Homeಮುಖಪುಟಗಂಪು ಥಳಿತದಲ್ಲಿ ಹತ್ಯೆಯಾದ ಪೆಹ್ಲು ಖಾನ್ ವಿರುದ್ಧವೇ ಚಾರ್ಜ್‍ಶೀಟ್ ಸಲ್ಲಿಸಿದ ರಾಜಸ್ಥಾನ ಪೊಲೀಸರು!

ಗಂಪು ಥಳಿತದಲ್ಲಿ ಹತ್ಯೆಯಾದ ಪೆಹ್ಲು ಖಾನ್ ವಿರುದ್ಧವೇ ಚಾರ್ಜ್‍ಶೀಟ್ ಸಲ್ಲಿಸಿದ ರಾಜಸ್ಥಾನ ಪೊಲೀಸರು!

- Advertisement -
- Advertisement -

| ನಾನುಗೌರಿ ಡೆಸ್ಕ್ |

2017ರ ಏಪ್ರಿಲ್ 1 ರಂದು ಜೈಪುರ-ದೆಹಲಿ ಹೆದ್ದಾರಿಯಲ್ಲಿ ಗೋವು ಸಾಗಿಸುತ್ತಿದ್ದರು ಎಂಬು ಆರೋಪದಿಂದ ಸ್ವಘೋಷಿತ ಗೋರಕ್ಷಕರಿಂದ ತೀವ್ರವಾಗಿ ಹಲ್ಲೆಗೊಳಗಾಗಿ ನಿಧನವಾಗಿದ್ದ ಪೆಹ್ಲು ಖಾನ್ ವಿರುದ್ಧವೇ ರಾಜಸ್ಥಾನ ಪೊಲೀಸರು ಚಾರ್ಜ್‍ಶೀಟ್ ಸಲ್ಲಿಸುವ ಮೂಲಕ ವಿವಾದ ಉಂಟು ಮಾಡಿದ್ದಾರೆ.

ಮೂಲತಃ ಪಶು ಸಂಗೋಪನೆ ಮಾಡುತ್ತಿದ್ದ ಪೆಹ್ಲು ಖಾನ್ ಮತ್ತು ಅವರ ಮಗ ಇರ್ಶಾದ್ ಖಾನ್ ಜೈಪುರದ ದನಗಳ ಸಂತೆಯಿಂದ ಸಾಕಾಣಿಕೆಗೆಂದು 2017ರ ಏಪ್ರಿಲ್ 1 ರಂದು ಎರಡು ಹಸುಗಳನ್ನು ಕೊಂಡು ತರುತ್ತಿದ್ದಾರು. ಆಗ ಅಕ್ರಮ ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸ್ವಘೋಷಿತ ಗೋರಕ್ಷಕರು ದಾರಿ ಮಧ್ಯದಲ್ಲೇ ಇವರನ್ನು ತಡೆದು ಮನಬಂದಂತೆ ಥಳಿಸಿ, ಕಾಲಿನಿಂದ ಒದ್ದು ಗಾಯಗೊಳಿಸಿದ್ದರು. ಈ ಘಟನೆಯ ವಿಡಿಯೋ ರೆಕಾರ್ಡ್ ಎಲ್ಲೆಡೆ ಹರಡಿ ಖಂಡನೆ ವ್ಯಕ್ತವಾಗಿತ್ತು. ಘಟನೆ ನಡೆದ ಎರಡು ದಿನಗಳ ನಂತರ ಪೆಹ್ಲು ಖಾನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

ಪೆಹ್ಲು ಖಾನ್ ಮತ್ತು ಆತನ ಮಕ್ಕಳು 8 ಜನರ ಮೇಲೆ ಗುಂಪು ಥಳಿತ, ಹಲ್ಲೆಯ ದೂರು ದಾಖಲಿಸಿದ್ದರು. ಪರವಾನಗಿ ಇಲ್ಲದೇ ದನಗಳನ್ನು ಸಾಗಿಸುತ್ತಿದ್ದರೆಂಬ ಆರೋಪದ ಮೇಲೆ ಅವರ ಮೇಲೆಯೂ ಸಹ ಎಫ್.ಐ.ಆರ್ ದಾಖಲಾಗಿತ್ತು.

ಈಗ ಎರಡನೇ ಕೇಸಿನಲ್ಲಿ ಪೆಹ್ಲು ಖಾನ್ ಮತ್ತು ಆತನ ಮಕ್ಕಳ ಮೇಲೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಗೋವು ಕಳ್ಳತನ, ಕಳ್ಳಸಾಗಣೆ ಮತ್ತಿತ್ತರ ಕೇಸುಗಳನ್ನು ಹಾಕಲಾಗಿದೆ. ಪೆಹ್ಲು ಖಾನ್‍ನನ್ನು ಕೊಂದ ಆರೋಪಿಗಳಾದ ಆ ಎಂಟು ಜನರು ಸದ್ಯಕ್ಕೆ ಜಾಮೀನನ ಮೇಲೆ ಹೊರಬಂದಿದ್ದು ಅವರಲ್ಲಿ ಇಬ್ಬರು ತಲೆಮರೆಸಿಕೊಂಡಿದ್ದಾರೆ.

ಪೆಹ್ಲು ಖಾನ್‍ನ ಮಗ ಇರ್ಶಾದ್ ಖಾನ್ “ನಾವು ಹಸುಗಳನ್ನು ಮನೆಯಲ್ಲಿ ಸಾಕಲೆಂದು ತರುತ್ತಿದ್ದೇವು. ಆದರೆ ದಾರಿಯಲ್ಲಿ ಅಡ್ಡಗಟ್ಟಿದ ಅವರು ನಮ್ಮನ್ನು ವಾಹನದಿಂದ ಕೆಳಗಿಳಿಯುವಂತೆ ಒತ್ತಾಯಿಸಿದರು. ನಾವು ಸಂತೆಯಿಂದ ತರುತ್ತಿದ್ದೇವೆ, ಕಳ್ಳತನ ಮಾಡಿಲ್ಲವೆಂದು ಪೇಪರ್‍ಗಳನ್ನು ತೋರಿಸಲು ಮುಂದಾದೆವು. ಆದರೂ ಅವರು ನಮ್ಮನ್ನು ಹೊರಗೆಳೆದು ಬೇಕಾಬಿಟ್ಟಿ ಥಳಿಸಿದರು. ನನ್ನ ಕಣ್ಣೆದುರು ಹೊಡೆದು ನನ್ನ ತಂದೆಯನ್ನು ಸಾಯಿಸಿಬಿಟ್ಟರು. ಆಗ ನಾನು ಬದುಕಿದ್ದೇನೆ ಎಂದು ಅನ್ನಿಸಿರಲಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.”

ಇತ್ತೀಚೆಗೆ ಜಾರ್ಖಂಡ್‍ನಲ್ಲಿ 22 ವರ್ಷದ ತಬ್ರೇಜ್ ಅನ್ಸಾರಿ ಎಂಬುವವರನ್ನು ಸಹ ಕಳ್ಳತನದ ಆರೋಪಿ ಹೊರಿಸಿ, ಕಂಬಕ್ಕೆ ಕಟ್ಟಿ ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸಿ ಹಲ್ಲೆ ಮಾಡಿ ಗುಂಪು ಹತ್ಯೆ ಮಾಡಿದ್ದು ದೇಶಾದ್ಯಂತ ಸುದ್ದಿಯಲ್ಲಿದ್ದು ವ್ಯಾಪಕ ಚರ್ಚೆಯಾಗುತ್ತಿದೆ. ಇಂತಹ ಸಂದರ್ಭದಲ್ಲೇ ರಾಜಸ್ಥಾನದ ಪೊಲೀಸರ ಈ ನಡೆ ವಿವಾದ ಉಂಟುಮಾಡಿದೆ.

ಇದನ್ನು ಓದಿ: ನಾಟ್ ಇನ್ ದ ನೇಮ್ ಆಫ್ ಲಿಂಚಿಂಗ್: ಜೂನ್ 26ರಂದು ದೇಶಾದ್ಯಂತ ಪ್ರತಿಭಟನೆಗೆ ಕರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಸರ್ಕಾರ ಬದಲಾದರೂ ಅಲ್ಲಿನ ಪೋಲಿಸರು ಬದಲಾಗಿಲ್ಲ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿ ಮಾಡುತ್ತೇವೆ: ರಾಹುಲ್‌ ಗಾಂಧಿ

0
ಜಾತಿ ಗಣತಿ ನನ್ನ ಜೀವನದ ಪ್ರಮುಖ ಗುರಿಯಾಗಿದೆ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿಯನ್ನು ಮಾಡುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಸಂಪತ್ತು ಮರುಹಂಚಿಕೆ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ...