Homeಚಳವಳಿಸಿಜೆಐ ರಂಜನ್ ಗಗೊಯ್ ಅವರಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ ಚಿನ್ನದ ಪದಕ ವಿಜೇತೆ. ಕಾರಣ?

ಸಿಜೆಐ ರಂಜನ್ ಗಗೊಯ್ ಅವರಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ ಚಿನ್ನದ ಪದಕ ವಿಜೇತೆ. ಕಾರಣ?

- Advertisement -
- Advertisement -

ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಆಫ್ ಲಾ/ ಎಲ್‌ಎಲ್‌ಎಂ ಕೋರ್ಸ್‌ನ ಟಾಪರ್ ಆದ ವಿದ್ಯಾರ್ಥಿನಿಯೋರ್ವಳು ಪ್ರತಿಭಟನೆಯ ಭಾಗವಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೊಯ್ ಅವರಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿರುವ ಘಟನೆ ನಡೆದಿದೆ.

ಗಗೊಯ್ ಅವರ ವಿರುದ್ಧ ಬಂದ ಲೈಂಗಿಕ ಕಿರುಕುಳ ಆರೋಪಗಳನ್ನು ಸಮರ್ಪಕವಾಗಿ ನಿಭಾಯಿಸದೇ ಅಸೂಕ್ಷ್ಮವಾಗಿ ನಡೆದುಕೊಂಡಿದ್ದಾರೆ, ಹಾಗಾಗಿ ಅವರಿಂದ ಕಾನ್ವೋಕೇಷನ್ ಪ್ರಶಸ್ತಿ ಪಡೆಯುವುದಿಲ್ಲ ಎಂದು ಚಿನ್ನದ ಪದಕ ವಿಜೇತೆ ಸುರ್ಬಿ ಕಾರ್ವಾ ಘೋಷಿಸಿದ್ದಾರೆ.

ಚಿನ್ನದ ಪದಕ ವಿಜೇತೆ ಸುರ್ಬಿ ಕಾರ್ವಾ ಅವರು ಸಮಾರಂಭದ ಮುಖ್ಯ ಅತಿಥಿಯಾದ ಗೊಗೊಯ್ ಅವರಿಂದಲೇ ಪ್ರಶಸ್ತಿಯನ್ನು ಸ್ವೀಕರಿಸಬೇಕಿತ್ತು. ಮುಖ್ಯ ನ್ಯಾಯಮೂರ್ತಿಯಾಗಿ ಗೊಗೊಯ್ ಅವರು ಈ ವಿಶ್ವವಿದ್ಯಾಲಯಕ್ಕೆ ಸಂದರ್ಶಕ ಪ್ರಾಧ್ಯಾಪಕರು ಸಹ ಆಗಿದ್ದಾರೆ. ಈ ವಿದ್ಯಾರ್ಥಿನಿಯ ಪ್ರತಿಭಟತ್ಮಾಕ ನಡೆ ಎಲ್ಲಾ ಕಡೆ ದೊಡ್ಡ ಸುದ್ದಿಯಾಗಿದೆ. ಆ ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಹ ವೇದಿಕೆಯಲ್ಲಿದ್ದರು.

“ಕಳೆದ ಕೆಲವು ವಾರಗಳಿಂದ ನಾನು ಸಿಜೆಐ ಗಗೊಯ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಬೇಕೆ ಎಂಬ ಕುರಿತು ನಾನು ತರಗತಿಯಲ್ಲಿ ಏನೆಲ್ಲವನ್ನು ಕಲಿತಿರುವೆನೊ ಅದು ನೈತಿಕ ಪ್ರಶ್ನೆಯಾಗಿ ಕಾಡುತ್ತಿತ್ತು. ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಬಂದಾಗ ಅವರು ಮುಖ್ಯಸ್ಥರಾಗಿರುವ ಸಂಸ್ಥೆ ಅದನ್ನು ಪಾರದರ್ಶಕವಾಗಿ ನಿರ್ವಹಿಸಲು ವಿಫಲವಾಗಿದೆ. ಹಾಗಾಗಿ ಪ್ರಶಸ್ತಿ ಸ್ವೀಕರಿಸುತ್ತಿಲ್ಲ” ಎಂದು ಕಾರ್ವಾ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೊಯ್ ರವರು ತನ್ನ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಏಪ್ರಿಲ್ 19ರಂದು 35 ವರ್ಷದ ಮಹಿಳೆಯೊಬ್ಬರು ಆರೋಪಿಸಿ, ಸುಪ್ರೀಂ ಕೋರ್ಟ್‍ನ 22 ನ್ಯಾಯಾಧೀಶರಿಗೆ ಅಫಿಡವಿಟ್ ಸಲ್ಲಿಸಿದ್ದರು.

2018ರ ಅಕ್ಟೋಬರ್ 10 ಮತ್ತು 11ರಂದು ನಾನು ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾಗ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯಿರವರು ಅವರ ಗೃಹಕಚೇರಿಯಲ್ಲಿ ನನ್ನೊಡನೆ ಬಹಳ ಅನುಚಿತವಾಗಿ ವರ್ತಿಸುವ ಮೂಲಕ ಲೈಂಗಿಕವಾಗಿ ಶೋಷಿಸಿದ್ದರು ಎಂದು ಆಕೆ ದೂರಿದ್ದಳು. ಅಲ್ಲದೇ ಈ ಘಟನೆಯ ಎರಡು ತಿಂಗಳ ನಂತರ ಆಕೆಯನ್ನು ಡಿಸೆಂಬರ್‍ನಲ್ಲಿ ಕೆಲಸದಿಂದ ವಜಾಗೊಳಿಸಲಾಗಿತ್ತು.

ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯಿ, ನ್ಯಾಯಾಂಗ ಅಪಾಯದಲ್ಲಿದೆ ಎಂದಿದ್ದಲ್ಲದೇ, ಈ ಪ್ರಕರಣ ಸ್ವತಂತ್ರ ನ್ಯಾಯಾಂಗ ಮತ್ತು ಮುಖ್ಯ ನ್ಯಾಯಮೂರ್ತಿಗಳ ಕಚೇರಿಯನ್ನು ದುರ್ಬಲಗೊಳಿಸಲು ಹೆಣೆದಿರುವ ದೊಡ್ಡ ಪಿತೂರಿಯಾಗಿದೆ ಎಂದ ಆರೋಪಿಸಿದ್ದರು. ನಂತರ ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‍ನ ಮೂವರು ನ್ಯಾಯಾಧೀಶರ ಸಮಿತಿಯು ‘ಈ ಆರೋಪದಲ್ಲಿ ಹುರುಳಿಲ್ಲ’ ಎಂದು ವರದಿ ನೀಡಿ, ರಂಜನ್ ಗಗೋಯ್ ರವರಿಗೆ ಕ್ಲೀನ್ ಚಿಟ್ ನೀಡಿತ್ತು

ಇದನ್ನೂ ಓದಿ: ರಂಜನ್ ಗಗೋಯಿರವರಿಗೆ ಕ್ಲೀನ್ ಚಿಟ್ ವಿರುದ್ಧ ರಾಷ್ಟ್ರದ್ಯಂತ ಪ್ರತಿಭಟನೆ

ಹಾಗಾಗಿ ವಿಚಾರಣೆ ನ್ಯಾಯಸಮ್ಮತವಾಗಿ ನಡೆದಿಲ್ಲ ಎಂದು ಆರೋಪಿಸಿರುವ ಕಾನೂನು ಪದವೀಧರೆ ಸರ್ಬಿ ಕಾರ್ವಾ ಈ ಪ್ರತಿಭಟನೆಯನ್ನು ದಾಖಲಿಸಿದ್ದಾರೆ.

ಮೂರು ವರ್ಷದ ಹಿಂದೆ ಸಂಶೋಧಕ ರೋಹಿತ್ ವೇಮುಲಾರ ಆತ್ಮಹತ್ಯೆಯನ್ನು ಸಾಂಸ್ಥಿಕ ಹತ್ಯೆ ಎಂದು ಕರೆದು ಆತನ ಸಹಪಾಠಿ ವೆಲ್ಪುಲ ಸುಂಕಣ್ಣ ಎಂಬುವವರು ಸಹ ತನ್ನ ವಿಸಿ ಅಪ್ಪಾ ಸಾಹೇಬ್ ರಿಂದ ತನ್ನ ಡಾಕ್ಟರೇಟ್ ಪದವಿ ಪಡೆಯಲು ವೇದಿಕೆಯ ಮೇಲಿಂದಲೇ ನಿರಾಕರಿಸಿದ್ದರು. ನಂತರ ವೇದಿಕೆಯ ಮೇಲಿದ್ದ ಮತ್ತೊರ್ವ ಅತಿಥಿ ಡಾಕ್ಟರೇಟ್ ಪದವಿಯನ್ನು ಹಸ್ತಾಂತರ ಮಾಡಿದ್ದರು. ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...