರತಿಪಾದಕ ಕಥನ ಅನ್ನತಕ್ಕ ಸಂಕೀರ್ಣವಾದ, ಸಂಕೇತಾತ್ಮಕವಾದ ವ್ಯಂಗ್ಯ ಮೆಟಾ ಫೊರಿಕ್ ಶೈಲಿಯಲ್ಲಿ ಸಾಗುತ್ತದೆ.

ಈ ಕಾದಂಬರಿ ಕ್ರಯದಲ್ಲಿನ ಮುಖ್ಯ ಪಾತ್ರ ಆಸ್ಕರ್ ಮಾಜೆರತ್ ಒಂದು ಹುಚ್ಚಾಸ್ಪತ್ರೆಯ ಬೆಡ್‍ನಿಂದ ತನ್ನ ಆತ್ಮಕಥೆಯನ್ನು ವಿವರಿಸುತ್ತಾ ಹೋಗುತ್ತಾನೆ. ಈತ ಅವಿಶ್ವಸನೀಯ (unreliable narrator) s ಮೂವತ್ತು ವರ್ಷ ವಯಸ್ಸಿನ ಕುಬ್ಜ. ಅವನು ಬಯಸಿದರೆ 13 ವರ್ಷ 3.25 ಅಡಿ ಎತ್ತರದ ಹುಡುಗನಾಗಿ ಇದ್ದು ಹೋಗಬಲ್ಲ. ಮೂವತ್ತು ವಯಸ್ಸಿರುವ ನಾಲ್ಕುವರೆ ಅಡಿಗಳ ವ್ಯಕ್ತಿಯಾಗಿ ಶಾರೀರಿಕವಾಗಿ, ಮಾನಸಿಕವಾಗಿ ಬೆಳೆದುಬಿಡಬಲ್ಲ.

ಈತನ ಕೈಲಿ ಸದಾ ಒಂದು ಟಿನ್ ಡ್ರಮ್ ಇರುತ್ತದೆ. ವಿಶೇಷವಾದ ನೆನಪುಗಳನ್ನು ತಟ್ಟಿ ಎಬ್ಬಿಸುವುದಕ್ಕೆ ಆ ಡ್ರಮ್ ಬಾರಿಸುತ್ತಾನೆ. ತನಗೆ ಇಷ್ಟವಾಗದ, ತನಗೆ ಕೋಪ ಉಂಟಾಗಿಸುವ ಕೆಲಸ ಯಾರಾದರೂ ಮಾಡಿದರೆ ಗಂಟಲು ಅರಿಯುವಂತೆ ಅರಚಬಲ್ಲ ಆ ಕೀರಲು ಧ್ವನಿಗೆ ಸುತ್ತಮುತ್ತಲ ಕಟ್ಟಡಗಳ ಗಾಜುಗಳು ಛಳ್ಳನೆ ಒಡೆದುಹೋಗುತ್ತವೆ. ಅಸಾಮಾನ್ಯ ಪಾತ್ರಗಳಿಂದ ಕೂಡಿದ ಈ ಸಂಕೀರ್ಣ ಕಾದಂಬರಿತ್ರಯದಲ್ಲಿನ ಕಥಾಕಾಲ ಮೊದಲನೇ ಮಹಾಯುದ್ಧ, ನಾಝಿಯಿಸಂ ಬೆಳವಣಿಗೆ, ಹಿಟ್ಲರ್ ಅಧಿಕಾರೋಹಣ , ಹಾಲಂಡ್ ಮೇಲೆ ದುರಾಕ್ರಮಣ, ಯುದ್ದಾನಂತರ ಜರ್ಮನಿ ಪುನರ್ ನಿರ್ಮಾಣ … ಅಂದರೆ ಅರ್ಧ ಶತಮಾನ ಕಾಲದ ಜರ್ಮನಿ ಇತಿಹಾಸವನ್ನು ಸ್ಪರ್ಶಿಸುತ್ತದೆ

ಯಾವುದೇ ರೀತಿಯ ನಾಚಿಕೆ ಹೇಸಿಗೆ ಇಲ್ಲದ, ನೀತಿನಿಯಮಗಳ ಪರಿವೆ ಇಲ್ಲದ ವ್ಯಕ್ತಿ ಕನ್ಪೆಷನ್‍ನಂತೆ ಸಾಗುವ ಕಾದಂಬರಿಯ ಕಥನದಲ್ಲಿ ಬಹಳ ಕಡೆ ಅಬ್ಸರ್‍ವಿಸ್ಟ್ ಶೈಲಿ, ಪಾಂಟಾಸ್ಟಿಕ್ ಘಟನೆಗಳು, ಅತಿರೇಕವಾಗಿ ತೋರುವ ಸನ್ನವೇಶಗಳು (ಆಸ್ಕರ್ ತಾಯಿ ಆಗ್ನೇಸ್ ಅತಿಯಾಗಿ ಹಸಿ ಮೀನುಗಳ ತಿಂದು ಸತ್ತು ಹೋಗುವುದು, ಆಸ್ಕರ್ ಕುಟುಂಬಿಕರು ಕತ್ತರಿಸಿದ ಒಂದು ಕುದುರೆಯ ತಲೆಯನ್ನು ಗಾಳವಾಗಿ ಹಾಕಿ ಈಲ್ ಮೀನುಗಳನ್ನಿಡಿಯುವದು ಜೊತೆಯ ಮಕ್ಕಳ ಪಿಕ್ನಿಕ್ ಅಡುಗೆಯಲ್ಲಿ ಉಚ್ಚೆ ಹೊಯ್ಯುವುದು, ಆಗ್ನೆಸ್ ಇಬ್ಬರು ಗಂಡಂದಿರೊಂದಿಗೆ ಪ್ರೀತಿಸುವುದು , ನ್ಯೂಡ್ ಪೋಟೊ ಗ್ರಫಿಗೆ ತಯಾರಾಗುವುದು, ಆಸ್ಕರ್ ತನ್ನ ಮಲತಾಯನ್ನು ಪ್ರೀತಿಸುವುದು. ಪೋಸ್ಟ್ ಫೀಸ್ ಮೇಲೆ ದಾಳಿ ಸಮಯದಲ್ಲಿ ಅಲ್‍ಫ್ರೆಡ್ ಅನೂಹ್ಯವಾಗಿ ವಂಚನೆಗೆ ಗುರಿಯಾಗುವುದು… ಮೊದಲಾದವು ದರ್ಶನ ಕೊಟ್ಟರೂ ಹಸಿ ವಾಸ್ತವಿಕ ಘಟನೆಗಳು, ತಕ್ಷಣ ಹೋಲಿಸಿಕೊಳ್ಳುವಂಥ ಚಾರಿತ್ರಿಕ ಘಟನೆಗಳು – ಮೇಲೆ ಅಸಂಬದ್ದವಾಗಿ ಕಾಣಿಸಿದರೂ ತಾರ್ಕಿಕ ದೃಷ್ಟಿಗೆ ಸಾಕಾರವಾದವುಗಳಾಗಿ ಕಾಣಿಸುವ ದೃಶ್ಯಗಳು, ವೃತ್ತಾಂತಗಳನ್ನು ಅಕ್ಕ ಪಕ್ಕದಲ್ಲೇ ಅಳವಡಿಸಿರುವ ಕಾರಣದಿಂದ ಒಂದು ವಿಶೇಷ ತಂತ್ರದಿಂದ ಕೂಡಿದ ಈ ಕಾದಂಬರಿಗಳ ಸಾರಾಂಶ, ನಿರ್ಮಾಣ ಓದುಗರನ್ನು ಬೆರಗಾಗಿಸುತ್ತದೆ.

ಎರಡನೇ ಮಹಾಯುದ್ಧ ಅದರ ಪರಿಣಾಮವಾಗಿ ಲಕ್ಷಾಂತರ ಮಂದಿಯ ಸಾವಿಗೆ ಅದರ ಪರಿಣಾಮವಾಗಿ ಮುಂದುವರಿದ ಅಶ್ವಿಡ್ಜ್, ಡಕಾವು, ತ್ರೆಬ್ಲಿಂಕಾ ಕ್ಯಾಂಪ್‍ಗಳಲ್ಲಿನ ನರಮೇಧಕ್ಕೆ ಜರ್ಮನಿಯ ಜಾತ್ಯಾಹಂಕಾರ , ಸರ್ವಾಧಿಕಾರಿ ಹಿಟ್ಲರ್‍ನ ದುರಾಕ್ರಮಣವಾದ ಕಾರಣ ಎಂದು ವಿಶ್ವಕ್ಕೆ ಗೊತ್ತು.The dairias of anne frank ; this way for meaning : The last of the just ಮತ್ತಿತರ ಹೊಲೊ ಕಾಸ್ಟ್ ಸಾಹಿತ್ಯಗಳಲ್ಲಿ ನಾಜಿಗಳ ಅಮಾನುಷತೆ, ಎಸ್ ಎಸ್ ಸೈನಿಕರ ಕ್ರೌರ್ಯ, ಕ್ರಿಯೆಟೋರಿಯಂನಲ್ಲಿ, ಗ್ಯಾಸ್ ಚೇಂಬರ್‍ಗಳಲ್ಲಿ ಖೈದಿಗಳ ಸಜೀವದಹನಗಳಿಗೆ ಸಂಬಂಧಿಸಿದ ಅನೇಕ ಸಾರಾಂಶಗಳು ಕಣ್ಗಳಿಗೆ ಕಟ್ಟಿದಂತೆ ಕಾಣಿಸುತ್ತವೆ.

ಡೆತ್ ಕ್ಯಾಂಪ್‍ನಲ್ಲಿನ ಅಧೋ ಮಾನವ ಪರಿಸರದಲ್ಲಿ ಹಸಿವಿನಿಂದ ತತ್ತರಿಸುವ ಖೈದಿಗಳು ನರಮಾಂಸ ಭಕ್ಷಕಕ್ಕೆ ಸಹ ಮುಂದಾದರು ಎಂಬ ವೃತ್ತಾಂತಗಳ ಓದಿದರೆ ನಮ್ಮ ಮೈ ನಡುಗುತ್ತದೆ. ಕ್ಯಾಂಪ್‍ನಲ್ಲಿನ ಹಸಿದವರು ಸುಟ್ಟು ಕೊಲ್ಲಲ್ಪಟ್ಟ ರಷ್ಯನ್ ಯುದ್ದದ ಖೈದಿಗಳ ಶವಗಳ ಮೇಲೆ ಮುಗಿಬಿದ್ದು ಮೆದುಳನ್ನು ತಿಂದ ಒಂದು ಘಟ್ಟವನ್ನು ‘supper’ ಎಂಬ ಕ್ವಾಜಿ – ಕಥೆಯಲ್ಲಿ ತಾಡುಜ್ ಬೋರೋವಸ್ಕಿ ವಿವರಿಸುತ್ತಾರೆ. ಡಕಾವು ಕ್ಯಾಂಪೇನ್ ಕೊನೆಯ ದಿನಗಳಲ್ಲಿ ಅರ್ಧ ಬೆಂದ ಮನುಷ್ಯನ ಮಾಂಸದ ತುಂಡನ್ನು ಒಂದು ರುಂಡದಲ್ಲಿ ಎಸ್.ಎಸ್. ಸೈನಿಕರು ಕೊಂಡುಕೊಂಡ ವಿಷಯನ್ನು ‘man s search for meaning’ ನಲ್ಲಿ ವಿಕ್ಟರ್ ಇ.ಫ್ರಾಂಕ್ಲೀನ್ ಪ್ರಸ್ತಾಪಿಸಿದ್ದಾನೆ.

20ನೇ ಶತಮಾನದ ಮೊದಲರ್ಧ ಭಾಗದ ಕೊನೆಯಲ್ಲಿ ನಾಜಿಗಳು ಜರುಗಿಸಿದ ನರಮೇಧ – ಹೊಲೊಕಾಸ್ಟ್ – ಮಾನವೇತಿಹಾಸದಲ್ಲೇ ಮಾಸದ ಕಳಂಕ – ಎಷ್ಟೋ ತತ್ವಜ್ಞಾನಿಗಳಿಗೆ. ದೊಡ್ಡ ಲೇಖಕರಿಗೆ, ಪ್ರಸಿದ್ಧ , ತಂತ್ರಜ್ಞಾನರಂಗಗಳಲ್ಲಿ ಪ್ರಗತಿಗಾಮಿಯಾದ ಜರ್ಮನಿ ಏಕೆ ಹೀಗೆ ವರ್ತಿಸಿತು? ನಂತರದ ಕಾಲದಲ್ಲಿ ಲೇಖಕರನ್ನು , ಕಲಾವಿದರನ್ನು ಕಾಡಿದ ಪ್ರಶ್ನೆ ಇದು.

ಜರ್ಮನಿ ಪ್ರಜೆಗಳ ಅಪರಾಧವನ್ನು ಎತ್ತಿತೋರಿ, ಅವರ ಅಂತರಾತ್ಮವನ್ನು ತಟ್ಟಿ ಎಬ್ಬಿಸಿ ವಿಶ್ವದ ಪ್ರಜೆಗಳ ಜವಾಬ್ದಾರಿಯನ್ನು ನೆನಪು ಮಾಡುವ ಉದಾತ್ತವಾದ ಕಥಾಂಶವನ್ನು ಗ್ರಾಸ್ ಈ ಕಾದಂಬರಿಯಲ್ಲಿ ಎತ್ತಿಕೊಂಡಿದ್ದಾನೆ. ದುಷ್ಟತನವನ್ನು ಒಂದು ವ್ಯಕ್ತಿಗೋ ಒಂದು ದೇಶಕ್ಕೋ ಆರೋಪಿಸುವುದಕ್ಕೆ ಸಾಧ್ಯವಿಲ್ಲ ನಿರ್ದಿಷ್ಟ ಸಮಯದಲ್ಲಿ ಸಾಮಾನ್ಯ ಜನರು ಸಹಾ ಒಳತಿಗೆ ಇಲ್ಲವೇ ಕೆಡುಕಿಗೆ ಮುಂದಾಗಬಲ್ಲರು.
ಸಾವಿರಾರು ಕ್ಯಾಂಪ್ ಖೈದಿಗಳನ್ನು ಓಪನ್ ವ್ಯಾಗನ್‍ಗಳ ಒಂದು ಉದ್ದನೆಯ ರೈಲುಗಾಡಿಯಲ್ಲಿ ಕುಕ್ಕಿ ಹಗಲಿರುಳು ಮಂಜು ಸುರಿಯುತ್ತಿದ್ದ ಕಾಲದಲ್ಲಿ ಪೋಲಂಡ್ – ಜರ್ಮನಿ ಗಡಿಗಳ ಗುಂಟಾ ರವಾನೆ ಮಾಡುತ್ತಿರುವಾಗ, ಒಂದು ಬೆಳಗಿನ ಜಾವದಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಜರ್ಮನ್ ಕಾರ್ಮಿಕರು ಟ್ರಾಕ್ ಪಕ್ಕದಲ್ಲಿ ನಿಂತು, ವ್ಯಾಗನ್‍ನಲ್ಲಿನ ‘ಚರ್ಮ ಹೊದಿಸಿದ ಅಸ್ತಿ ಪಂಜರಗಳನ್ನು’ ಆಶ್ಚರ್ಯದಿಂದ ನೋಡುವ ರು. ಆ ನತದೃಷ್ಟ ಮನುಷ್ಯರತ್ತ ರೊಟ್ಟಿ ತುಂಡುಗಳ ಎಸೆಯುತ್ತಾರೆ. ಖೈದಿಗಳು ಆ ರೊಟ್ಟಿ ತುಂಡುಗಳಿಗೋಸ್ಕರ ಭಯಂಕರವಾಗಿ ಬಡಿದಾಡಿಕೊಳ್ಳುತ್ತಾ ಒಬ್ಬರನ್ನೊಬ್ಬರು ಕೊಂದುಕೊಳ್ಳುತ್ತಿದ್ದರೆ, ಸತ್ತವರನ್ನು ಗಾರ್ಡ್‍ಗಳು
ನಿರ್ದಯವಾಗಿ ವ್ಯಾಗನ್‍ಗಳಿಂದ ಕೆಳಗೆಸೆಯುತ್ತಿದ್ದರೆ ಜರ್ಮನ್ ಪ್ರಜೆಗಳು ತಮಾಷೆ ನೋಡುತ್ತಾರೆ. ಈ ಘಟ್ಟವನ್ನು ಎಲಿವಿಸೆಲ್ ತನ್ನ ‘Night’ನಲ್ಲಿ ವಿವರಿಸಿದ್ದಾನೆ.

ಡೆತ್ ಕ್ಯಾಂಪ್‍ಗಳಲ್ಲಿನ ನರಮೇಧವನ್ನು ಜಾರಿಮಾಡದ ನಾಜಿ ಅಧಿಕಾರಿ ಅಡಾಲ್ಫ್ ಐಷ್ಮಾನ್‍ನನ್ನು 1961ರಲ್ಲಿ ಜೆರೂಸಲೇಂನಲ್ಲಿ ವಿಚಾರಣೆ ಮಾಡಿ ನ್ಯೂರಂಬರ್ಗ್ ಕಾನೂನು ಪ್ರಕಾರ ಗಲ್ಲಿಗೇರಿಸಿದರು. “ಸಹಮಾನವರತ್ತ ಅಷ್ಟು ದಾರುಣವಾಗಿ ಕ್ರೂರವಾಗಿ ವ್ಯವಹರಿಸುವಾಗ ನಿನ್ನ ಮನಸ್ಸಿಗೆ ಏನೂ ಬಾಧೆ ಅನಿಸಲಿಲ್ವಾ?” ಎಂದು ಪ್ರಾಸಿಕ್ಯೂಷನ್ ಪರವಾಗಿ ಪ್ರಶ್ನಿಸಿದಾಗ “ನಾನು ಕಾನೂನಿಗೆ ನಿಷ್ಠನಾದ ಪ್ರಜೆ. ನನ್ನ ಕರ್ತವ್ಯ ನಾನು ನಿರ್ವಹಿಸಿಸಿದೆ” ಎಂದು ಉತ್ತರ ನೀಡಿ, ಕೌಂಟ್ ಫಿಲಾಸಫಿಯನ್ನು ಉದ್ಧರಿಸಿದ ಎಂದು ರೆಡ್‍ವೈನ್ ಬಾಟಲ್ ಅರ್ಧ ಕುಡಿದು ಧೈರ್ಯದಿಂದ ನಡೆದು ಹುರಿಹಗ್ಗ ತಾನೇ ಸ್ವತಃ ಕೊರಳಿಗೆ ಹಾಕಿಕೊಂಡು ಗಲ್ಲು ಮತ್ಯಾರಿಗೋ ಹಾಕುತ್ತಿದ್ದ ಭ್ರಮೆಯಲ್ಲಿ ಕಾಣಿಸಿದನು ಎಂದು ಜರ್ನಲಿಸ್ಟ್ ಹನ್ನಾ ಆರೆಂಟ್ ತನ್ನ ವರದಿ ‘eichman in jerusalem’ನಲ್ಲಿ ಹೇಳಿದ್ದಾಳೆ. ಕಾಫ್ಕಾ ಕಥೆ ‘‘In the penal colony  -1922’ನಲ್ಲಿನ ಮುಖ್ಯ ಪಾತ್ರ ಶಿಕ್ಷಿಸುವ ಅಧಿಕಾರವೇ ತನ್ನ ಉಸಿರು ಎಂದು ಭಾವಿಸಿದ ಒಬ್ಬ ಅಬ್ಸೆಟಿವ್ ಅಧಿಕಾರಿಗೆ ಅಡಾಲ್ಫ್ ಐಶ್ಮಾನ್‍ಗೆ ಹೋಲಿಕೆಗಳು ಕಾಣಿಸುತ್ತವೆ. ನಾಜಿ ಸಿದ್ಧಾಂತಗಳು, ಜಾತ್ಯಹಂಕಾರ ಮಿದುಳುಗಳಲ್ಲಿ ಪೂರ್ತಿ ಇಂಗಿ ಹೋಗಿಸಲ್ಪಟ್ಟ ಜರ್ಮನ್ ಪ್ರಜೆಗಳು ಎಷ್ಟು ಅಮಾನವೀಯ ವೈಖರಿ, ರೋಗಗ್ರಸ್ತ ಮಾನಸಿಕತೆ ಪ್ರದರ್ಶಿಸಿದರೆಂದು ಈ ದುಷ್ಟಾಂತಗಳು ತಿಳಿಸುತ್ತವೆ.

Induvidual guilt, Responsibility and blame – 6 ಮೂರು ಅಂಶಗಳಿಂದ ಮಿಶ್ರಣಗೊಂಡಿರುವ ಕಾದಂಬರಿ ವೃತ್ತಾಂತವನ್ನು ನಿರ್ಮಿಸಿದನು ಗುಂಟರ್‍ಗ್ರಾಸ್. ಇವನ್ನು ವಿವಿಧ ರೀತಿಗಳಲ್ಲಿ ನೇರವಾಗಿ ಅಲ್ಲದೆ ಹೋಲಿಕೆಗಳ ಮೂಲಕ ಕಥನದಲ್ಲಿ ವಿವರಿಸುವುದು ನಡೆಯಿತು. ಜರ್ಮನಿ ನಾಜಿ ಗತವನ್ನು ಕುರಿತು ಆಸ್ಕರ್ ಮೂಲಕ ಓದುಗನಿಗೆ ಸ್ಪಷ್ಟವಾಗಿ ಹೇಳದೇ, ಹಲವು ಚಾರಿತ್ರಿಕ ಘಟನೆಗಳನ್ನು, ಪ್ರತಿಬಿಂಬದಂಥ ಪಾತ್ರಗಳನ್ನು ಸನ್ನಿವೇಶಗಳನ್ನು ಪ್ರವೇಶಗೊಳಿಸಿದ್ದಾನೆ. ಅನೇಕ ಸಂದರ್ಭಗಳಲ್ಲಿ ತನ್ನನ್ನು ಜೀಸಸ್‍ರೊಂದಿಗೂ, ಸಾತಾನ್‍ನೊಂದಿಗೂ ಹೋಲಿಸಿಕೊಳ್ಳುತ್ತಾನೆ. ಈತನಿಗೆ ತಾತ್ವಿಕ ಸ್ಪೂರ್ತಿ ಪ್ರದಾತರು ಜರ್ಮನಿಯ ಜ್ಞಾನೋದಯ ದತಾಮಹನಾಗಿ ವ್ಯವಹರಿಸಿದ ಗೆಢೆ, ರಷ್ಯಾದ ಕೊನೆಯತ್ಸಾರ್ ಚಕ್ರವರ್ತಿ ಅವಧಿಯಲ್ಲಿ ಮಿಂಚಿ ಮರೆಯಾದ ನಾಟಿವೈದ್ಯ ರಾಸ್ಪುಟಿನ್.

ತನಗೆ ಇಬ್ಬರು ತಂದೆಯಂದಿರು ಎಂದು ಆಸ್ಕರ್ ಭಾವಿಸಿಕೊಳ್ಳುತ್ತಾನೆ. ಘನತೆಯಿಂದ ಕಂಡುಬರುವ ವೀರಸೈನಿಕನಾದ ಆಲ್ಫ್ರೆಡ್ ಒಬ್ಬ, ಪೀಚಾಗಿ ಕಂಡುಬರುವ, ಗನ್ ಸಹಾ ಉಡಾಯಿಸಲಾಗದ ಪುಕ್ಕಲ ಜಾನ್ ಮತ್ತೊಬ್ಬ ಕಾದಂಬರಿಯಲ್ಲಿನ ಚಾರಿತ್ರಿಕ ಘಟನೆಗಳನ್ನು ನೈತಿಕ ಕೋನದಲ್ಲಿ ಓದುಗರು ಅಂದಾಜು ಹಾಕುವುದಕ್ಕೆ ಗ್ರಾಸ್ ಉದ್ದೇಶಪೂರ್ವಕವಾಗಿ ದ್ವಂದ್ವಗಳನ್ನು ಸೃಷ್ಠಿಸಿದ್ದಾನೆ. ಕಾದಂಬರಿಯ ಸಂವಿಧಾನದ ತಂತ್ರಗಳನ್ನೆಲ್ಲ ಕೂಡಾ ಲೇಖಕ ಒಂದು ಮುಖ್ಯ ಲಾಭವನ್ನು ಆಶಿಸಿ ಮಾಡಿರುವುದು ನಮಗೆ ಅರ್ಥವಾಗುತ್ತದೆ.
ಜರ್ಮನ್ ನಾಜಿ ರಾಕ್ಷಸ ಪರ್ವಕ್ಕೆ ಜವಾಬ್ದಾರರು ಎಂದು ಕೆಲವು ಮಂದಿ ‘ದುಷ್ಟರ ಗುಂಪಿನ’ ಮೇಲೆ ಅಪರಾಧವನ್ನು ಹೊರಿಸುವುದು, ತಾವು ಅಡ್ಡದಾರಿ ಹಿಡಿಸಲ್ಪಟ್ಟೆವು ಎಂದು ಜರ್ಮನ್ನರು ನಟನೆ ಪ್ರದರ್ಶಿಸುವುದು 1930 ರಿಂದ 1940ರಲ್ಲಿ ಜರುಗಿದ ಅತ್ಯಾಚಾರ ಪರ್ವಕ್ಕೆ, ನರಮೇಧಕ್ಕೆ ಸಮಸ್ತ ಜರ್ಮನ್ನರು, ಸಮಸ್ತ ಯುರೋಪ್ ಪ್ರಜೆಗಳು ಸಹಾ ಜವಾಬ್ದಾರರೇ ಎಂಬ ಸತ್ಯವನ್ನು ತಿರಸ್ಕರಿಸುವುದೇ ಆಗುತ್ತದೆ ಎಂದು ಗ್ರಾಸ್ ಹೇಳಬಯಸುತ್ತಾನೆ.

ವಿಚಾರಣೆ ಎದುರಿಸುತ್ತಿದ್ದ ಮುಖ್ಯ ನಾಜಿ ಅಧಿಕಾರಿಗಳಲ್ಲಷ್ಟೇ ಅಲ್ಲ. ಪ್ರತಿ ಮನುಷ್ಯನಲ್ಲಿಯೂ ಕೇಡಿನಬೀಜ ಇರುತ್ತದೆ. ನಾಚಿಕೆಯಿಂದ ತಲೆತಗ್ಗಿಸಬೇಕಾದ ಕೃತ್ಯಗಳ ಮಾಡಿದ್ದೇವೆ ಎಂದು ಪ್ರಜೆಗಳೆಲ್ಲರೂ ಒಪ್ಪಿಕೊಳ್ಳಲೇಬೇಕು. ನಾಜಿಗಳ ದುಷ್ಕøತ್ಯಗಳಿಗೆ ಸಾಮೂಹಿಕವಾಗಿ ಎಲ್ಲರೂ ಜವಾಬ್ದಾರಿ ಹಂಚಿಕೊಳ್ಳಲೇಬೇಕು ಎಂದು ತನ್ನ ಕಾದಂಬರಿಗಳ ಮೂಲಕ ಹೇಳುವುದು ಸಹಾ ಗ್ರಾಸ್‍ನ ಉದ್ದೇಶ.
ಈ ಕಾದಂಬರಿಗಳು ಅನೈತಿಕತೆಯನ್ನು, ಅರಾಜಕತೆಯನ್ನು ಉತ್ತೇಜಿಸುತ್ತದೆ ಎಂದೂ ದೈವ ದೂಷಣೆಗೆ ತೊಡಗಿವೆ ಎಂದೂ ಟೀಕಾಕಾರರು ದಾಳಿಗೆ ಇಳಿದರು. ತುಂಬಾ ಮಂದಿಗೆ ಕಹಿಸತ್ಯಗಳನ್ನು ನುಂಗಲಾಗದು. ‘ದಿ ಟಿನ್ ಡ್ರಮ್’ ಕಾದಂಬರಿ ಕೆಲಕಾಲಾವಧಿಗೆ ವಿಷೇಧಿಸಲ್ಪಟ್ಟಿತು. ನಂತರದ ಕಾಲದಲ್ಲಿ ವಿಶೇಷ ಪಾಠಕಾದರಣೆ ಹೊಂದಿತು. ಲೇಖಕನಿಗೆ ನೊಬೆಲ್ ಬಹುಮಾನ ತಂದುಕೊಟ್ಟಿತು.

LEAVE A REPLY

Please enter your comment!
Please enter your name here