Homeಅಂತರಾಷ್ಟ್ರೀಯಅಮೆಜಾನ್ ಕಾಡು ಉಳಿಸಲು ಆಗಸ್ಟ್ 30ರಂದು ದೆಹಲಿಯಲ್ಲಿ ಬ್ರೆಜಿಲ್ ಎಂಬೆಸ್ಸಿ ಮುತ್ತಿಗೆಗೆ ನಿರ್ಧಾರ

ಅಮೆಜಾನ್ ಕಾಡು ಉಳಿಸಲು ಆಗಸ್ಟ್ 30ರಂದು ದೆಹಲಿಯಲ್ಲಿ ಬ್ರೆಜಿಲ್ ಎಂಬೆಸ್ಸಿ ಮುತ್ತಿಗೆಗೆ ನಿರ್ಧಾರ

- Advertisement -
- Advertisement -

#SaveTheAmazon ಎಂದು ಟ್ವೀಟ್ ಮಾಡಿ ಟ್ರೆಂಡ್ ಮಾಡಿದರೆ ದೊಡ್ಡ ಪ್ರಯೋಜನ ಆಗುವುದಿಲ್ಲ. ಇದು 1 ಲೈಕ್ = 1 ಪ್ರಾರ್ಥನೆ ಮಾಡಿದ ಹಾಗಾಗುತ್ತದೆ ಅಷ್ಟೇ. ದೆಹಲಿಯಲ್ಲಿರುವವರು ಅಮೆಜಾನ್ ಕಾಡು ಉಳಿಸಲು ಒತ್ತಾಯಿಸಿ ಆಗಸ್ಟ್ 30ರಂದು ದೆಹಲಿಯಲ್ಲಿ ಬ್ರೆಜಿಲ್ ಎಂಬೆಸ್ಸಿ ಮುತ್ತಿಗೆ ಹಾಕುವ ಅಹಿಂಸಾತ್ಮಾಕ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಯುವ ಚಿಂತಕ ಧೃವ್ ರಾಠೀ ಮನವಿ ಮಾಡಿದ್ದಾರೆ.

ದೆಹಲಿಯ ಹೊರಗೆ ಇರುವ ಅನೇಕ ಜನರು ಕೇಳುತ್ತಿದ್ದಾರೆ, ಅಮೇಜಾನ್ ಕಾಡಿಗೆ ಬೆಂಕಿ ಬಿದ್ದಿರುವುದರ ವಿರುದ್ಧ ನಾವು ಏನು ಮಾಡಬಹುದು ಅಂತ. ಅಮೆಜಾನ್ ಉಳಿಸುವ ಬಗ್ಗೆ ಕೆಲವು ಉಪಕ್ರಮಗಳನ್ನು ತೆಗೆದುಕೊಳ್ಳಲು ದಯವಿಟ್ಟು ನಿಮ್ಮ ಸ್ಥಳೀಯ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ಮತ್ತು ಭಾರತದ ರಾಷ್ಟ್ರಪತಿಯನ್ನು ಉದ್ದೇಶಿಸಿ ಒಂದು ಜ್ಞಾಪಕ ಪತ್ರವನ್ನು ಸಲ್ಲಿಸಿ. ಬ್ರೆಜಿಲ್ ಮತ್ತು ಭಾರತ ದೇಶಗಳೆರಡು ಬ್ರಿಕ್ಸ್, ಬೇಸಿಕ್, ಜಿ -20, ಜಿ -4, ಐಬಿಎಸ್ಎ, ಅಂತರರಾಷ್ಟ್ರೀಯ ಸೌರ ಒಕ್ಕೂಟದ ಭಾಗವಾಗಿರುವುದರಿಂದ ಉತ್ತಮ ಸಂಬಂಧವನ್ನು ಹೊಂದಿವೆ. ಹಾಗಾಗಿ ಭಾರತ ಸರ್ಕಾರವು ಬ್ರೆಜೆಲ್ ಅನ್ನು ಒತ್ತಾಯಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಭೂಮಿಯ ಶ್ವಾಸಕೋಶಗಳು ಎಂದು ಕರೆಸಿಕೊಳ್ಳುವ ಅಮೆಜಾನ್ ಕಾಡು 3 ವಾರಗಳಿಗಿಂತ ಹೆಚ್ಚು ಕಾಲ ಬೆಂಕಿಯಲ್ಲಿದೆ. ವಿಶ್ವದ ಒಟ್ಟು ಆಮ್ಲಜನಕದ ಹೆಚ್ಚಿನ ಭಾಗವನ್ನು ದಕ್ಷಿಣ ಅಮೆರಿಕದ ಅಮೆಜಾನ್ ಜಲಾನಯನ ಪ್ರದೇಶದಿಂದ ಮಾತ್ರ ಸರಬರಾಜು ಮಾಡಲಾಗುತ್ತದೆ. ಹಾಗಾಗಿ ಭಾರತೀಯರಾದ ನಾವು ಕೂಡ ಅಮೆಜಾನ್ ಉಳಿಸಿಕೊಳ್ಳಲು ಹೋರಾಡಬೇಕಿದೆ ಎಂದಿದ್ದಾರೆ.

ಇಂದು ಮಾನವ ಪ್ರಭೇದಗಳು ಗನ್‌ಪೌಡರ್ ರಾಶಿಯ ಮೇಲೆ ಕುಳಿತು ಅದನ್ನು ಬೆಂಕಿಯಿಡಲು ಹೊಸ ಮಾರ್ಗಗಳನ್ನು ಆವಿಷ್ಕರಿಸುತ್ತಿವೆ. ಸಾಮೂಹಿಕ ಆತ್ಮಹತ್ಯೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಕಾಣಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಮೆಜಾನ್‌ನ ಕಾಡುಗಳು ಮಾತ್ರ ವಿಶ್ವದ ಆಮ್ಲಜನಕದ ಗಮನಾರ್ಹ ಪ್ರಮಾಣವನ್ನು ಸೃಷ್ಟಿಸುತ್ತವೆ. ವಾತಾವರಣದಿಂದ ಆಮ್ಲಜನಕದಲ್ಲಿ ಅಷ್ಟು ಇಳಿಕೆ ಇದ್ದರೆ, ಗ್ರಹದಲ್ಲಿ ಒಟ್ಟು ಆಮ್ಲಜನಕದ ಸಾಂದ್ರತೆಯು ಸಾರ್ವಕಾಲಿಕ ಕಡಿಮೆಯಾಗುತ್ತದೆ. ಪರಿಣಾಮಗಳು ಹೀಗಿವೆ:
1. ನಾವು ಗಮನ ಕೇಂದ್ರೀಕರಿಸಲು ಮತ್ತು ಯೋಚಿಸಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತೇವೆ ಮತ್ತು ನಂತರ ಅದು ಉಸಿರಾಟಕ್ಕೆ ಕಷ್ಟವಾಗುತ್ತದೆ
2. ಧೂಮಪಾನಿಗಳು ಮತ್ತು ಶ್ವಾಸಕೋಶ ಮತ್ತು ರಕ್ತದ ಸಮಸ್ಯೆಗಳಿರುವ ಜನರು ತಮ್ಮ ಆರೋಗ್ಯ ಸಮಸ್ಯೆ ಏನು ಎಂದು ತಿಳಿಯುವ ಮೊದಲೇ ಸಾಯುತ್ತಾರೆ.
4. ಅಮೇಜಾನ್ ದಹನದಿಂದಾಗಿ ತಕ್ಷಣವೇ ಮಾರಕವಾಗದಿದ್ದರೂ, ಕಡಿಮೆ ಆಮ್ಲಜನಕದ ಕಾರಣದಿಂದ ಹೆಚ್ಚಿನ ಪ್ರಾಣಿಗಳ ಜೀವಕ್ಕೆ ವಿನಾಶಕಾರಿಯಾಗಬಹುದು ಎಂದು ದೆಹಲಿ ನಿವಾಸಿ ಮತ್ತು ಪ್ರತಿಭಟನೆಯ ನೇತೃತ್ವ ವಹಿಸಿರುವ ಆದಿಲ್ ಅಮನ್ ತಿಳಿಸಿದ್ದಾರೆ.

ನಾವು 30/08/2019 ರಂದು ಮಧ್ಯಾಹ್ನ 3 ಗಂಟೆಗೆ ಇಂಡಿಯಾ ಗೇಟ್‌ನಿಂದ ಶಾಂತಿಯುತ ಮೆರವಣಿಗೆ ಕೈಗೊಳ್ಳುತ್ತೇವೆ ಮತ್ತು ಅಮೆಜಾನ್ ಕಾಡಿನ ಸುತ್ತಮುತ್ತಲಿನ ದೇಶಗಳ ರಾಯಭಾರ ಕಚೇರಿಗಳ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಸುತ್ತೇವೆ!
ಭೂಮಿಯನ್ನು ಉಳಿಸುವ ಈ ಪ್ರಯತ್ನದಲ್ಲಿ ನೀವು ನಮ್ಮೊಂದಿಗೆ ಬನ್ನಿ ಎಂದು ಮನವಿ ಮಾಡಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

The Mysore-Chennai Vandebharat train, inaugurated by the Prime Minister last week, collided; Calf death

‘ವಂದೇ ಭಾರತ್’ ಲಾಭದ ಪ್ರತ್ಯೇಕ ದಾಖಲೆಗಳನ್ನು ರೈಲ್ವೆ ಇಲಾಖೆ ನಿರ್ವಹಿಸುವುದಿಲ್ಲ: ಆರ್‌ಟಿಐ ಮಾಹಿತಿ

0
ವಂದೇ ಭಾರತ್ ರೈಲುಗಳ ಯಾವುದೇ ಪ್ರತ್ಯೇಕ ಆದಾಯದ ದಾಖಲೆಗಳನ್ನು ರೈಲ್ವೇ ಸಚಿವಾಲಯವು ನಿರ್ವಹಿಸುವುದಿಲ್ಲ ಎಂದು ಆರ್‌ಟಿಐ ಕಾಯ್ದೆಯಡಿಯಲ್ಲಿ ಸಲ್ಲಿಸಲಾದ ಅರ್ಜಿಗೆ ಸಚಿವಾಲಯದ ಪ್ರತಿಕ್ರಿಯೆ ನೀಡಿದೆ. ಮಧ್ಯಪ್ರದೇಶ ಮೂಲದ ಚಂದ್ರ ಶೇಖರ್ ಗೌರ್ ಅವರು ಕಳೆದ...