Homeನ್ಯಾಯ ಪಥಹೀರೋಯಿನ್‌ಗಳಿಗೇಕೆ ಹೀರೋಗಳಷ್ಟು ಸಂಭಾವನೆ ಕೊಡುವುದಿಲ್ಲ?: ತಾಪ್ಸಿ ಪನ್ನು ಪ್ರಶ್ನ

ಹೀರೋಯಿನ್‌ಗಳಿಗೇಕೆ ಹೀರೋಗಳಷ್ಟು ಸಂಭಾವನೆ ಕೊಡುವುದಿಲ್ಲ?: ತಾಪ್ಸಿ ಪನ್ನು ಪ್ರಶ್ನ

ಲೀಡಿಂಗ್ ನಟರಿಗೆ ನೀಡುವ ಸಂಭಾವನೆಯಲ್ಲಿ ಒಂದು ಮಹಿಳಾ ಪರ ಸಿನೆಮಾವನ್ನೆ ನಿರ್ಮಾಣ ಮಾಡಬಹುದು ಎಂದು ತಾಪ್ಸಿ ಪನ್ನು ಹೇಳಿದ್ದಾರೆ.

- Advertisement -
- Advertisement -

ಗೋವಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ನಟಿ ‘ತಾಪ್ಸಿ ಪನ್ನು’ ಭಾಗವಹಿಸಿದ್ದರು. ‘ಲೀಡ್ ಇನ್ ವುಮೆನ್’ ಎಂಬ ಗೋಷ್ಠಿಯಲ್ಲಿ ಮುಖ್ಯ ಭಾಷಣಗಾರ್ತಿಯಾಗಿದ್ದ ಇವರು ಮಹಿಳೆಯರ ಇನಿಷಿಯೇಟಿವ್ ಬಗ್ಗೆ ಮಾತನಾಡಿ ಮೆಚ್ಚುಗೆ ಪಡೆದುಕೊಂಡಿದ್ದರು.

ಆದರೆ ಆ ಮಾತುಗಳು ಕೆಲವರಿಗೆ ಬೆಂಕಿ ಇಟ್ಟಂತಾಗಿದ್ದೂ ಸುಳ್ಳೇನು ಅಲ್ಲ. ಅದರಲ್ಲಿ ತಾಪ್ಸಿ ಹೇಳಿದ್ದು ಇಷ್ಟೇ, ಹೀರೋಯಿನ್ ಆಗಿ ನಟಿಸುವ ನಟಿಯರಿಗೆ ಹೀರೋಗಳಿಗೆ ನೀಡುವಷ್ಟು ಸಂಭಾವನೆ ನೀಡುವುದಿಲ್ಲ. ಹೀರೋಗಳಷ್ಟೇ ಡೆಡಿಕೇಷನ್, ಎಫರ್ಟ್ ಹಾಕುವ ನಟಿಯರಿಗೆ ಹೀರೋಗಳಿಗೆ ನೀಡುವ ಸಂಭಾವನೆಯ ನಾಲ್ಕನೇ ಒಂದು ಭಾಗ ಸಿಕ್ಕರೇ ಅದೇ ಹೆಚ್ಚು ಎಂದಿದ್ದರು.

ಇನ್ನೊಂದು ವಿಷಯವೇನೆಂದರೆ ಲೀಡಿಂಗ್ ನಟರಿಗೆ ನೀಡುವ ಸಂಭಾವನೆಯಲ್ಲಿ ಒಂದು ಮಹಿಳಾ ಪರ ಸಿನೆಮಾವನ್ನೆ ನಿರ್ಮಾಣ ಮಾಡಬಹುದು ಎಂದಿದ್ದಾರೆ. ಅದು ವಾಸ್ತವವೂ ಹೌದು. ಈ ತಾರತಮ್ಯ ಧೋರಣೆ ನನ್ನ ಜೀವಿತ ಕಾಲದಲ್ಲೇ ಬದಲಾಗುತ್ತದೆಂದು ಆಶಿಸುತ್ತೇನೆಂದು ತಾಪ್ಸಿ ಹೇಳಿದ ಮಾತು ಅವರೊಬ್ಬರದ್ದೇ ಆಗಿರಲಿಲ್ಲ ಎಂಬುದಂತೂ ಸತ್ಯ.

ಏನೇ ಇರಲಿ, ಸಿನಿಮಾ ರಂಗದಲ್ಲಿಯ ಈ ಧೋರಣೆ ಬದಲಾಗಲೇಬೇಕು. ಅಂದಹಾಗೆ ಹಿಂದಿ ಭಾಷೆಯ ಪಿತ್ತವನ್ನ ನೆತ್ತಿಗೇರಿಸಿಕೊಂಡಿರುವ ಕೆಲವು ಹಿಂದಿ ಮಾಧ್ಯಮಗಳು ತಾಪ್ಸಿಯ ಭಾಷಣ ಇಂಗ್ಲಿಷ್‍ನಲ್ಲಿದ್ದರಿಂದ, ‘ನೀವು ಬಾಲಿವುಡ್ ನಟಿ ಹಿಂದಿಯಲ್ಲೇ ಮಾತನಾಡಬೇಕಲ್ಲವೇ’ ಎಂದು ಕ್ಯಾತೆ ತೆಗೆದಿದ್ದವು. ಇಲ್ಲಿ ನೆರೆದಿರುವವರು ಹಲವು ಮಂದಿ ಹಿಂದಿಯವರಲ್ಲ. ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ಮಾತನಾಡಿದ್ದೇನೆಂದು ತಾಪ್ಸಿ ಮುಟ್ಟಿನೋಡಿಕೊಳ್ಳುವಂತೆ ಕೊಟ್ಟಿದ್ದಂತೂ ಹಿಂದಿ ಅಮಲಿಗೆ ತಣ್ಣೀರು ಬಿದ್ದಂತಾಯ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ ನಾಯಕ ಸುರ್ಜೇವಾಲಾಗೆ ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ ವಿಧಿಸಿದ ಚುನಾವಣಾ ಆಯೋಗ

0
ಬಿಜೆಪಿ ಸಂಸದೆಯ ವಿರುದ್ಧದ ಅವಹೇಳನಾಕಾರಿ ಹೇಳಿಕೆ ಆರೋಪದಲ್ಲಿ ಕಾಂಗ್ರೆಸ್‌ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ 48 ಗಂಟೆಗಳ ಕಾಲ ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ ವಿಧಿಸಿ ಚುನಾವಣಾ ಆಯೋಗ ಆದೇಶವನ್ನು ಹೊರಡಿಸಿದೆ....