Homeಮುಖಪುಟಸಿಎಎ ವಿರುದ್ಧ ದನಿ: ನಾಳೆ ದೇಶಾದ್ಯಂತ ಎಲ್ಲಾ ಚರ್ಚ್‌ಗಳಲ್ಲಿ ’ಸಂವಿಧಾನ ಪ್ರಸ್ತಾವನೆ ಓದು’

ಸಿಎಎ ವಿರುದ್ಧ ದನಿ: ನಾಳೆ ದೇಶಾದ್ಯಂತ ಎಲ್ಲಾ ಚರ್ಚ್‌ಗಳಲ್ಲಿ ’ಸಂವಿಧಾನ ಪ್ರಸ್ತಾವನೆ ಓದು’

- Advertisement -
- Advertisement -

ಜನವರಿ 26ರಂದು ಆಚರಿಸಲಿರುವ 71ನೇ ಗಣರಾಜ್ಯೋತ್ಸವವನ್ನು ಸಂವಿಧಾನ ರಕ್ಷಣಾ ದಿನವೆಂದು ಘೋಷಣೆ ಎಂದು ಕರೆದಿದ್ದು ದೇಶದ ಅತಿದೊಡ್ಡ ಸಮೂಹವನ್ನೊಳಗೊಂಡಿರುವ ಕ್ಯಾಥೋಲಿಕ ಆರ್ಚ್‌ ಬಿಷಪ್ ಚರ್ಚ್ ದೇಶವ್ಯಾಪಿ ಎಲ್ಲಾ ಚರ್ಚ್‌ಗಳಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಓದುವಂತೆ ಮನವಿ ಮಾಡಿದೆ.

ದೇಶದ ಎಲ್ಲಾ ಕ್ಯಾಥೋಲಿಕ್ ಚರ್ಚ್‌ಗಳ ಪಾದ್ರಿಗಳಿಗೆ ಮನವಿ ಮಾಡಿರುವ ಕೇರಳದ ಕೊಲ್ಲಂ ಬಿಷಪ್ ಚರ್ಚ್ ಪಾದ್ರಿ ಪಾಲ್ ಆಂಟೋನಿ ಮುಲ್ಲೇಸರಿ ಕ್ಯಾಥೋಲಿಕ್ ಸಂಘಟನೆಗಳು ಸಂವಿಧಾನ ಪ್ರಸ್ತಾವನೆಯನ್ನು ಓದುವ ಮೂಲಕ ಸಂವಿಧಾನ ರಕ್ಷಣಾ ದಿನವನ್ನು ಆಚರಿಸುವಂತೆ ಕರೆ ನೀಡಿದ್ದಾರೆ.

ಭಾರತ ಅಸಮಾನ್ಯ ಸಾಮಾಜಿಕ ಪರಿಸ್ಥಿತಿಯತ್ತ ಸಾಗುತ್ತಿದೆ. ಸಂವಿಧಾನದ ಪ್ರತಿಗೆ ಮುತ್ತಿಟ್ಟು ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಬಳಿಕ ಸಂವಿಧಾನದ ಮೌಲ್ಯಗಳನ್ನು ಉಲ್ಲಂಘಿಸುವ ಕೆಲಸ ವ್ಯಾಪಕವಾಗಿ ನಡೆಯುತ್ತಿದೆ. ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜಿಸುವ ಮೂಲಕ ಸಂವಿಧಾನದ ಮೌಲ್ಯಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ಕೇವಲ ಒಂದು ಸಮುದಾಯವನ್ನು ಹೊರಗಿಡುತ್ತಿರುವ ಬಗ್ಗೆ ನಾವು ತೀಕ್ಷ್ಣವಾಗಿ ಮತ್ತು ಗಂಭೀರವಾಗಿ ಪ್ರತಿಕ್ರಿಯೆ ನೀಡಬೇಕಾಗಿದೆ. ಇಲ್ಲಿ ಕ್ರಿಶ್ಚಿಯನ್ನರನ್ನು ಹೊರಗಿಡುವ ಕೆಲಸ ನಡೆಯುತ್ತಿದೆ. ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್ನರಿಗೆ ಖಾತ್ರಿಗೊಳಿಸಿದ್ದ ಮೀಸಲಾತಿಯನ್ನು ನಿಲ್ಲಿಸಿರುವುದು ಮತ್ತು ಮೀಸಲಾತಿಯಿಂದ ದಲಿತ ಕ್ರಿಶ್ಚಿಯನ್ನರನ್ನು ಹೊರಗಿಟ್ಟಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಕೊಲ್ಕತ್ತಾ ಆರ್ಚಬಿಷಪ್ ಥಾಮಸ್ ಡಿಸೋಜ ಮಾತನಾಡಿ ಯುನೈಟೆಡ್ ಇಂಟರ್ ರಿಲಿಜಿಯನ್ ಫೆಡರೇಷನ್ ಕೈಗೊಂಡಿರುವ CAA, NRC ಮತ್ತು NPR ವಿರುದ್ದದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು. ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನ್ಯಾಯದ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದು ಮನವಿ ಮಾಡಿದ್ದಾರೆ.

ಪಾರ್ಸಿಗಳು, ಅರೆ ಪಾರ್ಸಿಗಳ ಚರ್ಚುಗಳು ಮಾನವ ಸರಪಳಿಯಲ್ಲಿ ಕೈ ಜೋಡಿಸಿ ಸೌಹಾರ್ದತೆ, ಸಹಭಾಗಿತ್ವವನ್ನು ಸಾರಬೇಕು. ಸಂವಿಧಾನದ ಪ್ರಸ್ತಾವವೆಯನ್ನು ಓದಿ ಸಂವಿಧಾನ ರಕ್ಷಣೆ ದಿನವನ್ನಾಗಿ ಆಚರಿಸಬೇಕು ಎಂದು ಕರೆ ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಿಜಕ್ಕೂ ಇದೊಂದು ಸ್ವಾಗತಾರ್ಹ ಬೆಳವಣಿಗೆ. ಎಲ್ಲಾ ಧರ್ಮದವರೂ ಇದನ್ನು ಅನುಸರಿಸಬೇಕು.

LEAVE A REPLY

Please enter your comment!
Please enter your name here

- Advertisment -

Must Read

“ನನ್ನ ಜನರಿಗೆ ದೇವಸ್ಥಾನಗಳಲ್ಲಿ ಪ್ರವೇಶವಿಲ್ಲ; ನಾನು ಅಯೋಧ್ಯೆಗೆ ಹೋದರೆ ಸಹಿಸುವರೇ?”: ಮಲ್ಲಿಕಾರ್ಜುನ ಖರ್ಗೆ

0
ದೇಶದಾದ್ಯಂತ ಪರಿಶಿಷ್ಟ ಜಾತಿಗಳು (ಎಸ್‌ಸಿಗಳು) ಇನ್ನೂ ತಾರತಮ್ಯವನ್ನು ಎದುರಿಸುತ್ತಿವೆ ಎಂದಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಸರ್ಕಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು...