Homeಆರೋಗ್ಯಭಾರತದಲ್ಲಿ 2 ವರ್ಷಕ್ಕಿಂತ ಕೆಳವಯಸ್ಸಿನ 7% ಮಕ್ಕಳಿಗೆ ಮಾತ್ರ ಸಮರ್ಪಕ ಆಹಾರ ಸಿಗುತ್ತಿದೆ

ಭಾರತದಲ್ಲಿ 2 ವರ್ಷಕ್ಕಿಂತ ಕೆಳವಯಸ್ಸಿನ 7% ಮಕ್ಕಳಿಗೆ ಮಾತ್ರ ಸಮರ್ಪಕ ಆಹಾರ ಸಿಗುತ್ತಿದೆ

- Advertisement -
- Advertisement -

ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಭಾರತೀಯ ಮಕ್ಕಳಲ್ಲಿ ಕೇವಲ 6.4% ರಷ್ಟು ಮಕ್ಕಳು ಮಾತ್ರ “ಕನಿಷ್ಠ ಸ್ವೀಕಾರಾರ್ಹ ಆಹಾರ” ಪಡೆಯುತ್ತಿದ್ದಾರೆ ಎಂಬ ಆಘಾತಕಾರಿ ಸಂಗತಿಯನ್ನು ಮೊದಲ ಸಮಗ್ರ ರಾಷ್ಟ್ರೀಯ ಪೌಷ್ಟಿಕಾಂಶ ಸಮೀಕ್ಷೆ (ಸಿಎನ್‌ಎನ್‌ಎಸ್)ಯ ವರದಿ ಹೊರಹಾಕಿದೆ.

ಈ ಪ್ರಮಾಣವು ಪಟ್ಟಿಯ ಅತ್ಯಂತ ತುದಿಯಲ್ಲಿ, ಆಂಧ್ರಪ್ರದೇಶದಲ್ಲಿ ಕೇವಲ 1.3% ಇದ್ದರೆ ಸಿಕ್ಕಿಂನಲ್ಲಿ 35.9% ಇದೆ. ಉಳಿದಂತೆ ಮಹಾರಾಷ್ಟ್ರ (2.2%), ಗುಜರಾತ್, ತೆಲಂಗಾಣ ಮತ್ತು ಕರ್ನಾಟಕ (ಮೂರರಲ್ಲಿಯೂ 3.6%) ಮತ್ತು ತಮಿಳುನಾಡುನಲ್ಲಿ (4.2%) ನಷ್ಟಿದೆ.

ಕೇರಳ ಎರಡನೇ ಸ್ಥಾನದಲ್ಲಿರುವುದು (32.6%), ಆಶ್ಚರ್ಯವಲ್ಲದಿದ್ದರೂ, ಒಡಿಶಾ, ಛತ್ತೀಶ್‌ಘಡ್ ಜಾರ್ಖಂಡ್ ಮತ್ತು ಅಸ್ಸಾಂನಂತಹ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ‘ಹಿಂದುಳಿದವರು’ ಇದ್ದಾರೆ ಎಂದು ಪರಿಗಣಿಸಲ್ಪಟ್ಟಿದ್ದರೂ ಸಹ ಅಲ್ಲಿನ ಅಂಕಿಅಂಶಗಳು ರಾಷ್ಟ್ರೀಯ ಸರಾಸರಿಗಿಂತ ಮೇಲಿವೆ.

ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಸಮೀಕ್ಷೆಯಲ್ಲಿ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ 35% ರಷ್ಟು ಕುಂಠಿತ ಬೆಳವಣಿಗೆ ಹೊಂದಿದ್ದಾರೆ. (ವಯಸ್ಸಿಗೆ ಇರಬೇಕಾದುದಕ್ಕಿಂತ ಕಡಿಮೆ ಎತ್ತರ). ಈ ವಯಸ್ಸಿನವರಲ್ಲಿ, 17% (ಎತ್ತರಕ್ಕೆ ಇರಬೇಕಾದುದಕ್ಕಿಂತ ಕಡಿಮೆ ತೂಕ) ಮತ್ತು 33% ಕಡಿಮೆ ತೂಕ (ವಯಸ್ಸಿಗೆ ಇರಬೇಕಾದುದಕ್ಕಿಂತ ಕಡಿಮೆ ತೂಕ) ಇದ್ದಾರೆ ಎಂದು ತಿಳಿಸಿದೆ. ಇದಕ್ಕೆ ವಿರುದ್ಧವಾಗಿ, ಸುಮಾರು 2% ರಷ್ಟು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದಾರೆ. ಇದನ್ನು  ಬಿಟ್ಟರೆ 6 ತಿಂಗಳು ಮತ್ತು 59 ತಿಂಗಳ ನಡುವಿನ ವಯಸ್ಸಿನವರಲ್ಲಿ, 11% ನಷ್ಟು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದಿದೆ.

ಸಂಶೋಧನೆಗಳು ಭಾರತದ ಮಕ್ಕಳ ಪೋಷಣೆಯ ವಿಷಯದಲ್ಲಿ ಆತಂಕಕಾರಿಯಾದ ಅಂಕಿ ಅಂಶಗಳನ್ನು ನೀಡಿದೆ. ಪರಿಸ್ಥಿತಿ ಕ್ರಮೇಣ ಸುಧಾರಿಸುತ್ತಿದ್ದರೂ, ಇದಕ್ಕೆ ಬಡತನವು ಪ್ರಮುಖ ಕಾರಣವಾಗಿದ್ದರೆ ಆಹಾರದ ನಿರ್ಬಂಧಗಳು ಸಹ ಕೆಲವು ಸಂದರ್ಭಗಳಲ್ಲಿ ಕಾರಣವಾಗಿದೆ ಎಂದಿದ್ದಾರೆ.

ಬಡ ಕುಟುಂಬಗಳಿಂದ ಕೇವಲ 1% ಹದಿಹರೆಯದವರು ಅಧಿಕ ತೂಕ ಹೊಂದಿದ್ದರೆ, ಶ್ರೀಮಂತ ಮನೆಗಳಲ್ಲಿ ಈ ಪ್ರಮಾಣವು 12% ಇದೆ. ಅಂದರೆ ಅತಿ ತೂಕ ಹೊಂದಿರುವ ಸರಿಸುಮಾರು ಎಂಟು ಮಕ್ಕಳಲ್ಲಿ ಒಬ್ಬರು ಶ್ರೀಮಂತ ಆರ್ಥಿಕ ವರ್ಗದಿಂದ ಬಂದಿರುತ್ತಾರೆ ಎಂದು ವರದಿ ಹೇಳಿದೆ.

ದೇಶದಲ್ಲಿ 10% ಶಾಲಾ-ವಯಸ್ಸಿನ ಮಕ್ಕಳು ಮತ್ತು ಹದಿಹರೆಯದವರು ಮಧುಮೇಹ ಆವರಿಸುವ ಮುಂಚಿನ ಸ್ಥಿತಿಯಲ್ಲಿದ್ದಾರೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ.

ಸಿಎನ್‌ಎನ್‌ಎಸ್ ಭಾರತದಲ್ಲಿ ಇದುವರೆಗೆ ನಡೆಸಿದ ಅತಿದೊಡ್ಡ ಸೂಕ್ಷ್ಮ ಪೋಷಕಾಂಶಗಳ ಸಮೀಕ್ಷೆಯಾಗಿದೆ. ಇದು 1.1 ಲಕ್ಷ ಮಕ್ಕಳು ಮತ್ತು ಹದಿಹರೆಯದವರನ್ನು ಸಂದರ್ಶಿಸಿದೆ ಮತ್ತು ಅವರಿಂದ ಆಂಥ್ರೊಪೊಮೆಟ್ರಿಕ್ ಅಳತೆಗಳನ್ನು ಸಂಗ್ರಹಿಸಿದೆ. ಸಮೀಕ್ಷೆಗಾಗಿ 51,000 ಕ್ಕೂ ಹೆಚ್ಚು ಮಕ್ಕಳು ಮತ್ತು ಹದಿಹರೆಯದವರಿಂದ ರಕ್ತ, ಮೂತ್ರ ಮತ್ತು ಮಲ ಮಾದರಿಗಳನ್ನು ಸಹ ತೆಗೆದುಕೊಳ್ಳಲಾಗಿದೆ. ಇದು ಅವರ ತಾಯಂದಿರ ಆಹಾರ ಮತ್ತು ಶಿಕ್ಷಣ, ಸಮುದಾಯ, ಜಾತಿ ಮತ್ತು  ಅವರಿಗಿದ್ದ ಆದಾಯವನ್ನು ಒಳಗೊಂಡಂತೆ ಸಮೀಕ್ಷೆ ನಡೆಸಿದವರ ಹಿನ್ನೆಲೆ ಗುಣಲಕ್ಷಣಗಳನ್ನು ಸಹ ಅಧ್ಯಯನ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...