Homeಚಳವಳಿಮಾಧ್ಯಮಗಳ ಶಾಕಿಂಗ್ ನ್ಯೂಸ್ ಎಂಬ ಮಹಾನಾಟಕ: ಅದು ಒಂದು ಪಕ್ಷದ ಪರ ಪ್ರಚಾರದ ದ್ಯೋತಕ

ಮಾಧ್ಯಮಗಳ ಶಾಕಿಂಗ್ ನ್ಯೂಸ್ ಎಂಬ ಮಹಾನಾಟಕ: ಅದು ಒಂದು ಪಕ್ಷದ ಪರ ಪ್ರಚಾರದ ದ್ಯೋತಕ

- Advertisement -
- Advertisement -

ಶಾಕಿಂಗ್: “ಪಶ್ಚಿಮ ಬಂಗಾಳದಲ್ಲಿ ನೇತಾಡುವ ಸ್ಥಿತಿಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರ ಶವ ಪತ್ತೆ”. ಎಂಬ ತಲೆಬರಹದಲ್ಲಿ ಎರಡು ದಿನಗಳ ಹಿಂದೆ ಪ್ರಸಿದ್ದ ದಿನಪತ್ರಿಕೆ ಟೈಮ್ಸ್ ನೌ ವರದಿ ಮಾಡಿತ್ತು.

ಈ ರೀತಿಯ ಶಾಕಿಂಗ್ ಸುದ್ದಿಗಳನ್ನು ಕೊಡುವ ಮುಖ್ಯವಾಹಿನಿ ಮಾಧ್ಯಮಗಳ ಕೆಲಸವನ್ನು ಶ್ಲಾಘಿಸುತ್ತೇನೆ. ಆದರೆ ಮತ್ತೆ ನನಗೆ ಆಶ್ಚರ್ಯವಾಗುತ್ತದೆ,

2015ರಲ್ಲಿ 3263 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
2016ರಲ್ಲಿ 3063 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
2017ರಲ್ಲಿ 2917 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
2018ರಲ್ಲಿ 2761 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅಂದರೆ 2014-2018ರ ಅವಧಿಯಲ್ಲಿ ಒಟ್ಟು 12004 ರೈತರು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ನಾಲ್ಕು ವರ್ಷದಲ್ಲಿ ಪ್ರತಿ ದಿನಕ್ಕೆ 8 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಅಂಕಿಅಂಶ ಇಡೀ ಭಾರತದ್ದು ಅಲ್ಲ ಬದಲಿಗೆ ಕೇವಲ ಮಹರಾಷ್ಟ್ರ ರಾಜ್ಯದಲ್ಲಿ ಸಂಭವಿಸಿರುವ ರೈತರ ಆತ್ಮಹತ್ಯೆಗಳ ಕುರಿತದ್ದಾಗಿದೆ.

ಈ ಅಂಕಿಅಂಶಗಳನ್ನು ನ್ಯಾಷನಲ್ ಕ್ರೈಮ್ ರೆಕಾಡ್ರ್ಸ್ ಬ್ಯೂರೋ(NCRB) ನೀಡಿದ ವರದಿಯಾಧರಿಸಿ ದಿ ಹಿಂದೂಸ್ಥಾನ್ ಟೈಮ್ಸ್ ಮತ್ತು ಇತರ ವೆಬ್ ತಾಣಗಳು ಪ್ರಕಟಿಸಿವೆ. ಇದೆ NCRB ಯು 2010ರಿಂದ 2014ರ ವರೆಗೆ ಒಟ್ಟು 8009 ರೈತರು ದಿನಕ್ಕೆ 4 ಜನರಂತೆ ಆತ್ಮಹತ್ಯೆಗೆ ಶರಣಾಗಿದ್ದರೆಂದು ವರದಿ ನೀಡಿದೆ.

ಆದರೆ ಯಾವುದೇ ಮುಖ್ಯವಾಹಿನಿ ಮಾಧ್ಯಮಕ್ಕೂ ಸಹ ಈ ನಾಲ್ಕು ವರ್ಷಗಳಲ್ಲಿ ದಿನಕ್ಕೆ 8 ಜನ ರೈತರು ಕೊಲೆಯಾಗುತ್ತಿರುವುದು ಕಂಡುಬಂದಿಲ್ಲ ಏಕೆ? ಇದು ಏಕೆ ಅವರಿಗೆ ಶಾಕಿಂಗ್ ಅನ್ನಿಸಲಿಲ್ಲ?

ಆದರೆ ಒಂದು ಪಕ್ಷಕ್ಕೆ ಸೇರಿದ ಇಬ್ಬರು ಗೂಂಡಾಗಳು ಬಹುಶಃ ಬೇರೆ ಪಕ್ಷಕ್ಕೆ ಸೇರಿದ ಗೂಂಡಾಗಳಿಂದ ಮೂಲತಃ ಚುನಾವಣಾ ವೈಷಮ್ಯದಿಂದ ಕೊಲೆಯಾದರೆ ಈ ಮಾಧ್ಯಮಗಳಿಗೆ ಶಾಕಿಂಗ್ ನ್ಯೂಸ್ ಆಗುತ್ತದೆ ಮತ್ತು ಅದನ್ನವರು ಮುಖಪುಟದಲ್ಲಿ ಪ್ರಕಟಿಸುತ್ತಾರೆ…

ಈ ನಡುವೆ ಘನತೆಯ ಜೀವನಕ್ಕಾಗಿ ಹೋರಾಟವನ್ನೇ ಮಾರ್ಗವಾಗಿಸಿಕೊಂಡವರು, ಯಾರು ಬಡತನದ ವಿರುದ್ಧ ಯುದ್ದ ಮಾಡುತ್ತಿದ್ದಾರೋ ಅವರು ವಿಷಯಗಳು ಯಾವುದೇ ಆಕ್ರೋಶವಿಲ್ಲದೆ ಹಿಂದಕ್ಕೆ ತಳ್ಳಲ್ಪಡುತ್ತಿವೆ.

ಬಡತನದ ಕಾರಣಕ್ಕೆ ಸ್ವಯಂ ಕೊಲೆಯಾಗಲ್ಪಡುತ್ತಿರುವ ಜನರ ನೋವಿಗೆ ಬದಲಾಗಿ ಯಾರೋ ಇಬ್ಬರು ಗೂಂಡಾಗಳು ಪರಸ್ಪರ ಕೊಲೆಯಾಗುತ್ತಿರುವುದೇ ನಮ್ಮನ್ನು ಹೆಚ್ಚು ಬಾಧಿಸುತ್ತಿರುವ ದೇಶದಲ್ಲಿ ನಾವು ವಾಸಿಸುತ್ತಿರುವುದು ನಮ್ಮ ದುರ್ಧೈವವೇ ಸರಿ.

– ದರ್ಶನ್ ಮಂಡ್ಕರ್ ಫೇಸ್ ಬುಕ್ ಪುಟದಿಂದ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿಯಲ್ಲಿ ‘ಅಬ್ ಕಿ ಬಾರ್ ರಾಬರ್ಟ್ ವಾದ್ರಾ’ ಪೋಸ್ಟರ್; ಪ್ರಿಯಾಂಕಾ ಪತಿ ಸ್ಪರ್ಧೆಗೆ ಹೆಚ್ಚಿದ...

0
2019ರ ಲೋಕಸಭಾ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ತಮ್ಮ ಕ್ಷೇತ್ರವನ್ನು ಅಮೇಥಿಯಿಂದ ಕೇರಳದ ವಯನಾಡಿಗೆ ಸ್ಥಳಾಂತರಿಸಿದ್ದಾರೆ. ಆದರೆ, ಬಿಜೆಪಿ ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಯಾರು...