Homeಎಕಾನಮಿಸ್ನೇಹಿತರೆ, ಮುಂದಿನ ಒಂದು ವರ್ಷ ಜಾಗ್ರತೆಯಾಗಿರೋಣ: ಬಹಿರಂಗ ಪತ್ರ ಬರೆದ ಡಾ.ಪುರುಷೋತ್ತಮ ಬಿಳಿಮಲೆ

ಸ್ನೇಹಿತರೆ, ಮುಂದಿನ ಒಂದು ವರ್ಷ ಜಾಗ್ರತೆಯಾಗಿರೋಣ: ಬಹಿರಂಗ ಪತ್ರ ಬರೆದ ಡಾ.ಪುರುಷೋತ್ತಮ ಬಿಳಿಮಲೆ

- Advertisement -
- Advertisement -

ಜೆ.ಎನ್.ಯು ನಲ್ಲಿ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾಗಿರುವ ಡಾ.ಪುರುಷೋತ್ತಮ ಬಿಳಿಮಲೆಯವರು ತನ್ನೆಲ್ಲಾ ಸ್ನೇಹಿತರ ಮೇಲಿನ ಕಾಳಜಿಯಿಂದ ಫೇಸ್ ಬುಕ್ ನಲ್ಲಿ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಕುಸಿಯುತ್ತಿರುವ ಆರ್ಥಿಕ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಅವರು ಬರೆದ ಕಾಳಜಿಯುತ ಪತ್ರ ಎಲ್ಲರ ಗಮನಸೆಳೆದಿದ್ದು ಅದನ್ನು ಇಲ್ಲಿ ಯಥಾವತ್ತಾಗಿ ಮುದ್ರಿಸುತ್ತಿದ್ದೇವೆ.

ಫೇಸ್ ಬುಕ್ ನಲ್ಲಿರುವ ನನ್ನ ಅನೇಕ ಗೆಳೆಯರು ಆರ್ಥಿಕವಾಗಿ ದುರ್ಬಲರೆಂಬುದನ್ನು ನಾನು ಬಲ್ಲೆ. ಇಂಥ ಗೆಳೆಯರ/ಗೆಳತಿಯರ ಸಾಮಾಜಿಕ ಕಳಕಳಿ ಮಾತ್ರ ಅತ್ಯುನ್ನತ ಮಟ್ಟದ್ದು. ಮಾನವನ ಘನತೆಗೆ ಕುಂದು ತರುವ ಯಾವುದೇ ವಿಷಯಗಳ ಮೇಲೆ ಅವರೆಲ್ಲ ತುಂಬ ದಿಟ್ಟವಾಗಿ , ಎಷ್ಟೋಬಾರಿ ಮುಗ್ಧವಾಗಿ ಬರೆಯುತ್ತಿದ್ದಾರೆ. ಅಂಥ ಗೆಳೆಯರ ಬಗ್ಗೆ ಹೆಮ್ಮೆಪಡುತ್ತಾ ಈ ಕೆಳಗಿನ ಟಿಪ್ಪಣಿ-

ಮುಂದಿನ ಕನಿಷ್ಠ ಒಂದು ವರುಷಗಳ ಕಾಲ ಬಡ ಭಾರತೀಯರು ತುಂಬ ಕಷ್ಟಗಳನ್ನು ಇದಿರಿಸಬೇಕಾಗಿದೆ. ಮಧ್ಯಮ ವರ್ಗದವರು ಕೂಡಾ ಈ ಆರ್ಥಿಕ ಸಂಕಷ್ಟಗಳಿಗೆ ಬಲಿಯಾಗಬೇಕಾದ ಎಲ್ಲ ಲಕ್ಷಣಗಳಿವೆ. ಹಾಗಾಗಿ ನಾವು ಅನೇಕ ವಿಷಯಗಳಲ್ಲಿ ಮುಖ್ಯವಾಗಿ ನಮ್ಮ ಹಣಕಾಸಿನ ವಿಷಯಗಳಲ್ಲಿ ತುಂಬ ಎಚ್ಚರಿಕೆಯನ್ನು ವಹಿಸಬೇಕಾಗಿದೆ.

1. ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಹದಗೆಟ್ಟಿದ್ದು, ಅದು ಸುಧಾರಿಸಿಕೊಳ್ಳಲು ಬಹಳ ಸಮಯ ಬೇಕು. ಕೇಂದ್ರ ಸರಕಾರಕ್ಕೆ ಈ ಕುರಿತು ಸರಿಯಾಗಿ ಮಾರ್ಗದರ್ಶನ ಮಾಡಬಲ್ಲ ಆರ್ಥಿಕ ತಜ್ಞರಾರೂ ಇದ್ದಂತಿಲ್ಲ. ಇದ್ದವರು ಬಿಟ್ಟು ಹೋಗಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಹಣ ಹರಿದು ಬರುತ್ತಿಲ್ಲ, ಸಾಲ ತೆಗೆದುಕೊಂಡವರು ಹಣ ಹಿಂದಿರುಗಿಸುತ್ತಿಲ್ಲ ( ಈ ಒತ್ತಡ ತಾಳಲಾರದೆ, ಬ್ಯಾಂಕುಗಳಲ್ಲಿ ಕೆಲಸ ಮಾಡುವ ಕೆಲವು ಅಧಿಕಾರಿಗಳು ಸ್ವಯಂ ನಿವೃತ್ತಿ ಪಡೆಯುತ್ತಿದ್ದಾರೆ). ಹೀಗಾಗಿ ಬ್ಯಾಂಕುಗಳನ್ನು ಹೆಚ್ಚು ನಾವು ನೆಚ್ಚಿಕೊಳ್ಳುವಂತಿಲ್ಲ.

2. ಕಟ್ಟಿರುವ ಮನೆಗಳು ಮಾರಾಟವಾಗದೆ ಹಾಗೇ ಉಳಿಯುತ್ತಿವೆ ( ನೋಯ್ಡಾ, ಫರಿದಾಬಾದ್ ಮತ್ತು ಗುರುಗ್ರಾಮದಲ್ಲಿ ಪರಿಸ್ಥಿತಿ ವಿಷಮಿಸಿದೆ. ಅರ್ಧ ಕಟ್ಟಿ ಉಳಿದ ಮನೆಗಳನ್ನು ಸರಕಾರವೇ ಪೂರ್ಣಗೊಳಿಸಲು ಸುಪ್ರಿಂ ಕೋರ್ಟು ಆದೇಶ ನೀಡಿದೆ. (ಸರಕಾರ ಹೇಗೆ ಈ ಕೆಲಸವನ್ನು ಪೂರ್ಣಗೊಳಿಸುವುದೋ ಯಾರಿಗೂ ತಿಳಿಯದು)

3. ಹೊಸ ಮನೆಗಳು/ಕಟ್ಟಡಗಳು ನಿರೀಕ್ಷಿತ ವೇಗದಲ್ಲಿ ಮೇಲೇಳದೇ ಇರುವುದರಿಂದ ಸ್ಟೀಲ್, ಸಿಮೆಂಟ್, ಮತ್ತಿತರ ಸಾಮಗ್ರಿಗಳಿಗೆ ಬೇಡಿಕೆ ಇಲ್ಲವಾಗಿದೆ.

4. ಅಟೋಮೋಬಾಯಿಲ್ ಸೆಕ್ಟರ್ ಈಗಾಗಲೇ 350000 ಉದ್ಯೋಗಿಗಳನ್ನು ಕಳಕೊಂಡಿದೆ. ಮಾರುತಿ 16% ನಷ್ಟವನ್ನು ತೋರಿಸಿದೆಯಲ್ಲದೆ, ಶೇಕಡಾ 50 ಉತ್ಪಾದನೆಯನ್ನು ಕಡಿತಗೊಳಿಸಿದೆ. ಟಾಟಾ ಮೋಟಾರ್ಸ ನವರು ಪೂನಾ ಮತ್ತು ಜಮಶೆದ್ ಪುರ್ ನ ತನ್ನ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಿದ್ದು, 8000 ಕೋಟಿ ರೂಪಾಯಿಗಳ ನಷ್ಟವನ್ನು ಡಿಕ್ಲೇರ್ ಮಾಡಿದೆ. ಮೊದಲ ಬಾರಿಗೆ ದ್ವಿಚಕ್ರ ವಾಹನಗಳ ಮಾರಾಟ ಕುಸಿದಿದೆ. ಪತಂಜಲಿ ಕೂಡಾ ತನ್ನ ಜಾಹೀರಾತುಗಳಿಗೆ ಕಡಿವಾಣ ಹಾಕಿದೆ. 2018ರಲ್ಲಿ ಅದು ತನ್ನ ಆದಾಯದಲ್ಲಿ 10% ಕಡಿತ ತೋರಿಸಿದೆ.

5. ಖಾಸಗಿಯವರು ಉತ್ಪಾದನೆ ಸ್ಥಗಿತಗೊಳಿಸಿದಾಗ, ಸಹಜವಾಗಿ ಸರಕಾರದ ಆದಾಯ ಇನ್ನಷ್ಟು ಕಡಿಮೆಯಾಗುತ್ತದೆ. ಲಾರಿಗಳನ್ನು ಬಾಡಿಗೆಗೆ ಕೊಳ್ಳುವವರಲ್ಲಿ ಈಗಾಗಲೇ ಶೇಕಡಾ 15 ಕಡಿತವುಂಟಾಗಿ, ಲಾರಿ ಚಾಲಕರು ಉದ್ಯೋಗವಿಲ್ಲದೆ ಅಳುತ್ತಿದ್ದಾರೆ. ಓಡಾಡುವವರಿಲ್ಲದೆ ವಿಮಾನಗಳು ನಿರಂತರ ನಷ್ಟ ಅನುಭವಿಸುತ್ತಿದ್ದು ಪ್ರಯಾಣಿಕರಲ್ಲಿ 25% ಕಡಿತ ಉಂಟಾಗಿದೆ. ಈ ವಿತ್ತೀಯ ಕೊರತೆಯನ್ನು ತುಂಬಿಕೊಳ್ಳಲು ಸರಕಾರ ಇನ್ನಷ್ಟು ತೆರಿಗೆಗಳನ್ನು ನಮ್ಮ ಮೇಲೆ ಹೇರುತ್ತದೆ.

6. ಜನರ ಕೊಳ್ಳುವ ಶಕ್ತಿಯು ಈಗಾಗಲೇ 20% ಕಡಿಮೆಯಾಗಿದೆ.

7. ಕೆಲವು ಆಯ್ದ ಜಾಗಗಳನ್ನು ಹೊರತು ಪಡಿಸಿದರೆ, ಉಳಿದೆಡೆಗಳಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಭಾರತದ ಅರ್ಥವ್ಯವಸ್ಥೆಗೆ ಮಾರಕ ಹೊಡೆತ ನೀಡಿದ ಡಿಮೋನಿಟೈಸೇಶನ್ ನಿಂದಾಗಿ ಸಣ್ಣ ಉದ್ಯಮಿಗಳೆಲ್ಲಾ ಬೀದಿ ಪಾಲಾಗಿದ್ದಾರೆ. ಇದು ಪರೋಕ್ಷವಾಗಿ ದೊಡ್ಡ ಉದ್ಯಮಗಳ ಮೇಲೂ ಪರಿಣಾಮ ಬೀರಿದೆ.

8. ಭಾರತ ಸರಕಾರವು 2020ರಲ್ಲಿ ಐದು ಟ್ರಿಲಿಯನ್ ಅರ್ಥವ್ಯಸ್ಥೆಯನ್ನು ಹೊಂದುವುದಾಗಿ ಘೋಷಿಸಿದೆ. ಇದು ಸಾಧ್ಯವಾಗಬೇಕಾದರೆ, ಭಾರತವು 14-15% ಅಭಿವೃದ್ಧಿಯನ್ನು ಸಾಧಿಸಬೇಕು. ಈಗ ಇರುವಂತೆ ಸರಕಾರ 7% ಅಭಿವೃದ್ಧಿಯನ್ನು ಘೋಷಿಸುತ್ತಿದ್ದರೂ ವಾಸ್ತವವಾಗಿ ಅದಿನ್ನೂ 4% ಆಗಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಿದ್ದಾರೆ. ಹೀಗಾಗಿ 14-15 % ಅಭಿವೃದ್ಧಿ ಮರೀಚಿಕೆಯೇ ಸರಿ.

9. ಅಂಕಿ ಅಂಶಗಳನ್ನು ಬೇಕಾದಂತೆ ತಿದ್ದುವ ಪರಿಪಾಠ ಬೆಳೆಯುತ್ತಿದ್ದು, ಸರಕಾರ ಹೇಳಿದ್ದನ್ನು ಯಾರೂ ನಂಬುತ್ತಿಲ್ಲವಾದ್ದರಿಂದ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ವ್ಯತ್ಯಯ ಕಾಣಲಾರಂಭಿಸಿದೆ.
10. ಮಳೆ ಇಲ್ಲದೆ/ ಹೆಚ್ಚು ಮಳೆಬಂದು, ರೈತರು ಆತ್ಮಹತ್ಯೆ ಮಾಡಿಕೊಳ್ಳಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಆರ್ಥಿಕ ಕುಸಿತದ ಸಮಸ್ಯೆಯು ಭಾರತಕ್ಕೆ ಮಾತ್ರ ಸೀಮಿತವಾಗಿರದೆ, ಜಾಗತಿಕವಾಗಿದೆ. ಆಳುವವರು ಈ ಆರ್ಥಿಕ ವಿಫಲತೆಯನ್ನು ಜನರೆದುರು ತೆರೆದಿಡದೆ, ಅದನ್ನು ಮುಚ್ಚಿ ಹಾಕಲು ಬಗೆ ಬಗೆಯ ತಂತ್ರಗಳನ್ನು ಹೆಣೆಯುತ್ತಿರುವುದನ್ನು ನಾವು ದಿನನಿತ್ಯ ಕಾಣುತ್ತಿದ್ದೇವೆ.
ಹಿಂದೂ’ಗಳೆಲ್ಲರೂ ಒಂದಾದ ಆನಂತರವೂ ಮೇಲೆ ಹೇಳಿದ ಭಾರತದ ಸಮಸ್ಯೆಗಳು ಹಾಗೆಯೇ ಉಳಿಯುತ್ತವೆ

ಹೀಗಾಗಿ ಕನಿಷ್ಠ ಮುಂದಿನ ಒಂದು ವರ್ಷಗಳವರೆಗೆ ದಯವಿಟ್ಟು ತಮ್ಮ ಹಣ ಕಾಸಿನ ವಿಚಾರದಲ್ಲಿ ಜಾಗ್ರತೆಯಾಗಿರಿ. ಶ್ರೀಮಂತರು ಸಹಾಯ ಮಾಡುವುದಿಲ್ಲ. ಮಾಡದಿರುವುದರಿಂದಲೇ ಅವರು ಶ್ರೀಮಂತರಾದದ್ದು. ಕಷ್ಟಕಾಲದಲ್ಲಿ ನೆರವಿಗೆ ಬರುವವರೂ ಕಡಿಮೆ, ಮತ್ತು ಅವರೂ ಕಷ್ಟದಲ್ಲಿರುತ್ತಾರೆ ಎಂಬುದನ್ನು ಮರೆಯದಿರೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮನೆ ಕಟ್ಟಲು, ವಾಹನ ಖರೀದಿಸಲು ಇದು ಸುಸಮಯ: ರೆಪೊ ದರ ಕಡಿತಗೊಳಿಸಿದ ಆರ್.ಬಿ.ಐ

ಡಿಸೆಂಬರ್ 05, ಶುಕ್ರವಾರದಂದು ನಡೆದ ಹಣಕಾಸು ನೀತಿ ಸಭೆಯಲ್ಲಿ (MPC) ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ. ಇಂದಿನ ಕಡಿತದ ನಂತರ, ಕೇಂದ್ರ ಬ್ಯಾಂಕ್ ಈ...

ಉತ್ತರ ಪ್ರದೇಶ| ದಲಿತ ಯುವಕನ ಮೇಲೆ ಹಲ್ಲೆ; ಬಂದೂಕು ತೋರಿಸಿ ವಿವಸ್ತ್ರಗೊಳಿಸಿದ ಗುಂಪು

ಸಿಗರೇಟ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಗುಂಪೊಂದು ದಲಿತ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ವರದಿಯಾಗಿದೆ. ಗುಂಪು ದಲಿತ ಯುವಕನನ್ನು ಚಪ್ಪಲಿಯಿಂದ ಹೊಡೆದು, ಮುಷ್ಟಿ, ಕಾಲು ಮತ್ತು...

ಶುಕ್ರವಾರ ದೆಹಲಿ ವಿಮಾನ ನಿಲ್ದಾಣದಿಂದ ಎಲ್ಲಾ ದೇಶೀಯ ವಿಮಾನಗಳನ್ನು ರದ್ದುಗೊಳಿಸಿದ ಇಂಡಿಗೋ

ಶುಕ್ರವಾರ ದೆಹಲಿ ವಿಮಾನ ನಿಲ್ದಾಣದಿಂದ ಎಲ್ಲಾ ದೇಶೀಯ ವಿಮಾನಗಳನ್ನು ಇಂಡಿಗೋ ರದ್ದುಗೊಳಿಸಿದೆ. ಶುಕ್ರವಾರ ಹಲವಾರು ವಿಮಾನ ನಿಲ್ದಾಣಗಳಲ್ಲಿ 400 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ತಿಳಿದುಬಂದಿದೆ.  ಶುಕ್ರವಾರ (ಡಿಸೆಂಬರ್ 5, 2025) ಮಧ್ಯರಾತ್ರಿಯವರೆಗೆ ಎಲ್ಲಾ...

ದ್ವೇಷ ಭಾಷಣ ಮಸೂದೆಗೆ ಕರ್ನಾಟಕ ಸಚಿವ ಸಂಪುಟ ಅನುಮೋದನೆ, ಕಠಿಣ ಶಿಕ್ಷೆ ಪ್ರಸ್ತಾವನೆ

ಕರ್ನಾಟಕ ಸಚಿವ ಸಂಪುಟವು ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಮಸೂದೆಯನ್ನು ಅಂಗೀಕರಿಸಿದೆ, ದ್ವೇಷ ಭಾಷಣಕ್ಕೆ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹50,000 ದಂಡವನ್ನು ವಿಧಿಸುವ ಕಠಿಣ ಶಿಕ್ಷೆಯ ಪ್ರಸ್ತಾವನೆಯನ್ನು ಈ...

BREAKING NEWS: ಚನ್ನರಾಯಪಟ್ಟಣ ರೈತ ಹೋರಾಟಕ್ಕೆ ‘ತಾಂತ್ರಿಕ’ ಅಂತ್ಯ: 1777 ಎಕರೆ ಡಿನೋಟಿಫೈಗೆ ಒಪ್ಪಿದ ಸಚಿವ ಸಂಪುಟ

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಹೋರಾಟಕ್ಕೆ ಅಂತಿಮವಾಗಿ ತಾಂತ್ರಿಕ ಜಯವೂ ಸಿಕ್ಕಿದೆ. ಡಿಸೆಂಬರ್ 4, ಗುರುವಾರ ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ...

ಲೈಂಗಿಕ ಕಿರುಕುಳ ಆರೋಪ: ಪಾಲಕ್ಕಾಡ್ ಶಾಸಕನ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರದ ಬೆನ್ನಲ್ಲೇ, ಪಕ್ಷದಿಂದ ಉಚ್ಛಾಟಿಸಿದ ಕಾಂಗ್ರೆಸ್ 

ತಿರುವನಂತಪುರಂ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ ನಂತರ ಕೇರಳ ಕಾಂಗ್ರೆಸ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ.  ರಾಹುಲ್ ಮಮ್‌ಕೂಟತಿಲ್ ತಮ್ಮ ಶಾಸಕ...

ದಲಿತರು ಒಗ್ಗಟ್ಟಾಗದೆ ಮುನುವಾದಿಗಳ ವಿರುದ್ಧ ಶಕ್ತಿ ಪ್ರದರ್ಶನ ಸಾಧ್ಯವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ದಲಿತರು ಒಗ್ಗಟ್ಟಾಗದೆ ಇದ್ದರೆ ಮುನುವಾದಿಗಳ ವಿರುದ್ಧ ಶಕ್ತಿ ಪ್ರದರ್ಶನ ಸಾಧ್ಯವಿಲ್ಲ; ನಾವು ನೂರಿನ್ನೂರು ಜನ ಪ್ರತ್ಯೇಕ ಹೋರಾಟ ಮಾಡಿದರೆ ಪ್ರಯೋಜನವಿಲ್ಲ, ಒಂದು ಕರೆ ಕೊಟ್ಟರೆ ಲಕ್ಷಾಂತರ ಜನರು ಸೇರುವಂತಾಗಬೇಕು ಎಂದು ಲೋಕೋಪಯೋಗಿ ಸಚಿವ...

ದಲಿತ ಚಳವಳಿ ಎಲ್ಲ ಶೋಷಿತರನ್ನೂ ಒಳಗೊಂಡಿದೆ; ನಮ್ಮಲ್ಲಿ ಹೊಲೆ-ಮಾದಿಗ ಎಂಬ ಬೇಧವಿಲ್ಲ: ದಸಂಸ ಸಂಚಾಲಕ ಹೆಣ್ಣೂರು ಶ್ರೀನಿವಾಸ್

"ದಲಿತ ಚಳವಳಿ ಯಾವುದೇ ಒಂದು ಜಾತಿಯ ಪರವಾಗಿಲ್ಲ.. ಪೌರ ಕಾರ್ಮಿಕನ ಮಗನನ್ನ ರಾಜ್ಯ ಸಂಚಾಲಕನನ್ನಾಗಿ ಮಾಡಿದೆ. ನಮ್ಮಲ್ಲಿ ಹೊಲೆಯ-ಮಾದಿಗ ಎಂಬ ಬೇಧವಿಲ್ಲ. ಈ ಚಳವಳಿ ಎಲ್ಲ ಶೋಷಿತ ಸಮುದಾಯಗಳನ್ನೂ ಒಳಗೊಂಡಿದೆ" ಎಂದು ಕರ್ನಾಟಕ...

ಚಳಿಗಾಲದ ಅಧಿವೇಶನ: ಸಂಸತ್ತಿನ ಹೊರಗೆ ‘ವಾಯು ಮಾಲಿನ್ಯದ ಕುರಿತು ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷಗಳಿಂದ ಪ್ರತಿಭಟನೆ

2025 ರ ಸಂಸತ್ತಿನ ಚಳಿಗಾಲದ ಅಧಿವೇಶನವು ನಾಲ್ಕನೇ ದಿನಕ್ಕೆ ಕಾಲಿಡುತ್ತಿದ್ದಂತೆ, ದೆಹಲಿ-ಎನ್‌ಸಿಆರ್ ಮತ್ತು ಉತ್ತರ ಭಾರತದಾದ್ಯಂತ ಹದಗೆಡುತ್ತಿರುವ ವಾಯು ಮಾಲಿನ್ಯದ ಕುರಿತು ತುರ್ತು ಚರ್ಚೆಗೆ ಒತ್ತಾಯಿಸಿ ಕಾಂಗ್ರೆಸ್ ಸಂಸದರು ಗುರುವಾರ ಲೋಕಸಭೆಯಲ್ಲಿ ಮುಂದೂಡಿಕೆ...

ಭೀಮಾ ಕೋರೆಗಾಂವ್ ಪ್ರಕರಣ: ದೆಹಲಿ ವಿವಿ ಪ್ರಾಧ್ಯಾಪಕ ಹನಿ ಬಾಬುಗೆ ಜಾಮೀನು

ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ 2020 ರಲ್ಲಿ ಬಂಧಿಸಲ್ಪಟ್ಟು ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪ ಎದುರಿಸುತ್ತಿರುವ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಖ್ಯಾತ ಶಿಕ್ಷಣ ತಜ್ಞ ಡಾ....