Homeಮನರಂಜನೆಪ್ರಿ ವೆಡ್ಡಿಂಗ್ ಶೂಟ್ ನಲ್ಲಿ ಈ ಪೊಲೀಸ್ ಮಾಡಿದ ಯಡವಟ್ಟಿನಿಂದ ಕೆಲಸವನ್ನೇ ಕಳೆದುಕೊಳ್ಳಬೇಕಾಗಿದೆ..

ಪ್ರಿ ವೆಡ್ಡಿಂಗ್ ಶೂಟ್ ನಲ್ಲಿ ಈ ಪೊಲೀಸ್ ಮಾಡಿದ ಯಡವಟ್ಟಿನಿಂದ ಕೆಲಸವನ್ನೇ ಕಳೆದುಕೊಳ್ಳಬೇಕಾಗಿದೆ..

- Advertisement -
- Advertisement -

ಈಗ ಮದುವೆಗಳಲ್ಲಿ ವಿವಾಹ ಪೂರ್ವ ವಿಡಿಯೋ ಚಿತ್ರೀಕರಣ (ಪ್ರಿ ವೆಡ್ಡಿಂಗ್ ಶೂಟ್) ಮಾಡಿಸುವುದು ಸಾಮಾನ್ಯ ಸಂಗತಿಯಾಗಿದೆ. 5 ರಿಂದ 10 ನಿಮಿಷ ಇರುವ ವಿಡಿಯೊಗಾಗಿಯೇ ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಾರೆ. ಜನಪ್ರಿಯ ಸಿನಿಮಾ ಹಾಡೋಂದನ್ನು ಹಿನ್ನೆಲೆಯಾಗಿ ಬಳಸಿ ಚೆಂದ ಚೆಂದ ಬಟ್ಟೆ ಧರಿಸಿ ಸಿನಿಮಾ ಹಾಡಿನಂತೆಯೇ ವಿಡಿಯೋ ಮಾಡಿ, ನೋಡಿ ಜನ ಖುಷಿ ಪಡುತ್ತಾರೆ..

ಇದೇ ರೀತಿ ರಾಜಸ್ಥಾನದ ಪೊಲೀಸ್ ಒಬ್ಬ ತನ್ನ ಮದುವೆಯಲ್ಲಿ ತಮಾಷೆ ಮಾಡಲು ಹೋಗಿ ತನ್ನ ಕೆಲಸವನ್ನೇ ಕಳೆದುಕೊಳ್ಳುವ ಹಂತಕ್ಕೆ ಬಂದು ನಿಂತಿದ್ದಾನೆ. ಅಷ್ಟಕ್ಕೂ ಈತ ಮಾಡಿ ತಪ್ಪು ಏನು ಗೊತ್ತೆ? ಪ್ರಿ ವೆಡ್ಡಿಂಗ್ ಶೂಟ್ ನಲ್ಲಿ ಮಾಡಿದ ತಪ್ಪು ಇಲ್ಲಿದೆ ನೋಡಿ.

ಪ್ರಿ ವೆಡ್ಡಿಂಗ್ ಶೂಟ್ ನಲ್ಲಿ ಮದುಮಗ ಪೊಲೀಸ್ ಸಮವಸ್ತ್ರದಲ್ಲಿ ನಿಂತಿರುತ್ತಾನೆ. ಮದುಮಗಳು ಹೆಲ್ಮೆಟ್ ಧರಿಸದೇ ಸ್ಕೂಟರ್ ನಲ್ಲಿ ಬರುತ್ತಾಳೆ. ಅವನು ಕೂಡಲೇ ಅವಳನ್ನು ನಿಲ್ಲಿಸಿ ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿದ್ದಕ್ಕಾಗಿ ದಂಡ ವಿಧಿಸುತ್ತಾನೆ.

ಆಗ ಆಕೆ ಲಂಚವನ್ನು ಕೈಗೆ ಕೊಡದೇ ಆತನ ಜೇಬಿಗೆ ಹಾಕುತ್ತಾಳೆ ಮತ್ತು ಆತನ ಇಡೀ ಕೈಚೀಲವನ್ನು (ಪರ್ಸ್) ತೆಗೆದುಕೊಂಡು ಹೋಗುತ್ತಾಳೆ. ಆಗ ಆತ ಅವಳತ್ತ ಓಡಿ ತನ್ನ ಕೈಚೀಲ ಪಡೆದುಕೊಳ್ಳಲು ಪ್ರಯತ್ನಿಸುತ್ತಾನೆ, ಅವಳು ನಿರಾಕರಿಸುತ್ತಾಳೆ ಈಗೆ ಅವರು ಪ್ರೀತಿಯಲ್ಲಿ ಬೀಳುತ್ತಾರೆ..

ಥೇಟ್ ಬಾಲಿವುಡ್ ಹಾಡಿನ ಶೈಲಿಯಲ್ಲಿ ಮಾಡಲಾದ ಈ ಮನಮೋಹಕ ಹಾಡನ್ನು ಮಧುಮಗ ಪೊಲೀಸ್ ಧನಪತ್ ಯೂಟ್ಯೂಬ್ ಗೆ ಅಪ್ ಲೋಡ್ ಮಾಡಿದ್ದಾನೆ. ಹಾಡು ಎಲ್ಲೆಡೆ ಹರಿದಾಡಿ ಕೊನೆಗೆ ಪೊಲೀಸ್ ಅಧಿಕಾರಿಗಳಿಗೂ ತಲುಪಿದೆ. ನೋಡಿದ ಕೂಡಲೇ ಕೆಂಡಾಮಂಡಲರಾದ ಅಧಿಕಾರಿಗಳು ಧನಪತ್ ಗೆ ಕರೆಕಳಿಸಿದ್ದಾರೆ.

ಉದಯಪುರ ಜಿಲ್ಲೆಯಲ್ಲಿ ಪೋಸ್ಟ್ ಮಾಡಲಾದ ಧನಪತ್ ಅವರ ಪೂರ್ವ ವಿವಾಹದ ಚಿತ್ರೀಕರಣವು ಅವರು ಪೊಲೀಸ್ ಸಮವಸ್ತ್ರವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಮತ್ತು ಲಂಚ ಪಡೆಯುತ್ತಿರುವುದು ಇಡೀ ಇಲಾಖೆಗೆ ಅಗೌರವ ಎಂದು ಭಾವಿಸಿ ಆತನ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆಯ ಐಜಿಯಾದ ಡಾ.ಹವಾ ಸಿಂಗ್ ಘೋಮರಿಯಾ ಅವರು ಎಲ್ಲಾ ಶ್ರೇಣಿಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್‌ಗಳಿಗೆ ನೀಡಿದ ನೋಟಿಸ್‌ನಲ್ಲಿ “ಪೊಲೀಸ್ ಸಮವಸ್ತ್ರವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಅಪರಾಧ ಮಾಡುವ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಹೇಳಿದ್ದಾರೆ.

ಲಂಚ ಪಡೆಯುತ್ತಿರುವುದನ್ನು ಸಾರ್ವತ್ರಿಕರಣಗೊಳಿಸಿರುವುದರಿಂದ ಇದು ಪೊಲೀಸ್ ಇಲಾಖೆಯ ಚಿತ್ರಣವನ್ನು ಹಾಳು ಮಾಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಘಟನೆಯು ದೊಡ್ಡ ಎಚ್ಚರಿಕೆಯಾಗಿದ್ದು ಎಲ್ಲರೂ ಜಾಗರೂಕರಾಗಿರಬೇಕೆಂಬ ಆದೇಶ ಬಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಕಾಲಿ ಎಕ್ಟಿಂಗ್ ಮಾಡಿದರೆ ಕೆಲಸ ಹೋಗುತ್ತದೆ.
    ನಿಜವಾಗಿಯೂ ಲಂಕ ಪಡೆಯುವ ಅದಿಕಾರಿಗಳು ಇನ್ನೂ ಹುದ್ದೆಯಲ್ಲಿ ಇರುತ್ತಾರೆ

  2. ಕಾಲಿ ಎಕ್ಟಿಂಗ್ ಮಾಡಿದರೆ ಕೆಲಸ ಹೋಗುತ್ತದೆ.
    ನಿಜವಾಗಿಯೂ ಲಂಚ ಪಡೆಯುವ ಅಧಿಕಾರಿಗಳು ಇನ್ನೂ ಹುದ್ದೆಯಲ್ಲಿ ಇರುತ್ತಾರೆ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...