ಪ್ರಿಯಾಂಕಾ ಗಾಂಧಿ ಮನೆಯಲ್ಲಿ ಭದ್ರತಾ ಉಲ್ಲಂಘನೆ : ಮನೆಗೆ ತೆರಳಿ ಸೆಲ್ಫಿ ಕೇಳಿದ ಅಪರಿಚಿತರು…

ಕಾಂಗ್ರೆಸ್‌ ಪಕ್ಷದ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರರವರ ಮನೆಯಲ್ಲಿ ನವೆಂಬರ್‌ 25ರಂದು ಭದ್ರತಾ ಉಲ್ಲಂಘನೆಯಾಗಿದ್ದು ಐದು ಜನ ಅಪರಿಚಿತರು ಸೀದಾ ಮನೆಯಂಗಳಕ್ಕೆ ಕಾರಿನಲ್ಲಿ ತೆರಳಿ ಸೆಲ್ಫಿ ತೆಗೆದುಕೊಳ್ಳಲು ಕೇಳಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇತ್ತೀಚೆಗೆ ತಾನೇ ಗಾಂಧಿ ಕುಟುಂಬಕ್ಕೆ ಒದಗಿಸಲಾಗಿದ್ದ ಎಸ್‌ಪಿಜಿ ಸೆಕ್ಯುರಿಟಿಯನ್ನು ಬದಲಿಸಿ ಅವರಿಗೆ ಝಡ್‌ ಪ್ಲಸ್‌ ಸೆಕ್ಯುರಿಟಿಗೆ ಇಳಿಸಿದ ಹಿನ್ನಲೆಯಲ್ಲಿ ಪ್ರಕರಣಕ್ಕೆ ಭಾರೀ ಮಹತ್ವ ಬಂದಿತ್ತು ದೇಶದೆಲ್ಲೆಡೆ ಚರ್ಚೆಗೆ ಒಳಗಾಗಿದೆ.

ಮಧ್ಯ ದೆಹಲಿಯ ಲೋಧಿ ಎಸ್ಟೇಟ್‌ನಲ್ಲಿರುವ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮನೆಗೆ ಕಾರು ತೆರಳಿದ್ದು ಭದ್ರತಾ ಉಲ್ಲಂಘನೆಯ ಬಗ್ಗೆ ಗಂಭೀರ ಕಳವಳಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಿಯಾಂಕಾ ಗಾಂಧಿಯವರ ಮನೆಯಲ್ಲಿ ಉದ್ಯಾನವನದ ಬಳಿಯ ಪೋರ್ಟಿಕೊವರೆಗೂ ನಡೆದ ಕಾರಿನಿಂದ ಐದು ಜನ ಇಳಿದಿದ್ದಾರೆ. ಅಲ್ಲಿಂದ ಅವರು ನೇರವಾಗಿ ಆಕೆಯ ತೋಟಕ್ಕೆ ತೆರಳಿ ಪ್ರಿಯಾಂಕ ಗಾಂಧಿಯೊಂದಿಗೆ ಫೋಟೋ ತೆಗೆದುಕೊಡುವಂತೆ ಕೇಳಿಕೊಂಡರು ಎಂದು ಮೂಲಗಳು ತಿಳಿಸಿವೆ.

ಆ ಕುಟುಂಬವು ಉತ್ತರ ಪ್ರದೇಶದಿಂದ ಬಂದಿದ್ದು ಫೋಟೋ ತೆಗೆಸಿಕೊಳ್ಳುವುದಕ್ಕಾಗಿಯೇ ಬಂದಿರುವುದಾಗಿ ತಿಳಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಲು ಯಾವುದೇ ಸಂದರ್ಶಕರು ಅನುಮತಿ ತೆಗೆದುಕೊಳ್ಳದೇ ಹೇಗೆ ಒಳಗೆ ಬಂದರು? ಅದೂ ಒಂದು ಕಾರಿನಲ್ಲಿ? ಮುಂತಾದ ಪ್ರಶ್ನೆಗಳೆದ್ದಿವೆ.

ರಾಜೀವ್‌ ಗಾಂಧಿ ಹತ್ಯೆ ನಂತರ ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್‌ಪಿಜಿ ಸೆಕ್ಯುರಿಟಿಯನ್ನು ಎರಡು ವಾರಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರ ಹಿಂತೆದುಕೊಂಡು ಕಾಯ್ದೆಗೆ ತಿದ್ದುಪಡಿ ಸಹ ತಂದಿತ್ತು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

  1. ಇದು ಬಹಳ ಕಳವಳಕಾರಿ, ಇದರ ಹಿಂದಿನ ಉದ್ದೇಶ ಬಹಿರಂಗವಾಗಿ ಬೇಕು.ಏನು ಎತ್ತು ವಿಚಾರಿಸದೆ ಸಂದರ್ಶನಾಸ್ಕ್ತರನ್ನು ಒಳಗೆ ಬಿಡುವುದು ಬಹಳ ಅನುಮಾನಾಸ್ಪದವಾಗಿರುವುದು. ಸೂಕ್ತ ತನಿಖೆ ಆಗಬೇಕು

LEAVE A REPLY

Please enter your comment!
Please enter your name here