Homeಮುಖಪುಟಪ್ರೀತಿಸುವ ಕಲೆ - ಎರಿಕ್ ಫ್ರಾಂ : ಯೋಗೇಶ್ ಮಾಸ್ಟರ್

ಪ್ರೀತಿಸುವ ಕಲೆ – ಎರಿಕ್ ಫ್ರಾಂ : ಯೋಗೇಶ್ ಮಾಸ್ಟರ್

- Advertisement -
- Advertisement -

ಜಗತ್ತಿನಲ್ಲಿ ಅಗತ್ಯದ ಅಥವಾ ಸಾಂತ್ವನ ನೀಡುವಂತಹ ಅನೇಕ ಪರಿಕಲ್ಪನೆಗಳು ಅಪವ್ಯಾಖ್ಯಾನಕ್ಕೆ ಒಳಗಾಗಿವೆ. ದೇವರು, ಧರ್ಮ, ಸಂಬಂಧಗಳ ಮೌಲ್ಯ, ರಾಜಕೀಯ, ಸಂಸ್ಕೃತಿ ಇತ್ಯಾದಿಗಳಂತೆ ಪ್ರೀತಿಯೂ ಕೂಡಾ.

ಮೋಹ, ಕಾಮ, ವ್ಯಾಮೋಹ, ಇಷ್ಟ ಇತ್ಯಾದಿಗಳನ್ನೆಲ್ಲಾ ಪ್ರೀತಿ ಎಂದುಕೊಂಡುಬಿಡುವ ಉದಾಹರಣೆಗಳಿವೆ. ಹಾಗೆಯೇ ಪ್ರೀತಿಯೆಂದುಕೊಂಡು ವ್ಯಕ್ತಿಗೋ, ಸಿದ್ಧಾಂತಕ್ಕೋ ಅಥವಾ ಇನ್ನಾವುದಕ್ಕೋ ಅಂಟಿಕೊಂಡು ಅದು ಗೀಳಾಗಿ ಮನೋರೋಗವಾಗಿವೆ. ನಾನು ಪ್ರೀತಿಸುತ್ತೇನೆ ಎಂದು ವ್ಯಕ್ತಿಯನ್ನು ಬಂಧನದಲ್ಲಿಟ್ಟುಕೊಂಡು ಪೆÇಸೆಸ್ಸಿವ್ ಆಗಿರುವುದನ್ನು ಕಂಡಿದ್ದೇವೆ.

ಹಾಗಾದರೆ ಪ್ರೇಮವೆಂದರೆ ಏನು? ವ್ಯಾಖ್ಯಾನಕ್ಕೆ ಮೀರಿದ್ದು ಅಂತ ಉನ್ನತೀಕರಿಸಿ, ಅರಿಯುವ ಬದಲು ಅಪಾರ್ಥದಲ್ಲೇ ಬೆಚ್ಚಗಿಟ್ಟುಕೊಳ್ಳುವ ಧೋರಣೆಯಿಂದ ಪ್ರೀತಿ ಉನ್ನತ ಕ್ಲೀಷೆಯಾಗಿ ಪರಿಣಮಿಸಿದೆ. ಅದಕ್ಕಾಗಿಯೇ ಪ್ರೀತಿಯ ಬಗ್ಗೆ ಎರಿಕ್ ಫ್ರಾಂ ಅಚ್ಚುಕಟ್ಟಾಗಿ ಅರಿವಿನ ಒಳನೋಟವನ್ನು ಕೊಡಲು ತನ್ನ ಆರ್ಟ್ ಆಫ್ ಲವ್ಹಿಂಗ್ (1956) ಪುಸ್ತಕದಲ್ಲಿ ಪ್ರಯತ್ನಿಸಿದ್ದಾರೆ.

ಪ್ರೀತಿ ಎಂಬ ಪರಿಕಲ್ಪನೆಯನ್ನು ಬರೀ ಗಂಡುಹೆಣ್ಣುಗಳ ನಡುವಿನ ಆಕರ್ಷಣೆಯಿಂದ ಬಿಡುಗಡೆಗೊಳಿಸಿ ಉದಾತ್ತಗೊಳಿಸಿದ ಕೀರ್ತಿ ಯೇಸುಕ್ರಿಸ್ತನಿಗೇ ಸಲ್ಲುತ್ತದೆ. ಅವನಿಗೂ ಮುನ್ನ ಭಾರತೀಯ ಮತ್ತು ಇತರ ತತ್ವಶಾಸ್ತ್ರ ಮತ್ತು ಪುರಾಣಗಳಲ್ಲಿ ಕಾಮ ಮತ್ತು ನಿಷ್ಕಾಮವನ್ನು, ಪ್ರೇಮಿಗಳ ಪ್ರೇಮ, ಇತರ ಸಂಬಂಧಗಳೊಡನೆ ವಾತ್ಸಲ್ಯ ಅಥವಾ ವ್ಯಾಮೋಹ ನೋಡಬಹುದಿತ್ತು. ವಾತ್ಸಾಯನನ ಕಾಮಶಾಸ್ತ್ರದಲ್ಲಿ ಕಾಮದಾನಂದ ಪಡೆಯಬೇಕಾದರೆ ಸಂಗಾತಿಗಳು ಪರಸ್ಪರ ಇರಬೇಕಾಗಿರುವ ಧೋರಣೆಯನ್ನು ವಿವರಿಸುತ್ತಾನೆ. ಆದರೆ ಅನಿರ್ಬಂಧಿತ ಅಥವಾ ಕಟ್ಟಳೆಗಳಿಲ್ಲದ ಪ್ರೇಮದ ಪಾಠ ಆಗಿದ್ದು ಕ್ರಿಸ್ತನಿಂದ. ಅದನ್ನೇ ಮುಂದುವರಿಸಿ ಮನಶಾಸ್ತ್ರಜ್ಞನೂ ಮತ್ತು ಸಮಾಜ ತತ್ವಜ್ಞಾನಿಯೂ ಆದ ಎರಿಕ್ ಫ್ರಾಂ ಮನೋವೈಜ್ಞಾನಿಕವಾಗಿ ಸಾಮಾಜಿಕ ವರ್ತನಾ ಶಾಸ್ತ್ರದಲ್ಲಿ ಹೇಳುತ್ತಾರೆ.

ಎರಿಕ್ ಪ್ರೀತಿಸುವ ಕಲೆಯನ್ನು ಹೇಳಿಕೊಡುವ ಮುನ್ನ ಪ್ರೀತಿಸುವುದರಲ್ಲಿರುವ ಸಮಸ್ಯೆಗಳನ್ನು ಮೊದಲು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಹೌದು, ಪ್ರೀತಿಸಲ್ಪಡುವ ಆನಂದಕ್ಕೆ ಆಸೆಪಟ್ಟು ಪ್ರೀತಿಸುವ ಕಲೆಯನ್ನು ಉಪೇಕ್ಷಿಸಿಬಿಡುತ್ತಾರೆ. ಬೇರೆ ಜೀವನಕ್ಕೆ ಅಗತ್ಯವಿರುವ ಎಷ್ಟೋ ವಿದ್ಯೆಗಳನ್ನು ಕಲಿಯುತ್ತಾ ಪ್ರೀತಿಸುವ ಕಲೆಯನ್ನು ಕಲಿಯಲು ಸಮಯ ಕೊಡುವುದಿಲ್ಲ. ಪ್ರೀತಿಸುವುದು (ಸಿನಿಮಾಗಳಲ್ಲಿ ತೋರಿಸುವಂತೆ) ಬಹಳ ಕಷ್ಟ, ತುಂಬಾ ಒದ್ದಾಡಿ ಹೋರಾಡಿದ ಮೇಲೆ ಕೊನೆಗೆ ಪ್ರೇಮಿಗಳು ಒಂದಾಗುತ್ತಾರೆ ಎಂಬ ಮನಸ್ಥಿತಿ.

ನಿಜವಾದ ಪ್ರೇಮದಲ್ಲಿ ಬೀಳುವುದಲ್ಲ, (ಫಾಲಿಂಗ್ ಇನ್ ಲವ್ಹ್) ಬದಲಾಗಿ ಹೇಗೆ ಪ್ರೇಮದಲ್ಲಿ ತೊಡಗಿಸಿಕೊಳ್ಳುವುದು ಎಂಬುದನ್ನು ನೋಡಬೇಕೆನ್ನುತ್ತಾರೆ. ಇದು ಸುಲಭವಲ್ಲ ನಿಜ. ಆದರೆ, ಇದು ಅಸ್ತಿತ್ವದ ಅರ್ಥವನ್ನು ಅನಾವರಣ ಮಾಡುತ್ತಾ ಮಾನವ ಬದುಕಿನ ಸಮಸ್ಯೆಗಳನ್ನು ಬಗೆಹರಿಸುತ್ತಾ ತೃಪ್ತ ಮತ್ತು ಸ್ವಾಸ್ಥ ಮನಸ್ಸನ್ನು ದೃಢಗೊಳಿಸುತ್ತದೆ. ಇನ್ನೇನು ಬೇಕು?

ಪ್ರೇಮ ಜೀವನಪೂರ್ತಿ ತೊಡಗಿಸಿಕೊಳ್ಳಬೇಕಾಗಿರುವ ಸೃಜನಶೀಲ ಯೋಜನೆ ಎನ್ನುವ ಎರಿಕ್ ಫ್ರಾಂ ‘ಪ್ರೀತಿಸುವುದ ತಿಳಿಯದೇ ಪ್ರೀತಿಗೊಳಗಾಗುವ ಆತುರ ನಮ್ಮ ಪ್ರೀತಿಪಾತ್ರರನ್ನು ಹೇಗೆ ನೋಯಿಸುತ್ತದೆ’ ಎಂದು ವಿವರಿಸುತ್ತಾರೆ. ಸೋದರ ಪ್ರೇಮ, ಕುಟುಂಬ ಪ್ರೇಮ, ಸತಿ ಪತಿ ಪ್ರೇಮ ಇತ್ಯಾದಿಗಳೆಲ್ಲವೂ ಒಂದೇ ಪ್ರೇಮದ ಒಂದೇ ಮೂಲವನ್ನು ಹೊಂದಿದ್ದು ವಿವಿಧ ಹೊಣೆಗಾರಿಕೆ ಮತ್ತು ಅಭಿವ್ಯಕ್ತತೆಗಳಿಂದ ಬೇರೆಯಾಗಿ ತೋರುತ್ತದೆ ಎಂದು ವಿವರಿಸುತ್ತಾರೆ.

ಅಪ್ರಬುದ್ಧ ಪ್ರೇಮ ಹೇಳುವುದೇನೆಂದರೆ, ಗಿವ್ ರೆಸ್ಪೆಕ್ಟ್ ಟೇಕ್ ರೆಸ್ಪೆಕ್ಟ್ ತರ, ನನ್ನ ಪ್ರೀತಿಸಿದರೆ ನಾನು ಪ್ರೀತಿಸುತ್ತೇನೆ ಎಂದು. ಆದರೆ ಪಕ್ವವಾದ ಪ್ರೇಮವು ತನಗೆ ಪ್ರೀತಿಸಲು ಸಾಧ್ಯ, ಪ್ರೀತಿಸುತ್ತೇನೆ’ ಎಂಬುದು.

ಪ್ರೇಮವೆಂಬುದು ಇದ್ದಕ್ಕಿದ್ದಂತೆ ಆಗಿಬಿಡುವುದಲ್ಲ. ಅದೊಂದು ಗ್ರಹಿಕೆ, ತಿಳಿವಳಿಕೆ ಮತ್ತು ತರಬೇತಿಗಳ ಪ್ರಕ್ರಿಯೆಯ ಮನೋಭಾವದ ರೂಪ. ಆದ್ದರಿಂದಲೇ ಸಂಗೀತ, ನೃತ್ಯ, ವಿಜ್ಞಾನಗಳನ್ನೆಲ್ಲಾ ಕಲಿಯುವಂತೆ ಪ್ರೀತಿಸುವುದನ್ನೂ ಪ್ರಜ್ಞಾಪೂರ್ವಕವಾಗಿ ಕಲಿಯಬೇಕು ಎನ್ನುತ್ತಾರೆ.

ಪ್ರೇಮವೆಂಬುದು ನಿರ್ದಿಷ್ಟ ವ್ಯಕ್ತಿಯೊಂದಿಗೆ ನಾವು ಹೊಂದುವ ಸಂಬಂಧದ ತೀವ್ರ ಪ್ರಭಾವವೋ, ಭಾವ ತೀವ್ರತೆಯೋ ಖಂಡಿತ ಅಲ್ಲ. ಬದಲಾಗಿ ಅದೊಂದು ಧೋರಣೆ ಅಥವಾ ದೃಷ್ಟಿ.

ಒಟ್ಟಾರೆ ಪ್ರೀತಿಯೆಂಬುದು ವ್ಯವಹಾರವಲ್ಲ, ವ್ಯಸನವಲ್ಲ. ಜೀವನಶಕ್ತಿ.
ಒಟ್ಟಾರೆ ಒಲವೇಜೀವನ ಸಾಕ್ಷಾತ್ಕಾರ. ಹೇಗೆ? ಓದಿ, ಪ್ರೀತಿಸುವ ಕಲೆ. ಕನ್ನಡದಲ್ಲಿಯೂ ಅನುವಾದವಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...