Homeಎಕಾನಮಿ70 ವರ್ಷಗಳಲ್ಲಿಯೇ ಇಂಥ ಕೆಟ್ಟ ಆರ್ಥಿಕ ಪರಿಸ್ಥಿತಿ ಎದುರಾಗಿರಲಿಲ್ಲ: ನೀತಿ ಆಯೋಗದ ಉಪಾಧ್ಯಕ್ಷರ ಹೇಳಿಕೆ

70 ವರ್ಷಗಳಲ್ಲಿಯೇ ಇಂಥ ಕೆಟ್ಟ ಆರ್ಥಿಕ ಪರಿಸ್ಥಿತಿ ಎದುರಾಗಿರಲಿಲ್ಲ: ನೀತಿ ಆಯೋಗದ ಉಪಾಧ್ಯಕ್ಷರ ಹೇಳಿಕೆ

- Advertisement -
- Advertisement -

ಹಣಕಾಸು ವಲಯದಲ್ಲಿನ ಒತ್ತಡವು ಆರ್ಥಿಕತೆಯ ಕುಸಿತಕ್ಕೆ ಹೇಗೆ ಕಾರಣವಾಗಿದೆ ಎಂಬುದನ್ನು ವಿವರಿಸಿರುವ ನೀತಿ ಆಯೋಗದ ಉಪಾಧ್ಯಕ್ಷರಾದ ರಾಜೀವ್ ಕುಮಾರ್, ಕಳೆದ 70 ವರ್ಷಗಳಲ್ಲಿಯೇ ಇಂಥ ಕೆಟ್ಟ ಆರ್ಥಿಕ ಪರಿಸ್ಥಿತಿ ಎದುರಾಗಿರಲಿಲ್ಲ ಎಂದು ಹೇಳಿದ್ದಾರೆ.

ಇದರಿಂದ ಕಳೆದೊಂದು ತಿಂಗಳಿಂದ ಹಲವು ಉದ್ಯಮಿಗಳು ಮತ್ತು ಆರ್ಥಿಕ ತಜ್ಞರು ಮಾಡುತ್ತಿದ್ದ ಆರ್ಥಿಕ ಕುಸಿತದ ಆರೋಪಕ್ಕೆ ಹೊಸ ಸೇರ್ಪಡೆ ಇದಾಗಿದ್ದು ದೆಹಲಿಯ ಹೀರೋ ಮೈಂಡ್ ಮೈನ್ ಸಮ್ಮೇಳನದಲ್ಲಿ ರಾಜೀವ್ ಕುಮಾರ ಆಡಿದ ಮಾತುಗಳು ಎಲ್ಲಾ ಕಡೆ ವೈರಲ್ ಆಗಿವೆ.

2009-14ರ ಅವಧಿಯಲ್ಲಿ ನಿರ್ದಾಕ್ಷಿಣ್ಯವಾಗಿ ಸಾಲ ನೀಡುವುದರೊಂದಿಗೆ ಆರ್ಥಿಕ ಕುಸಿತದ ಇಡೀ ಸಂಚಿಕೆ ಪ್ರಾರಂಭವಾಯಿತು. 2014 ರ ನಂತರ ವಸೂಲಿಯಾಗದ ಸಾಲಗಳ ಸಂಖ್ಯೆ (ಎನ್‌ಪಿಎ) ಸಹ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ. ಇದರಿಂದಾಗಿ ಜಿಡಿಪಿ ದರ 2018-19ರಲ್ಲಿ 5 ವರ್ಷಗಳಲ್ಲಿ ಕನಿಷ್ಠ ಶೇಕಡಾ 6.8 ಕ್ಕೆ ತಲುಪಿದೆ ಎಂದಿದ್ದಾರೆ.

ಖಾಸಗಿ ವಲಯದ ಹೂಡಿಕೆದಾರರ ಮನಸ್ಸಿನಲ್ಲಿರುವ ಆತಂಕವನ್ನು ಹೋಗಲಾಡಿಸುವ ಮತ್ತು ಹೂಡಿಕೆಗಳನ್ನು ಹೆಚ್ಚಿಸಲು ಪ್ರೋತ್ಸಾಹಿಸುವ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕಾಗಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷರು ಸಲಹೆ ನೀಡಿದ್ದಾರೆ.

ಹಣಕಾಸು ವಲಯದಲ್ಲಿನ ಒತ್ತಡವನ್ನು ಅಭೂತಪೂರ್ವ ಎಂದು ಹೇಳಿದ ಅವರು, ಕಳೆದ 70 ವರ್ಷಗಳಲ್ಲಿ ಇಡೀ ಹಣಕಾಸು ವ್ಯವಸ್ಥೆಯು ಅಪಾಯಕ್ಕೆ ಸಿಲುಕಿರುವ ಈ ರೀತಿಯ ಪರಿಸ್ಥಿತಿಯನ್ನು ಯಾರೂ ಎದುರಿಸಲಿಲ್ಲ. “ಯಾರೂ ಬೇರೆಯವರನ್ನು ನಂಬುವುದಿಲ್ಲ … ಖಾಸಗಿ ವಲಯದೊಳಗೆ ಯಾರೂ ಸಾಲ ನೀಡಲು ಸಿದ್ಧರಿಲ್ಲ, ಎಲ್ಲರೂ ಹಣದ ಮೇಲೆ ಕುಳಿತಿದ್ದಾರೆ … ನೀವು ಅಸಾಧಾರಣವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಬಹುದು” ಎಂದು ಅವರು ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.

ಹಣಕಾಸು ವಲಯದಲ್ಲಿನ ಒತ್ತಡವನ್ನು ಪರಿಹರಿಸಲು ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಕೇಂದ್ರ ಬಜೆಟ್‌ನಲ್ಲಿ ಈಗಾಗಲೇ ಕೆಲವು ಕ್ರಮಗಳನ್ನು ಘೋಷಿಸಲಾಗಿದೆ ಎಂದು ಸಹ ಅವರು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...