Homeಅಂತರಾಷ್ಟ್ರೀಯಮರುಪಾವತಿಯಾಗದ ಸಾಲ: ಚೌಕಿದಾರನ ಅವಧಿಯಲ್ಲಿ 5,53,606 ಕೋಟಿ ಮನ್ನಾ!

ಮರುಪಾವತಿಯಾಗದ ಸಾಲ: ಚೌಕಿದಾರನ ಅವಧಿಯಲ್ಲಿ 5,53,606 ಕೋಟಿ ಮನ್ನಾ!

- Advertisement -
- Advertisement -

ವಸೂಲಿ ಮಾಡಲಾಗದ ಅಂದರೆ ಕಳ್ಳ ಉದ್ಯಮಿಗಳು ಸಾಲ ಪಡೆದು, ಮರುಪಾವತಿ ಮಾಡದೇ ಹೋದಾಗ ಅದನ್ನು ಮರುಪಾವತಿಯಾಗದ ಸಾಲ ((NPA-Non performing loans) ಎಂದು ಬ್ಯಾಂಕಿಂಗ್ ಭಾಷೆಯಲ್ಲಿ ಕರೆಯುತ್ತಾರೆ. ಸಾಲ ಪಡೆದ ‘ದೊಡ್ಡವರು’ ಆಡಳಿತ ಪಕ್ಷದ ನಂಟು ಹೊಂದಿದ್ದರೆ, ಅವರ ಸಾಲ ವಸೂಲಾತಿ ಬ್ಯಾಂಕುಗಳಿಗೆ ಕಷ್ಟ. ಇಂತಹ ‘bad loans’ ಪ್ರಮಾಣವನ್ನು ಕಡಿಮೆ ತೋರಿಸಲು ಬ್ಯಾಂಕುಗಳು ‘write-off’ ಮಾಡಿ ಜನದ್ರೋಹಿ ಕೆಲಸ ಮಾಡುತ್ತವೆ. ‘write-off’ ಅಂದರೆ ಸಾಲಮನ್ನಾ ಅಷ್ಟೇ! ಕಳೆದ ಐದು ವರ್ಷಗಳಲ್ಲಿ ಚೌಕಿದಾರನ ಆಡಳಿತದಲ್ಲಿ ಇಂತಹ ಐದೂವರೆ ಲಕ್ಷ ಕೋಟಿ ರೂಪಾಯಿ ಸಾಲಮನ್ನಾ ಮಾಡಲಾಗಿದೆ….

ಇವತ್ತು ಸಾರ್ವಜನಿಕ ಬ್ಯಾಂಕುಗಳು ಸಂಕಷ್ಟ ಎದುರಿಸುತ್ತಿರುವುದಕ್ಕೆ ಮೂಲ ಕಾರಣ ಮೋದಿ-ಮಲ್ಯಗಳು ಸಾವಿರಾರು ಕೋಟಿ ಎತ್ತಿಕೊಂಡು ಓಡಿ ಹೋಗಿರುವುದು. ಹಾಗೆಯೇ ದೇಶದೊಳಗೇ ಇರುವ ನೂರಾರು ವಂಚಕ ಉದ್ಯಮಿಗಳ ಸಾಲಗಳನ್ನು ಬ್ಯಾಂಕುಗಳು ಮನ್ನಾ ಮಾಡಿರುವುದು. ಆಡಳಿತ ಪಕ್ಷ ಬಂಡವಾಳಶಾಹಿ ವ್ಯವಸ್ಥೆ ಪರ ನಿಂತಾಗ ಇದೆಲ್ಲ ಸಂಭವಿಸುತ್ತದೆ. ಬ್ಯಾಂಕುಗಳ ಈ ದುಸ್ಥಿತಿಯನ್ನು ಸರಿಪಡಿಸಲು ಮೋದಿ ಸರ್ಕಾರ ಪಿಎಫ್ ದುಡ್ಡನ್ನು ಎತ್ತಲು ಹೊಂಚು ಹಾಕಿತ್ತು, ಆರ್‍ಬಿಐನ ಮೀಸಲು ನಿಧಿಯ ಮೇಲೂ ಕಣ್ಣು ಹಾಕಿತ್ತು! ‘ಮುದ್ರಾ’ ಹೆಸರಲ್ಲಿ ನೀಡಲ್ಪಟ್ಟ ಸಾಲಗಳು ವಾಪಸ್ಸಾಗುವ ಲಕ್ಷಣಗಳೂ ಇಲ್ಲ. ಏಕೆಂದರೆ ಇದರ ಫಲಾನುಭವಿಗಳಲ್ಲಿ ಬಹತೇಕರು ಬಿಜೆಪಿ ನಾಯಕರ ಸಂಬಂಧಿಗಳು, ಕಾರ್ಯಕರ್ತರು…

ಶೇ. 80 ಸಾಲ ಮನ್ನಾ!
‘ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್’ ಪತ್ರಿಕೆಯು ಆರ್‍ಟಿಐನಲ್ಲಿ ಪಡೆದುಕೊಂಡ ಮಾಹಿತಿಯಲ್ಲಿ ಈ ಎನ್‍ಪಿಎ ವಿವರಗಳು ಲಭ್ಯವಾಗಿವೆ. 2008-18 ರ ಹತ್ತು ವರ್ಷಗಳ ಅವಧಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು 7 ಲಕ್ಷ ಕೋಟಿ ಎನ್‍ಪಿಎ ಸಾಲಗಳನ್ನು ಮನ್ನಾ ಮಾಡಿದ್ದು, ಅದರಲ್ಲಿ ಶೇ.80ರಷ್ಟು ( ಐದೂವರೆ ಲಕ್ಷ ಕೋಟಿ) ಸಾಲ ಚೌಕಿದಾರನ ಮೂಗಿನಡಿಯೇ ಮನ್ನಾ ಆಗಿದೆ. ಈ ರೀತಿ ಮನ್ನಾ ಆದ ಮೇಲೂ, ಬ್ಯಾಂಕುಗಳು ಕಾಟಾಚಾರಕ್ಕೆ ವಸೂಲಿಗೆ ಪ್ರಯತ್ನಿಸುವ ನಾಟಕ ಆಡುತ್ತವೆ. ಅದರಲ್ಲಿ ಶೇ. 20 ಕೂಡ ವಾಪಸ್ಸು ಬಂದಿಲ್ಲ.

2016ರಿಂದ 2019: ಮನ್ನಾ ಸೀಸನ್!

ಚುನಾವಣೆ ಸಮೀಪಿಸುತ್ತಿದ್ದಂತೆ ಈ ಮನ್ನಾ ಆಟ ಚುರುಕುಗೊಂಡಿದೆ. ಇಲ್ಲಿ ಮನ್ನಾ ಭಾಗ್ಯ ಪಡೆದ ಸಾಲಗಾರರ ಹೆಸರುಗಳನ್ನು ಗೌಪ್ಯವಾಗಿಡುವ ದುಷ್ಟ ಪದ್ಧತಿಯೂ ಜಾರಿಯಲ್ಲಿದೆ. ಆರ್‍ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅಧಿಕಾರ ಬಿಡುವಾಗ ಇಂತಹ ಸಾಲಗಾರರ ದೊಡ್ಡ ಪಟ್ಟಿಯನ್ನೇ ಸರ್ಕಾರಕ್ಕೆ ನೀಡಿದ್ದರೂ, ಇವತ್ತಿಗೂ ಸರ್ಕಾರ ಅದನ್ನು ಬಹಿರಂಗ ಮಾಡಿಲ್ಲ!

2018ರ ಏಪ್ರಿಲ್-ಡಿಸೆಂಬರ್- ಈ 9 ತಿಂಗಳ ಅವಧಿಯಲ್ಲಿ ಮನ್ನಾ ಆದ ಎನ್‍ಪಿಎ ಸಾಲ: 1,56,702 ಕೋಟಿ ರೂಪಾಯಿ. ಇದರಲ್ಲಿ ಮೊದಲ ಆರು ತಿಂಗಳಲ್ಲಿ 82,799 ಕೋಟಿ ರೂ ಮನ್ನಾ ಆಗಿದ್ದರೆ, ಕೊನೆ 3 ತಿಂಗಳಲ್ಲಿ 64 ಸಾವಿರ ಕೋಟಿ ರೂ ಮನ್ನಾ ಆಗಿದೆ.
2016-17ರಲ್ಲಿ 1,08,374 ಕೋಟಿ ರೂ, 2017-18ರಲ್ಲಿ 1,61,138 ಕೋಟಿ ರೂ ಮನ್ನಾ ಆಗಿದೆ.

ಇಲ್ಲಿ ಒಂದು ವಿಷಯ ನೆನಪಿಡಿ: ಎನ್‍ಪಿಎ ಮನ್ನಾ ಆದವರ ಹೆಸರೂ ಗೌಪ್ಯ, ಚುನಾವಣಾ ಬಾಂಡ್‍ಗಳಲ್ಲಿ ಪಾರ್ಟಿ ಫಂಡ್ ಕೊಟ್ಟವರ ಹೆಸರೂ ಗೌಪ್ಯ. ಈ 5 ವರ್ಷಗಳಲ್ಲಿ ಅದರಲ್ಲೂ ಕಳೆದ 3 ವರ್ಷಗಳಲ್ಲಿ ಮನ್ನಾ ಭಾಗ್ಯ ಪಡೆದವರು ಅದರಲ್ಲಿ ಒಂದು ದೊಡ್ಡ ಪ್ರಮಾಣವನ್ನು ಬಿಜೆಪಿಗೆ ಚುನಾವಣಾ ಬಾಂಡ್‍ಗಳ ಮೂಲಕ ಸಲ್ಲಿಸಿರುವ ಸಾಧ್ಯತೆಗಳು ದಟ್ಟವಾಗಿವೆ ಎಂಬುದು ನಮ್ಮ ಅನುಮಾನ.
(ಅಂಕಿ-ಸಂಖ್ಯೆ: ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...