ಸದನಕ್ಕೆ ಗೈರಾದ ಶಾಸಕ ಶ್ರೀಮಂತ ಪಾಟೀಲ್: ಬಿಜೆಪಿಯಿಂದ ಮತ್ತೊಂದು ಆಪರೇಷನ್ ಎಂದ ಡಿಕೆಶಿ

ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ರನ್ನು ಬಿಜೆಪಿ ಕಿಡ್ನಾಪ್ ಮಾಡಿದೆ ಎಂದು ಸಚಿವ ಡಿ.ಕೆ ಶಿವಕುಮಾರ್ ಸದನದಲ್ಲಿಂದು ಆರೋಪ ಮಾಡಿದರು. ಅವರು ನಿನ್ನೆ ತಾನೇ ನಮ್ಮ ಜೊತೆಯಲ್ಲಿಯೇ ಇದ್ದರು, ಚೆನ್ನಾಗಿಯೇ ಮಾತನಾಡಿದರು ಆದರೆ ರಾತ್ರಿಯೇ ಕಣ್ಮರೆಯಾಗಿದ್ದು ಬಿಜೆಪಿಯವರು ಅಪಹರಿಸಿದ್ದು ಇದರ ತನಿಖೆ ನಡೆಸಬೇಕು ಎಂದು ಪಟ್ಟು ಹಿಡಿದರು.

ಅವರು ಬೆಂಗಳೂರಿನ ರೆಸಾರ್ಟ್ ನಿಂದ ಚನ್ನೈಗೆ ಹೋಗಿ ಅಲ್ಲಿಂದ ಮುಂಬೈಗೆ ಹೋಗಿರುವ ಕುರಿತು ವಿಮಾನ ಟಿಕೆಟ್ ಗಳನ್ನು ಪ್ರದರ್ಶಿಸಿದ ಡಿ.ಕೆ ಶಿವಕುಮಾರ್ ಇದೆಲ್ಲದರ ಹಿಂದೆ ಬಿಜೆಪಿಯಿದೆ ಎಂದು ಆರೋಪಿಸಿದರು. ಅದೇ ಸಮಯಕ್ಕೆ ಅವರು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ಹೋಗಿದ್ದಾರೆ ಎಂಬ ಚರ್ಚೆ ಬಂತು. ಅವರು ಆಸ್ಪತ್ರೆಯಲ್ಲಿ ಮಲಗಿರುವ ಫೋಟೊಗಳು ಓಡಾಡಿದವು. ಕೆಲವೇ ಕ್ಷಣಗಳಲ್ಲಿ ಶ್ರೀಮಂತ ಪಾಟೀಲ ಕಡೆಯಿಂದ ಸ್ಪೀಕರ್ ರವರಿಗೆ ಪತ್ರವೊಂದು ತಲುಪಿತ್ತು.

ಈ ಫೋಟೊಗಳನ್ನು ತೆಗೆದು ಕಳಿಸಿದ್ದು ಯಾರು ಮತ್ತು ಏಕೆ? ಇದು ದೊಡ್ಡ ನಾಟಕ ಎಂದು ಆಡಳಿತ ಪಕ್ಷದ ಶಾಸಕರು ಗದ್ದಲ ಮಾಡಿದರು. ಈ ಕುರಿತು ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ “ಅವರು ಏಕೆ ಹೋಗಿದ್ದಾರೆ, ಹೇಗೆ ಹೋಗಿದ್ದಾರೆ ನನಗೆ ಗೊತ್ತಿಲ್ಲ” ಆದರೆ ಅವರಿಂದ ಒಂದು ಪತ್ರ ಬಂದಿದೆ. ಅದಕ್ಕೆ ತಳಬುಡವಿಲ್ಲ. ಲೆಟರ್ ಹೆಡ್ ಕೂಡ ಇಲ್ಲ. ನಾನು ಈ ಸ್ಥಾನದಲ್ಲಿ ಇರುತ್ತೇನೆ, ನಾಳೆ ಹೋಗುತ್ತೇನೆ, ಆದರೆ ಹೀಗೆ ಪತ್ರ ಕಳಿಸುವುದು ಸ್ಪೀಕರ್ ಘಟನೆಗೆ ಧಕ್ಕೆ ತರುವಂತದ್ದು” ಎಂದು ಕಿಡಿಕಾರಿದ್ದಾರೆ.

ಇದರ ಜೊತೆಗೆ ಡಿ.ಕೆ ಶಿವಕುಮಾರ್ ರವರು ಅವರು ವಿಮಾನದಲ್ಲಿ ಹೋಗಿರುವ ಟಕೇಟ್ ಕಾಪಿಗಳನ್ನು ಪ್ರದರ್ಶನ ಮಾಡಿ ಇದೆಲ್ಲದರ ಹಿಂದೆ ಬಿಜೆಪಿ ಇದೆ ಎಂದು ಆರೋಪಿಸಿದರು. ದಿನೇಶ್ ಗುಂಡೂರಾವ್ ಕೂಡ ಇದಕ್ಕೆ ದನಿಗೂಡಿಸಿದರು.

ಪಾಟೀಲರ ಪತ್ರವನ್ನು ಓದಿ ಹೇಳಿದ ಸ್ಪೀಕರ್ ಇಂದು ಗೈರು ಹಾಜರಾಗುತ್ತೇನೆ ಎಂದು, ಅನಾರೋಗ್ಯವೆಂದು ಇಂದು 10.45ಕ್ಕೆ ಪತ್ರ ಕಳಿಸುವುದು ಸರಿಯಲ್ಲ. ಮುಂಬೈನಲ್ಲಿ ಆ ಆಸ್ಪತ್ರೆ ಇದಿಯೋ ಇಲ್ವೋ ನನಗೆ ಗೊತ್ತಿಲ್ಲ. ಹೀಗೆ ಮನಬಂದಂತೆ ಪತ್ರ ಬರೆಯುವುದು ಸರಿಯಲ್ಲ ಎಂದು ಅಸಮಧಾನ ವ್ಯಕ್ತಿಪಡಿಸಿದರು. ಗೃಹ ಸಚಿವರು ಇದರ ಕುರಿತು ಕುಟುಂಬವನ್ನು ಸಂಪರ್ಕಿಸಬೇಕು., ತನಿಖೆ ನಡೆಸಿ ವರದಿ ಕೊಡಬೇಕೆಂದು ತಿಳಿಸಿದರು. ಇಲ್ಲವಾದಲ್ಲಿ ಡಿ.ಜಿ.ಪಿ ವರ್ಗಾಹಿಸುತ್ತೇನೆ ಎಂದಿದ್ದಾರೆ. ಗೃಹ ಸಚಿವರು ಒಪ್ಪಿಕೊಂಡಿದ್ದರೆ.

“ಶ್ರೀಮಂತ ಪಾಟೀಲ್ ನಿಜಕ್ಕೂ ಅಸ್ವಸ್ಥರಾಗಿದ್ದರೆ ಬೇಗ ಗುಣಮುಖ ಆಗಲಿ. ಆದರೆ ಅದು ಡ್ರಾಮಾ ಅಂತಾದರೆ, ಟಿವಿಯಲ್ಲಿ ತೋರಿಸುತ್ತಿರುವ ಅವರ ಆ ಚಿತ್ರ ಪ್ರಜಾಪ್ರಭುತ್ವದ ಇಂದಿನ ಸ್ಥಿತಿಯ ರೂಪಕವೇ ಆಗಿದೆ” ಎಂದು ಪತ್ರಕರ್ತ ಮಲ್ಲನಗೌಡರ್ ಅಭಿಪ್ರಾಯಪಟ್ಟಿದ್ದಾರೆ.

 

 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

  1. ಮಲಗುವ ಸಮಯದಲ್ಲಿ ಕನ್ನಡಕ ದರಿಸುವ ಏಕೈಕ ವ್ಯಕ್ತಿ ಶ್ರೀಮಂತ ಪಾಟಿಲ್

LEAVE A REPLY

Please enter your comment!
Please enter your name here