ಫ್ಯಾಕ್ಟ್ ಚೆಕ್: ಕರುಳು ‘ಕಿವುಚುವ’ ವಿಡಿಯೋ – ಹೊಟ್ಟೆಯಿಂದ ಹೊರತೆಗೆದಿದ್ದು ನ್ಯೂಡಲ್ಸಾ?

ವೈದ್ಯರೊಬ್ಬರು ವ್ಯಕ್ತಿಯೊಬ್ಬನ ಸಣ್ಣಕರುಳಿನ ಆಪರೇಷನ್ ಮಾಡುವ ವಿಡಿಯೋ ಈಗ ಮತ್ತೆ (2015ರಿಂದಲೂ ಆಗಾಗ ಆಗುತ್ತಲೇ ಇದೆ) ವೈರಲ್ ಆಗಿದೆ. ಅದರ ಪ್ರಕಾರ, ವೈದ್ಯರು ಆ ವ್ಯಕ್ತಿಯ ಸಣ್ಣಕರುಳಿನಿಂದ ಜೀರ್ಣವಾಗದ ನ್ಯೂಡಲ್ಸ್ ತೆಗೆದಿದ್ದಾರೆ. ನ್ಯೂಡಲ್ಸ್ ಜೀರ್ಣವಾಗಲ್ಲ, ತಿನ್ನಬೇಡಿ…..’ ಎಂಬೆಲ್ಲ ಪುಕ್ಕಟೆ ವೈದ್ಯಕೀಯ ಸಲಹೆಯೂ ಇದರೊಂದಿಗೆ ಓಡಾಡುತ್ತ ಪೋಷಕರ ಕರುಳು ಚುರ್ ಎನ್ನುವಂತೆ ಮಾಡುತ್ತಿದೆ.

ವಿಡಿಯೋ ನೋಡಿ

ಇದನ್ನು ಮನವರಿಕೆ ಮಾಡಲು, ‘ಅಪೊಲೊ ಹಾಸ್ಪಿಟಲ್‍ನ ಶಸ್ತ್ರಚಿಕಿತ್ಸಕ ಡಾ. ಹರ್ಷ ಶುಕ್ಲಾ ಈ ಸರ್ಜರಿ ಮಾಡಿದ್ದಾರೆ’ ಎಂಬ ಸಾಲೂ ಇದೆ.
ಮಿಥ್ಯ: ನ್ಯೂಡಲ್ಸ್ ಜೀರ್ಣವಾಗುವುದಿಲ್ಲ ಎಂಬುದೇ ತಪ್ಪು ಕಲ್ಪನೆ. ಇಲ್ಲಿರುವ ವಿಡಿಯೋ ಶಸ್ತ್ರಚಿಕಿತ್ಸೆಯ ವಿಡಿಯೊವೇ. ಆದರೆ ವೈದ್ಯರು ಹೊಟ್ಟೆಯಿಂದ ಹೊರತೆಗೆದಿದ್ದು ನ್ಯೂಡಲ್ಸ್ ಅಲ್ಲ.

ಸತ್ಯ: ಇಲ್ಲಿರುವ ವಿಡಿಯೋ 2015ರಿಂದಲೇ ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಈಗ ವ್ಯಾಟ್ಸಾಪ್‍ನಲ್ಲಿ ಮತ್ತೆ ವೈರಲ್ ಆಗಿದೆ. ಇಲ್ಲಿ ಇದನ್ನು ನೂರಾರು ಜನ ಹಿಂದೆಮುಂದೆ ನೋಡದೇ ಇದನ್ನು ಹರಡುತ್ತಿದ್ದರೆ, ಕೆಲವರು ಮಕ್ಕಳಿಗೆ ನ್ಯೂಡಲ್ಸ್ ನಂತಹ ಫುಡ್ ಅಪಾಯಕಾರಿ ಎಂಬ ಕಾಳಜಿಯಿಂದ ವೈರಲ್ ಮಾಡುತ್ತಿದ್ದಾರೆ. ಜಂಕ್‍ಫುಡ್ ಅಪಾಯ ಎನ್ನುವುದು ಸತ್ಯ ಸರಿ ಹೌದು. ಆದರೆ ನೂಡಲ್ಸ್ ಜೀರ್ಣವಾಗೋಲ್ಲ ಎಂಬ ಅವೈಜ್ಞಾನಿಕ ಮಾಹಿತಿಯ ಬಗ್ಗೆ ಅರಿವು ಮೂಡಿಸಲು, ಸಣ್ಣ ಕರುಳಿನಿಂದ ವೈದ್ಯರು ತೆಗೆದದ್ದು ನೂಡಲ್ಸ್ ಅಲ್ಲ, ಅವು ರೌಂಡ್‍ವಾಮ್ರ್ಸ್ ಎಂಬುದನ್ನು ತಿಳಿಸಲು ಈ ಬರಹ ಹಾಕುತ್ತಿದ್ದೇವೆ.

ಅಲ್ಟ್ ನ್ಯೂಸ್ ಈ ಕುರಿತಂತೆ ಫ್ಯಾಕ್ಟ್ ಚೆಕ್ ಮಾಡಿದಾಗ ಸಿಕ್ಕ ಸತ್ಯವಿದು: 2015, ಅಗಸ್ಟ್ 24ರಂದು ಈ ವಿಡಿಯೋವನ್ನು ಯುಟ್ಯೂಬ್‍ಗೆ ಅಪ್‍ಲೋಡ್ ಮಾಡಿದ್ದ ಡಾ. ಪರೇಶ್ ರೂಪಾರೆಲ್, ‘ಸಣ್ಣಕರುಳಿನಲ್ಲಿದ್ದ ಬಹುವಿಧದ ರೌಂಡ್ ವಾಮ್ರ್ಸ್, ಸರ್ಜರಿ ಮೂಲಕ ಹೊರತೆಗೆಯಲಾಯಿತು…’ ಎಂದು ಕ್ಯಾಪ್ಸನ್ ಹಾಕಿದ್ದರು. ಇದೇ ವಿಡಿಯೋವನ್ನು 2015ರಿಂದಲೇ ವೈರಲ್ ಮಾಡುತ್ತಿರುವವರು, ‘ಸಣ್ಣ ಕರುಳಿನಿಂದ ನ್ಯೂಡಲ್ಸ್ ಹೊರತೆಗೆಯಲಾಗಿದೆ. ನ್ಯೂಡಲ್ಸ್ ಜೀರ್ಣವಾಗಲ್ಲ. ಮಕ್ಕಳಿಗೆ ನ್ಯೂಡಲ್ಸ್ ಕೊಡಬೇಡಿ’ ಎಮದು ಪ್ರಸಾರ ಮಾಡುತ್ತಿದ್ದಾರೆ.

ಆದರೆ ಇದು ಅಸತ್ಯ, ಅದು ನ್ಯೂಡಲ್ಸ್ ಅಲ್ಲ, ರೌಂಡ್‍ವಾಮ್ರ್ಸ್ ಎಂದು ಸರ್ಜರಿ ಮಾಡಿದ ವೈದ್ಯರಷ್ಟೇ ಅಲ್ಲದೇ ವಿವಿಧ ತಜ್ಞ ವೈದ್ಯರು ಕೂಡ ನೂಡಲ್ಸ್ ಸುಲಭವಾಗಿ ಜೀರ್ಣ ಆಗುತ್ತವೆ ಎಂದು ಹೇಳಿದ್ದಾರೆ. ಈ ಹಿಂದೆಯೂ ಹಲವಾರು ಪೋರ್ಟಲ್‍ಗಳು ಇದನ್ನೇ ಸಾಬೀತು ಮಾಡಿದ್ದರೂ ಈ ವಿಡಿಯೋ ತಪ್ಪು ಕ್ಯಾಪ್ಸನ್‍ಗಳೊಂದಿಗೆ ಪ್ರಸಾರವಾಗುತ್ತಲೇ ಇದೆ.

ತಜ್ಞವೈದ್ಯ ಡಾ. ಯೋಗೇಶ್ ಹರ್ವಾನಿ (ನೊಬಲ್ ಗ್ಯಾಸ್ಟ್ರೊ ಆಸ್ಪತ್ರೆ, ಅಹಮದಾಬಾದ್) ಪ್ರಕಾರ, ಸಣ್ಣ ಕರುಳಿನಲ್ಲಿ ಹುಳಗಳು ಕಾಣಿಸಿಕೊಳ್ಳುವುದು ಒಂದು ಸೋಂಕು. ಇದು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸರಿಯಾಗಿ ಬೇಯದ ಆಹಾರ ಸೇವನೆಯಿಂದ ದೊಡ್ಡವರಲ್ಲೂ, ಸ್ವಚ್ಚತೆಯಿಲ್ಲದ ಮಣ್ಣಿನಲ್ಲಿ ಆಟವಾಡಿ ಕೈತೊಳೆಯದೇ ಊಟ ಮಾಡುವ ಮಕ್ಕಳಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತದೆ. ಇದು ಕರುಳಿನಲ್ಲಿ ಅಡಚಣೆ ಉಂಟು ಮಾಡುತ್ತದೆ’ ಎಂದು ವಿವರಿಸಿದ್ದಾರೆ.
( ಆಧಾರ: ಅಲ್ಟ್ ನ್ಯೂಸ್)

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here