Homeಮುಖಪುಟಇದು ಅಸಲಿ ಮತ್ತು ನಕಲಿ ಚೌಕಿದಾರರ ನಡುವಿನ ಕದನ: ಸಂದರ್ಶನದಲ್ಲಿ ತೇಜ್ ಬಹದ್ದೂರ್ ಯಾದವ್

ಇದು ಅಸಲಿ ಮತ್ತು ನಕಲಿ ಚೌಕಿದಾರರ ನಡುವಿನ ಕದನ: ಸಂದರ್ಶನದಲ್ಲಿ ತೇಜ್ ಬಹದ್ದೂರ್ ಯಾದವ್

- Advertisement -
- Advertisement -

ಸೇನೆಯಲ್ಲಿದ್ದುಕೊಂಡು ಬಂಡಾಯದ ಕಹಳೆ ಊದಿದವರು ಸೀಮಾ ಸುರಕ್ಷ ಪಡೆಯ ತೇಜ್ ಬಹಾದ್ದೂರ್ ಯಾದವ್. ಒಂದು ವರ್ಷದ ಹಿಂದೆ ಬಿಎಸ್‍ಎಫ್ ನಲ್ಲಿ ಜವಾನರೊಂದಿಗೆ ಹೇಗೆ ವರ್ತಿಸಲಾಗುತ್ತಿದೆ, ಅವರಿಗೆ ಮೂಲಸೌಕರ್ಯಗಳ ಬಗ್ಗೆ, ಅವರಿಗೆ ನೀಡುವ ಊಟ ವಸತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಪ್ರಶ್ನೆ ಎತ್ತಿದ ನಂತರ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಇಂದು ತೇಜ್ ಬಹಾದ್ದೂರ್ ವಾರಣಾಸಿಯ ಲೋಕಸಭೆ ಕ್ಷೇತ್ರದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ದ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಬಿಸಿ ಹಿಂದಿ ಮಾಡಿದ ಸಂದರ್ಶನದ ಕನ್ನಡ ಅನುವಾದವನ್ನು ಇಲ್ಲಿದೆ.

ಪ್ರಶ್ನೆ – ಚುನಾವಣೆಗೆ ಏಕೆ ನಿಲ್ಲುತಿದ್ದೀರಿ? ನಿಮ್ಮ ಊರು ಹರಿಯಾಣದಲ್ಲಿದೆ, ವಾರಣಾಸಿಯಿಂದ ಏಕೆ ಸ್ಪರ್ಧಿಸುತ್ತಿದ್ದೀರಿ?
ಉತ್ತರ – ಮೊದಲನೇದಾಗಿ, ನಾನೊಬ್ಬ ಭಾರತೀಯ, ಯಾವ ಕ್ಷೇತ್ರದಿಂದಲೂ ಸ್ಪರ್ಧಿಸಬಹುದು. ಹಾಗೂ ವಾರಣಾಸಿ ಒಂದು ಪವಿತ್ರ ಕ್ಷೇತ್ರವಾಗಿದೆ. ಇದಕ್ಕೆ ಒಂದು ದೊಡ್ಡ ಇತಿಹಾಸವಿದೆ. ನಾನು ಕಾಶಿ ವಿಶ್ವನಾಥನ ಆಶಿರ್ವಾದದೊಂದಿಗೆ ಚೌಕಿದಾರ ಎಂದು ಹೇಳಿಕೊಳ್ಳುತ್ತಿರುವ ನಕಲಿ ಚೌಕಿದಾರನನ್ನು ಇಲ್ಲಿಂದ ಓಡಿಸಲು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಈ ನಕಲಿ ಚೌಕಿದಾರರು ಸೇನೆಯನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಸೇನೆಯ ಹೆಸರನ್ನು ಮಣ್ಣುಪಾಲು ಮಾಡಿದ್ದಾರೆ ಈ ನಕಲಿ ಚೌಕಿದಾರರು. ಇಂದು ವಿದೇಶಗಳಲ್ಲೂ ನಮ್ಮ ಸೇನೆಯ ಹೆಸರು ಕೆಡುತ್ತಿದೆ ಇವರಿಂದಾಗಿ. ಎಲ್ಲಾ ಸೈನಿಕರ ನೈತಿಕ ಶಕ್ತಿ ಕುಸಿದುಹೋಗಿದೆ. ದೇಶದ ಎಲ್ಲಾ ಸೈನಿಕರು ಸಿಟ್ಟಿಗೆದ್ದಿದ್ದಾರೆ ಏಕೆಂದರೆ, ಈ ಸರ್ಜಿಕಲ್ ಸ್ಟ್ರೈಕ್, ಏರ್ಸ್ಟ್ರೈಕ್, ಇದೇನು ಮೊದಲ ಬಾರಿ ಮಾಡಿಲ್ಲ. ಇವುಗಳನ್ನು ಸೈನ್ಯ ಮುಂಚೆಯಿಂದಲೂ ಮಾಡುತ್ತಲೇ ಬಂದಿದೆ. ಆದರೆ ಇವುಗಳ ಮೇಲೆ ರಾಜಕಾರಣ ಮಾಡುತ್ತಿರುವುದು ಮೊದಲಬಾರಿ. ಹಾಗಾಗಿ ನಾವು ನಿರ್ಧರಿಸಿದ್ದೇನೆಂದರೆ, ನಮ್ಮ ದೇಶವನ್ನು ಉಳಿಸಬೇಕೆಂದರೆ, ಇಲ್ಲಿಯವರೆಗೆ ಗಡಿಗಳಲ್ಲಿ ನಿಂತು ದೇಶದ ರಕ್ಷಣೆ ಮಾಡುತ್ತ ಬಂದಿದ್ದೇವೆ, ಈಗ ಸಂಸತ್ತಿಗೆ ಹೋಗಿ ನಮ್ಮ ಮಾತುಗಳನ್ನು ಮಂಡಿಸಬೇಕಿದೆ, ಹಾಗಾಗದಿದ್ದರೆ ದೇಶ ಉಳಿಯುವುದಿಲ್ಲ.

ವರದಿಗಾರ- ಗಡಿ ರಕ್ಷಣಾ ಪಡೆಯ ತೇಜ್ ಬಹಾದ್ದೂರ್ ಯಾದವ್ ಅವರಿಗೆ ಇನ್ನಿತರ ಸೈನಿಕರ ಬೆಂಬಲ ದೊರಕಿದೆ. ಅವರೆಲ್ಲ ತೇಜ್ ಬಹಾದ್ದೂರ ಅವರ ಈ ಮಿಷನ್‍ನಲ್ಲಿ ಜೊತೆಯಾಗಿದ್ದಾರೆ; ಅವರ ಪ್ರಚಾರದಲ್ಲಿ ಸಹಕರಿಸುತ್ತಿದ್ದಾರೆ. ಈಗ ಬೆಜೆಪಿ ಮತ್ತು ಪ್ರಧಾನಮಂತ್ರಿ ಹೇಳುತ್ತಿರುವುದೇನೆಂದರೆ, ಇಂದು ಭಾರತದ ಪ್ರಧಾನಿ ಮೋದಿಯವರಿಂದಾಗಿ, ಇತರ ದೇಶಗಳು, ಶತ್ರುದೇಶಗಳು ಹೆದರುತ್ತಿವೆ, ಪ್ರಧಾನಿ ಮೋದಿಯವರಿಂದಾಗಿ ವೈರಿ ದೇಶಗಳ ಕಣ್ಣಲ್ಲಿ ಕಣ್ಣಿಟ್ಟು ನೋಡುವಂತಾಗಿದೆ. ಇದರ ಬಗ್ಗೆ ನೀವೇನು ಹೇಳುತ್ತೀರ?
ತೇಜ್ ಬಹಾದ್ದೂರ್ ಯಾದವ್- ಇಂತಹದ್ದೇನೂ ಆಗಿಲ್ಲ, ಅವರು ಹೇಳಿದ ಹಾಗಿದ್ದರೆ ಫುಲ್ವಾಮಾ ದಾಳಿ ಯಾಕೆ ಆಯಿತು? ಅವರು ಹೇಳಿದ್ದು ನಿಜವಿದ್ದರೆ ಆ ದಾಳಿ ಆಗಬಾರದಿತ್ತು. ಇಂತಹ ದೊಡ್ಡ ಹಲ್ಲೆ ಇದಕ್ಕೂ ಮುಂಚೆ ಆಗಿರಲಿಲ್ಲ. ಇವರದ್ದು ಅಷ್ಟೇ ಭಯ ಇತ್ತಾದರೆ ಫುಲ್ವಾಮಾ ದಾಳಿಯನ್ನೇಕೆ ತಡೆಯಲಿಲ್ಲ? ಒಂದು ವೇಳೆ ಇವರು ಹೇಳಿದ ಹಾಗೆಯೇ ಇದ್ದರೆ ಈ ದಾಳಿ ಒಂದು ಪಿತೂರಿ ಆಗಿರಬಹುದಲ್ಲವೇ? ಇದನ್ನೇನು ಇವರೇ ಮಾಡಿಸಿದ್ದಾ, ಹಾಗೇನಾದರೂ ಇದೆಯಾ?

ವರದಿಗಾರ- ಅಲ್ಲ, ಇಂತಹ ಆರೋಪಗಳು ಬಂದಿವೆ ಆದರೆ ಇವಕ್ಕೆ ಯಾವುದೇ ಸಾಕ್ಷಿಗಳು ಕಂಡಿಲ್ಲ.
ತೇಜ್ ಬಹಾದ್ದೂರ್ ಯಾದವ್ – ಹೌದು ಸಾಕ್ಷಾಧಾರಗಳು ಇಲ್ಲ, ಆದರೆ ಅದರ ತನಿಖೆ ಏಕೆ ಮಾಡಿಸುತ್ತಿಲ್ಲ ಇವರು? ಅಲ್ಲಿಯ ರಾಜ್ಯಪಾಲರೇ ಸ್ವತಃ ಹೇಳುತ್ತಿದ್ದಾರೆ ತಮ್ಮಿಂದ ಲೋಪವಾಗಿದೆ ಎಂದು, ಲೋಪವಾಗಿದ್ದಲ್ಲಿ ದಾಳಿಯ ಮಾಹಿತಿ ಮೊದಲೇ ಸಿಕ್ಕಿತ್ತು ಎಂದು ಹೇಳುತ್ತಾರೆ, ಮಾಹಿತಿ ಸಿಕ್ಕ ಮೇಲೂ ಏನು ಮಾಡಿದರು? ಇದಕ್ಕೆ ಜವಾಬ್ದಾರರಾದ, ಇವರಿಗೆ ತುಂಬಾ ಹತ್ತಿರದವರಾದ ಅಜಿತ್ ದೋವಾಲ್ ಅವರಗೆ ಏಕೆ
ಪ್ರಶ್ನೆ ಕೇಳುತ್ತಿಲ್ಲ? ಮಾಹಿತಿ ಸಿಕ್ಕ ಮೇಲೂ ಇಷ್ಟು ದೊಡ್ಡ ದಾಳಿ ಏಕಾಯಿತು?

ವರದಿಗಾರ- ನಿಮ್ಮ ಪ್ರಚಾರದ ಕರಪತ್ರಗಳಲ್ಲಿ ಚೌಕಿದಾರರ ಬಗ್ಗೆ ಬರೆಯಲಾಗಿದೆ; ಅಸಲಿ ಚೌಕಿದಾರ ಯಾರು, ನಕಲಿ ಚೌಕಿದಾರ್ ಯಾರು ಎನ್ನುವ ಪ್ರಶ್ನೆ ಇದೆ. ಹಾಗಾದರೆ ಅಸಲಿ ಚೌಕಿದಾರ ಯಾರು ಮತ್ತು ನಕಲಿ ಯಾರು?
ತೇಜ್ ಬಹಾದ್ದೂರ್ ಯಾದವ್ – ನೋಡಿ ಇಷ್ಟು ವರ್ಷಗಳ ತನಕ ಗಡಿಗಳ ರಕ್ಷಣೆ ಮಾಡುತ್ತ ಬಂದಿದ್ದೇವೆ, ನಾವು ನಿಜವಾದ ಚೌಕಿದಾರರು. ಅವರು ತಮ್ಮನ್ನು ತಾವು ಚೌಕಿದಾರ ಎಂದು ಕರೆದುಕೊಳ್ಳುತ್ತಿದ್ದಾರೆ ಆದರೆ, ರಾಫೇಲ್‍ನ ಕಡತಗಳ ಕಳ್ಳತನ ಆಯಿತು, ನೀರವ್ ಮೋದಿ ಓಡಿಹೋದರು, ಮತ್ತು ಅನೇಕ ಜನ ಓಡಿ ಹೋದರು. ಇವರೆಂಥ ಚೌಕಿದಾರರು, ಯಾರ ಚೌಕಿದಾರಿಕೆ ಮಾಡುತ್ತಿದ್ದಾರೆ?

ವರದಿಗಾರ- ಆದರೆ ನೀವು ಚುನಾವಣೆಯ ದಾರಿಯನ್ನೇ ಏಕೆ ಆಯ್ಕೆ ಮಾಡಿದಿರಿ?
ತೇಜ್ ಬಹಾದ್ದೂರ್ ಯಾದವ್ – ಬೇರೆ ಯಾವುದೇ ದಾರಿ ಇದ್ದೇ ಇಲ್ಲ

ವರದಿಗಾರ – ನ್ಯಾಯಾಲಯದ ದಾರಿ ಏಕೆ ಆಯ್ಕೆ ಮಾಡಲಿಲ್ಲ
ತೇಜ್ ಬಹಾದ್ದೂರ್ ಯಾದವ್ – ನ್ಯಾಯಾಂಗದ ದಾರಿಯಲ್ಲಿ ನಮಗೆ ನ್ಯಾಯ ಸಿಗಲೇ ಇಲ್ಲ. ನ್ಯಾಯಾಂಗದ ದುರ್ಭಾಗ್ಯ ನೋಡಿ, ಸುಪ್ರೀಮ್ ಕೋರ್ಟಿನ ನಾಲ್ಕು ನ್ಯಾಯಾಧೀಶರು ಪತ್ರಿಕಾಗೋಷ್ಠಿ ನಡೆಸುತ್ತಾರೆ. ಮುಂಚೆ ಯಾವಾಗಾದರೂ ಆಗಿತ್ತಾ ಹೀಗೆ? ಇವರು(ಪ್ರಧಾನಿ) ಯಾರ ಮಾತನ್ನು ಕೇಳುತ್ತಾರೆ? ಇದು ಹಿಟ್ಲರ್‍ಶಾಹಿ ಆಳ್ವಿಕೆ ಆಗಿದೆ. ಈಗ ನೋಡಿ ರಾಫೇಲ್ ವಿಷಯ ಕೋರ್ಟಿಗೆ ಬಂದೋಡನೇ ಉಚ್ಚ ನ್ಯಾಯಾಧೀಶರನ್ನು ಯಾವುದೋ ಹಗರಣದಲ್ಲಿ ಸಿಲುಕಿಸುತ್ತಿದ್ದಾರೆ.

ಇದನ್ನೂ ಓದಿ: ಮೋದಿ ವಿರುದ್ಧ ಸ್ಪರ್ಧಿಸಲು ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್‍ಗೆ ಟಿಕೆಟ್ ನೀಡಿದ ಸಮಾಜವಾದಿ ಪಕ್ಷ.

ವರದಿಗಾರ – ಹೌದು ಈ ಆರೋಪ ಇದೆ, ಅದರ ತನಿಖೆ ಆಗುತ್ತಿದೆ, ಈಗ ಅದರ ಬಗ್ಗೆ ಹೇಳಲಾಗುವುದಿಲ್ಲ. ಆದರೆ, ಒಂದು ಪ್ರಶ್ನೆ. ಲೋಕಸಭೆಗೆ ಸ್ಪರ್ಧಿಸುವುದೆಂದರೆ, ಅಲ್ಲಿ ಸ್ಥಳೀಯ ವಿಷಯಗಳೂ ಇರುತ್ತವೆ. ನೀವು ಎತ್ತುತ್ತಿರುವ ಇಷ್ಯೂಗಳು ಯಾವು? ಬನಾರಸ್‍ನ ಜನರು ನಿಮಗೆ ಏಕೆ ಮತ ನೀಡಬೇಕು?
ತೇಜ್ ಬಹಾದ್ದೂರ್ ಯಾದವ್- ನೋಡಿ ಒಬ್ಬ ಎಮ್‍ಪಿಯ ಕರ್ತವ್ಯಗಳಲ್ಲಿ ತನ್ನ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯಗಳಿವೆಯೇ ಇಲ್ಲವೇ ಎನ್ನುವುದನ್ನು ನೋಡಿಕೊಳ್ಳುವುದು. ಆದರೆ ಇಂದಿನ ದಿನಗಳಲ್ಲಿ ಹಾಗಾಗುತ್ತಿಲ್ಲ. ಆಶ್ವಾಸನೆಗಳನ್ನು ನೀಡುತ್ತಾರೆ ಆದರೆ ನಂತರ ಮರೆತುಬಿಡುತ್ತಾರೆ. ಆದರೆ ನಾನು ಒಬ್ಬ ಎಮ್‍ಪಿ ಆಗಿ ಈ ಕ್ಷೇತ್ರದ ಸಮಸ್ಯೆಗಳೇನು ಎನ್ನುವುದರ ಬಗ್ಗೆ ಸರ್ವೇ ಮಾಡಿಸುವೆ. ನೀರು, ಶಿಕ್ಷಣ, ನಿರುದ್ಯೋಗ, ರಸ್ತೆಗಳು, ಆರೋಗ್ಯ, ಈ ಎಲ್ಲ ವಿಷಯಗಳ ಬಗ್ಗೆ ಕೆಲಸ ಮಾಡುವೆ.

ವರದಿಗಾರ- ನೀವು ಜನರಿಂದ ಹಣವನ್ನೂ ಕೇಳುತ್ತಿದ್ದೀರಿ, ನಿಮ್ಮ ಚುನಾವಣೆಯ ಪ್ರಚಾರದಲ್ಲಿ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೀರಿ. ಇದಕ್ಕೆ ಜನರ ಪ್ರತಿಕ್ರಿಯೆ ಹೇಗಿದೆ?
ತೇಜ್ ಬಹಾದ್ದೂರ್ ಯಾದವ್ – ನೋಡಿ, ನಿನ್ನೆ ನಾವೆಲ್ಲಾ ಹೋದಾಗ, ಎಲ್ಲಾ ಕಾರ್ಮಿಕಜನರು, ಬಡವರು ನಮ್ಮನ್ನು ನೋಡಿ ಸಂತೋಷಪಟ್ಟು, ಅಪ್ಪಿಕೊಂಡರು, ನಮಗೆ ಅಲ್ಲಲ್ಲಿ ಚಹಾತಿಂಡಿ ಮಾಡಿಸಿದರು, ಕೊನೆಗೂ ನಿಜವಾದ ಚೌಕಿದಾರರು ಬಂದರು ಎಂದು ಸಂತಸಪಟ್ಟರು. ಆದರೆ ದುಃಖದ ಸಂಗತಿಯೆಂದರೆ, ಏರ್‍ಕಂಡಿಷನ್ ಗಾಡಿಗಳಲ್ಲಿ ಇದ್ದವರೆಲ್ಲ ಹೇಳಿದ್ದು, ‘ಇಲ್ಲ, ನಾವು ನಿಮ್ಮ ಜೊತೆಗಿಲ್ಲ’ ಎಂದು. ದೇಶದ ಎಲ್ಲಾ ಕಾರ್ಪೋರೇಟ್ ಕುಟುಂಬಗಳು ಬಿಜೆಪಿ ಜೊತೆಗೆ ನಿಂತುಕೊಂಡಿವೆ. ಆದರೆ ದೇಶದ ರೈತರು, ಕಾರ್ಮಿಕರು ಮತ್ತು ಬಡವರೆಲ್ಲಾ ನಮ್ಮ ಜೊತೆಗಿದ್ದಾರೆ.

ವರದಿಗಾರ- ಆದರೆ ನಿಮ್ಮ ಹೋರಾಟ ಕೇವಲ ಬಿಜೆಪಿ ಜೊತೆಗಷ್ಟೇ ಇಲ್ಲ, ಒಂದು ಕಡೆ ಬಿಜೆಪಿ ಇದ್ದರೆ ಮತ್ತೊಂದು ಕಡೆ ಕಾಂಗ್ರೆಸ್ ಇದೆ, ಇನ್ನೊಂದು ಕಡೆ ಮಹಾಘಬಂಧನ್ ಇದೆ, ಅನೇಕ ಪಕ್ಷೇತರರು ಇದ್ದಾರೆ.
ತೇಜ್ ಬಹಾದ್ದೂರ್ ಯಾದವ್ – ನೋಡಿ, ಮಂಗಲ್ ಪಾಂಡೆ ಎನ್ನುವರ ಹೆಸರನ್ನು ನೀವು ಕೇಳಿರಬಹುದು. ಆಗ ಆ ಒಬ್ಬ ಸೈನಿಕ ಪ್ರಾರಂಭಿಸಿದ್ದರಿಂದ ಏನೇನಾಯಿತು ನೋಡಿ. ಅದೇ ಸ್ವಾತಂತ್ರ ಸಂಗ್ರಾಮದಿಂದ ನಮಗೆ ಸ್ವತಂತ್ರ ಸಿಕ್ಕಿತು. ಈಗ ಇಲ್ಲಿಯೂ ಒಬ್ಬ ಸೈನಿಕ ನಿಂತಿದ್ದಾನೆ, ಅದೂ ಪ್ರಧಾನಮಂತ್ರಿಯ ವಿರುದ್ದ, ಈಗ ಹತ್ತಿದ ಈ ಒಂದು ಕಿಡಿ ಹೇಗೆ ಬಿರುಗಾಳಿ ಬೀಸಲು ಕಾರಣವಾಗುವುದೆಂದು ನೀವು
ನೋಡುವಿರ. ಎಷ್ಟೇ ಜನ ವಿರುದ್ಧ ಇರಲಿ, ಆದರೆ ಮುಂದೆ ಬರುವ ಸಮಯಕ್ಕೆ ಒಂದು ರಾಜಕೀಯ ಭವಿಷ್ಯವನ್ನು ರಚಿಸುತ್ತಿದ್ದೇವೆ.

ವರದಿಗಾರ- ತೇಜ್ ಬಹಾದ್ದೂರ್ ಅವರು ಮಂಗಲ್ ಪಾಂಡೆಯನ್ನು ಆದರ್ಶವಾಗಿಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ಯುದ್ಧಭೂಮಿಯಾಗಿರಲಿ ಚುನಾವಣಾ ಕಣವಾಗಿರಲಿ ಗೆಲವು ಸಾಧಿಸುವ ವಿಶ್ವಾಸ ಅವರಿಗಿದೆ.

ಕೃಪೆ: ಬಿಬಿಸಿ ಹಿಂದಿ

ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗೆ ಹಲ್ಲೆ ನಡೆಸಿದ ಸ್ವಪಕ್ಷದ ಮುಖಂಡ

0
ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಕೃಷ್ಣಕುಮಾರ್ ಅವರ ಕಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪಕ್ಷದ ಸ್ಥಳೀಯ ನಾಯಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೃಷ್ಣಕುಮಾರ್ ಇತ್ತೀಚೆಗೆ...