Homeಕರ್ನಾಟಕಪ್ರವಾಹ ಪರಿಹಾರ ಕೊಡದ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು? : ಸಂತ್ರಸ್ತರಿಂದ ಬೆಳಗಾವಿಯಲ್ಲಿ ಮುಖ್ಯಮಂತ್ರಿಗೆ ಮುತ್ತಿಗೆ

ಪ್ರವಾಹ ಪರಿಹಾರ ಕೊಡದ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು? : ಸಂತ್ರಸ್ತರಿಂದ ಬೆಳಗಾವಿಯಲ್ಲಿ ಮುಖ್ಯಮಂತ್ರಿಗೆ ಮುತ್ತಿಗೆ

- Advertisement -
- Advertisement -

ಪ್ರವಾಹ ಪರಿಹಾರದ ವಿಚಾರ ಚರ್ಚಿಸಲು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಲು ಪ್ರಯತ್ನಿಸಿದ ರೈತರು ಮತ್ತು ಮಹಿಳೆಯರನ್ನು ಪೊಲೀಸರು ತಡೆದಿದ್ದಾರೆ. ಕೋಪಗೊಂಡ ಸಂತ್ರಸ್ತರು ಸಿಎಂ ಕಾರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಬಂಧಿಸಿದ್ದಾರೆ.

೮-೧೦ರವರೆಗೆ ಮುಖ್ಯಮಂತ್ರಿಯವರಿಗೆ ಅಹವಾಲು ಸಲ್ಲಿಸಬಹುದು ಎಂದು ಮೊದಲೇ ಘೋಷಿಸಿತ್ತು. ನಾವು ೯:೩೦ ಗಂಟೆಗೆ ಅಹವಾಲು ಸಲ್ಲಿಸಲು ಮುಂದಾದರೆ ಅಷ್ಟಕ್ಕೆ ಯಡಿಯೂರಪ್ಪನವರು ಅಲ್ಲಿಂದ ಹೊರಟಿದ್ದಾರೆ. ಇದರಿಂದ ಆಕ್ರೋಶಗೊಂಡ ಜನರು ಘೋಷಣೆ ಕೂಗಿ ಪ್ರತಿಭಟನೆಗೆ ನಡೆಸಿದ್ದಾರೆ. ಸಿಎಂ ಕಾರು ರಸ್ತೆ ಬದಲಿಸಿ ಬೇರೆ ರಸ್ತೆಯಲ್ಲಿ ಹೋಗಿದೆ. ಇದರಿಂದ ಇನ್ನಷ್ಟು ಕ್ರೋಧಗೊಂಡ ಜನರು ಸರ್ಕ್ಯೂಟ್ ಹೌಸ್‌ ಬಳಿ ಧಾವಿಸಿ ಮುಖ್ಯಮಂತ್ರಿಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದ್ದಾರೆ.

ಪ್ರಹಾರ ಪರಿಹಾರ ಘೋಷಿಸಿಲ್ಲ, ಸಿಎಂ ಭೇಟಿಗೂ ಅವಕಾಶ ಕೊಡುತ್ತಿಲ್ಲ. ಜನ ಬದುಕಲಾರದೇ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಹಾಗಾದರೆ ಈ ಸರ್ಕಾರ ಏಕಿರಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂದ ಪುಟ್ಟ, ಹೋದ ಪುಟ್ಟ..

ರೈತ ಹೋರಾಟಗಾರರದ ಜಯಶ್ರೀಯವರು ಮಾತನಾಡಿ “ನಿನ್ನೆ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿಯವರು ನಮಗೆ ಅವಮಾನ ಮಾಡಿದ್ದಾರೆ. ನನ್ನದೇ ನೂರು ಎಕರೆ ನಷ್ಟವಾಗಿದೆ ನಿಮಗೆಲ್ಲಿಂದ ತರಲಿ ಪರಿಹಾರ ಎಂದು ಉದ್ದಟತನದ ಮಾತುಗಳನ್ನಾಡಿದ್ದಾರೆ. ಸಿಎಂ ಯಡಿಯೂರಪ್ಪನವರು ತನ್ನದು ಹಗ್ಗದ ಮೇಲಿನ ನಡಿಗೆ ಎಂದು ಹೇಳುತ್ತಾರೆ. ಹಾಗಾದರೆ ಅವರು ರಾಜೀನಾಮೆ ಕೊಟ್ಟು ನಮ್ಮೊಂದಿಗೆ ಹೋರಾಟಕ್ಕೆ ಬರಬೇಕು. ನಾವಿಲ್ಲಿ ಸಾಯುತ್ತಿದ್ದರೆ, ಮೋದಿಯವರು ಇನು ವಿದೇಶ ಸುತ್ತುತ್ತಿದ್ದಾರೆ. ಬೇರೆ ದೇಶಗಳಿಗೆ ಸಾಲ ಕೊಡುತ್ತೇವೆ ಎನ್ನುವ ಮೋದಿ ಜನರ ಪರವೇ?” ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಪ್ರವಾಹದಿಂದ ನಲುಗಿತ್ತಿದ್ದರೆ ಕೇಂದ್ರ ಕಣ್ಣೆತ್ತಿ ನೋಡುತ್ತಿಲ್ಲ. ಕೆಲ ಕೇಂದ್ರ ಸಚಿವರು ಬಂದ ಪುಟ್ಟ, ಹೋದ ಪುಟ್ಟ.. ಎಂಬಂತೆ ಕಾಟಚಾರಕ್ಕೆ ಬಂದು ಹೋಗಿದ್ದಾರೆ. ನಾವು ರಾಜ್ಯದಿಂದ ಜಿ.ಎಸ್‌.ಟಿ ಸೇರಿದಂತೆ ಬಹಳಷ್ಟು ತೆರಿಗೆ ಕಟ್ಟುತ್ತಿದ್ದೇವೆ, ಆದರೆ ಕೇಂದ್ರ ಸರ್ಕಾರ ಮಲತಾಯಿಧೋರಣೆ ಮಾಡುತ್ತಿದೆ. ನಮಗೆ ನಿಮ್ಮ ಭಿಕ್ಷೆ ಬೇಕಿಲ್ಲ, ನಮ್ಮ ಹಣ ನಮಗೆ ಕೊಡಿ ಎಂದು ಜಯಶ್ರೀಯವರು ಆಗ್ರಹಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...