Homeಮುಖಪುಟನೋಟ್ ಬ್ಯಾನ್‌ನಿಂದ ದೇಶದ ಆರ್ಥಿಕತೆಯೇ ಬುಡಮೇಲಾಗಿದೆ: ರಾಹುಲ್ ಗಾಂಧಿ

ನೋಟ್ ಬ್ಯಾನ್‌ನಿಂದ ದೇಶದ ಆರ್ಥಿಕತೆಯೇ ಬುಡಮೇಲಾಗಿದೆ: ರಾಹುಲ್ ಗಾಂಧಿ

- Advertisement -
- Advertisement -

ನೋಟು ನಿಷೇಧಕ್ಕೆ ಈಗ ೩ ವರ್ಷ ಸಂದಿದೆ. ನವೆಂಬರ್ ೮ರಂದು ರಾತ್ರೋರಾತ್ರಿ ಬಿಜೆಪಿ ನೋಟು ನಿಷೇಧ ಮಾಡಿತ್ತು. ಭಾರತದ ಇವತ್ತಿನ ಆರ್ಥಿಕ ದುಸ್ಥಿತಿಗೆ ಕಾರಣಗಳಲ್ಲಿ ಒಂದೆನ್ನಲಾಗುತ್ತಿರುವ ಆ ನೋಟು ಬ್ಯಾನಿಗೆ ಇಂದು ಮೂರು ವರ್ಷ. ನರೇಂದ್ರ ಮೋದಿ ಸರ್ಕಾರ ಜಾರಿಗೆ ಬಂದ ನಂತರ ಕೈಗೊಂಡ ನೋಟ್ ಬ್ಯಾನ್ ಕ್ರಮದಿಂದ ಶೇ. ೮೬ ರಷ್ಟು ಕರೆನ್ಸಿ ಅಪಮೌಲ್ಯಕ್ಕೀಡಾಯಿತು. ನೋಟ್ ಬ್ಯಾನ್ ಕ್ರಮವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಯೋತ್ಪಾದಕರ ದಾಳಿಗೆ ಹೋಲಿಸಿ, ಟೀಕಿಸಿದ್ದಾರೆ.

’ಸಣ್ಣ ಸಣ್ಣ ಉದ್ಯಮಗಳು ನೋಟ್ ಬ್ಯಾನ್ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋದವು. ಅನೇಕ ಜನರು ಲಾಭದಾಯಕ ಉದ್ಯಮಗಳನ್ನು ಕಳೆದುಕೊಂಡರು. ಲಕ್ಷಾನುಗಟ್ಟಲೇ ಯುವಕರು ಕೆಲಸ, ನೌಕರಿಯಿಲ್ಲದೇ ಅಲೆಯುವಂತಾಗಿದೆ.’ ನರೇಂದ್ರ ಮೋದಿ ಸರ್ಕಾರದ ನೋಟು ನಿಷೇಧ ಸಾಧನೆಯಿಂದ ಭಾರತದ ಆರ್ಥಿಕತೆ ತಲೆಕೆಳಗಾಗಿದೆ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿ, ನೋಟ್ ಬ್ಯಾನ್‌ನಿಂದ ದೇಶಕ್ಕೆ ವಿಪತ್ತು ಉಂಟಾಗಿದೆ. ಭಾರತದ ಆರ್ಥಿಕತೆ ನಾಶವಾಗಿದೆ. ಈಗ ತುಘಲಕ್ ಆಡಳಿತದಿಂದ ಆದ ನಷ್ಟವನ್ನು ಯಾರು ಹೊರಲಿದ್ದಾರೆ ಎಂದು ಪ್ರಶ್ನಿಸಿ, ನೋಟ್ ಬ್ಯಾನ್ ಡಿಸಾಸ್ಟರ್ ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿ ಕುಟುಕಿದ್ದಾರೆ.

೧೦೫ ಮಂದಿ ಸರ್ಕಾರದ ನಿರ್ಧಾರಗಳಿಂದ ಬೇಸತ್ತು ಜೀವ ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ನವೆಂಬರ್‍ ೮, ೨೦೧೬ರಂದು ಪ್ರಧಾನಿ ನರೇಂದ್ರ ಮೋದಿ ೫೦೦ ಮತ್ತು ೧೦೦೦ ರೂ. ನೋಟ್ ಬ್ಯಾನ್ ಘೋಷಣೆ ಮಾಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...