Homeಮುಖಪುಟಮೋದಿಯ ‘ಮಾತೃ ವಂದನಾ’ ಡ್ರಾಮಾ, ಹಂಚಲೆಂದೇ 4 ಪಟ್ಟು ಹಣ ಹೋಯ್ತಲ್ಲಮ್ಮ

ಮೋದಿಯ ‘ಮಾತೃ ವಂದನಾ’ ಡ್ರಾಮಾ, ಹಂಚಲೆಂದೇ 4 ಪಟ್ಟು ಹಣ ಹೋಯ್ತಲ್ಲಮ್ಮ

- Advertisement -
- Advertisement -

ಈ ಮೋದಿ ಚೆಂದ ಚೆಂದದ ಹೆಸರಲ್ಲಿ ಆರಂಭಿಸಿದ ಯೋಜನೆಗಳೆಲ್ಲವೂ ಫ್ಲಾಪ್! ಈ ಮನುಷ್ಯನಿಗೆ ಪ್ರಚಾರಕ್ಕಾಗಿ ಘೋಷಣೆ ಮಾಡುವುದಷ್ಟೇ ಗೊತ್ತೇ ವಿನ:, ಅದರ ಅನುಷ್ಠಾನದ ಬಗ್ಗೆ ನಯಾ ಪೈಸೆಯ ಅನುಭವವೂ ಇಲ್ಲ, ಕಾಳಜಿಯೂ ಇಲ್ಲ. ಉಜ್ವಲಾ ಹಳ್ಳ ಹಿಡಿದಂತೆ ‘ಮಾತೃ ವಂದನಾ’ ಕೂಡ ಹದಗೆಟ್ಟು ಹೋಗಿದೆ…

‘ಮಾತೃ ವಂದನಾ’ ಎಂಬ ಸ್ಕೀಮ್‍ನಲ್ಲಿ ಫಲಾನುಭವಿಗಳಿಗೆ ತಲುಪಿದ ಹಣ 1 ರೂಪಾಯಿಯಾದರೆ, ಅದನ್ನು ಅವರಿಗೆ ತಲುಪಿಸಲು ಆದ ಖರ್ಚು 4 ರೂಪಾಯಿ 50 ಪೈಸೆ! ಮೂರ್ಖನೊಬ್ಬ ಪ್ರಧಾನಿಯಾದರೆ, ಆತನ ಕಚೇರಿಯೇ ಎಲ್ಲದರಲ್ಲೂ ಮೂತಿ ತೂರಿಸುತ್ತ ಹೋದರೆ, ಈ ಕಾರಣಕ್ಕೆ ಸಂಬಂಧಿಸಿದ ಸಚಿವರು ತೆಪ್ಪಗೆ ಮುಚ್ಚಿಕೊಂಡು ಕೂತರೆ ಏನಾಗಬೇಕೋ ಅದಾಗಿದೆ.

ಮಾತೃ ವಂದನಾ ಎಂಬುದೇನೂ ಹೊಸ ಯೋಜನೆಯಲ್ಲ. ಹಲವಾರು ದಶಕಗಳಿಂದ ಈ ಯೋಜನೆ ಜಾರಿಯಲ್ಲಿದೆ. ಅದರ ಹೆಸರು ಬದಲು ಮಾಡಿದ ಮೋದಿ ಅದು ತನ್ನದೇ ಹೊಸ ಕಾಳಜಿ ಎಂಬಂತೆ ಆಟ ಆಡಿದರು. ಗರ್ಭಿಣಿಯರಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆಯನ್ನು ನಿವಾರಿಸಲು, ಆ ಮೂಲಕ ಹುಟ್ಟುವ ಮಕ್ಕಳು ಮತ್ತು ತಾಯಿ ಸದೃಡರಾಗಿರುವಂತೆ ನೋಡಿಕೊಳ್ಳುವುದು ಈ ಯೋಜನೆಯ ಉದ್ದೇಶ.
ಆದರೆ, ಬರೀ ಘೋಷಣೆ ಮಾಡುವುದರಲ್ಲೇ ಅತ್ಯಾನಂದ ಅನುಭವಿಸುವ ಮೋದಿಗೆ ಅನುಷ್ಟಾನದ ಬಗ್ಗೆ ಎಂದಿಗೂ ಕಾಳಜಿ ಇಲ್ಲ. ಹೆಡ್‍ಲೈನುಗಳಲ್ಲಿ ಮಿಂಚುವುದು, ಯೋಜನೆಗಳ ಹೆಸರನ್ನು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೇಲಿಬಿಟ್ಟು ಜನರನ್ನು ಮೂರ್ಖರನ್ನಾಗಿಸುವುದು ಅವರ ಕಾರ್ಯತಂತ್ರ-ಕುತಂತ್ರ.

ಈ ಯೋಜನೆಯಲ್ಲಿ ಮೋದಿ ಸರ್ಕಾರ 18,82,708 ಗರ್ಭೀಣಿಯರಿಗಾಗಿ 1,655.83 ಕೋಟಿ ರೂ ಬಿಡುಗಡೆ ಮಾಡಿದೆ. ಈ ಹಣವನ್ನು ಮಾತೆಯರಿಗೆ ತಲುಪಿಸಲು ಮಾಡಿದ ಖರ್ಚು 6966 ಕೋಟಿ ರೂಪಾಯಿ! ಮೂರ್ಖ ಪ್ರಧಾನಿ, ಆಲಸಿ ಮತ್ತು ಹಣಬಾಕ ಅಧಿಕಾರಿಗಳು ಸೇರಿ ಮಾಡಿದ ರಾದ್ದಾಂತವಿದು!
ಆಧಾರ: ದಿ ವೈರ್

ಇದನ್ನೂ ಓದಿ: ಹೆಸರಿಗಷ್ಟೇ ಆಯ್ತು ಮೋದಿಯ ‘ಉಜ್ವಲಾ’, ನಿಲ್ಲಲೇ ಇಲ್ಲ ಒಲೆ ಮುಂದೆ ಝಳ ಝಳ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...