Homeಕರ್ನಾಟಕಮುಖ್ಯಮಂತ್ರಿಗಳೆ, ಮದ್ಯ ನಿಷೇಧಕ್ಕಾಗಿ ಸಭೆ ಕರೆಯಿರಿ: ನೂರಾರು ತಾಯಂದಿರ ಆಕ್ರಂದನ..

ಮುಖ್ಯಮಂತ್ರಿಗಳೆ, ಮದ್ಯ ನಿಷೇಧಕ್ಕಾಗಿ ಸಭೆ ಕರೆಯಿರಿ: ನೂರಾರು ತಾಯಂದಿರ ಆಕ್ರಂದನ..

- Advertisement -
- Advertisement -

ಮದ್ಯ ನಿಷೇಧದ ಕುರಿತು ಮುಖ್ಯಮಂತ್ರಿಗಳು ನಮ್ಮೊಂದಿಗೆ ಸಭೆ ನಡೆಸಬೇಕು ಎಂಬ ಮಹಳಿಯರ ಬೇಡಿಕೆ ಹಲವು ವರ್ಷಗಳದ್ದು. ಅದಕ್ಕಾಗಿ ಇದೇ ವರ್ಷ ಜನವರಿಯಲ್ಲಿ 12 ದಿನಗಳ ಕಾಲ ಮೂರು ಸಾವಿರಕ್ಕೂ ಹೆಚ್ಚು ಮಹಿಳೆಯರು ಚಿತ್ರದುರ್ಗದಿಂದ ಬೆಂಗಳೂರಿನವರೆಗೂ ಪಾದಯಾತ್ರೆ ನಡೆಸಿದ್ದರೂ ಸಹ ಅಂದಿನ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಕನಿಷ್ಠ ಮಹಿಳೆಯನ್ನು ಭೇಟಿ ಮಾಡದೇ ದರ್ಪ ಮೆರೆದಿದ್ದರು.

ಆ ಸಂದರ್ಭದಲ್ಲಿ ಬಿಜೆಪಿಯ ಜಗದೀಶ್‌ ಶೆಟ್ಟರ್‌, ಯಡಿಯೂರಪ್ಪ ಸೇರಿದಂತೆ ಹಲವು ಮುಖಂಡರ ಮಹಿಳೆಯರ ಪರವಾಗಿ ಮಾತನಾಡಿದ್ದರು. ಆದರೀಗ ಅದೇ ಮಹಿಳೆಯರು ಕನಿಷ್ಟ ಸಭೆ ನಡೆಸಿ ಎಂದು ಮುಖ್ಯಮಂತ್ರಿಗಳ ಬಳಿ ಒತ್ತಾಯಿಸಿದರೆ ಯಡಿಯೂರಪ್ಪನವರು ತಲೆಕೆಡಿಸಿಕೊಳ್ಳುತ್ತಿಲ್ಲ. ಮದ್ಯ ನಿಷೇಧಿಸುವ ಯಾವುದೇ ಪ್ರಸ್ತಾಪ ನಮ್ಮ ಬಳಿ ಇಲ್ಲ ಎಂದು ಹೇಳಿರುವ ಮುಖ್ಯಮಂತ್ರಿಗಳು ಸಭೆ ಕುರಿತು ಮಾತೇ ಆಡುತ್ತಿಲ್ಲ.

ಪಟ್ಟು ಬಿಡದ ಬಡಮಹಿಳೆಯರು ಇಂದು ಬೆಂಗಳೂರಿಗೆ ಬಂದಿದ್ದಾರೆ. ಗಾಂಧಿಜೀಯವರ 150 ನೇ ಜಯಂತಿಯ ಅಂಗವಾಗಿ ಅವರ ಕನಸಾಗಿರುವ ಮದ್ಯಪಾನ ನಿಷೇಧವನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ಮಹಿಳೆಯರು ಸತ್ಯಾಗ್ರಹ ನಡೆಸುತ್ತಿದ್ದಾರೆ.

“ಸತ್ಯಾಗ್ರಹಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದರೆ ನಾವು ಅನುಮತಿ ನೀಡಲು ಆಗುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಕ್ಕೆ ಸಂಖ್ಯೆಯನ್ನು ಇಳಿಸಿಕೊಳ್ಳಲಾಯಿತು. ಆದರೆ ಇದೀಗ ನಮ್ಮ ಪ್ರತಿಭಟನೆಗೆ ಅನುಮತಿ ನೀಡದೇ, ಬೆಂಗಳೂರಿನ ಯಾವುದೇ ಜಾಗವನ್ನು ನಿಗದಿ ಮಾಡದೇ ನೂರಾರು ಸತ್ಯಾಗ್ರಹಿಗಳನ್ನು ರೈಲ್ವೆ ನಿಲ್ದಾಣದಲ್ಲೇ ಕೂರಿಸಲಾಗಿದೆ. ಮುಖ್ಯಮಂತ್ರಿಗಳು ಸಭೆ ಕರೆಯುವವರೆಗೂ ಬೆಂಗಳೂರಿನಿಂದ ಕದಲುವುದಿಲ್ಲ” ಎಂದು ಹಳ್ಳಿಗಳಿಂದ ಬಂದಿರುವ ತಾಯಂದಿರು ದಿಟ್ಟವಾಗಿ ಹೇಳುತ್ತಿದ್ದಾರೆ.

ಎಂತಹ ಕಾರ್ಯಕ್ರಮಕ್ಕೂ ಬೇಕಾದರೂ ಅನುಮತಿ ನೀಡುವ ಪೊಲೀಸ್‌ ಇಲಾಖೆ ಬಡ ಮಹಿಳೆಯರ ಸತ್ಯಾಗ್ರಹಕ್ಕೆ ಅನುಮತಿ ನೀಡದೇ ಇರುವುದು ನಾಚಿಗೇಡಿನ ಸಂಗತಿಯಾಗಿದೆ. ಮಹಿಳೆಯರ ಹೋರಾಟಕ್ಕೆ 15 ದಿನಗಳ ಮೊದಲೇ ಅನುಮತಿಗೆ ಅರ್ಜಿ ಹಾಕಿದ್ದರೂ ಅನುಮತಿ ನೀಡದ ಪೊಲೀಸ್‌ ಇಲಾಖೆ ಯಾರ ಮರ್ಜಿಗೆ ಒಳಗಾಗಿದೆ ಎಂಬ ಪ್ರಶ್ನೆ ಎದ್ದಿದೆ.

ಇಲ್ಲಿರುವ ಮಹಿಳೆಯರು ಮದ್ಯಪಾನದಿಂದಾಗುವ ದುಷ್ಪರಿಣಾಮಗಳನ್ನು ಸ್ವತಃ ಉಂಡು ಬಳಲಿದವರು. ಇವರೊಡಲಲ್ಲಿ ನೂರಾರು ನೋವಿನ ಕಥೆಗಳಿವೆ. ಸಮಾಜದ ಒಳಿತಿಗೆ, ಒಂದಿಷ್ಟು ನೆಮ್ಮದಿಯ ಬದುಕಿಗಾಗಿ ಮದ್ಯಪಾನ ನಿಷೇಧ ಮಾಡಿ ಎಂದು ಮಹಿಳೆಯರು ಬೇಡಿಕೆಯಿಟ್ಟಿದ್ದಾರೆ. ಒಮ್ಮೆಗೆ ಸಂರ್ಪೂಣ ಮದ್ಯಪಾನ ನಿಷೇಧ ಸಾದ್ಯವಿಲ್ಲವೆನ್ನುವುದು ಅವರಿಗೂ ಗೊತ್ತಿದೆ. ಮೊದಲು ಸರ್ಕಾರವೇ ಟಾರ್ಗೆಟ್‌ ನೀಡಿ ಮದ್ಯ ಮಾರಾಟ ಹೆಚ್ಚು ಮಾಡುವ ಆದೇಶ ವಾಪಸ್‌ ಪಡೆಯಬೇಕು, ಅಕ್ರಮ ಮದ್ಯದಂಗಡಿಗಳನ್ನು ಮುಚ್ಚಿಸಬೇಕು, ಮದ್ಯ ಮಾರಟ ಎಷ್ಟಿರಬೇಕೆಂಬ ತೀರ್ಮಾನವನ್ನು ಗ್ರಾಮಪಂಚಾಯ್ತಿಗಳಿಗೆ ನೀಡಬೇಕು ಮತ್ತು ಕೊನೆಯದಾಗಿ ಈ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳು ಸಭೆ ಕರೆಯಬೇಕು ಇವಿಷ್ಟೇ ಮಹಿಳೆಯರ ಹಕ್ಕೊತ್ತಾಯಗಳಾಗಿವೆ.

ಇನ್ನು ಹಿರಿಯ ಗಾಂಧಿವಾದಿ ಹೋರಾಟಗಾರ ಪ್ರಸನ್ನರವರು ಸತ್ಯಾಗ್ರಹ ನಡೆಯುತ್ತಿರುವ ರೈಲ್ವೆ ನಿಲ್ದಾಣಕ್ಕೆ ಬಂದು ಬೆಂಬಲ ಸೂಚಿಸಿದ್ದಾರೆ. “ನೂರಾರು ಮಹಿಳೆಯರು ತಮ್ಮ ನೋವಿನ ಕಥೆ ಹೇಳಲು, ಮದ್ಯ ನಿಷೇಧ ಆಗಬೇಕು ಅಂತ ಬೆಂಗಳೂರಿಗೆ ಬಂದಿದ್ದಾರೆ. ಅವರನ್ನು ಕರೆದು ಸಭೆ ನಡೆಸದೇ ಹೀಗೆ ಬೀದಿಯಲ್ಲಿ ಕೂರಿಸಿರುವುದು ನನಗೆ ತುಂಬಾ ನೋವಾಗುತ್ತಿದೆ.” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಮೊದಲ ಹಂತದಲ್ಲಿ ಚಳುವಳಿ ಗಟ್ಟಿಯಾಗಿರುವ ರಾಯಚೂರು…ಕಡೆಯಲ್ಲಿ ಹೆಂಡ ಮಾರಾಟ ರದ್ದಾಗಲಿ.

  2. ಹಲವಾರು ಹೋರಾಟ ತ್ಯಾಗ ಬಲಿದಾನ ಮತ್ತು ಚಳುವಳಿಗೆoದಲೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಆದರೆ ಈಗ ಹೋರಾಟ ಅಥವಾ ಚಳುವಳಿಗಳನ್ನು ಮಾಡಲು ಸಕಾ೯ರ ದ ಅನುಮತಿ ಪಡೆಯಬೇಕು. ಸಕಾ೯ರ ಅನುಮತಿ ಕೊಡುತ್ತದೆ ಯೇ?

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...