Homeಮುಖಪುಟತೀವ್ರ ಟೀಕೆಯ ನಂತರ ’ಗಾಂಧಿಯದು ಆಕಸ್ಮಿಕ ಸಾವು ಪಠ್ಯ’ ಹಿಂಪಡೆದ ಒಡಿಶಾ ಸರ್ಕಾರ...

ತೀವ್ರ ಟೀಕೆಯ ನಂತರ ’ಗಾಂಧಿಯದು ಆಕಸ್ಮಿಕ ಸಾವು ಪಠ್ಯ’ ಹಿಂಪಡೆದ ಒಡಿಶಾ ಸರ್ಕಾರ…

- Advertisement -
- Advertisement -

ಮಹಾತ್ಮ ಗಾಂಧಿಯವರು ಆಕಸ್ಮಿಕವಾಗಿ ಮೃತಪಟ್ಟಿದ್ದಾರೆಂದು ಹೇಳಿದ್ದ ಕಿರುಪುಸ್ತಕಗಳನ್ನು ತೀವ್ರ ವಿರೋಧ ಬಂದ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಕೊನೆಗೂ ಹಿಂತೆಗೆದುಕೊಂಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿರುವ ಎರಡು ಪುಟಗಳ ಕಿರುಪುಸ್ತಕವನ್ನು ಸರಿಪಡಿಸಿ ಪುನರ್ವಿತರಣೆ ಮಾಡಲಾಗುವುದು ಎಂದು ರಾಜ್ಯ ಶಿಕ್ಷಣ ಸಚಿವ ಸಾಮಿ ರಂಜನ್ ಡ್ಯಾಶ್ ಹೇಳಿದ್ದಾರೆ.

ಆಕಸ್ಮಿಕ ಕಾರಣಗಳಿಂದ ರಾಷ್ಟ್ಟಪಿತ ಮಹಾತ್ಮ ಗಾಂಧಿಯವರು ಸಾವನ್ನಪ್ಪಿದ್ದಾರೆ ಎಂಬ ಈ ತಪ್ಪು ಮಾಹಿತಿ  ಉದ್ದೇಶಪೂರ್ವಕವಲ್ಲ ಎಂದು ಒಡಿಶಾ ಸರ್ಕಾರ ಹೇಳಿದೆ ಮತ್ತು ಅದನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ.

ಮಕ್ಕಳಿಗೆ ತಪ್ಪು ಮಾಹಿತಿ ನೀಡುವ, ಗೊಂದಲಗೊಳಿಸುವ ಅಥವಾ ಬದಲಾಯಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಶಿಕ್ಷಣ ಸಚಿವ ಸಾಮಿ ರಂಜನ್ ಡ್ಯಾಶ್ ಶನಿವಾರ ವಿಧಾನಸಭೆಯಲ್ಲಿ ಹೇಳಿದರು.

“ಇದು ಉದ್ದೇಶಪೂರ್ವಕವಾಗಿರಲಿಲ್ಲ. ರಾಜ್ಯ ಸರ್ಕಾರ ಈಗಾಗಲೇ ಕಿರುಪುಸ್ತಕವನ್ನು ಹಿಂತೆಗೆದುಕೊಂಡಿದೆ ಮತ್ತು ಇಬ್ಬರು ಅಧಿಕಾರಿಗಳಿಗೆ ಶೋ-ಕಾಸ್ ನೋಟಿಸ್ ನೀಡಿದೆ. ಅವರ ನಿರ್ಲಕ್ಷ್ಯಕ್ಕಾಗಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ” ಎಂದು ಡ್ಯಾಶ್ ಹೇಳಿದರು.

ಜನವರಿ 30, 1948 ರಂದು ಆಕಸ್ಮಿಕ ಕಾರಣಗಳಿಂದಾಗಿ ಮಹಾತ್ಮ ಗಾಂಧಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾದ ಕಿರುಹೊತ್ತಗೆಯ ಪ್ರಕರಣವು ಅಸೆಂಬ್ಲಿಯಲ್ಲಿ ಶುಕ್ರವಾರ ತೀವ್ರ ಕೋಲಾಹಲವನ್ನು ಉಂಟುಮಾಡಿತು. ಪ್ರತಿಪಕ್ಷ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಮುಖ್ಯಮಂತ್ರಿ ನವೀನ್ ಪಟ್ನಾಯಕ್ ವಿರುದ್ಧ ವಾಗ್ದಾಳಿ ನಡೆಸಿದ್ದವು.

ಗಾಂಧಿವಾದಿಗಳು ಸೇರಿದಂತೆ ರಾಜ್ಯದ, ರಾಷ್ಟ್ರದ ಹಲವಾರು ಬುದ್ಧಿಜೀವಿಗಳು ಗಾಂಧೀಜಿಯವರ ಹತ್ಯೆಯ ಬಗ್ಗೆ ಸತ್ಯವನ್ನು ತಪ್ಪಾಗಿ ನಿರೂಪಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

“ಈ ಸುಳ್ಳು ಮಾಹಿತಿಯನ್ನು ಹರಡುವ ಹಿಂದಿನ ಉದ್ದೇಶವೆಂದರೆ ಮಹಾತ್ಮ ಗಾಂಧಿಯನ್ನು ಹಿಂದೂತ್ವವಾದಿ ನಾಥುರಾಮ್ ಗೋಡ್ಸೆ ಹತ್ಯೆ ಮಾಡಿದ್ದಾರೆ ಎಂಬ ಅಂಶವನ್ನು ಮಕ್ಕಳಿಂದ ಮರೆಮಾಡುವುದು” ಎಂದು ಪ್ರಫುಲ್ಲ ಸಮಂತ್ರಾರವರು ತಿಳಿಸಿದ್ದಾರೆ.

ಈ ಪುಸ್ತಕಗಳು ಮೂಲಕ ಗಾಂಧಿಯವರ ಸಾವನ್ನು ಮರೆಸಲು ಹಿಂದೂತ್ವಾದಿಗಳು ಮಾಡಿದ ಸರ್ಕಸ್ ವಿಫಲವಾಗಿದೆ ಮನೋರಂಜನ್‌ ಸಾಹುರವರು ತಿಳಿಸಿದ್ದಾರೆ.

“ಒಬ್ಬರು ಆಕಸ್ಮಿಕವಾಗಿ ಸಾವನಪ್ಪಿದರು ಎಂದರೆ ಏನರ್ಥ? ರಸ್ತೆಯಲ್ಲಿ ಮುಗ್ಗರಿಸಿ ಗಾಂಧೀಜಿಯವರು ಸತ್ತಾರೆಯೇ? ನಾಥುರಾಮ್ ಗೋಡ್ಸೆ ಹಾರಿಸಿದ ಗುಂಡುಗಳಿಂದ ಅವನು ಸತ್ತನೆಂದು ಎಲ್ಲರಿಗೂ ತಿಳಿದಿದೆ ”ಎಂದು ಸಾಹು ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...