Homeಮುಖಪುಟಅತ್ಯಾಚಾರದ ಆರೋಪದಲ್ಲಿ ಬಿಜೆಪಿ ಮುಖಂಡ ಚಿನ್ಮಯಾನಂದ್ ಬಂಧನ..

ಅತ್ಯಾಚಾರದ ಆರೋಪದಲ್ಲಿ ಬಿಜೆಪಿ ಮುಖಂಡ ಚಿನ್ಮಯಾನಂದ್ ಬಂಧನ..

- Advertisement -
- Advertisement -

ಬಿಜೆಪಿ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ್ ಅವರನ್ನು ಇಂದು ಮುಂಜಾನೆ 8:50 ಕ್ಕೆ ಬಂಧಿಸಲಾಗಿದೆ. “ಸ್ವಾಮಿ ಚಿನ್ಮಯಾನಂದ್ ಒಂದು ವರ್ಷ ನನ್ನನ್ನು ಅತ್ಯಾಚಾರ ಎಸಗಿದರು ಮತ್ತು ದೈಹಿಕವಾಗಿ ಶೋಷಿಸಿದ್ದಾರೆ” ಎಂದು 23 ವರ್ಷದ ಕಾನೂನು ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದಲ್ಲಿ ಬಂಧನ ನಡೆದಿದೆ. 73 ವರ್ಷದ ಚಿನ್ಮಯಾನಂದ್ ಅವರು “ಅಸಮಾಧಾನ ಮತ್ತು ದೌರ್ಬಲ್ಯ” ದ ಬಗ್ಗೆ ದೂರು ನೀಡಿ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದರು.

ಉತ್ತರ ಪ್ರದೇಶದ ಶಹಜಹಾನ್ಪುರದ ತನ್ನ ಮನೆಯಿಂದ ಒಂದು ವಾರದಿಂದ ನಾಪತ್ತೆಯಾಗಿದ್ದ ಆಕೆ ಕೆಲವು ದಿನಗಳ ಹಿಮದೆ ರಾಜಸ್ಥಾನದಲ್ಲಿ ಪತ್ತೆಯಾಗಿದ್ದು, ಚಿನ್ಮಯಾನಂದ್ ಅವರು ಒಂದು ವರ್ಷದಿಂದ ಅತ್ಯಾಚಾರ ಮತ್ತು ಶೋಷಣೆ ನಡೆಸಿದ್ದರು ಎಂದು ಆ ಕಾನೂನು ವಿದ್ಯಾರ್ಥಿನಿ ದೂರಿದ್ದರು. ಮುಖಕ್ಕೆ ಕಪ್ಪು ಬಟ್ಟೆ ಧರಿಸಿ ಪತ್ರಿಕಾಗೋಷ್ಟಿ ನಡೆಸಿದ್ದಲ್ಲದೇ ಕೆಲವು ಸಾಕ್ಷಿಯ ಕೆಲ ವಿಡಿಯೋಗಳನ್ನು ಸಹ ಲೀಕ್ ಮಾಡಿದ್ದರು.

ಮೂರು ಬಾರಿ ಸಂಸದ ಚಿನ್ಮಯಾನಂದ್ ನೇತೃತ್ವದ ಮಂಡಳಿಯು ನಡೆಸುವ ಕಾನೂನು ಕಾಲೇಜಿನಲ್ಲಿ 23 ವರ್ಷದ ಸಂತ್ರಸ್ತೆ ಕಾನೂನು ವಿದ್ಯಾರ್ಥಿಯಾಗಿದ್ದಳು. ಆಕೆಗೆ ದಾಖಲಾತಿಗಾಗಿ ಸಹಾಯ ಮಾಡುವುದಾಗಿ ಆಮಿಷತೋರಿಸಿ ಶೋಷಣೆ ನಡೆಸಿದ್ದಾರೆ ಎಂಬ ಆರೋಪ ಚಿನ್ಮಯಾನಂದ್ ಮೇಲಿದೆ.

ಆಕೆ ಸ್ನಾನ ಮಾಡುವುದನ್ನು ಚಿತ್ರೀಕರಿಸಿದ ವೀಡಿಯೊದೊಂದಿಗೆ ಅವಳನ್ನು ಬ್ಲ್ಯಾಕ್ ಮೇಲ್ ಮಾಡಿ ಅತ್ಯಾಚಾರ ಮಾಡಿದ್ದಾರೆ. ಹಲವಾರು ಆಶ್ರಮಗಳು ಮತ್ತು ಸಂಸ್ಥೆಗಳನ್ನು ನಡೆಸುತ್ತಿರುವ ರಾಜಕಾರಣಿ ತನ್ನ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾಳೆ ಎಂದು ಸಂತ್ರಸ್ತೆ ದೂರಿದ್ದಾರೆ. ಅಲ್ಲದೇ ಆಕೆಯನ್ನು ಗನ್‌ಪಾಯಿಂಟ್‌ನಲ್ಲಿಟ್ಟು ಅವನ ಕೋಣೆಗೆ ಕರೆತರಲಾಯಿತು ಮತ್ತು ಮಸಾಜ್‌ ಮಾಡುವಂತೆ ಒತ್ತಾಯಿಸಲಾಯಿತು ಎಂದು ಆರೋಪಿಸಿದ್ದಾರೆ.

“ಸಂತ ಸಮಾಜದ ದೊಡ್ಡ ನಾಯಕ” ಇತರ ಅನೇಕ ಹುಡುಗಿಯರ ಜೀವನವನ್ನು ನಾಶಪಡಿಸಿದ್ದಾನೆ ಮತ್ತು ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ” ಎಂದು ತನ್ನ ಫೇಸ್ಬುಕ್ ಪೋಸ್ಟ್ ನಲ್ಲಿ ಬರೆದು ಆಕೆ ಕಣ್ಮರೆಯಾಗಿದ್ದಳು. ಒಂದು ವಾರದ ನಂತರ ಆಗಸ್ಟ್ 30 ರಂದು ಆಕೆಯನ್ನು ರಾಜಸ್ಥಾನದಲ್ಲಿ ಪತ್ತೆಹಚ್ಚಲಾಗಿತ್ತು. ಇದೇ ಸಂದರ್ಭದಲ್ಲಿ ಆಕೆ ತನಗೆ ಸಹಾಯ ಮಾಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ನೀವು ನಮ್ಮ ಬೆನ್ನೆಲುಬು; ಪಕ್ಷದ ಡಿಎನ್‌ಎ..’; ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಸಂದೇಶ

0
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಪಕ್ಷದ ಕಾರ್ಯಕರ್ತರಿಗೆ ಹೃದಯಸ್ಪರ್ಶಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್‌ನ ಅಧಿಕೃತ ಹ್ಯಾಂಡಲ್‌ನಿಂದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿ,...