Homeಪ್ರಪಂಚಮತ್ತಷ್ಟು ಜೈವಿಕ ಸಂಗತಿಗಳು

ಮತ್ತಷ್ಟು ಜೈವಿಕ ಸಂಗತಿಗಳು

- Advertisement -
- Advertisement -

ಎಕ್ಸ್-ವಾಯ್ ಮಕ್ಕಳು ಟೆಸ್ಟೊಸ್ಟೆರಾನ್ ಉತ್ಪತ್ತಿ ಮಾಡಿದರೂ ಟೆಸ್ಟೊಸ್ಟೆರಾನ್‌ಗೆ ಸ್ಪಂದಿಸುವ ಅಣುಗಳನ್ನು ಸಂಪೂರ್ಣವಾಗಿ  ಅಥವಾ ಭಾಗಶಃವಾಗಿ  ಹೊಂದದೇ ಇರಬಹುದು. ಇದರಿಂದ ಗಂಡಿನ ಲಕ್ಷಣಗಳ ಬೆಳವಣಿಗೆಯಲ್ಲಿ ಅನೇಕ ವಿಧದ ಬದಲಾವಣೆಗಳಾಗಬಹುದು. ಕೆಲವರು ಗರ್ಭಾಶಯದಲ್ಲಿದ್ದಾಗ ಟೆಸ್ಟೊಸ್ಟೆರಾನ್ ಹಾರ್ಮೋನಿಗೆ ಒಂದು ತರಹ ಪ್ರತಿಕ್ರಿಯಿಸಿ, ಹದಿವಯಸ್ಸಿನಲ್ಲಿ ಇನ್ನೊಂದು ತರಹ ಪ್ರತಿಕ್ರಿಯಿಸಬಹುದು. ಜನ್ಮದ ಸಮಯದಲ್ಲಿ ಅವರ ದೇಹ ವೈದ್ಯರಿಗೆ ಹೆಣ್ಣಾಗಿ ಕಂಡರೂ ಪ್ರೌಢಾವಸ್ಥೆಯ ನಂತರ ‘ಗಂಡಿನಂತೆ’ ಬದಲಾವಣೆಯಾಗಬಹುದು. ಅದರಂತೆಯೇ ಎಕ್ಸ್ಎಕ್ಸ್ ಮಕ್ಕಳು ಹಲವಾರು ಕಾರಣಗಳಿಂದಾಗಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟೊÃಸ್ಟೆರಾನ್ (ಪ್ರೊಜೆಸ್ಟೆರಾನ್ ಎನ್ನುವ ಸ್ತಿçà ಹಾರ್ಮೋನಿಂದ ಉತ್ಪತ್ತಿಯಾದ) ಉತ್ಪತ್ತಿ ಮಾಡಿದಲ್ಲಿ ಜನನಾಂಗಗಳು ವಿವಿಧ ಸ್ತರಗಳಲ್ಲಿ ಗಂಡಿನಂತೆ ಅಭಿವೃದ್ಧಿ ಹೊಂದಬಹುದು ಹಾಗೂ ಶಿಶ್ನದಂತೆ ಕಾಣುವ ಅಂಗದೊಂದಿಗೆ ಹುಟ್ಟಬಹುದು. ಹಾಗಾಗಿ, ಗಂಡು ಮತ್ತು ಹೆಣ್ಣು ಎನ್ನುವ ಸರಳ ವರ್ಗೀಕರಣದಿಂದ ಅನೇಕ ವಿಧಗಳಲ್ಲಿ ಇಂಟರ್‌ಸೆಕ್ಸ್ ಮಕ್ಕಳು ಬೇರೆಯಾಗಿರಬಹುದಾಗಿದೆ. ಜನಿಸಿದ 2000 ಮಕ್ಕಳಲ್ಲಿ 1 ಮಗುವಿನ ದೇಹದಲ್ಲಿ ಅಸ್ಪಷ್ಟವಾದ ಜನನಾಂಗಗಳು ಇರಬಹುದೆಂದು ಅಂದಾಜಿಸಲಾಗಿದೆ ಹಾಗೂ ಅವರನ್ನು ಇಂಟರ್‌ಸೆಕ್ಸ್ ಎಂದು ವರ್ಗೀಕರಿಸಲಾಗುತ್ತದೆ. ಆದರೆ ನಾವು ನೋಡಿದಂತೆ, ಹಲವಾರು ಇಂಟರ್‌ಸೆಕ್ಸ್ ವಿಧಗಳಲ್ಲಿ ಜನನಾಂಗಗಳು ಸ್ಪಷ್ಟವಾಗಿ ಗಂಡು ಅಥವಾ ಹೆಣ್ಣಿನಂತೆ ತೋರಬಹುದು, ಆದರೆ ಇದು ಅವರ ಅನುವಂಶಿಕ ರಚನೆಯಿಂದ ಬೇರೆಯಾಗಿರಬಹದು. ಆನ್ ಫಾಸ್ಟೊà ಸ್ಟರ್ಲಿಂಗ್‌ನಂತಹ ವಿಜ್ಞಾನಿಗಳು ಸೂಚಿಸುವುದೇನೆಂದರೆ, ಒಟ್ಟಾರೆ ಜನಸಂಖ್ಯೆಯ ಶೇಕಡಾ ಎರಡರಷ್ಟು ಜನರು ಎದ್ದುಕಾಣದ, ಗೌಣವಾಗಿರುವ ಇಂಟರ್‌ಸೆಕ್ಸ್ ವಿಧಗಳನ್ನು ಹೊಂದಿರಬಹುದು.
ಇವೆಲ್ಲದಕ್ಕೂ ಮತ್ತು ಟ್ರಾನ್ಸ್ಜೆಂಡರ್ (ಅಂತರಲಿಂಗಿ) ಆಗಿರುವುದಕ್ಕೂ ಸಂಬಂಧವೇನು? ಮೆದುಳು. ಗಂಡು ಹಾರ್ಮೋನ್ ಆದ ಟೆಸ್ಟೊÃಸ್ಟೆರಾನ್ ಮತ್ತು ಹೆಣ್ಣು ಹಾರ್ಮೋನ್ ಈಸ್ಟೊçÃಜೆನ್‌ಗಳಿಗೆ ಸ್ಪಂದಿಸುವುದಕ್ಕಾಗಿ ಮೆದುಳಿನಲ್ಲಿ ಕೆಲವು ಕ್ಷೆÃತ್ರಗಳಿವೆ ಹಾಗೂ ಈ ಹಾರ್ಮೋನುಗಳು ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತೆ ಎನ್ನುವುದು ಕೆಲವು ವಂಶವಾಹಿ (ಜೀನ್)ಗಳ ಮೇಲೆ ಅವಲಂಬಿಸಿರುತ್ತೆ. ಆದುದರಿಂದ ಟ್ರಾನ್ಸ್ಜೆಂಡರ್ ಗುರುತು ಇದಕ್ಕೆ ಸಂಬಂಧಿಸಿರುತ್ತೆ. ಹಾಗಾಗಿ, ಹುಟ್ಟಿನ ಸಮಯದಲ್ಲಿ ವೈದ್ಯರು ಗಂಡು ಅಥವಾ ಹೆಣ್ಣು ಎಂದು ವರ್ಗೀಕರಿಸಿದರೂ, ಅವರು ಬೆಳೆಯುತ್ತ ಹೋದಂತೆ ಅವರ ಮಿದುಳಿನ ಮೇಲೆ ಅವರ ಜೈವಿಕ ಲಿಂಗಕ್ಕೆ ವಿರುದ್ಧವಾದ ಹಾರ್ಮೋನ್ ಪ್ರಭಾವ ಬೀರಬಹದು. ಎಕ್ಸ್ ಎಕ್ಸ್ ಮಕ್ಕಳಲ್ಲಿ ಅವರ ಬೆಳವಣಿಗೆಯ ನಿರ್ಣಾಯಕ ಹಂತಗಳಲ್ಲಿ ಗಂಡಿನ ಹಾರ್ಮೋನುಗಳು ಪ್ರಭಾವ ಬೀರಿದಾಗ (ತಾಯಿಯ ಗರ್ಭದಿಂದ ಅಥವಾ ಮಗುವಿನ ತನ್ನದೇ ಕೋಶಗಳಿಂದ) ಎಕ್ಸ್ವೈ ಮಕ್ಕಳಿಗೆ ಹೋಲುವ ಬೆಳವಣಿಗೆಗಳು ಕಾಣಿಸಿಕೊಳ್ಳಬಹುದು. ಅದರಂತೆ, ಎಕ್ಸ್ವೈ ಮಕ್ಕಳಲ್ಲಿ ಹೆಣ್ಣಿನ ಹಾರ್ಮೋನುಗಳು ಇದ್ದರೆ ಅಥವಾ ಗಂಡಿನ ಹಾರ್ಮೋನುಗಳಿಗೆ ಮೆದುಳು ಸ್ಪಂದಿಸದೇ ಇದ್ದರೆ ಆ ಎಕ್ಸ್ವೈ ಮಕ್ಕಳು ಹೆಣ್ಣಿನ ಸ್ವರೂಪವನ್ನು ಬೆಳೆಸಿಕೊಳ್ಳಬಹುದು. ಇವರುಗಳ ಮೆದುಳು ಎಕ್ಸ್ಎಕ್ಸ್ ಹೆಣ್ಣುಗಳ ಮೆದುಳಿನÀ ಹಾಗೆಯೇ ಬದಲಾವಣೆ ಹೊಂದಬಹುದು. ಮೆದುಳಿನ ಈ ಕ್ಷೆÃತ್ರಗಳ ಬಗ್ಗೆ ಹಾಗು ಟ್ರಾನ್ಸ್ಜೆಂಡರ್ ಮಕ್ಕಳು ಮತ್ತು ವಯಸ್ಕರು ತಮ್ಮ ದೇಹದ ಬಗ್ಗೆ ಪ್ರಬಲವಾದ ಭಾವನೆಗಳನ್ನು ಹೇಗೆ ಹೊಂದಿರುತ್ತಾರೆ ಎನ್ನುವುದರ ಬಗ್ಗೆ ನಂತರ ವಿವರಿಸುವೆ. ಆದರೆ, ಸದ್ಯಕ್ಕೆ ಒಂದೇ ಒಂದು ಜೈವಿಕ ಲಿಂಗವನ್ನು ಹೊಂದದೇ ಇರುವುದಕ್ಕೆ ಅನೇಕ ಕಾರಣಗಳು ಮತ್ತು ಸಾಧ್ಯತೆಗಳಿವೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳೊÃಣ.
ನಮ್ಮ ಕ್ರೊÃಮೊಸೋಮ್‌ಗಳು, ವೃಷಣ/ಅಂಡಾಶಯಗಳ ರಚನೆ, ಜನ್ಮದ ಸಮಯದಲ್ಲಿ ಹಾರ್ಮೋನುಗಳು, ಜನನಾಂಗಗಳು ಮತ್ತು ಪ್ರೌಢಾವಸ್ಥೆಯಲ್ಲಿ ಹಾರ್ಮೋನುಗಳು, ಇವೆಲ್ಲವುಗಳೂ ನಮ್ಮ ದೇಹ ಮತ್ತು ಮಿದುಳಿನ ಬೆಳವಣಿಗೆಯಲ್ಲಿ ಪರಿಣಾಮ ಬೀರುತ್ತವೆ. ಒಂದು ವೇಳೆ ಇವುಗಳು ಅಸ್ಪಷ್ಟ ಜನನಾಂಗಗಳನ್ನು ಅಥವಾ ಅಸ್ಪಷ್ಟ ಲೈಂಗಿಕ ಲಕ್ಷಣಗಳನ್ನು ಸೃಷ್ಟಿಸಲು ಕಾರಣವಾದರೆ ಹಾಗೂ ಇವಗಳನ್ನು ವೈದ್ಯರು ಗುರುತಿಸಿದರೆ ಆ ಮಕ್ಕಳನ್ನು ಇಂಟರ್‌ಸೆಕ್ಸ್ ಎಂದು ಕರೆಯಲಾಗುತ್ತದೆ; ಆದರೆ, ನಮ್ಮಲ್ಲಿ ಅನೇಕರು ವೈದ್ಯಕೀಯವಾಗಿ ಇಂಟರ್‌ಸೆಕ್ಸ್ ಆಗಿದ್ದರೂ ಆ ವಾಸ್ತವದ ಅರಿವು ಇಲ್ಲದೇ ಇರಬಹುದು.

– ಕಾರ್ತಿಕ್ ಬಿಟ್ಟು
ಅನುವಾದ: ರಾಜಶೇಖರ ಅಕ್ಕಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಾಗತಿಕ ಮಾದ್ಯಮಗಳಲ್ಲಿ ಸುದ್ದಿಯಾದ ಪ್ರಧಾನಿಯ ದ್ವೇಷ ಭಾಷಣ: ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಟೀಕೆಗೆ ಗುರಿಯಾದ...

0
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜಸ್ಥಾನದ ಬನ್ಸ್ವಾರಾದಲ್ಲಿ ಮುಸ್ಲಿಮರ ವಿರುದ್ಧ ಮಾಡಿದ್ದ ದ್ವೇಷ ಭಾಷಣ ಜಾಗತಿಕ ಮಾದ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದು, ಮೋದಿ ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. 'ಕೊಳಕು ಭಾಷಣ’ ಆದರೆ...