Homeಮುಖಪುಟತೆಲಂಗಾಣ ಎನ್‌ಕೌಂಟರ್‌: ಶವಗಳನ್ನು ರಕ್ಷಿಸಲು ಶೀತಲ ಪೆಟ್ಟಿಗೆಗಳ ಕೊರತೆ - ವೈದ್ಯರ ಪರದಾಟ

ತೆಲಂಗಾಣ ಎನ್‌ಕೌಂಟರ್‌: ಶವಗಳನ್ನು ರಕ್ಷಿಸಲು ಶೀತಲ ಪೆಟ್ಟಿಗೆಗಳ ಕೊರತೆ – ವೈದ್ಯರ ಪರದಾಟ

- Advertisement -
- Advertisement -

ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ-ಹತ್ಯೆ ಪ್ರಕರಣದ ಆರೋಪಿಗಳನ್ನು ಪೊಲೀಸರ್ ಎನ್‌ಕೌಂಟರ್ ನಡೆಸಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರು ಹೈದರಾಬಾದ್ ನ ಆರ್.ಜಿ.ಐ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಶೆಡ್ ನಗರದ ಹತ್ತಿರ ಇರುವ ಚತನಪಲ್ಲಿಯಲ್ಲಿ ಅತ್ಯಾಚಾರ-ಕೊಲೆ ಆರೋಪಿಗಳನ್ನು ಎನ್ ಕೌಂಟರ್ ಮಾಡಿದ ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ. ಎನ್ ಕೌಂಟರ್ ಹೇಗೆ ನಡೆಯಿತು ಎಂಬುದನ್ನು ಪರಿಶೀಲಿಸಲಿರುವ ಮಾನವ ಹಕ್ಕುಗಳ ಆಯೋಗದ ಸದಸ್ಯರು ಪ್ರಾಥಮಿಕ ತನಿಖೆ ನಡೆಸುತ್ತಿದ್ದ ಪೊಲೀಸರನ್ನು ಪ್ರಶ್ನಿಸುವ ಸಾಧ್ಯತೆ ಇದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಎನ್ ಕೌಂಟರ್ ನಡೆದ 500 ಮೀಟರ್ ಸುತ್ತಳತೆಯಲ್ಲಿ ಪೊಲೀಸರು ಸರ್ಪಕಾವಲು ಕಾಯುತ್ತಿದ್ದು, ತೊಂಡಪಲ್ಲಿ ಟೋಲ್ ಪ್ಲಾಜಾ ಹತ್ತಿರ ತೆರಳಿ ಸ್ಥಳ ಪರಿಶೀಲನೆ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಇದೇ ವೇಳೆ ಮೆಹಬೂಬನಗರ ಜಿಲ್ಲಾಸ್ಪತ್ರೆಯಲ್ಲಿ ಪೊಲೀಸರ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿರುವ ನಾಲ್ವರು ಆರೋಪಿಗಳ ಮೃತದೇಹಗಳನ್ನು ಇಡಲಾಗಿದ್ದು ಶೀತಲಪೆಟ್ಟಿಗೆಯಲ್ಲಿ ಇಡಲು ಸಮಸ್ಯೆಯಾಗಿದೆ. ಆಸ್ಪತ್ರೆಯಲ್ಲಿ ಮೂರು ಶೀತಲ ಪೆಟ್ಟಿಗೆಗಳು ಇವೆ. ಇವುಗಳ ಪೈಕಿ ಎರಡು ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ನಾಲ್ಕು ಶವಗಳನ್ನು ಶೀತಲ ಪೆಟ್ಟಿಗೆಯಲ್ಲಿ ಇಡಲು ಸಾಧ್ಯವಾಗುತ್ತಿಲ್ಲ.

ಒಂದು ಶೀತಲ ಪೆಟ್ಟಿಗೆ ಕೆಟ್ಟು ಹೋಗಿದೆ. ಬೇರೆ ಮೃತದೇಹಗಳು ಬಂದರೆ ಮೆಹಬೂಬನಗರ ಜಿಲ್ಲಾಸ್ಪತ್ರೆಯಲ್ಲಿ ಇಡಲು ಜಾಗದ ಕೊರತೆ ಮತ್ತು ಶೀತಲ ಪೆಟ್ಟಿಗೆಗಳ ಕೊರತೆ ಇದೆ. ಸ್ಥಳೀಯ ಮೃತದೇಹಗಳ ಮರಣೋತ್ತರ ಪರೀಕ್ಷೆಯೂ ಇಲ್ಲೇ ನಡೆಯಬೇಕಾಗಿದೆ ಎಂದು ವರದಿ ತಿಳಿಸಿದೆ.

ಈ ಆಸ್ಪತ್ರೆಯಲ್ಲಿ ಭದ್ರತಾ ಪರಿಸ್ಥಿತಿ ಮತ್ತು ಶೀತಲ ಪೆಟ್ಟಿಗೆಗಳ ಕೊರತೆ ಇದೆ. ಸ್ಥಳೀಯ ಪ್ರಕರಣಗಳನ್ನು ತೆಲಂಗಾಣ ಹೈಕೋರ್ಟ್ ಆದೇಶದ ಮೇರೆಗೆ ಮೆಹಬೂಬನಗರದಿಂದ 15 ಕಿಲೋ ಮೀಟರ್ ದೂರದಲ್ಲಿರುವ  ಜಡ್ ಚೆರ್ಲ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗುತ್ತಿದೆ. ಹೀಗಾಗಿ ಸಿಕಿಂದರಾಬಾದ್ ಆಸ್ಪತ್ರೆಗೆ ಮೃತ ದೇಹಗಳನ್ನು ಸ್ಥಳಾಂತರಿಸಲಾಗುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಇಂದು ಮೊದಲ ಹಂತದ ಮತದಾನ

0
ಬಹು ನಿರೀಕ್ಷಿತ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಏ.19) ನಡೆಯಲಿದೆ. ದೇಶದ 17 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ 16.63 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ದೇಶದ 107...