Homeಮುಖಪುಟ40 ಶಾಸಕರ ಖರೀದಿ ವಿಚಾರ: ಮೋದಿಯವರು ಕೂತಿರುವ ಕುರ್ಚಿಗೆ ಶೋಭೆ ತರುವಂತಹ ವಿಷಯವಲ್ಲ.

40 ಶಾಸಕರ ಖರೀದಿ ವಿಚಾರ: ಮೋದಿಯವರು ಕೂತಿರುವ ಕುರ್ಚಿಗೆ ಶೋಭೆ ತರುವಂತಹ ವಿಷಯವಲ್ಲ.

- Advertisement -
- Advertisement -

| ಮೋಹನ್ ದಾಸರಿ | ಆಮ್ ಆದ್ಮಿ ಪಕ್ಷ

40ಕ್ಕೂ ಹೆಚ್ಚು ತೃಣಮೂಲ ಕಾಂಗ್ರೆಸ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಮತ್ತು ದೀದಿಯ ಸರ್ಕಾರ ಯಾವಾಗ ಬೇಕಾದ್ರು ಬೀಳಬಹುದು ಎಂದು ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದ ಮೋದಿಯವರು ದೇಶದ ಪ್ರಧಾನಿಯಾಗಿ ಆಪರೇಷನ್ ಕಮಲವೆಂಬ ಅನೈತಿಕ ಕಮಲದ ಬಗ್ಗೆ ಮಾತನಾಡುತ್ತಿರುವುದು ಅವರು ಕೂತಿರುವ ಕುರ್ಚಿಗೆ ಶೋಭೆ ತರುವಂತಹ ವಿಷಯವಲ್ಲ.

2008ರಲ್ಲಿ ಕರ್ನಾಟಕದಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಮೊದಲ ಬಾರಿಗೆ ಸರ್ಕಾರ ರಚಿಸುವಾಗ ಆಪರೇಷನ್ ಕಮಲ ಅನೈತಿಕ ಕಮಲ ಮಾಡಿ ನೂರಾರು ಕೋಟಿಗಳನ್ನು ಕೊಟ್ಟು ಶಾಸಕರನ್ನು ಕುದುರೆ ವ್ಯಾಪಾರದ ಮುಖಾಂತರ ಖರೀದಿ ಮಾಡಿ ಪೂರ್ಣ ಬಹುಮತದ ಸರ್ಕಾರ ರಚನೆ ಮಾಡಿದರು. ಅಂದು ಇಡೀ ದೇಶವೇ ಕರ್ನಾಟಕದ ರಾಜಕಾರಣದತ್ತ ನೋಡುವ ಹಾಗೆ ಮಾಡಿತು. ಯಡಿಯೂರಪ್ಪ ಮತ್ತು ಜನಾರ್ಧನ ರೆಡ್ಡಿಯವರು ಯಾವ ಯಾವ ರೀತಿ ಎಷ್ಟು ಶಾಸಕರನ್ನು ಕುದುರೆ ವ್ಯಾಪಾರ ಮಾಡಿದರು ಎನ್ನುವುದು ಜಗದ್ ಜಾಹೀರಾಗಿದೆ. ನಂತರ ಬಿಜೆಪಿ ಸರ್ಕಾರದ 5 ವರ್ಷಗಳು ಯಾವ ರೀತಿ ಇತ್ತು, ಯಾರ್ಯಾರು ಜೈಲಿಗೆ ಹೋದರು, ಎಷ್ಟು ಮಂದಿ ಮುಖ್ಯಮಂತ್ರಿಗಳಾದರೆಂಬುದನ್ನು ಕರ್ನಾಟಕದ ಜನತೆ ಮರೆಯಲಾರದ ಇತಿಹಾಸ.

ಇಂದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಶಕ್ತಿ ಅಷ್ಟೇನು ಇಲ್ಲ. ಬರೀ 3 ಸಂಸದರನ್ನು ಹೊಂದಿರುವ ಪಕ್ಷ, ಸಾಂವಿಧಾನಿಕ ಸಂಸ್ಥೆಗಳಾದ ಸಿಬಿಐ ಐಟಿ ಇಡಿಗಳನ್ನೂ ದುರುಪಯೋಗ ಪಡಿಸಿಕೊಂಡು ಶಾರದಾ ಚಿಟ್ ಫಂಡ್ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದು ಸಿಬಿಐಗೆ ಸಿಕ್ಕಿಕೊಂಡಿದ್ದ ಮುಕುಲ್ ರಾಯ್‍ರನ್ನು ಬಿಜೆಪಿಗೆ ಇಂಪೋರ್ಟ್ ಮಾಡಿಕೊಂಡಿದೆ. ಅವರ ಮೇಲಿದ್ದ ಎಲ್ಲ ಕೇಸ್‍ಗಳನ್ನೂ ತೆಗೆದು ಹಾಕಿ ಗಂಗೆಯಲ್ಲಿ ಮುಳುಗಿ ಕ್ಲೀನ್ ಮಾಡಿಸಿ ಅವರನ್ನು ಮುಂದಿಟ್ಟುಕೊಂಡು ಈ ಅನೈತಿಕ ಕಮಲಕ್ಕೆ ಕೈ ಹಾಕಿದ್ದಾರೆ. ಇದೇ ರೀತಿಯಲ್ಲಿ ಮುಕುಲ್ ರಾಯ್‍ರ ಆತ್ಮೀಯರೂ ಆಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಭಾರತೀ ಘೋಷ್‍ರವರನ್ನು BJP ಗೆ ಸೇರಿಸಿಕೊಂಡಿದ್ದಾರೆ. ಅವರ ಬಗ್ಗೆ ಹೇಳುವುದಾದರೆ 300 ಕೋಟಿ ರೂಗಳಿಗೂ ಹೆಚ್ಚು ಭೂ ಹಗರಣದಲ್ಲಿ ಸಿಕ್ಕಿ ಹಾಕಿ ಕೊಂಡು 2 FIR ಹಾಕಿಸಿಕೊಂಡು ಸುಮಾರು ತಿಂಗಳುಗಳು ತಲೆಮರೆಸಿಕೊಂಡಿದ್ದರು. ಈ ತರಹದವರನ್ನು ಮುಂದಿಟ್ಟುಕೊಂಡು ಬಂಗಾಳದಲ್ಲಿ ಸರ್ಕಾರ ರಚಿಸುವಲ್ಲಿ ಕೈ ಹಾಕಿದ್ದಾರೆ ಅದನ್ನು ಮೋದಿಯವರೇ ನೇರವಾಗಿ ಹೇಳುತ್ತಿದ್ದಾರೆ.

2019ರ ಲೋಕಸಭೆ ಚುನಾವಣೆಗಳ ಪ್ರಚಾರ ನೋಡುತ್ತಿದ್ದರೆ ಮೋದಿಯವರು ಪುಲ್ವಾಮಾ ಬಾಲಕೋಟ್ ದಾಳಿ, ಸೈನಿಕರ ಹೆಸರಲ್ಲಿ, ಧರ್ಮದ ಹೆಸರಲ್ಲಿ ಮತ ಯಾಚನೆ ಮಾಡುತ್ತಿದ್ದಾರೆ. ಐದು ವರ್ಷಗಳ ನಂತರ ತಾವು ಮಾಡಿರುವ ಕೆಲಸಗಳ ಬಗ್ಗೆ ಯಾವೊಂದು ಭಾಷಣದಲ್ಲೂ ಮಾತನಾಡುತ್ತಿಲ್ಲ, ಮೋದಿಯವರ ಸಾಧನೆಗಳೆಂದರೆ 1. ನೋಟು ರದ್ದತಿ ಮಾಡಿ ಇಡೀ ದೇಶವನ್ನೇ ಬ್ಯಾಂಕುಗಳ ಸುತ್ತ ಸುತ್ತುವಂತೆ ಮಾಡಿ, ದೇಶದ ಆರ್ಥಿಕ ವ್ಯವಸ್ಥೆಗೆ ದೊಡ್ಡ ಹೊಡೆತವನ್ನು ಕೊಡುವಂತೆ ಮಾಡಿದರು, ಇದು ಸ್ವತಂತ್ರ ಭಾರತದ ಅತೀ ದೊಡ್ಡ ಹಗರಣವೇ ಅಂದರೂ ಸರಿ. 2. GST ತರಾತುರಿಯಲ್ಲಿ ಜಾರಿಗೆ ತಂದು ದೇಶದ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದರು, ಸಾವಿರಾರು ಸಣ್ಣ ಮತ್ತು ಮಧ್ಯಮ ಕಂಪನಿಗಳನ್ನೂ ಮುಚ್ಚುವಂತೆ ಮಾಡಿ ದೇಶದಲ್ಲಿ ಲಕ್ಷಾನುಗಟ್ಟಲೆ ಕೆಲಸಗಳನ್ನು ಕಸಿದುಕೊಂಡರು. 3. ಫಸಲ್ ಬಿಮಾ ಯೋಜನೆ ಮುಖಾಂತರ ಪ್ರೈವೇಟ್ ಇನ್ಶೂರೆನ್ಸ್ ಕಂಪನಿಗಳಿಗೆ ಲಾಭ ಬರುವಂತೆ ಮಾಡಿ ದೇಶದ ರೈತರ ಹೊಟ್ಟೆಯ ಮೇಲೆ ಹೊಡೆದರು. 4. ಪ್ರತಿ ವರ್ಷ 2 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತೇವೆ ಅಂತ ಹೇಳಿ 5 ವರ್ಷಗಳ ನಂತರ ಹೊಸ ಉದ್ಯೋಗವಿರಲಿ ಇರುವ ಉದ್ಯೋಗಗಳಲ್ಲಿ ಸುಮಾರು 3.2 ಕೋಟಿಗಳಷ್ಟು ಉದ್ಯೋಗಳನ್ನು ಕಳೆದುಕೊಳ್ಳುವ ಹಾಗೆ ಮಾಡಿದರು. 5. ಮೋದಿ ಸರ್ಕಾರದ ವೈಫಲ್ಯಗಳನ್ನು ಹೇಳುತ್ತಾ ಹೋದರೆ ಪುಸ್ತಕಗಳನ್ನೇ ಬರೆಯಬಹುದು.

ಈ ರೀತಿಯ ಬರೀ ವೈಫಲ್ಯಗಳನ್ನೇ ಕೊಂಡಿರುವ ಮೋದಿಯವರು ಅಭಿವೃದ್ಧಿಯ ಬಗ್ಗೆ ಮಾತನಾಡಲು ಹೇಗೆ ತಾನೇ ಸಾಧ್ಯ..? ಆದ್ದರಿಂದ ಈ ರೀತಿಯ ಅನೈತಿಕ ಆಪರೇಷನ್ ಕಮಲದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿಯಲ್ಲಿ ‘ಅಬ್ ಕಿ ಬಾರ್ ರಾಬರ್ಟ್ ವಾದ್ರಾ’ ಪೋಸ್ಟರ್; ಪ್ರಿಯಾಂಕಾ ಪತಿ ಸ್ಪರ್ಧೆಗೆ ಹೆಚ್ಚಿದ...

0
2019ರ ಲೋಕಸಭಾ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ತಮ್ಮ ಕ್ಷೇತ್ರವನ್ನು ಅಮೇಥಿಯಿಂದ ಕೇರಳದ ವಯನಾಡಿಗೆ ಸ್ಥಳಾಂತರಿಸಿದ್ದಾರೆ. ಆದರೆ, ಬಿಜೆಪಿ ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಯಾರು...