Homeಅಂತರಾಷ್ಟ್ರೀಯಕಡಿಮೆ ಬುದ್ದಿಯುಳ್ಳವರು ಬಲಪಂಥೀಯ ಬೆಂಬಲಿಗರಾಗುತ್ತಾರೆ ಎನ್ನುತ್ತಿವೆ ಅಮೆರಿಕದ ಸಂಶೋಧನೆಗಳು..!

ಕಡಿಮೆ ಬುದ್ದಿಯುಳ್ಳವರು ಬಲಪಂಥೀಯ ಬೆಂಬಲಿಗರಾಗುತ್ತಾರೆ ಎನ್ನುತ್ತಿವೆ ಅಮೆರಿಕದ ಸಂಶೋಧನೆಗಳು..!

- Advertisement -
- Advertisement -

ಕೆಲವು ಜನರು ಏಕೆ ಪೂರ್ವಾಗ್ರಹ ಪೀಡಿತರಾಗಿದ್ದಾರೆ ಎಂಬುದಕ್ಕೆ ಸಂಶೋಧಕರು ಸಂಭಾವ್ಯ ವಿವರಣೆಯನ್ನು ಕಂಡುಕೊಂಡಿದ್ದಾರೆ. ಅದೆಂದರೆ ಅವರು ಕಡಿಮೆ ಬುದ್ಧಿವಂತರಾಗಿರುತ್ತಾರೆ.

ಕಡಿಮೆ ಸಾಮಾನ್ಯ ಬುದ್ಧಿವಂತಿಕೆ ಹೊಂದಿರುವ ಮಕ್ಕಳು ವಯಸ್ಕರಾದಂತೆ ಪೂರ್ವಾಗ್ರಹ ಪೀಡಿತರಾಗುತ್ತಾರೆ ಎಂದು ಬ್ರಾಕ್ ವಿಶ್ವವಿದ್ಯಾಲಯದ ಅಧ್ಯಯನ ವರದಿ ಹೇಳಿದೆ.

ಸೈಕಲಾಜಿಕಲ್ ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನವು ಎರಡು ದೊಡ್ಡ-ಪ್ರಮಾಣದ ಬ್ರಿಟಿಷ್ ಅಧ್ಯಯನಗಳ ದತ್ತಾಂಶವನ್ನು ಪರಿಶೀಲಿಸಿದೆ. ಬಾಲ್ಯದಲ್ಲಿ ಕಡಿಮೆ ಬುದ್ದಿಮತೆ ಅಂಕಗಳನ್ನು ಹೊಂದಿದ ಮಕ್ಕಳು ಪ್ರೌಢಾವಸ್ಥೆಯಲ್ಲಿ ಹೆಚ್ಚಿನ ವರ್ಣಭೇದ ನೀತಿಯ ಪ್ರತಿಪಾದಕರಾಗುತ್ತಾರೆ ಎಂದು ಸಂಶೋಧಕರು ವಿವರಿಸಿದ್ದಾರೆ. ಮುಂದೆ ಅವರು ಬಲಪಂಥೀಯ ಸಿದ್ಧಾಂತದತ್ತ ಆಕರ್ಷಿತಗೊಳ್ಳುತ್ತಾರೆ ಎಂಬ ವಿವಾದಾತ್ಮಕ ಅಂಶವನ್ನು ಸಂಶೋಧಕರು  ವಿವರಿಸುತ್ತಾರೆ.

ಯು.ಎಸ್. ಅಧ್ಯಯನದ ದತ್ತಾಂಶದ ದ್ವಿತೀಯ ವಿಶ್ಲೇಷಣೆಯು ಕಳಪೆ ಅಮೂರ್ತ-ತಾರ್ಕಿಕ ಕೌಶಲ್ಯ ಹೊಂದಿರುವವರು ಸಲಿಂಗಕಾಮ ವಿರೋಧಿ ಪೂರ್ವಾಗ್ರಹವನ್ನು ಹೊಂದುವ ಸಾಧ್ಯತೆಯಿದೆ ಎಂದು ತೋರಿಸಿದೆ. ಅವರು ಭಾಗಶಃ ಸರ್ವಾಧಿಕಾರಿ ವರ್ತನೆಗಳೊಂದಿಗೆ ಸಂಬಂಧ ಹೊಂದಿರುತ್ತಾರೆ ಎಂದಿದೆ.

ಅಧ್ಯಯನದ ಫಲಿತಾಂಶಗಳು ಒಂದು ಕೆಟ್ಟ ಚಕ್ರವನ್ನು ಸೂಚಿಸುತ್ತವೆ ಎಂದು ಮುಖ್ಯ ಸಂಶೋಧಕ ಗಾರ್ಡನ್ ಹಾಡ್ಸನ್ ಲೈವ್ ಸೈನ್ಸ್‌ ಪತ್ರಿಕೆಗೆ ತಿಳಿಸಿದ್ದಾರೆ. ಕಡಿಮೆ ಬುದ್ಧಿವಂತಿಕೆಯಿರುವ ಜನರು ಸಾಮಾಜಿಕವಾಗಿ ಸಂಪ್ರದಾಯವಾದಿ ಸಿದ್ಧಾಂತಗಳಿಗೆ ಆಕರ್ಷಿತರಾಗುತ್ತಾರೆ. ಪ್ರತಿಯಾಗಿ, ಆ ಸಿದ್ಧಾಂತಗಳು ಪೂರ್ವಾಗ್ರಹಗಳಿಗೆ ಕಾರಣವಾಗಬಹುದು ಎಂದಿದ್ದಾರೆ.

“ಸಾಮಾಜಿಕವಾಗಿ ಸಂಪ್ರದಾಯವಾದಿ ಸಿದ್ಧಾಂತಗಳು ರಚನೆಯಲ್ಲಿ ಶ್ರೇಣೀಕರಣವನ್ನು ನೀಡಲು ಒಲವು ತೋರುತ್ತವೆ” ಎಂದು ಅವರು ಹೇಳಿದ್ದಾರೆ. “ದುರದೃಷ್ಟವಶಾತ್, ಈ ಹಲವು ಸಂಪ್ರದಾಯವಾದಿ ಅಂಶಗಳು ಪೂರ್ವಾಗ್ರಹಕ್ಕೆ ಕಾರಣವಾಗಬಹುದು.” ಇದು ಕಡಿಮೆ ಬುದ್ಧಿವಂತಿಕೆ ಇರುವವರು ಬಲ ಸಿದ್ದಾಂತದ ಕಡೆಗೆ ಆಕರ್ಷಿತರಾಗಬಹುದು ಎಂದು ವಿವರಿಸಿದ್ದಾರೆ.

ಕಡಿಮೆ ಬುದ್ಧಿವಂತಿಕೆಯಿರುವ ಜನರು ಇತರ ಜನಾಂಗಗಳು ಮತ್ತು ಗುಂಪುಗಳೊಂದಿಗೆ ಕಡಿಮೆ ಸಂಪರ್ಕವನ್ನು ಹೊಂದಿರುತ್ತಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇತರ ಗುಂಪುಗಳೊಂದಿಗೆ ಅವರಿಗೆ ಸಂವಹನ ನಡೆಸುವುದು ಅರಿವಿನ ಕೊರತೆಯಿಂದಾಗಿ ಮಾನಸಿಕವಾಗಿ ಸವಾಲಿನ ಕೆಲಸವಾಗಿರುತ್ತದೆ.

ಸಂಶೋಧನೆಗಳ ಪ್ರಕಾರ ಎಲ್ಲಾ ಉದಾರವಾದಿಗಳು ಬುದ್ದಿವಂತರು ಮತ್ತು ಎಲ್ಲಾ ಸಂಪ್ರದಾಯವಾದಿಗಳು ಮೂರ್ಖರು ಎಂದು ಅರ್ಥವಲ್ಲ ಎಂದು ಡಾ. ಹಾಡ್ಸನ್ ವಿವರಿಸಿದ್ದಾರೆ. “ಅತ್ಯಂತ ಬುದ್ದಿವಂತರಾದ ಸಂಪ್ರದಾಯವಾದಿಗಳು ಮತ್ತು ಅಷ್ಟು ಬುದ್ದಿವಂತರಲ್ಲದ ಉದಾರವಾದಿಗಳ ಅನೇಕ ಉದಾಹರಣೆಗಳಿವೆ. ಮತ್ತು ಬಹಳ ತತ್ವಬದ್ಧ ಸಂಪ್ರದಾಯವಾದಿಗಳು ಮತ್ತು ಅಸಹಿಷ್ಣು ಉದಾರವಾದಿಗಳ ಅನೇಕ ಉದಾಹರಣೆಗಳು ಸಹ ಅಲ್ಲಲ್ಲಿ ಕಂಡುಬರುತ್ತವೆ ಎಂದು ಹೇಳಿದ್ದಾರೆ. ಆದರೆ ಪೂರ್ಣಜನರನ್ನು ಗಮನದಲ್ಲಿಟ್ಟುಕೊಂಡು ಈ ಸಂಶೋಧನೆ ನಡೆದಿದೆ ಎಂದಿದಾರೆ.

ಈಗ ನಿಮ್ಮ ನಿಮ್ಮ ಬುದ್ದಿಮತ್ತೆ ಮತ್ತು ನೀವು ಪ್ರತಿನಿಧಿಸುವ ರಾಜಕೀಯವನ್ನು ತಾಳೆ ನೋಡಿಕೊಳ್ಳಿ.

ಮೂಲ: ದಿ ಗ್ಲೋಬ್‌ ಅಂಡ್‌ ಮೈಲ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...