ಭಾಗವಧ್ವಜ ಹಾರಿಸಿದ RSS : ದಲಿತ ಸಂಘಟನೆಗಳಿಂದ ತೀವ್ರ ಪ್ರತಿಭಟನೆಯ ನಂತರ ತೆರವು..

ಆರ್.ಎಸ್.ಎಸ್ ಸಂಘಟನೆಯ ಕಾರ್ಯಕರ್ತರು ಸ್ವಾತಂತ್ರ್ಯೋತ್ಸವದ ದಿನ ತ್ರಿವರ್ಣ ಧ್ಚಜಕ್ಕೆ ಬದಲಾಗಿ ನಂಜನಗೂಡಿನ ಸರ್ಕಾರಿ ಕಾಲೇಜು ಮೈದಾನದಲ್ಲಿ ಕೇಸರಿ ಭಾಗವಧ್ವಜ ಹಾರಿಸಿದ್ದಾರೆ. ಹೆಡಗೆವಾರ್, ಗೋಳ್ವಾಲ್ಕರ್ ಫೋಟೊ ಇದ್ದು ಅಮಾಯಕ ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಆರ್.ಎಸ್.ಎಸ್ ಭಾಷಣ ಬಿಗಿಯಲು ಮುಂದಾಗಿದ್ದಾರೆ. ವಿಷಯ ಗೊತ್ತಾಗಿದ್ದೆ ಸ್ಥಳಕ್ಕಾಗಮಿಸಿದ ದಲಿತ ಸಂಘಟನೆಯ ಕಾರ್ಯಕರ್ತರು ತಹಶಿಲ್ದಾರ್ ಮತ್ತು ಪೋಲೀಸ್ ಇನ್ಸ್ ಪೆಕ್ಟರ್ ರವರ ಗಮನಕ್ಕೆ ತಂದು ಪ್ರತಿಭಟನೆ ನಡೆಸಿದ್ದಾರೆ.

ತಹಶಿಲ್ದಾರ್ ಮತ್ತು ಪೋಲೀಸ್ ಇನ್ಸ್ ಪೆಕ್ಟರ್ ಸ್ಥಳಕ್ಕೆ ಬಂದ ಕೂಡಲೇ ತಮ್ಮ ವರಸೆ ಬದಲಿಸಿದ ಆರ್.ಎಸ್.ಎಸ್ ಸಂಘಟನೆಯ ಕಾರ್ಯಕರ್ತರು ನಾವು ಸ್ವಾತಂತ್ರ್ಯ ದಿನ ಆಚರಿಸುತ್ತಿಲ್ಲ ಬದಲಗೆ ರಕ್ಷಾಬಂಧನ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಅಲ್ಲಿಂದ ದಲಿತ ಸಂಘಟನೆಯ ಕಾರ್ಯಕರ್ತರು ಸರ್ಕಾರಿ ಜಾಗದಲ್ಲಿ ಸ್ವಾತಂತ್ರ್ಯೋತ್ಸವದ ದಿನ ತ್ರಿವರ್ಣ ಧ್ವಜ ಬಿಟ್ಟು ಬೇರೆ ಧ್ವಜ ಹಾರಿಸಬಾರದೆಂಬ ಸಾಮಾನ್ಯ ಜ್ಞಾನ ಇಲ್ಲವೇ? ರಕ್ಷಾ ಬಂಧನಕ್ಕೂ ನೀವು ಇಲ್ಲಿ ಇಟ್ಟಿರುವ ಹೆಡಗೆವಾರ್, ಗೋಳ್ವಾಲ್ಕರ್ ಫೋಟೋಗೂ, ಈ ಧ್ವಜಕ್ಕೂ ಏನು ಸಂಬಂಧ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ನಂತರ ಪೋಲೀಸ್ ಇನ್ಸ್ ಪೆಕ್ಟರ್ ರವರು ಸರ್ಕಾರಿ ಜಾಗದಲ್ಲಿ ನೀವು ಈ ಕಾರ್ಯಕ್ರಮ ಮಾಡಲು ಅನುಮತಿ ಪಡೆದಿದ್ದೀರಾ? ಈ ಮೈದಾನದಲ್ಲಿ ಬೆಳಿಗ್ಗೆಯೇ ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದ್ದೇವೆ ಮತ್ತೆ ನೀವ್ಯಾಕೆ ಈ ರೀತಿ ಕೋಮು ಸಾಮರಸ್ಯ ಕೆಡಿಸುತ್ತೀದ್ದೀರಿ ಎಂದು ತರಾಟೆಗೆ ತೆಗೆದುಕೊಂಡು ತೆರವುಗೊಳಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.

ಆದರೆ ಜಗ್ಗದ ಆರ್.ಎಸ್.ಎಸ್ ಕಾರ್ಯಕರ್ತರು ಇದು ಸಾರ್ವಜನಿಕ ಜಾಗ ನಾವು ಆಚರಿಸುತ್ತೇವೆ ಎಂದಾಗ ದಲಿತ ಸಂಘಟನೆಯ ಕಾರ್ಯಕರ್ತರು ಮುಗಿಬಿದ್ದಿದ್ದಾರೆ. ವಿಭಿನ್ನ ಕೋಮಿನವರು ಬಂದು ತಮ್ಮ ತಮ್ಮ ಧ್ವಜವನ್ನು ಇಲ್ಲಿ ನೆಟ್ಟರೆ ಪರಿಸ್ಥಿತಿ ಹೇಗಿರುತ್ತದೆ? ದೇಶಕ್ಕೆ ಮತ್ತು ಸಂವಿಧಾನಕ್ಕೆ ಗೌರವ ಕೊಡಿ ಎಂದು ಆಗ್ರಹಿಸಿದ್ದಾರೆ.

ನಂತರ ಫೋಟೊಗಳನ್ನು ತೆರವುಗೊಳಿಸಿದರೂ ಆರ್.ಎಸ್.ಎಸ್ ಕಾರ್ಯಕರ್ತರು ಪ್ರಾರ್ಥನೆ ಮಾಡುತ್ತೇವೆಂದು ಪಟ್ಟು ಹಿಡಿದಿದ್ದಾರೆ. ರಕ್ಷಾ ಬಂಧನ ಬೇರೆ ದಿನ ಬರುತ್ತದೆಯೇ ಎಂದರು. ಆಗ ಕೆರಳಿದ ದಲಿತ ಸಂಘಟನೆಯ ಕಾರ್ಯಕರ್ತರು ಸಂವಿಧಾನಕ್ಕೆ, ಡಾ.ಅಂಬೇಡ್ಕರ್ ರವರಿಗೆ ಜೈಕಾರಗಳನ್ನು ಮೊಳಗಿಸಿದರು.

ಪೊಲೀಸ್ ಮಧ್ಯಪ್ರವೇಶಿಸಿ ನಿಮ್ಮ ಖಾಸಗಿ ಸ್ಥಳಗಳಲ್ಲಿ ಏನಾದರೂ ಮಾಡಿಕೊಳ್ಳಿ ಇಲ್ಲಿ ಸರ್ಕಾರಿ ಜಾಗದಲ್ಲಿ ಅನುಮತಿ ಇಲ್ಲದೇ ಕಾರ್ಯಕ್ರಮ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಖಡಕ್ ಆಗಿ ಹೇಳಿದರು. ನಂತರ ದಲಿತ ಸಂಘಟನೆಯ ಕಾರ್ಯಕರ್ತರು ರಾಷ್ಟ್ರಧ್ವಜಕ್ಕೆ ಬೆಲೆ ಕೊಡದೇ ಕೇಸರಿ ಧ್ವಜ ಹಾರಿಸುವವರು ದೇಶದ್ರೋಹಿಗಳಲ್ಲವೇ? ಎಂದು ಪ್ರಶ್ನಿಸಿದರು. ನಂತರ ಕೇಸರಿ ಧ್ವಜವನ್ನು ತೆರವುಗೊಳಿಸಲಾಯಿತು ಮತ್ತು ಪೊಲೀಸರು ಅಲ್ಲಿದ್ದವರನ್ನು ಹೊರಗೆ ಕಳಿಸಿದರು.

 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

7 COMMENTS

  1. First, know what RSS really mean. It doesn’t not make violence and will not support casteism. It’s the truthful volunteer organization. They are celebrating their fest from decades, Raksha Bandhan is one of the main fest of India. They respect only truthful people. They know the contribution of Dr. Ambedkar, but those dalit sangatan and this news article publishing people don’t know the true value of it. Actually, this dalit sangatan is creating casteism not RSS. RSS always aims to make strong unity in India. UNDERSTAND!

  2. Ee lekhanadalli bharatada bagge adesto ninja bhakti bhava kochhikolluttiddiya! Ade reeti bharatada samskruti viruddha matanadidavara paravagi ninja blog open madidiya Andre neenestu nirlajji manushya entha chanchala manasssinava , entha chanchala bhuddi anta illi arthavagutte. Ninja kelsa aagabekadre entha keelumattakke ilitiya Andre nachike annode ilva? Nachike annodu ninnantha patrikodhyamarige barabeku? Yava journalist ninja thara bhikshe bedilla, eethara noo bhikshe bedabahudu antha jagattige torisikotta moadala mahaneeya neenu. Patrikodhyama ilakkhege apamana madiro nimge beleyalu prothsahisa beka? Neenu Gouriya hage deshadrohi aagu

  3. ಅಯ್ಯೋ ಮೂರ್ಖರೇ ನಡೆದ ಘಟನೆಯನ್ನು ನಿಮಗೆ ಬೇಕಾದ ಹಾಗೆ ತಿರುಚಿ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಾ ನಿಮ್ಮ ಪುಟದ ಹೆಸರಿಗೆ ನೀವೇ ಮಸಿ ಬಳಿಯುತ್ತಿದ್ದಿರಿ. ಭಗವಾ ದ್ವಜವನ್ನು ನೆಟ್ಟು ಹಬ್ಬಗಳನ್ನು , ಪ್ರಾರ್ಥನೆಗಳನ್ನು ಆಚರಿಸುವುದು RSS ಸಂಪ್ರದಾಯ. ಆ ಮೈದಾನದಲ್ಲಿದ್ದ ಭಾರತದ ದ್ವಜಕ್ಕಿಂತ ಕೆಳಗೆ ಭಗವಾ ದ್ವಜ ಇಟ್ಟಿರುವುದು RSS ದೇಶಭಕ್ತಿಯನ್ನು ತೋರಿಸುತ್ತದೆ. ನಿಮ್ಮಿಂದ RSS ರಾಷ್ಟ್ರಭಕ್ತಿಯನ್ನು ಕಲಿಯಬೇಕಿಲ್ಲ. ಸುಳ್ಳು ಸುದ್ದಿಯನ್ನು ಬಿತ್ತರಿಸಿದರೆ ನಿಮ್ಮ ಮೇಲೆ ಕ್ರಮಕ್ಕೆ ಮುಂದಾಗುತ್ತೇವೆ ಎಚ್ಚರ.

LEAVE A REPLY

Please enter your comment!
Please enter your name here