Homeಮುಖಪುಟಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ

ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ

- Advertisement -
- Advertisement -

ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯಿರವರು ತನ್ನ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು 35 ವರ್ಷದ ಮಹಿಳೆಯೊಬ್ಬರು ಆರೋಪಿಸಿ, ಏಪ್ರಿಲ್ 19ರ ಶುಕ್ರವಾರ ಸುಪ್ರೀಂ ಕೋರ್ಟ್‍ನ 22 ನ್ಯಾಯಾಧೀಶರಿಗೆ ಅಫಿಡವಿಟ್ ಸಲ್ಲಿಸಿದ್ದಾರೆ.

2018ರ ಅಕ್ಟೋಬರ್ 10 ಮತ್ತು 11ರಂದು ನಾನು ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾಗ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯಿರವರು ಅವರ ಗೃಹಕಚೇರಿಯಲ್ಲಿ ನನ್ನೊಡನೆ ಬಹಳ ಅನುಚಿತವಾಗಿ ವರ್ತಿಸುವ ಮೂಲಕ ಲೈಂಗಿಕವಾಗಿ ಶೋಷಿಸಿದ್ದರು ಎಂದು ಆಕೆ ದೂರಿದ್ದಾರೆ.

ಅಲ್ಲದೇ ಈ ಘಟನೆಯ ಎರಡು ತಿಂಗಳ ನಂತರ ಆಕೆಯನ್ನು ಡಿಸೆಂಬರ್‍ನಲ್ಲಿ ಕೆಲಸದಿಂದ ವಜಾಗೊಳಿಸಲಾಗಿತ್ತು. ಕಾರಣ ಕೇಳಿದ್ದಲ್ಲಿ, ಆಕೆಯ ಮೇಲೆ ತನಿಖಾ ಸಮಿತಿಯೊಂದನ್ನು ರಚಿಸಿದ್ದು, ಆಕೆ ಒಂದು ದಿನ ಅನುಮತಿಯಿಲ್ಲದೇ ರಜೆ ತೆಗೆದುಕೊಂಡ ಕಾರಣಕ್ಕಾಗಿ ಕೆಲಸದಿಂದ ತೆಗೆಯಲಾಗಿದೆ ಎಂದು ತಿಳಿಸಿದೆ.

ಕೆಲಸದಿಂದ ವಜಾಗೊಳಿಸಿದ ಮಾತ್ರಕ್ಕೆ ಆಕೆಯ ಮೇಲಿನ ದೌರ್ಜನ್ಯ ನಿಂತಿಲ್ಲ. ಆಕೆಯ ಇಡೀ ಕುಟುಂಬವನ್ನೇ ಗುರಿ ಮಾಡಿ ತೊಂದರೆ ಕೊಡಲಾಗಿದೆ ಎಂದು ಅಫಿಡವಿಟ್‍ನಲ್ಲಿ ತಿಳಿಸಿದ್ದಾರೆ. ಆಕೆಯ ಗಂಡ ಮತ್ತು ಆತನ ತಮ್ಮ ಇಬ್ಬರೂ ಇಬ್ಬರು ದೆಹಲಿ ಪೋಲಿಸ್ ಇಲಾಖೆಯಲ್ಲಿ ಪೇದೆಗಳಾಗಿ ಕೆಲಸ ನಿರ್ವಹಿಸುತ್ತಿರುವಾಗಲೇ 2012ರ ಕಾಲೋನಿ ಭೂವಿವಾದದ ಹಳೆಯ ಕೇಸನ್ನು ಉಲ್ಲೇಖಿಸಿ ಅವರಿಬ್ಬರನ್ನು ಡಿಸೆಂಬರ್‍ನಿಂದಲೇ ಅಮಾನತು ಮಾಡಲಾಗಿದೆ.

ಅಲ್ಲಿಂದ ಮುಂದುವರೆದು ನವೀನ್ ಎಂಬ ವ್ಯಕ್ತಿಯು ಈಕೆಯ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ದೂರು ದಾಖಲಿಸಿದ್ದಾನೆ. 2017ರಲ್ಲಿ ಈಕೆ ಸುಪ್ರೀಂ ಕೋರ್ಟ್‍ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನನ್ನಿಂದ 50000 ಸಾವಿರ ಹಣ ಪಡೆದು ವಂಚಿಸಿದ್ದಾಳೆ ಎಂಬುದು ಆ ದೂರಿನ ಸಾರಂಶ. ಇದಕ್ಕಾಗಿ ಆಕೆಯ ಮೇಲೆ ಎಫ್‍ಐಆರ್ ದಾಖಲಾದುದು ಮಾತ್ರವಲ್ಲ ಒಂದು ದಿನ ಜೈಲಿಗೂ ಕೂಡ ಹೋಗಿದ್ದು ಸದ್ಯ ಬೇಲ್ ಪಡೆದಿದ್ದಾಳೆ. ‘ಆ ಕೇಸ್‍ನಲ್ಲಿ ಭ್ರಷ್ಟಾಚಾರದ ದೂರು ದಾಖಲಿಸಿರುವ ನವೀನ್ ಎಂಬಾತನ ಮೇಲೂ ಕೂಡ ಲಂಚ ಕೊಟ್ಟ ಆರೋಪದ ಮೇಲೆ ದೂರು ದಾಖಲಿಸಬಹುದು, ಆದರೆ ಅದನ್ನು ಮಾಡದ ಪೋಲೀಸರು ಈಗ ಈಕೆಯ ಬೇಲ್ ರದ್ದುಗೊಳಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಆಕೆಯ ಪರ ವಕೀಲ ಗ್ರೋವರ್ ಆರೋಪಿಸಿದ್ದಾರೆ.

ಆಕೆ ತನ್ನ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಡದ ಕಾರಣಕ್ಕಾಗಿ ತನ್ನ ಉದ್ಯೋಗವನ್ನು ಕಳೆದುಕೊಳ್ಳಬೇಕಾಯಿತು, ಆಕೆಯ ಕುಟುಂಬದ ಇಬ್ಬರೂ ಅಮಾನತಾಗಿದ್ದಾರೆ. ಆಕೆ ಜೈಲಿಗೆ ಹೋದ ನಂತರ ಇದು ಇಲ್ಲಿಗೆ ನಿಲ್ಲುವುದಿಲ್ಲ ಎಂಬುದು ಅರ್ಥವಾಗಿದೆ. ಹಾಗಾಗಿ ಆಕೆ ತನಗಾದ ಅನ್ಯಾಯವನ್ನು ಸಾರ್ವಜನಿಕವಾಗಿ ತೆರೆದಿಡುವುದು ಮತ್ತು ಸುಪ್ರೀಂ ಕೋರ್ಟ್‍ನ ನ್ಯಾಯಾಧೀಶರಿಗೆ ಪತ್ರ ಬರೆಯದೇ ಬೇರೆ ಆಯ್ಕೆಗಳೇ ಇಲ್ಲ ಎಂದು ಗ್ರೋವರ್ ಅಭಿಪ್ರಾಯಪಡುತ್ತಾರೆ.

ನ್ಯಾಯಾಂಗ ಅಪಾಯದಲ್ಲಿದೆ – ರಂಜನ್ ಗಗೋಯಿ
ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯಿ, ನ್ಯಾಯಾಂಗ ಅಪಾಯದಲ್ಲಿದೆ ಎಂದಿದ್ದಲ್ಲದೇ, ಈ ಪ್ರಕರಣ ಸ್ವತಂತ್ರ ನ್ಯಾಯಾಂಗ ಮತ್ತು ಮುಖ್ಯ ನ್ಯಾಯಮೂರ್ತಿಗಳ ಕಚೇರಿಯನ್ನು ದುರ್ಬಲಗೊಳಿಸಲು ಹೆಣೆದಿರುವ ದೊಡ್ಡ ಪಿತೂರಿಯಾಗಿದೆ ಎಂದ ಆರೋಪಿಸಿದ್ದಾರೆ.

ಒಬ್ಬ ನ್ಯಾಯಾಧೀಶನಿಗೆ ತನ್ನ ಹುದ್ದೆಗಿಂತಲೂ ಮಿಗಿಲಾದುದು ಯಾವುದು ಇಲ್ಲ ಹಾಗಾಗಿ ಅದರ ಮೇಲೆಯೇ ದಾಳಿ ನಡೆದರೆ ಸಹಿಸಲಾಗುವುದಿಲ್ಲ ಎಂದಿದ್ದಾರೆ.ಇಂದು ನ್ಯಾಯಾಂಗದ ಸ್ವಾತಂತ್ರ್ಯ ಅಪಾಯದಲ್ಲಿದ್ದು ಇಂತಹ ಪರಿಸ್ಥಿತಿಯಲ್ಲಿ ನ್ಯಾಯಾಧೀಶರು ಕೆಲಸ ಮಾಡಬೇಕೆಂದರೆ ಯಾರು ಸಹ ಮುಂದೆ ಬರುವುದಿಲ್ಲ ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ನೀವು ನಮ್ಮ ಬೆನ್ನೆಲುಬು; ಪಕ್ಷದ ಡಿಎನ್‌ಎ..’; ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಸಂದೇಶ

0
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಪಕ್ಷದ ಕಾರ್ಯಕರ್ತರಿಗೆ ಹೃದಯಸ್ಪರ್ಶಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್‌ನ ಅಧಿಕೃತ ಹ್ಯಾಂಡಲ್‌ನಿಂದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿ,...