Homeಅಂತರಾಷ್ಟ್ರೀಯಮುಖೇಶ್‌ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿ. ವಿಶ್ವದ 6ನೇ ಅತಿದೊಡ್ಡ ತೈಲ ಕಂಪನಿ...!

ಮುಖೇಶ್‌ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿ. ವಿಶ್ವದ 6ನೇ ಅತಿದೊಡ್ಡ ತೈಲ ಕಂಪನಿ…!

- Advertisement -
- Advertisement -

ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ನಡೆಸುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಈಗ ವಿಶ್ವದ 6 ನೇ ಅತಿದೊಡ್ಡ ತೈಲ ಕಂಪನಿಯಾಗಿ ಬೆಳೆದು ನಿಂತಿದೆ.

ಮಂಗಳವಾರದ ವಹಿವಾಟಿನ ಮುಕ್ತಾಯದ ವೇಳೆ, ಬ್ರಿಟಿಷ್ ಎನರ್ಜಿ ಜೈಂಟ್ಸ್‌ನದು 132 ಬಿಲಿಯನ್ ಡಾಲರ್‌ ಮೌಲ್ಯವಿದ್ದರೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮೌಲ್ಯ 138 ಬಿಲಿಯನ್ ಡಾಲರ್‌ಗೇರಿದೆ. ಈ ಮೂಲಕ ರಿಲಯನ್ಸ್‌ $138 ಬಿಲಿಯನ್ ತಲುಪಿದ ಮೊದಲ ಭಾರತೀಯ ಕಂಪನಿ ಆಗಿದೆ.

ರಿಲಯನ್ಸ್‌ ಷೇರುಗಳು ಬೆಲೆ 3 ಪಟ್ಟು ಹೆಚ್ಚಳಗೊಂಡಿವೆ. ಆಗಸ್ಟ್‌ನಲ್ಲಿ ರಿಲಯನ್ಸ್‌ ಮಾಲೀಕರು ಕಂಪನಿಯ ನಿವ್ವಳ ಸಾಲವನ್ನು 18 ತಿಂಗಳಲ್ಲಿ ಶೂನ್ಯಕ್ಕೆ ಇಳಿಸುವ ಯೋಜನೆ ಘೋಷಿಸಿದ್ದರು. ನಂತರದಲ್ಲಿ ರಿಲಯನ್ಸ್‌ ಷೇರುಗಳನ್ನು ತೈಲದಿಂದ ರಾಸಯನಿಕಕ್ಕೆ ಪರಿವರ್ತಿಸುವ ಸೌದಿಯ ಅರಾಮ್ಕೋಗೆ ಮಾರುವುದಾಗಿ ಹೇಳಿದ್ದರು. ಆನಂತರ ರಿಲೆಯನ್ಸ್‌ ಷೇರುಗಳ ಬೆಲೆ ಏರುತ್ತಲೇ ಇದೆ.

ಷೇರುಗಳ ಬೆಲೆ ಹೆಚ್ಚುತ್ತಿರುವುದು ಅಂಬಾನಿಗೆ 56 ಬಿಲಿಯನ್ ಡಾಲರ್‌ ನಿವ್ವಳ ಲಾಭ‍ ತಂದು ಕೊಟ್ಟಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಅಲಿಬಾಬಾ ಗ್ರೂಪ್‌ನ ಜ್ಯಾಕ್ ಮಾರನ್ನು ಮೀರಿಸಿ ಈಗ ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಈಗ 10 ಟ್ರಿಲಿಯನ್ ರೂಪಾಯಿ ಮಾರುಕಟ್ಟೆ ತಲುಪಿದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಗೆ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಪಾತ್ರವಾಗಿದೆ.

ಬಿಪಿಯ ಶೇ. 1.2 ಲಾಭಕ್ಕೆ ಹೋಲಿಸಿದರೆ, ರಿಲಯನ್ಸ್ ಈ ವರ್ಷ ಶೇ. 40 ರಷ್ಟು ಹೆಚ್ಚಿದೆ. ಕಚ್ಚಾ ಬೆಲೆಯಲ್ಲಿನ ಬದಲಾವಣೆಗಳಿಂದಾಗಿ ಮತ್ತು ಭವಿಷ್ಯದ ಇಂಧನ ಬೇಡಿಕೆಯ ಮೇಲೆ ಅನಿಶ್ಚಿತತೆ ಮುಂದುವರಿದಿದ್ದರಿಂದ ಹಲವಾರು ತೈಲ ಕಂಪನಿಗಳು ಹೆಣಗಾಡುತ್ತಿವೆ. ಆದರೆ ರಿಲೆಯನ್ಸ್‌ ಮಾತ್ರ ಸತತವಾಗಿ ಲಾಭ ಗಳಿಸುತ್ತಿದೆ.

ಪಶ್ಚಿಮ ಭಾರತದಲ್ಲಿ ವಿಶ್ವದ ಅತಿದೊಡ್ಡ ತೈಲ-ಸಂಸ್ಕರಣಾ ಸಂಕೀರ್ಣವನ್ನು ರಿಲಯನ್ಸ್‌ ನಿರ್ವಹಿಸುತ್ತಿದೆ. ಇದರಲ್ಲಿ ಕಡಿಮೆ-ಗುಣಮಟ್ಟದ ಕಚ್ಚಾ ಪದಾರ್ಥಗಳ್ನು ಸಂಸ್ಕರಿಸಬಹುದು ಮತ್ತು ಸಂಸ್ಕರಿಸಿದ ಪದಾರ್ಥಗಳನ್ನು ಉನ್ನತ ದರ್ಜೆಯ ಇಂಧನವಾಗಿ ಪರಿವರ್ತಿಸಬಹುದು. ಇದು ಬೆಲೆಯಲ್ಲಿ ಆಗುವ ಏರಿಳಿತದಿಂದ ಕಂಪನಿಯನ್ನು ರಕ್ಷಿಸುತ್ತದೆ.

ಇನ್ನು ರಿಲಯನ್ಸ್‌ ತನ್ನ ಆದಾಯದ ಮೂರನೇ ಎರಡರಷ್ಟನ್ನು ಇಂಧನ ಉದ್ಯಮದಿಂದಲೇ ಪಡೆಯುತ್ತಿದೆ. ಜೊತೆಗೆ ವಿಶ್ವದ ಎರಡನೇ ಅತಿದೊಡ್ಡ ಉದ್ಯಮವಾದ ಟೆಲಿಕಾಂ ಮತ್ತು ಡಿಜಿಟಲ್‌ ಸೇವೆಯಲ್ಲಿಯೂ ಸಹ ಭಾರಿ ಪ್ರಮಾಣದ ಹೂಡಿಕೆಯನ್ನು ಮಾಡಿದೆ. ಮುಂದೆ ಅದು ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೂ ಸಹ ವಿಸ್ತರಿಸಲಿದ್ದು ಅಮೆಜಾನ್.ಕಾಮ್ ಇಂಕ್. ಮತ್ತು ವಾಲ್ಮಾರ್ಟ್ ಇಂಕ್. ನೊಡನೆ ಪೈಪೋಟಿ ನಡೆಸಲು ಸಿದ್ದತೆ ನಡೆಸಿದೆ.

ಸದ್ಯ ಇಂಧನ ಉದ್ಯಮದಲ್ಲಿ ರಿಲೆಯನ್ಸ್‌ 6ನೇ ಸ್ಥಾನದಲ್ಲಿದೆ. ಎಕ್ಸಲಾ‌ ಮೊಬಿಲ್‌ ಕಾರ್ಪೋ ಮತ್ತು ಸೌದಿಯ ಆರಾಮ್ಕೋ ಮೊದಲೆರಡು ಸ್ಥಾನಗಳಲ್ಲಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...